ಗಂಡು ಮಗುವಿಗೆ ಹೆಸರಿಡಲು ಶ್ರೀ ವಿಷ್ಣುವಿನ 50ಕ್ಕೂ ಅಧಿಕ ಮಾಡರ್ನ್ ಹೆಸರುಗಳ ಪಟ್ಟಿ

ಕುಟುಂಬವೊಂದರಲ್ಲಿ ಮಗುವಿನ ಆಗಮನ ಆಗುತ್ತಿದೆ ಎಂದಾಗ ಸಡಗರ ಸಂಭ್ರಮ ಎಲ್ಲೆಂದರಲ್ಲಿ ಕಾಣಸಿಗುತ್ತದೆ. ಮಗು ಮತ್ತು ಬಾಣಂತಿಯ ಆರೈಕೆಯ ಯೋಚನೆಗಳಿಂದ ಮೊದಲುಗೊಂಡು ಎಲ್ಲವೂ ಆರಂಭಗೊಳ್ಳುತ್ತದೆ. ಹಳೆಯ ಸೀರೆಗಳಿಂದ ಬಟ್ಟೆಯ ತುಂಡುಗಳನ್ನು ಮಾಡಿ ಸಿದ್ಧಮಾಡಲಾಗುತ್ತದೆ, ಮನೆಯಲ್ಲಿ ಈ ಮೊದಲು ಮಗು ಜನಿಸಿದ್ದರೆ ಇರುವ ತೊಟ್ಟಿಲನ್ನು ಮತ್ತೆ ಸಿದ್ಧಪಡಿಸಲಾಗುತ್ತದೆ ಇಲ್ಲವಾದಲ್ಲಿ ಹೊಸದೊಂದು ತೊಟ್ಟಿಲು ಬರುತ್ತದೆ.

ಮಗು ಹೆಣ್ಣೋ ಗಂಡೋ ಎನ್ನುವುದಕ್ಕೂ ಹಲವಾರು ಪದ್ಧತಿಗಳ ಪ್ರಕಾರ ಟೆಸ್ಟ್ ಗಳನ್ನು ಮಾಡಲಾಗುತ್ತದೆ. ಮುಚ್ಚಿಟ್ಟ ಎರಡು ಬಟ್ಟಲುಗಳಿಂದ ಒಂದು ಬಟ್ಟಲು ಎತ್ತಲು ಹೇಳೀ ಅದು ಪಾಯಸದ್ದಾಗಿದ್ದರೆ ಯಾವ ಮಗು ಮೊಸರು ಎತ್ತಿದರೆ ಯಾವ ಮಗು ಎಂಬುದೆಲ್ಲಾ ಮನಸ್ಸೊಳಗೆ ನಿರ್ಧಾರ ಆಗುತ್ತದೆ.

Names For Baby Boy inspired by Lord Vishnu In Kannada

ಇಂದಿನ ಕಾಲದಲ್ಲಿ ಮಗು ಗಂಡು ಹೆಣ್ಣು ಇಬ್ಬರನ್ನೂ ಸಮಾನವಾಗಿ ಕಾಣಲಾಗುತ್ತದೆ. ಪ್ರತಿಯೊಬ್ಬರಿಗೂ ತಮ್ಮದೇ ಆಯ್ಕೆಗಳಿದ್ದರೂ ಯಾವ ಮಗುವಾದರೂ ಕುಟುಂಬ ಸಂತೋಷದಿಂದ ಬರಮಾಡಿಕೊಳ್ಳುತ್ತದೆ. ಹೀಗೆ ಗಂಡು ಮಗುವಾಗುತ್ತದೋ ಹೆಣ್ಣು ಮಗುವೋ ಎಂಬ ಕುತೂಹಲದ ಜೊತೆಗೆ ಯಾವ ಮಗುವಾದರೆ ಯಾವ ಹೆಸರಿಡುವುದು ಎನ್ನುವುದೂ ಚರ್ಚೆಗೆ ಬರಲು ಆರಂಭ ಆಗುತ್ತದೆ.

ಹಿಂದೂಗಳಲ್ಲಿ ತಮ್ಮ ಇಷ್ಟದ ದೇವರ ಹೆಸರಿಡುವುದು ವಾಡಿಕೆ. ಹಿಂದೂ ದೇವರುಗಳಿಗೂ ಕೇವಲ ಒಂದು ಹೆಸರಿರುವುದಿಲ್ಲ. ಅನೇಕ ಹೆಸರುಗಳಿರುತ್ತವೆ. ಆ ದೇವರ ಯಾವುದೋ ಒಂದು ಗುಣದ ಮೇಲೋ ಅಥವಾ ಆ ದೇವರು ಮಾಡಿದ ಯಾವುದೋ ಒಂದು ಕಾರ್ಯದಿಂದಲೋ ಆ ಹೆಸರು ಬಂದಿರುತ್ತದೆ. ತಮ್ಮ ಮಗನೂ ಅಥವಾ ಮಗಳೂ ಅಂತಹುದೇ ಶಕ್ತಿ ಹೊಂದಿರಬೇಕು ಅಥವಾ ಅಂತಹ ಗುಣಗಳುಳ್ಳವನಾಗಿರಬೇಕು ಎಂದು ಬಯಸಿ ಅಂತಹ ಹೆಸರಿಡಲಾಗುತ್ತದೆ.

ವಿಷ್ಣು ಹಿಂದುಗಳಿಗೆ ರಕ್ಷಕ. ಯಾವಾಗ ದುಷ್ಟ ಗುಣಗಳು ಜಾಸ್ತಿ ಆಗುತ್ತವೋ ಆ ಎಲ್ಲಾ ಸಂದರ್ಭಗಳಲ್ಲಿ ವಿಷ್ಣು ಒಂದು ಅವತಾರ ತಾಳಿ ಬಂದು ಕಾಪಾಡಿದ್ದಾನೆ ಎಂಬ ನಂಬಿಕೆ ಇದೆ. ವಿಷ್ಣು ಪ್ರಿಯರು ಅಥವಾ ಆರಾಧಕರು ತಮ್ಮ ಮಕ್ಕಳಿಗೆ ವಿಷ್ಣುವಿನ ಯಾವೆಲ್ಲಾ ಹೆಸರುಗಳನ್ನು ಇಡಬಹುದು ಎಂದು ನೋಡೋಣ.

ಆಧವನ್ - ಸೂರ್ಯನಂತೆ ತೇಜ ಉಳ್ಳವನು
ಆಶ್ರಿತ್ - ಸಂಸ್ಕೃತ ಮೂಲದ ಪದ ವಿಷ್ಣುವಿನ ಹೆಸರು
ಅಭಿಮಾ - ಭಯದ ನಿವಾರಕ
ಅಚ್ಯುತಮ್ - ಎಂದಿಗೂ ನಾಶವಾಗದವನು
ಅದೀಪ್ - ವಿಷ್ಣುವಿನ ದೀಪ
ಆಧ್ರಿತ್ - ಬೇರೆಯವರ ನೆರವಿಲ್ಲದೆ ಇರಬಲ್ಲವ
ಅದ್ವಿತ್ - ಬಹಳ ಶಕ್ತಿಶಾಲಿ
ಅಗ್ನಿಜ - ಬೆಂಕಿಯಿಂದ ಜನಿಸಿದವನು
ಅಜೇಯ - ಯಾರಿಂದಲೂ ಜಯಿಸಲು ಆಗದವನು
ಅಕ್ಷರ್ - ಶಾಶ್ವತ, ಅಮರ
ಅನಘ್ - ತಪ್ಪು ಮಾಡದವನು
ಅಮೋಘ್ - ಯಾವುದೇ ಕೆಲಸವಾಗಲಿ ಒಂದು ಉದ್ದೇಶದಿಂದ ಮಾಡುವವನು
ಆನಂದ್ - ಸಂತೋಷಯಮ,
ಅನಂತ - ಕೊನೆ ಇಲ್ಲದ
ಅನೀಶ್ - ಶ್ರೇಷ್ಠವಾದ ಮತ್ತು ಸಮಯಕ್ಕೆ ಸರಿಯಾಗಿ ಎಂಬರ್ಥ.
ಅಪ್ರಮೇಯ್ - ಗ್ರಹಿಸಲು ಆಗದವನು
ಆರ್ಣವ್ - ಸಮುದ್ರದಂತೆ ವಿಶಾಲವಾದ
ಅವ್ಯಾನ್ - ಪರಿಪೂರ್ಣ
ಅವ್ಯುಕ್ತ್ - ಸ್ಪಷ್ಟ ಮನಸ್ಸನ್ನು ಹೊಂದಿದವನು
ಬದ್ರಿ - ಚಂದ್ರನ ಪೂರ್ಣತೆ ಮತ್ತು ಚಳಿಗಾಲದ ಮೊದಲು ಬೀಳುವ ಮಳೆ
ಭಾವ್ - ಭಾವನೆಗಳು, ವಾತ್ಸಲ್ಯ
ಭುಧವ್ - ಭು ಎಂದರೆ ಭೂಮಿ ಧವ್ ಎಂದರೆ ದೇವರು. ಭೂಮಿಯ ದೇವರು ಎಂದರ್ಥ
ಭಾನು - ಸೂರ್ಯನಂತೆ ಪ್ರಕಾಶಮಾನವಾದ
ಚಿರಂಜೀವಿ - ಸಾವಿಲ್ಲದವನು
ದಕ್ಷ್ - ಸಮರ್ಥ
ದೇವೇಶ್ - ದೇವರ ದೇವ - ಎಲ್ಲರಿಂದಲೂ ಪೂಜಿಸಲ್ಪಡುವವ
ಧನಂಜಯ - ಸಂಪತ್ತನ್ನು ಗೆಲ್ಲುವಾತ
ಧ್ರುವ್ - ತನ್ನ ಸುತ್ತ ಎನೇ ಬದಲಾದರೂ ತಾನು ಮಾತ್ರ ಬದಲಾಗದವ
ದುರ್ಜಯ - ಜಯಿಸಲು ಆಗದವನು
ಏಕನ - ಶಕ್ತಿಶಾಲಿ
ಗಹನ್ - ಆಕಾಶ
ಗೋವಿಂದ - ದನಗಳನ್ನು ಕಾಯುವಾತ
ಹರಿ - ಸರ್ವಶಕ್ತ, ನೋವು ನಿವಾರಿಸುವವನು
ಇನೇಶ್ - ಶಕ್ತಿಶಾಲಿ ಮತ್ತು ಎಲ್ಲರನ್ನೂ ಆಳುವಾತ
ಈರೇಶ್ - ಭೂಮಿಯ ಒಡೆಯ
ಜಗದೀಶ್ - ಜಗತ್ತಿನ ಒಡೆಯ
ಜಯಂತ್ - ಯಾವಾಗಲೂ ಜಯಶಾಲಿಯಾಗುವಾತ
ಜ್ಯೇಷ್ಠ - ಎಲ್ಲರಿಗಿಂತ ದೊಡ್ಡವನು
ಕನಿಲ್ - ನಾಶಮಾಡಲು ಆಗದವನು
ಕೇಶವ - ಉದ್ದನೆಯ ಕೂದಲನ್ನು ಹೊಂದಿದವನು
ಕುಮುದ್ - ಕಮಲ, ನೀರಿನ ಹೂವು
ಲಥಿಕ್ - ಬಹಳ ಶಕ್ತಿಶಾಲಿ
ಮಾಧವ- ಮಹಾಲಕ್ಷಿಯ ಪತಿ, ಮಧುವಿನಂತೆ ಸಿಹಿಯಾದವನು
ಮಧುಸೂಧನ - ಮಧು ಎಂಬ ರಾಕ್ಷಸನನ್ನು ನಾಶ ಮಾಡಿದಾತ
ಮನೋಹರ - ಮನಸ್ಸನ್ನು ಗೆಲ್ಲುವಾತ
ಮುಕುಂದ್ - ಬಿಡುಗಡೆ ಮಾಡುವಾತ
ನಮಿಷ್ - ಒಳ್ಳೆಯ ನಡತೆ ಇರುವಾತ, ಸಭ್ಯ, ಗೌರವಯುತ
ನಾರಾಯಣ - ಮನುಷ್ಯನ ಆಶ್ರಯ
ನಿಕೇಶ್ - ಕಾಪಾಡುವವನು
ನಿಮಿಷ್ - ಯಾವುದೇ ಸಮಯದ ಈ ಕ್ಷಣದ
ಓಜಸ್ - ಹುರುಪಿನಿಂದ ಕೂಡಿದ
ಪಾರ್ಥಿವ್ - ಭೂಮಿಯ ಮಗ, ಧೈರ್ಯವಂತ
ಪವನ್ - ಗಾಳಿ
ಪ್ರದ್ಯುಮನ್ - ಬಹಳ ಸಂಪತ್ತುಳ್ಳವನು
ಪ್ರಹಿತ್ - ಎಲ್ಲಾ ಕಡೆ ವ್ಯಾಪಿಸುವವನು
ಪುಷ್ಕರ - ಕಮಲದಂತಹ ಕಣ್ಣುಳ್ಳವನು
ರಕ್ಷಣ್ - ಕಾಪಾಡುವವನು
ರಾಮ - ವಿಷ್ಣುವಿನ ಒಂದು ಅವತಾರದ ಹೆಸರು, ಪರಮ ಚೇತನ
ರಿಷಿಕ್ - ಸೂರ್ಯನ ಕಿರಣ, ಜ್ಞಾನದಿಂದ ಕೂಡಿದವನು
ಸಮೀರನ್ - ಎಲ್ಲಾ ಜೀವಜಂತುಗಳನ್ನು ಸಮರ್ಥವಾಗಿ ನಿರ್ವಹಿಸುವವನು
ಶರ್ವಾಸ್ - ಮಂಗಳಕರ
ಶ್ರೀವತ್ಸ - ಲಕ್ಷ್ಮಿ ದೇವಿಯ ಪ್ರೇಮಿ
ಶ್ರೀನಿವಾಸ - ಸಂಪತ್ತು ಮತ್ತು ಸಮೃದ್ಧಿಯ ವಾಸಸ್ಥಾನ
ಸುಮುಖ್ - ಆಕರ್ಷಕ ಮುಖ ಉಳ್ಳವನು
ಊರ್ಜಿತ್ - ಬಹಳ ಶಕ್ತಿಶಾಲಿ
ವರಿಷ್ - ಸಮುದ್ರದ ಮೇಲೆ ಮಲಗಿರುವವನು
ವರುಣ್ - ಸೂರ್ಯ ದೇವ
ವಾಸು - ಶ್ರೀಮಂತ
ವಿಕ್ರಮ್ - ಪಾಂಡಿತ್ಯವನ್ನು ಹೊಂದಿದವ
ವಿನೀತ್ - ಅಪಾರ ಜ್ಞಾನವನ್ನು ಹೊಂದಿದವನು
ವಿರಾಜ್ - ಭವ್ಯವಾದ, ವೈಭವಪೂರ್ಣ
ವಿಟ್ಠಲ್ - ಸಮೃದ್ಧಿಯನ್ನು ನೀಡುವವನು

English summary

Names For Baby Boy inspired by Lord Vishnu In Kannada

Here are names for baby boy inspire by lord Vishnu, read on.
Story first published: Sunday, May 14, 2023, 9:00 [IST]
X
Desktop Bottom Promotion