Latest Updates
-
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ!
ನೆಪ್ಟ್ಯೂನ್ ಹೋಲುವ ಹೊಸ ಗ್ರಹ ಪತ್ತೆ..! ನಾಸಾ ಹೇಳಿದ್ದೇನು?
ನಿಮಗೆ ಆಕಾಶಕಾಯಗಳು, ಗ್ರಹಗಳು, ಸೌರಮಂಡಲದ ಕುರಿತು ತಿಳಿದುಕೊಳ್ಳುವಂತಹ ಕುತೂಹಲವಿದ್ದರೆ ನೀವು ಯಾವಾಗಲು ಅಚ್ಚರಿಯ ಸುದ್ದಿಗಳನ್ನು ಕೇಳಿರುತ್ತೀರಿ, ಭೂಮಿಯ ವೇಗ, ಅಯಸ್ಕಾಂತೀಯ ಪ್ರದೇಶ ಕುರಿತು, ಚಂದ್ರನ ಕುರಿತು, ಮಿನಿ ಮೂನ್, ಸೂಪರ್ ಮೂನ್, ಹೊಸ ಗ್ರಹಗಳು, ಗ್ರಹಣ, ಉಲ್ಕೆ ಹೀಗೆ ಹತ್ತಾರು ಅಚ್ಚರಿಗಳು ಆಗಾಗ ನಡೆಯುತ್ತಲೇ ಇರುತ್ತದೆ.
ಈಗ ನಾಸಾ ವಿಜ್ಞಾನಿಗಳು ಹೊಸದೊಂದು ಅಚ್ಚರಿಯನ್ನು ಜಗತ್ತಿನ ಮುಂದಿಟ್ಟಿದ್ದಾರೆ, ಅದೇ ಸೌರಮಂಡಲದಲ್ಲಿ ಹೊಸದಾಗಿ ಒಂದು ಗ್ರಹ ಪತ್ತೆಯಾಗಿದೆ. TOI-3261 b ಹೆಸರಿನ ಎಕ್ಸೋಪ್ಲಾನೆಟ್ ಗ್ರಹವನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಈ ಗ್ರಹ ನಮ್ಮ ಸೌರಮಂಡಲದಲ್ಲಿರುವ ನೆಫ್ಟೂನ್ ಗ್ರಹದ ಗಾತ್ರವನ್ನೇ ಹೋಲುತ್ತಿದೆ ಎಂದು ವರದಿಯಾಗಿದೆ.

ಇನ್ನೊಂದು ಅಚ್ಚರಿ ಏನಂದರೆ ಈ ಗ್ರಹದಲ್ಲಿ 1 ವರ್ಷ ಕೇವಲ 21 ಗಂಟೆಗೆ ಸಮವಾಗಿದೆ, ಈ ಗ್ರಹದ ವೇಗ ಅತ್ಯಂತ ಹೆಚ್ಚಾಗಿದೆ. ಒಂದು ವರ್ಷ ಬರಿ 21 ಗಂಟೆಯಲ್ಲಿ ಮುಗಿದು ಹೋಗುತ್ತದೆ. ಈ ಗ್ರಹವು ಅತ್ಯಂತ ಬಿಸಿಯಾದ ವಾತಾವರಣ ಹೊಂದಿದೆ. ಹಾಗೆ ಈ ರೀತಿ ಕಂಡುಬಂದ 4ನೇ ಗ್ರಹ ಇದಾಗಿದೆ. ಆಸ್ಟ್ರೇಲಿಯಾ, ಚಿಲಿ ಮತ್ತು ದಕ್ಷಿಣ ಆಫ್ರಿಕಾದಲ್ಲಿ ನೆಲ-ಆಧಾರಿತ ದೂರದರ್ಶಕಗಳಿಂದ ಅನುಸರಣಾ ಅವಲೋಕನಗಳೊಂದಿಗೆ NASAದ ಟ್ರಾನ್ಸಿಟಿಂಗ್ ಎಕ್ಸೋಪ್ಲಾನೆಟ್ ಸರ್ವೆ ಉಪಗ್ರಹವನ್ನು (TESS) ಬಳಸಿಕೊಂಡು ಈ ನೂತನ ಗ್ರಹವನ್ನು ಪತ್ತೆ ಮಾಡಲಾಗಿದೆ.
ಈ ಎಕ್ಸೋಪ್ಲಾನೆಟ್ "ಹಾಟ್ ನೆಪ್ಚೂನ್ಸ್" ಎಂದು ಕರೆಯಲ್ಪಡುವ ಅಪರೂಪದ ವರ್ಗಕ್ಕೆ ಸೇರಿದೆ ಎಂಬುದನ್ನು ವಿಜ್ಞಾನಿಗಳು ತಿಳಿಸಿದ್ದಾರೆ. ಅವುಗಳ ಗಾತ್ರ ಚಿಕ್ಕದಿದ್ದು, ಕಕ್ಷೆಯೂ ಕೂಡ ಚಿಕ್ಕದಾಗಿರುತ್ತದೆ, ಹಾಗೆ ವೇಗವಾಗಿ ತನ್ನ ಕಕ್ಷೆಯಲ್ಲಿ ಸುತ್ತುತ್ತವೆ. ಹಾಗೆ ಈ ಗ್ರಹವು ಸುಮಾರು 6.5 ಶತಕೋಟಿ ವರ್ಷಗಳ ಇತಿಹಾಸ ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.
ಈ ಗ್ರಹದಲ್ಲಿ ಅತ್ಯಂತ ವಿಷಕಾರಿ ಅನಿಲಗಳು ಇರಬಹುದು. ಹಾಗೆ ಅತ್ಯಂತ ದ್ಯುತಿ ಬಾಷ್ಪೀಕರಣದ ಪ್ರಭಾವಕ್ಕೆ ಅದು ಒಳಗಾಗಿದೆ. ಅನಿಲಗಳು ಅಲ್ಲಿ ಕಣಗಳಾಗಿ ಬದಲಾಗಿವೆ. TOI-3261 b ನೆಪ್ಚೂನ್‌ಗಿಂತ ಎರಡು ಪಟ್ಟು ಸಾಂದ್ರತೆಯನ್ನು ಹೊಂದಿದೆ, ಅದರ ವಾತಾವರಣವು ಕಾಲಾನಂತರದಲ್ಲಿ ಹಗುರವಾದ ಅಂಶಗಳಿಂದ ಹೊರತೆಗೆಯಲ್ಪಟ್ಟಿದೆ ಎಂದು ಸೂಚಿಸುತ್ತದೆ.
ಗ್ರಹದ ವಾತಾವರಣವು ಒಂದು ಕಾಲದಲ್ಲಿ ವೈವಿಧ್ಯಮಯ ಅಂಶಗಳನ್ನು ಒಳಗೊಂಡಿದೆ ಎಂದು ಇದು ಸೂಚಿಸುತ್ತದೆ, ಆದರೆ ನಿಖರವಾಗಿ ಯಾವ ಅಂಶಗಳಿಂದ ಕೂಡಿತ್ತು ಎಂಬುದು ತಿಳಿದಿಲ್ಲ. ಇದನ್ನು ಪತ್ತೆ ಮಾಡಲು ಇನ್ನಷ್ಟು ಸಮಯ ಖಗೋಳ ಶಾಸ್ತ್ರಜ್ಞರು ದೂರದರ್ಶಕದ ಮುಂದೆ ಸಮಯ ಕಳೆಯಬೇಕಾಗಿದೆ.
ಇತ್ತಿಚಿಗೆ ನಾಸಾ ನಮ್ಮ ಗ್ಯಾಲಕ್ಸಿಯ ಹಾಗೂ ನಕ್ಷತ್ರ ಪುಂಜದ ಅತ್ಯಂತ ಸುಂದರ ಫೋಟೋವೊಂದನ್ನು ಹಂಚಿಕೊಂಡಿತ್ತು. ಇದೆ ಮೊದಲ ಬಾರಿಗೆ ಅತ್ಯಂತ ಸ್ಪಷ್ಟವಾಗ ಮಿಲ್ಕಿ ವೇ ಗ್ಯಾಲಕ್ಸಿ ಕಣ್ತುಂಬಿಕೊಳ್ಳಲಾಗಿತ್ತು. ಇದರಲ್ಲು ನಮ್ಮ ಸೌರವ್ಯೂಹ ಮಾತ್ರವಲ್ಲ ಇಡೀ ಗ್ಯಾಲಕ್ಸಿ, ನೆಬ್ಯೂಲ್ಲ ಕೂಡ ಕಣ್ಮುಂದೆ ಇಡಲಾಗಿತ್ತು.



Click it and Unblock the Notifications