Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ಹಿಂದೂ ಸಂಪ್ರದಾಯಗಳ ಹಿಂದೆ ಇರುವ ಅದ್ಭುತವಾದ ವೈಜ್ಞಾನಿಕ ಕಾರಣಗಳು
ಹಿಂದೂ ಧರ್ಮವು ಒಂದು ನಿಗೂಢವಾದ ಧರ್ಮವಾಗಿದೆ. ಇದರಲ್ಲಿ ಅಸಂಖ್ಯಾತ ರೀತಿಗಳು, ನೀತಿಗಳು, ಸಂಪ್ರದಾಯಗಳು ಮತ್ತು ಕಟ್ಟು ಪಾಡುಗಳು ಈ ಧರ್ಮದ ಬೆನ್ನೆಲುಬಾಗಿ ಕೆಲಸ ಮಾಡುತ್ತಿವೆ. ಆದರೆ ನಮ್ಮಲ್ಲಿ ಅನೇಕರಿಗೆ ಆಧುನಿಕ ಯುಗದಲ್ಲಿಯೂ ಈ ಸಂಪ್ರದಾಯ ಮತ್ತು ಕಟ್ಟು ಪಾಡುಗಳ ಅವಶ್ಯಕತೆ ಏನು ಮತ್ತು ಏಕೆ ಎಂಬ ಪ್ರಶ್ನೆಗಳು ಕಾಡುತ್ತಿವೆ.
ಇನ್ನೂ ಕೆಲವರು ಈ ನಂಬಿಕೆಗಳನ್ನು ಮತ್ತು ಸಂಪ್ರದಾಯಗಳನ್ನು ಮೂಢನಂಬಿಕೆ ಎಂದು ಪರಿಗಣಿಸಿ, ಆಧುನಿಕ ಯುಗದಲ್ಲಿ ಇವುಗಳ ಅಸ್ತಿತ್ವ ಬೇಕಿಲ್ಲ ಎಂದು ವಾದಿಸುವವರು ಇದ್ದಾರೆ. ಆದರೆ ಈ ರೀತಿ ವಾದ ಮಾಡುವವರು ಈ ಸಂಪ್ರದಾಯ ಮತ್ತು ಕಟ್ಟು ಪಾಡುಗಳ ಹಿಂದೆ ಇರುವ ಕಾರಣಗಳನ್ನು ಕೇಳಿದರೆ ತಮ್ಮ ವಾದಗಳನ್ನು ತಪ್ಪದೆ ಬದಲಾಯಿಸಿಕೊಳ್ಳುತ್ತಾರೆ.

ಹಿಂದೂ ಧರ್ಮವು ಮೂಢನಂಬಿಕೆಗಳನ್ನು ಹರಡುತ್ತದೆ ಎಂದು ಹಲವಾರು ಬಾರಿ ವಿಮರ್ಶೆಗೆ ಒಳಪಟ್ಟಿದೆ. ಆದರೆ ಇದು ಸತ್ಯಕ್ಕೆ ದೂರವಾದ ಮಾತು. ಹಿಂದೂ ಧರ್ಮವು ವಿಶ್ವದಲ್ಲಿಯೇ ಅತ್ಯಂತ ವೈಜ್ಞಾನಿಕವಾಗಿ ರೂಪಿಸಲ್ಪಟ್ಟ ಧರ್ಮವಾಗಿದೆ. ಇದರಲ್ಲಿ ಆಚರಿಸಲ್ಪಡುವ ಆಚರಣೆಗಳು ಮತ್ತು ಸಂಪ್ರದಾಯಗಳು ತಮ್ಮ ಹಿಂದೆ ಒಂದು ಕುತೂಹಲಕಾರಿಯಾದ ತಾರ್ಕಿಕ ಕಾರಣಗಳನ್ನು ಹೊಂದಿರುತ್ತವೆ.
ಇದರಲ್ಲಿನ ಪ್ರತಿಯೊಂದು ವಿಧಿಯು ಅತ್ಯಂತ ಸ್ಪಷ್ಟವಾಗಿ ನಿರೂಪಿಸಲ್ಪಟ್ಟಿದೆ ಮತ್ತು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸುವಲ್ಲಿ ಇದು ತನ್ನ ಕಾಣಿಕೆಯನ್ನು ಸಲ್ಲಿಸುತ್ತದೆ. ನಮ್ಮ ಅಭಿಮತದಂತೆ ನೀವು ಈ ಕಟ್ಟುಪಾಡುಗಳ ಹಿಂದಿನ ವೈಜ್ಞಾನಿಕ ಕಾರಣಗಳನ್ನು ತಿಳಿದಿರುವುದಿಲ್ಲ ಎಂದು ಭಾವಿಸುತ್ತೇವೆ. ಇಂತಹ ಧಾರ್ಮಿಕ ವಿಧಿಗಳು ಮತ್ತು ಕಟ್ಟುಪಾಡುಗಳ ಕುರಿತು ತಿಳಿದುಕೊಳ್ಳುವುದು ನಿಜಕ್ಕು ಕುತೂಹಲಕಾರಿಯಾದ ವಿಚಾರವಾಗಿರುತ್ತದೆ.



Click it and Unblock the Notifications
