For Quick Alerts
ALLOW NOTIFICATIONS  
For Daily Alerts

ಕೆಟ್ಟ ಚಟಗಳನ್ನು ಓಡಿಸಿ, ಮಹಿಳೆಯರನ್ನು ಆರಾಧಿಸುವ ದೇಗುಲವಿದು!

By Manu
|

ಕೆಲವು ಧರ್ಮಗಳಲ್ಲಿ ದೇವರ ಪೂಜೆ, ಮಡಿವಂತಿಕೆ, ಶಾಸ್ತ್ರ, ಸಂಪ್ರದಾಯ ಹಾಗೂ ನೀತಿ-ನಿಯಮಗಳು ಬಹಳ ಕಟ್ಟು ನಿಟ್ಟಾಗಿ ಇರುತ್ತವೆ. ಅವುಗಳಲ್ಲಿ ಹಿಂದೂ ಧರ್ಮವೂ ಒಂದು. ಹಿಂದೂ ಧರ್ಮದ ಪ್ರಕಾರ ಮಹಿಳೆಯರು ಕೆಲವು ದೇಗುಲಗಳ ಪ್ರವೇಶ ಹಾಗೂ ಪೂಜಾ ವಿಧಿ-ವಿಧಾನಗಳಲ್ಲಿ ಭಾಗಿಯಾಗವುದು ನಿಷಿದ್ಧ. ಇದಕ್ಕೆ ಸಾಕ್ಷಿಯಾಗಿ ನಿಲ್ಲುವ ಉದಾಹರಣೆ ಎಂದರೆ ಶಬರಿಮಲೆ ದೇವಸ್ಥಾನ. ಈ ದೇವಾಲಯಕ್ಕೆ ಮಹಿಳೆಯರ ಪ್ರವೇಶದ ಕುರಿತು ಇನ್ನೂ ಗೊಂದಲ ಹಾಗೂ ವಿರೋಧಗಳಿರುವುದನ್ನು ಕಾಣಬಹುದು. ಇವೆಲ್ಲಕ್ಕೂ ಅಪವಾದ ಎನ್ನುವಂತೆ ಇಲ್ಲೊಂದು ದೇಗುಲವಿದೆ.

ಅದೃಷ್ಟವಂತರಿಗೆ ಮಾತ್ರ ಈ 'ಸಸ್ಯಹಾರಿ ಮೊಸಳೆ'ಯ ದರ್ಶನ ಆಗುವುದು!

ಈ ದೇವಾಲಯದಲ್ಲಿ ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಸ್ಥಾನ-ಮಾನ ಹಾಗೂ ಗೌರವಗಳಿವೆ. ಇಲ್ಲಿ ಏನೇ ವಿಶೇಷತೆ ನಡೆದರೂ ಅದು ಮಹಿಳೆಯರ ಉಪಸ್ಥಿತಿಯಲ್ಲೇ... ಹೌದಾ?! ಎನ್ನುವ ಆಶ್ಚರ್ಯದ ಭಾವದಿಂದ ಇನ್ನಷ್ಟು ತಿಳಿದುಕೊಳ್ಳುವ ಕುತೂಹಲವಿದ್ದರೆ ಮುಂದೆ ಓದಿ...

ಎಲ್ಲಿಯ ದೇವಾಲಯ?

ಎಲ್ಲಿಯ ದೇವಾಲಯ?

ಕೇರಳದ ದಕ್ಷಿಣ ಭಾಗದಲ್ಲಿ ಇರುವ ತಿರುವಳ್ಳ ಪಟ್ಟಣದಿಂದ 9 ಕಿ.ಮೀ. ದೂರದಲ್ಲಿದೆ. ಗ್ರಾಮೀಣ ಪ್ರದೇಶದಲ್ಲಿರುವವ ಈ ದೇವಾಲಯಕ್ಕೆ "ಚಕ್ಕುಲತುಕಾವ್ ದೇವಸ್ಥಾನ'' ಎಂದು ಕರೆಯುತ್ತಾರೆ.

Image Courtesy

ದೇವಾಲಯದ ಒಳನೋಟ

ದೇವಾಲಯದ ಒಳನೋಟ

3000 ವರ್ಷಗಳ ಇತಿಹಾಸ ಹೊಂದಿರುವ ಈ ದೇಗುಲ ಸುಂದರವಾದ ವಾಸ್ತುಶಿಲ್ಪಗಳನ್ನು ಒಳಗೊಂಡಿದ್ದು, ಪವಿತ್ರ ದೇಗುಲ ಎಂಬ ಹಿರಿಮೆಯನ್ನು ಪಡೆದುಕೊಂಡಿದೆ.

Image Courtesy

ವಿಶೇಷವಾದ ವಾರ್ಷಿಕ ಆಚರಣೆ

ವಿಶೇಷವಾದ ವಾರ್ಷಿಕ ಆಚರಣೆ

ಭಗವತಿ ದೇವತೆಯನ್ನು ಆರಾಧಿಸುವ ಈ ದೇಗುಲದಲ್ಲಿ ಪ್ರತಿವರ್ಷ ನಾರಿ ಪೂಜೆ ಎನ್ನುವ ವಿಶೇಷವಾದ ವಾರ್ಷಿಕ ಉತ್ಸವವನ್ನು ಆಚರಿಸುತ್ತಾರೆ. ಧನು ಮಾಸ(ಡಿಸೆಂಬರ್)ದ ಮೊದಲ ಶುಕ್ರವಾರ ಆಚರಿಸಲಾಗುತ್ತದೆ. ಈ ಆಚರಣೆಯಲ್ಲಿ ಪುರುಷ ಪುರೋಹಿತರು ಮಹಿಳಾ ಭಕ್ತರ ಪಾದ ತೊಳೆದು ಪೂಜಿಸುತ್ತಾರೆ. ಈ ವಿಶೇಷ ದಿನದಂದು ದೇಗುಲಕ್ಕೆ ಬರುವ ಸ್ತ್ರೀಯರು ಚಕ್ಕುಲತು ತಾಯಿಯ(ದೇವತೆ) ಅವತಾರವೆಂಬ ನಂಬಿಕೆ ಇದೆ.

Image Source

ವಿಶೇಷ ದಿನದ ಪೂಜಾ ವಿಧಾನ

ವಿಶೇಷ ದಿನದ ಪೂಜಾ ವಿಧಾನ

ಈ ವಾರ್ಷಿಕ ದಿನದಂದು ಬರುವ ಮಹಿಳಾ ಭಕ್ತರಿಗೆ ಸುಗಂಧ ಹಾಗೂ ಹೂವಿನ ರಾಶಿಗಳ ಸುರಿಮಳೆಯನ್ನು ಸುರಿಸಲಾಗುತ್ತದೆ. ನಂತರ ಪಾದಗಳನ್ನು ತೊಳೆದು, ಆರತಿ ಮಾಡುವ ಮೂಲಕ ಪೂಜಿರುತ್ತಾರೆ. ಈ ಸಂಪ್ರದಾಯ ದೇವಸ್ಥಾನದ ಆರಂಭದ ಕಾಲದಿಂದಲೂ ನಡೆದುಕೊಂಡು ಬರುತ್ತಿದೆ ಎನ್ನಲಾಗುತ್ತದೆ.

Image Courtesy

ಇನ್ನೊಂದು ವಿಶೇಷ ಆಚರಣೆ

ಇನ್ನೊಂದು ವಿಶೇಷ ಆಚರಣೆ

ಈ ದೇಗುಲದ ಇನ್ನೊಂದು ವಿಶೇಷ ಆಚರಣೆಯೆಂದರೆ ಕೆಟ್ಟ ಚಟಗಳನ್ನು ತೆಗೆಯುವುದು. ಪ್ರತಿ ಶುಕ್ರವಾರ ಮಹಿಳೆಯರು ತಮ್ಮ ಕುಟುಂಬದಲ್ಲಿ ಅಥವಾ ಸಂಬಂಧಿಕರಲ್ಲಿ ಯಾರಾದರೂ ಮದ್ಯಪಾನ, ಡ್ರಗ್ಸ್, ಜೂಜಾಟಗಳಂತಹ ಕೆಟ್ಟ ಚಟಗಳಿಗೆ ದಾಸರಾಗಿದ್ದರೆ, ಅವರನ್ನು ಈ ದೇವಸ್ಥಾನಕ್ಕೆ ಕರೆದುಕೊಂಡು ಬರುತ್ತಾರೆ. ವ್ಯಸನಿಗಳಿಗೆ ದೇವಿಯ ಕತ್ತಿಯನ್ನು ಸ್ಪರ್ಶಿಸುವಂತೆ ಹೇಳಿ ಆಣೆ ಮಾಡಿಸುತ್ತಾರೆ. ಹೀಗೆ ಶುಕ್ರವಾರ ಇಲ್ಲಿಗೆ ಬಂದು, ದೇವಿಯ ಕತ್ತಿಯನ್ನು ಹಿಡಿದು, ಆಣೆ ಮಾಡಿದ ಬಳಿಕ ವ್ಯಕ್ತಿ ಕೆಟ್ಟ ಚಟಗಳಿಂದ ದೂರವಾಗುತ್ತಾನೆ ಎನ್ನುವ ನಂಬಿಕೆಯಿದೆ.

ಎಲ್ಲಾ ದೇವಿಯ ಮಹತ್ಮೆ...

ಎಲ್ಲಾ ದೇವಿಯ ಮಹತ್ಮೆ...

ಇಲ್ಲಿಯ ಸ್ಥಳೀಯರು ಈ ದೇಗುಲದ ವಿಶೇಷ ಆಚರಣೆಯನ್ನು ಗೌರವಿಸಿ, ದೇವಿಯ ಮಹಿಮೆಯಲ್ಲಿ ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ಇಲ್ಲಿಯ ಮಹಿಳೆಯೊಬ್ಬಳು ಹೇಳುವ ಪ್ರಕಾರ "ಆಕೆ ತನ್ನ ಕಿರಿಯ ಸಹೋದರನನ್ನು ಮೂರು ವರ್ಷಗಳ ಹಿಂದೆ ಇಲ್ಲಿಗೆ ಕರೆತಂದು, ಆಣೆ ಮಾಡಿಸಿದ್ದೆ. ಕುಡಿತಕ್ಕೆ ದಾಸನಾಗಿದ್ದ ಆತ ಈಗ ಚಟಗಳಿಂದ ದೂರವಿದ್ದಾನೆ'' ಎಂದು ಹೇಳುತ್ತಾಳೆ.

Image Courtesy

ಭಕ್ತರ ಹರಿವು

ಭಕ್ತರ ಹರಿವು

ಈ ದೇಗುಲದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮೂರು ಲಕ್ಷಕ್ಕೂ ಅಧಿಕ ಜನರು ಇಲ್ಲಿಗೆ ಬರುತ್ತಾರೆ. ಅದರಲ್ಲಿ ಸರಿ ಸುಮಾರು ಶೇ. 75 ರಷ್ಟು ಭಕ್ತರು ಮಹಿಳೆಯರು ಎಂದು ಹೇಳಲಾಗುತ್ತದೆ.

English summary

A 'women only' temple in Kerala

Sabarimala temple, which is facing a chorus of demands to allow women devotees, should take a cue from Kerala's Chakkulathu Kavu temple. Here, in a devout village, some 9 km from the Tiruvalla town of southern Kerala, women are worshipped. The temple is dedicated to the deity of Bhagavati, and follows a peculiar annual ritual called 'Naari Puja'. On the first Friday of Dhanu (December), the male priests wash the feet of female devotees who have fasted for 10 days.
X
Desktop Bottom Promotion