Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕ್ರಿಸ್ಮಸ್ ವಿಶೇಷ: ನೀವು ತಿಳಿದಿರದ ಅಮೋಘ ಸಂಗತಿಗಳು
ಕ್ರಿಸ್‌ಮಸ್ ವಿಶೇಷತೆಗಳನ್ನು ಇಂದಿನ ಲೇಖನದಲ್ಲಿ ನಿಮ್ಮ ಮುಂದೆ ಇರಿಸುತ್ತಿದ್ದೇವೆ. ಕ್ರಿಸ್‌ಮಸ್ ಕುರಿತಾದ ಈ ವಿಸ್ಮಯಗಳು ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುವುದು ಖಂಡಿತ....
ಅಂತೂ ವಾರಗಳಿಂದ ಕಾಯುತ್ತಿದ್ದ ಕ್ರಿಸ್‌ಮಸ್ ಹಬ್ಬ ಬಂದೇ ಬಿಟ್ಟಿದೆ. ದೇವ ಪುತ್ರನ ಹುಟ್ಟುಹಬ್ಬವನ್ನೇ ಕ್ರೈಸ್ತ ಬಾಂಧವರು ಆಚರಿಸುವ ಪದ್ಧತಿಯೇ ಕ್ರಿಸ್‌ಮಸ್ ಆಗಿ ಜನ್ಮತಾಳಿದೆ. ಶಾಂತಿ ಸೌಹಾರ್ದತೆಯ ಸಾರವನ್ನು ಮಾನವರಲ್ಲಿ ಸಾರಿದ ಏಸುಕ್ರಿಸ್ತರು ತಮ್ಮ ಅನುಯಾಯಿಗಳಿಗೂ ಪ್ರೀತಿಯ ಅದ್ಭುತ ಅಮೃತವನ್ನು ಕುಡಿಸಿದ್ದಾರೆ. ಶಿಲುಬೆಗೇರಿದ ಸಮಯದಲ್ಲಿ ಕೂಡ ತನ್ನ ಮಕ್ಕಳನ್ನು ಕ್ಷಮಿಸು ಎಂದೇ ತನ್ನ ತಂದೆ ದೇವರಲ್ಲಿ ಬೇಡಿಕೊಂಡಿದ್ದಾರೆ. ಕ್ರಿಸ್‌ಮಸ್ ವಿಶೇಷ: ನಂಬಿಕೆ ಭರವಸೆಯ ಪ್ರತೀಕ 'ಮೇಣದ ಬತ್ತಿ'
ಏಸುವು ತನ್ನವರು ಶಾಂತಿ ಸಮಾಧಾನಗಳಿಂದ ಸಂತೃಪ್ತಿಯ ಜೀವನವನ್ನು ಅನುಭವಿಸಬೇಕು ಎಂದೇ ಹಲವಾರು ಪವಾಡಗಳನ್ನು ಮಾಡುತ್ತಿದ್ದರು. ಬಡತನವನ್ನು ಹೋಗಲಾಡಿಸುವುದು, ಸತ್ತವರನ್ನು ಬದುಕಿಸುವುದು, ಹಸಿದವರ ಹೊಟ್ಟೆ ತುಂಬಿಸುವುದು ಮೊದಲಾದ ದೈವೀ ಶಕ್ತಿಗಳನ್ನು ಜನರ ಮೇಲೆ ಮಾಡಿ ಅವರಲ್ಲಿ ಭಕ್ತಿಯ ಶಕ್ತಿಯನ್ನು ಸಾರಿದ್ದರು. ಆಶ್ಚರ್ಯಗೊಳಿಸುವ 'ಕ್ರಿಸ್‌ಮಸ್ ಹಬ್ಬದ' ಇಂಟರೆಸ್ಟಿಂಗ್ ಸಂಗತಿಗಳು
ಅದಕ್ಕಾಗಿಯೇ ಏಸುವಿನ ಜನ್ಮದಿನವನ್ನು ಆಚರಿಸುವಾಗ ಜನರು ಯಾವುದೇ ಲೋಪವುಂಟಾಗದಂತೆ ವಿಜೃಂಭಣೆಯಿಂದ ಕ್ರಿಸ್‌ಮಸ್ ಅನ್ನು ಆಚರಿಸುತ್ತಾರೆ. ಕ್ರಿಸ್‌ಮಸ್ ಎಂದರೆ ನಮಗೆ ನೆನಪಾಗುವುದು, ಕ್ರಿಸ್‌ಮಸ್ ಟ್ರೀ, ಕೇಕ್, ಸಿಹಿ ತಿನಿಸುಗಳು, ಗೋದಲಿ ಮೊದಲಾದ ಅಂಶಗಳಾಗಿವೆ. ಆದರೆ ನೀವು ಅರಿಯದ ಇನ್ನಷ್ಟು ಕ್ರಿಸ್‌ಮಸ್ ವಿಶೇಷತೆಗಳನ್ನು ಇಂದಿನ ಲೇಖನದಲ್ಲಿ ನಿಮ್ಮ ಮುಂದೆ ಇರಿಸುತ್ತಿದ್ದೇವೆ. ಕ್ರಿಸ್‌ಮಸ್ ಕುರಿತಾದ ಈ ಸಂಗತಿಗಳು ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುವುದು ಖಂಡಿತ.....

ಮಧ್ಯರಾತ್ರಿಯಲ್ಲಿ ಕ್ರಿಸ್‌ಮಸ್ ಆಚರಣೆ
ಕ್ರಿಸ್‌ಮಸ್ ಸಾಮಾನ್ಯವಾಗಿ ಮಧ್ಯರಾತ್ರಿಯಿಂದ ಆರಂಭವಾಗುತ್ತದೆ. ಏಸು ಜನ್ಮತಾಳಿದ್ದು ಮಧ್ಯರಾತ್ರಿಯಲ್ಲಿ. ಆದ್ದರಿಂದಲೇ ಪ್ರತೀ ಚರ್ಚ್‌ನಲ್ಲಿ ಕೂಡ ಮಧ್ಯರಾತ್ರಿಯಿಂದಲೇ ಆಚರಣೆಗಳು ಪ್ರಾರಂಭಗೊಳ್ಳುತ್ತದೆ.

ಕೊಡುಗೆಗಳನ್ನು ನೀಡುವುದು
ಕ್ರಿಸ್‌ಮಸ್‌ನಂದು ಕೊಡುಗೆಗಳನ್ನು ಏಕೆ ನೀಡುತ್ತಾರೆ? ಎಂಬುದು ನಿಮಗೆ ಗೊತ್ತೇ? ಮ್ಯಾಗಿ ಅಥವಾ ಪುಟ್ಟ ಏಸುವಿಗೆ ಕೊಡುಗೆಗಳನ್ನು ನೀಡಿದ ಮೂರು ಬುದ್ಧಿವಂತರಿಂದ ಈ ಆಚರಣೆ ಮುಂದುವರಿದಿದೆ.

ಕ್ರಿಸ್‌ಮಸ್ ಟ್ರೀ
ಅಂದವಾಗಿ ಕ್ರಿಸ್‌ಮಸ್ ಟ್ರಿಯನ್ನು ಅಲಂಕರಿಸುವುದು ಮಾತ್ರವೇ ಉದ್ದೇಶವಲ್ಲ. ಚಳಿಗಾಲದ ಸಮಯದಲ್ಲಿ ಹಸಿರಿನಿಂದ ಕಂಗೊಳಿಸುವ ಈ ವೃಕ್ಷವು ಹೊಸ ಜೀವನದ ಹೊಸ ಭರವಸೆಯ ಸಾರವಾಗಿದೆ.

ಸಾಂತಾರ ನಿಜವಾದ ಹೆಸರು
ಕ್ರಿಸ್‌ಮಸ್‌ನೊಂದಿಗೆ ತಳುಕು ಹಾಕಿಕೊಂಡಿರುವ ರಹಸ್ಯಗಳಲ್ಲಿ ಸಾಂತಾ ಕ್ಲಾಸ್ ಕೂಡ ಒಬ್ಬರು. ಮಕ್ಕಳನ್ನು ಪ್ರೀತಿಸುವ ಗಿಡ್ಡನೆಯ ಮತ್ತು ಪ್ರಿಯವಾದ ವ್ಯಕ್ತಿಯ ಹೆಸರು ಸಂತ ನಿಕೋಲಸ್ ಎಂದಾಗಿದೆ.

ಕ್ರಿಸ್‌ಮಸ್ ಸ್ಟಾಕಿಂಗ್ಸ್
ಒಂದು ನಂಬಿಕೆಯಂತೆ ಸಾಂತಾ ಕ್ಲಾಸ್ ಚಿಮಿಣಿಯ ಮೂಲಕ ಮಕ್ಕಳ ಮನೆಗೆ ಬರುತ್ತಾರೆ ಎಂದಾಗಿದೆ. ಆದ್ದರಿಂದಲೇ ಸಾಂತಾ ಕೊಡುಗೆಗಳನ್ನು ಇರಿಸುವುದಕ್ಕಾಗಿ ಚಿಮಿಣಿಯ ಪಕ್ಕದಲ್ಲಿ ಸ್ಟಾಕಿಂಗ್‌ಗಳನ್ನು ನೇತಾಡಿಸುತ್ತಾರೆ.

ಮಿಸ್ಟಿಲೋಟ್ ಚುಂಬನ
ಮಿಸ್ಟಿಲೋಟ್ ಎಂಬುದು ವಿಶೇಷ ಮರವಾಗಿದ್ದು ಇದನ್ನು ಓಕ್ ಮರಗಳಿಂದ ಕತ್ತರಿಸುತ್ತಾರೆ ಮತ್ತು ಬಾಗಿಲು ಹಾಗೂ ಕಮಾನುಗಳಲ್ಲಿ ಇದನ್ನು ಇರಿಸುತ್ತಾರೆ. ಒಮ್ಮೆ ಈ ಮಿಸ್ಟಿಲೋಟ್ ಅಡಿಯಲ್ಲಿ ಹುಡುಗ ಯಾ ಹುಡುಗಿ ಬಂದಲ್ಲಿ ಅವರು ಚುಂಬಿಸಬೇಕು ಎಂದಾಗಿದೆ. ಅನಾದಿ ಗ್ರೀಕ್ ವಿವಾಹ ಸಂಪ್ರದಾಯಗಳಿಂದ ಇದು ಆಚರಣೆಗೆ ಬಂದಿದೆ.

ಕ್ರೈಸ್ಟೇಂಗಲ್
ಏಸುವಿನ ಬೆಳಕನ್ನು ಕ್ರೈಸ್ಟೇಂಗಲ್ ಪ್ರತಿನಿಧಿಸುತ್ತದೆ. ಕಿತ್ತಳೆ ಬಣ್ಣದ ಚೆಂಡು (ಭೂಮಿ ತಾಯಿ) ಇದಾಗಿದ್ದು ಇದರಲ್ಲಿ ಕೆಂಪು ರಿಬ್ಬನ್ (ಏಸುವಿನ ರಕ್ತ) ಅನ್ನು ಸುತ್ತಲೂ ಕಟ್ಟುತ್ತಾರೆ. ಇದು ಮೇಣದ ಬತ್ತಿಯನ್ನು ಮೇಲ್ಭಾಗದಲ್ಲಿ ಒಳಗೊಂಡಿದ್ದು ನಾಲ್ಕು ಕೋಲು ಇರುತ್ತದೆ (ನಾಲ್ಕು ದಿಕ್ಕುಗಳನ್ನು ಸೂಚಿಸುತ್ತದೆ).

ಪವಿತ್ರ ಹೂಮಾಲೆ
ಹೋಲಿ ಎಂಬುದು ಕ್ರೈಸ್ತರಿಗೆ ಪವಿತ್ರ ಸಸ್ಯವಾಗಿದ್ದು ಪವಿತ್ರವೆಂದು ಕರೆದಿದ್ದ ಮುಳ್ಳಿನಿಂದ ಮಾಡಿದ ಕಿರೀಟವನ್ನು ಏಸುವಿಗೆ ತೊಡಿಸಿದ್ದರು.

ಕ್ರಿಸ್‌ಮಸ್ ಕ್ಯಾರಲ್ಸ್
ಇತ್ತೀಚಿನ ದಿನಗಳಲ್ಲಿ ಹಾಡುವ ಕ್ಯಾರಲ್ಸ್ ನಿಜವಾಗಿಯೂ ಕ್ಯಾರಲ್ ಹಾಡುಗಳಲ್ಲ. ಮೂಲ ಕ್ರಿಸ್‌ಮಸ್ ಕ್ಯಾರಲ್ಸ್ 'ಸೈಲೆಂಟ್ ನೈಟ್' ಮೊದಲಾದ ಸೊಲೆಮ್ನ್ ಶ್ಲೋಕಗಳಾಗಿವೆ.

ಕ್ರಿಸ್‌ಮಸ್ ವೈನ್ಸ್
ಕ್ರಿಸ್‌ಮಸ್‌ನಂದು ಎಲ್ಲಾ ಕ್ರೈಸ್ತ ಬಾಂಧವರು ವೈನ್ ಸೇವನೆಯನ್ನು ಮಾಡುತ್ತಾರೆ. ಏಕೆಂದರೆ ಇದು ಏಸುವಿನ ರಕ್ತವನ್ನು ಪ್ರತಿನಿಧಿಸುತ್ತದೆ. ನಮಗಾಗಿ ಏಸುವು ತಮ್ಮ ರಕ್ತವನ್ನು ಸುರಿಸಿದರು ಎಂಬ ತಾತ್ಪರ್ಯ ಕೂಡ ಇದರಲ್ಲಿದೆ.



Click it and Unblock the Notifications