12 ಧಾರ್ಮಿಕ ಸಂಕೇತಗಳು ಮತ್ತು ಅದರ ಅರ್ಥಗಳು

By Hemanth P

ಕೆಲವೊಂದು ಧಾರ್ಮಿಕ ಸಂಕೇತಗಳು ಮತ್ತು ಅದರ ಅರ್ಥಗಳು ಕೆಲವು ಸಲ ನಮ್ಮ ಮೆದುಳಿಗೆ ಹೆಚ್ಚಿನ ಕೆಲಸ ಕೊಡುತ್ತದೆ. ನಾವು ಪವಿತ್ರವಾದ ಸಂಕೇತಗಳನ್ನು ನೋಡುತ್ತೇವೆ. ಆದರೆ ಇದರ ಅರ್ಥ ಮಾತ್ರ ನಮಗೆ ತಿಳಿದಿರುವುದಿಲ್ಲ. ಕೆಲವೊಂದು ಸಂದರ್ಭಗಳಲ್ಲಿ ಸಾಮಾನ್ಯ ಧಾರ್ಮಿಕ ಸಂಕೇತ ಎಷ್ಟು ಜನಪ್ರಿಯವಾಗುತ್ತದೆಯೆಂದರೆ ಅದರ ನಿಜಾರ್ಥವು ಇತಿಹಾಸ ಸೇರುತ್ತದೆ.

ಧಾರ್ಮಿಕ ಸಂಕೇತಗಳು ನಮಗೆ ಆಘಾತವನ್ನುಂಟು ಮಾಡುತ್ತದೆ. ಉದಾಹರಣೆಗೆ ಕ್ರಾಸ್ ಕ್ರೈಸ್ತ ಸಮುದಾಯದ ಅತ್ಯಂತ ಪವಿತ್ರ ಸಂಕೇತವಾಗಿದೆ. ಆದರೆ ವಾಸ್ತವವೆಂದರೆ ಕ್ರಾಸ್ ಯಹೂದಿಯರ ಮತ್ತು ರೋಮ್ ನ ಆರಂಭಿಕ ಕ್ರಿಶ್ಚಿಯನ್ನರ ಶಿಕ್ಷೆಯನ್ನು ಪ್ರತಿನಿಧಿಸುತ್ತದೆ. ಧಾರ್ಮಿಕ ಸಂಕೇತಗಳಲ್ಲಿ ನಾವು ಕೆಲವೊಂದು ಸಲ ಇತಿಹಾಸದ ಕುರುಹುಗಳನ್ನು ಕಾಣಬಹುದು.

ಸಂಕೇತಗಳು ಜನಪ್ರಿಯತೆ ಮತ್ತು ಅರ್ಥವಿವರಣೆಯಾಗಿ ಕೆಲವೊಮ್ಮೆ ಕಾರ್ಯನಿರ್ವಹಿಸುತ್ತದೆ. ಜನರು ಇದನ್ನು ಅರ್ಥ ಮಾಡಿಕೊಳ್ಳುವ ರೀತಿಯಿಂದ ಧಾರ್ಮಿಕ ಸಂಕೇತಗಳು ಮತ್ತು ಅದರ ಅರ್ಥಗಳು ಬದಲಾಗುತ್ತದೆ. ಉದಾಹರಣೆಗೆ ಸ್ವಾಸ್ತಿಕ್ ಹಿಂದೂಗಳಿಗೆ ಧಾರ್ಮಿಕ ಸಂಕೇತ. ಈ ಸಂಕೇತವನ್ನು ಮಡಕೆ ಮತ್ತು ಮನೆಯ ಪ್ರವೇಶ ದ್ವಾರಗಳಲ್ಲಿ ಅಳವಡಿಸಿರುತ್ತಾರೆ.

ಆದರೆ ಯಹೂದಿಯರಿಗೆ ಈ ಸಂಕೇತವು ಹಿಟ್ಲರ್‌ನ ನಾಜಿ ಆಳ್ವಿಕೆಯನ್ನು ನೆನಪಿಸುತ್ತದೆ. ಇದರಲ್ಲಿ ಕೇವಲ ಮರಣ ಹಾಗೂ ದುರಂತವೇ ಒಳಗೊಂಡಿದೆ. ಕೆಲವು ಸಲ ಹಳೆಯ ಧಾರ್ಮಿಕ ಸಂಕೇತಗಳು ಕಾಲ ಕಳೆದಂತೆ ಹೊಸ ಅರ್ಥ ಪಡೆದುಕೊಳ್ಳುತ್ತದೆ. ಉದಾಹರಣೆಗೆ ಪಂಚಭುಜಾಕೃತಿಯನ್ನು ದೆವ್ವದ ಆರಾಧನೆ ಮತ್ತು ಅದರ ಶಕ್ತಿ ಪಡೆಯಲು ಬಳಸಲಾಗುತ್ತದೆ. ಆದರೆ ಹೊಸ ಸಂಶೋಧನೆಗಳ ಪ್ರಕಾರ ಇದು ಕ್ಯಾಥೋಲಿಕ್ ಚರ್ಚ್ ಧರ್ಮಬಾಹಿರವೆಂದು ಕರೆದಿರುವ ಗ್ರೀಕ್ ಮತ್ತು ರೋಮನ್‌ನ ಸಂಕೇತವಾಗಿದೆ. ಇಲ್ಲಿರುವ ಕೆಲವೊಂದು ಧಾರ್ಮಿಕ ಸಂಕೇತಗಳು ಮತ್ತು ಅದರ ಅರ್ಥಗಳನ್ನು ಇಲ್ಲಿ ವಿವರಿಸಲಾಗಿದೆ.

ಸಂಕಷ್ಟಿ ಚತುರ್ಥಿ ಹಬ್ಬದ ಮಹತ್ವ ತಿಳಿದಿದೆಯೇ?

ಸ್ವಸ್ತಿಕ

ಸ್ವಸ್ತಿಕ

ಸ್ವಸ್ತಿಕ ಹಿಂದೂ ಧರ್ಮದ ಶಾಂತಿ ಹಾಗೂ ಸಮೃದ್ಧಿಯ ಸಂಕೇತ. ಮನೆಯ ಎಲ್ಲಾ ಪ್ರವೇಶದ್ವಾರ ಮತ್ತು ಲಕ್ಷ್ಮೀ ದೇವರ ಬಳಿಯಲ್ಲಿಡುವ ಕಳಶದಲ್ಲಿ ಈ ಸಂಕೇತವನ್ನು ಬರೆಯಲಾಗುತ್ತದೆ.

ಸ್ಟಾರ್ ಆಫ್ ಡೇವಿಡ್

ಸ್ಟಾರ್ ಆಫ್ ಡೇವಿಡ್

ಆರು ಬಾಹುಗಳಿರುವ ಜನಪ್ರಿಯ ನಕ್ಷತ್ರವನ್ನು ಸ್ಟಾರ್ ಆಫ್ ಡೇವಿಡ್ ಎಂದು ಕರೆಯುತ್ತಾರೆ. ಇದು ಇಸ್ರೇಲ್‌ನ ಧ್ವಜದಲ್ಲಿರುವ ಲಾಂಛನ ಮತ್ತು ಯಹೂದಿ ಸಮಾಧಿಗಳ ಸಂಕೇತ. ರೇಖೆಗಳ ಕೂಡಿಸುವುದು ಡೇವಿಡ್ ಮತ್ತು ಬೆಂಜಮಿನ್‌ನ್ನು ಪ್ರತಿನಿಧಿಸುತ್ತದೆ.

ತ್ರಿಶೂಲ

ತ್ರಿಶೂಲ

ತ್ರಿಶೂಲವನ್ನು ಗ್ರೀಕ್ ರೋಮನ್‌ನಲ್ಲಿ ಶಕ್ತಿಯ ಸಂಕೇತವೆಂದು ಕರೆಯಲಾಗುತ್ತದೆ. ಸಮುದ್ರದ ದೇವತೆಯಾಗಿರುವ ಪೋಸಿಡಾನ್ನ ಇದನ್ನು ಬಳಸುತ್ತಾಳೆ. ಹಿಂದೂಗಳಲ್ಲಿ ಇದು ಶಿವನ ಸಂಕೇತ. ಕ್ರೈಸ್ತರಿಗೆ ಇದು ದೆವ್ವದ ಸಂಕೇತ ಮತ್ತು ಇದನ್ನು ಫೋರ್ಕ್ ಎನ್ನಲಾಗುತ್ತದೆ.

ಕ್ರಾಸ್

ಕ್ರಾಸ್

ಕ್ರಾಸ್ ಕ್ರೈಸ್ತರ ತುಂಬಾ ಪವಿತ್ರ ಸಂಕೇತವಾಗಿದೆ. ತನ್ನ ರಕ್ತದಿಂದ ಮಾನವ ಕುಲದ ಪಾಪಗಳನ್ನು ತೊಳೆದ ಕ್ರಿಸ್ತ ನರಳುವ ಸಂಕೇತವಾಗಿದೆ.

ಖಂಡ

ಖಂಡ

ಖಂಡ ಸಿಕ್ಖರ ಧಾರ್ಮಿಕ ಸಂಕೇತ ಮತ್ತು ಇದು ಶಕ್ತಿ ಮತ್ತು ಪವಿತ್ರತೆಯ ಸಂಕೇತವಾಗಿದೆ. ಖಂಡದಲ್ಲಿ ಅಡ್ಡವಾಗಿಟ್ಟಿರುವ ಕೃಪಣವಿದ್ದು, ಇದು ರಾಜಕೀಯ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಎರಡು ಅಂಚುಗಳನ್ನು ಹೊಂದಿರುವ ಖಡ್ಗವು ಒಂದೇ ದೇವರಲ್ಲಿ ನಂಬಿಕೆನ್ನಿಡುತ್ತದೆ.

ನಕ್ಷತ್ರ ಮತ್ತು ಬಾಲಚಂದ್ರ

ನಕ್ಷತ್ರ ಮತ್ತು ಬಾಲಚಂದ್ರ

ಇದು ಮುಸ್ಲಿಮರ ಸಂಕೇತ ಮತ್ತು ಪ್ರತಿಯೊಬ್ಬ ಮುಸ್ಲಿಮನಿಗೆ ಇದು ಪವಿತ್ರ ಸಂಕೇತ. ಈ ಸಂಕೇತವು ಒಟ್ಟೋಮನ್ ಸಾಮ್ರಾಜ್ಯ ಧ್ವಜವನ್ನು ಪ್ರತಿನಿಧಿಸುತ್ತದೆ.

ಓಂ

ಓಂ

ಓಂ ಎನ್ನುವುದು ಹಿಂದೂ ಧರ್ಮದ ಸಂಕೇತ. ಇದು ಸಂಪೂರ್ಣ ವಿಶ್ವವನ್ನು ಪ್ರತಿನಿಧಿಸುತ್ತದೆ. ಈ ಸಂಕೇತವನ್ನು ಧಾರ್ಮಿಕ ಕಾರ್ಯಗಳ ವೇಳೆ ಬಳಸಲಾಗುತ್ತದೆ ಮತ್ತು ಇದು ಬ್ರಹ್ಮ ದೇವರನ್ನು ಪ್ರತಿನಿಧಿಸುತ್ತದೆ. ಬ್ರಹ್ಮ ದೇವರು ವಿಶ್ವದ ಸೃಷ್ಟಿಕರ್ತ.

ಪೆಂಟಗ್ರಾಮ್ (ಪಂಚಭುಜಾಕೃತಿ)

ಪೆಂಟಗ್ರಾಮ್ (ಪಂಚಭುಜಾಕೃತಿ)

ಪೆಂಟಗ್ರಾಮ್ ಆರು ಭುಜಗಳನ್ನು ಹೊಂದಿರುವ ನಕ್ಷತ್ರವನ್ನು ಸುತ್ತಿಕೊಂಡಿರುವ ಒಂದು ವೃತ್ತ. ಇದು ಪವಿತ್ರ ಸ್ತ್ರೀಯ ಸಂಕೇತವನ್ನು ಪ್ರತಿನಿಧಿಸುತ್ತದೆ. ಅತೀಂದ್ರಿಯ ಅಭ್ಯಾಸಗಳಲ್ಲೂ ಇದನ್ನು ಬಳಸಲಾಗುತ್ತದೆ.

ಮೀನು ಅಥವಾ ಇಚದಸ್

ಮೀನು ಅಥವಾ ಇಚದಸ್

ಇಚದಸ್ ಅಥವಾ ಮೀನು ಕ್ರಿಸ್ತನ ಆರಂಭಿಕ ಸಂಕೇತವಾಗಿದೆ. ಇದು ಯಾಕೆಂದರೆ ಕ್ರಿಸ್ತನ ಎಲ್ಲಾ 12 ಮಂದಿ ದೂತರು ಮೀನುಗಾರರಾಗಿದ್ದರು.

ಸಪ್ತ ದೀಪಸ್ತಂಭ

ಸಪ್ತ ದೀಪಸ್ತಂಭ

ಸಪ್ತ ದೀಪಸ್ತಂಭ ಯಹೂದಿಯ ಸಂಕೇತ ಮತ್ತು ಇದು ಕ್ಯಾಂಡಲ್ ಸ್ಟಾಂಡ್ ನಂತೆ ಕಾಣಿಸುತ್ತದೆ. ಮೊಸೆಸ್ ಕನಸಿನಲ್ಲಿ ಬಂದ ದೇವರು ಈ ಸಂಕೇತವನ್ನು ರಚಿಸಲು ಸೂಚಿಸಿದನಂತೆ.

ಯಿನ್ ಮತ್ತು ಯಂಗ್

ಯಿನ್ ಮತ್ತು ಯಂಗ್

ಚೀನಾದ ಈ ಸಂಕೇತವು ಪ್ರಕೃತಿಯ ಸಮತೋಲನವನ್ನು ಪ್ರತಿನಿಧಿಸುತ್ತದೆ. ಇದು ಪುರುಷ ಹಾಗೂ ಮಹಿಳೆಯ ಶಕ್ತಿಯನ್ನು ಪ್ರತಿನಿಧಿಸುತ್ತದೆ.

ಅಹಿಂಸಾ ಹಸ್ತ

ಅಹಿಂಸಾ ಹಸ್ತ

ಇದು ಭಾರತದಲ್ಲಿ ಕಂಡುಬರುವ ಜೈನರ ಸಾಮಾನ್ಯ ಸಂಕೇತ. ಜೈನರು ಸಂಪೂರ್ಣ ಅಹಿಂಸಾವಾದಿಗಳು. ತಡೆಯುವಂತೆ ಸೂಚಿಸುವ ಕೈಯ ಚಿಹ್ನೆಯು ಹಿಂಸೆಯನ್ನು ನಿಲ್ಲಿಸಬೇಕೆನ್ನುವುದನ್ನು ತೋರಿಸುತ್ತದೆ.

X
Desktop Bottom Promotion