Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
Mothers Day 2023: ಅಮ್ಮನಿಗಾಗಿ ಈ ರೀತಿ ಸ್ಪೆಷಲ್ ಪತ್ರ ಬರೆಯಿರಿ!
ಅಮ್ಮ ಎಂದರೆ ಬೆಲೆ ಕಟ್ಟಲಾಗದ ಪ್ರೀತಿ. ಅಮ್ಮನಿಗೆ ಸರಿ ಸಾಟಿ ಮತ್ತೊಬ್ಬರಿಲ್ಲ. ಪ್ರತಿ ವರ್ಷ ಮೇ ಎರಡನೇ ವಾರದ ಭಾನುವಾರವನ್ನು ಅಮ್ಮಂದಿರ ದಿನವನ್ನಾಗಿ ಆಚರಣೆ ಮಾಡುಲಾಗುತ್ತದೆ. ಈ ದಿನವನ್ನು ಅಮ್ಮನಿಗಾಗಿ ಸ್ಪೆಷಲ್ ಮಾಡಬೇಕು ಅನ್ನುವ ಆಸೆ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಆದ್ರೆ ಯಾವ ರೀತಿ ಆಚರಣೆ ಮಾಡ್ಬೇಕು ಅನ್ನೋ ಐಡಿಯಾ ಹೆಚ್ಚಿನವರ ತಲೆಗೆ ಹೊಳೆಯೋದೇ ಇಲ್ಲ.
ತುಂಬಾ ಜನ ಅಮ್ಮನಿಗಾಗಿ ದುಬಾರಿ ಗಿಫ್ಟ್‌ಗಳನ್ನು ಖರೀದಿಸುತ್ತಾರೆ. ಆಕೆಯನ್ನು ಇಷ್ಟವಾದ ಸ್ಥಳಗಳಿಗೆ ಕರೆದುಕೊಂಡು ಹೋಗ್ತಾರೆ. ಈ ರೀತಿ ಮಾಡಿದ್ರೆ ಮಾತ್ರ ಅಮ್ಮನಿಗೆ ಖುಷಿಯಾಗುತ್ತೆ ಅಂತ ಅಂದುಕೊಳ್ಳಬೇಡಿ. ಆಕೆಗಾಗಿ ನೀವು ವಿಶೇಷ ಪತ್ರವನ್ನೂ ಬರೆಯಬಹುದು. ಅಮ್ಮನ ಮನಮುಟ್ಟುವಂತೆ ನಿಮ್ಮ ಮನದ ಮಾತನ್ನು ಹೇಳಿ ಆಕೆ ಖಂಡಿತ ಇಷ್ಟ ಪಡುತ್ತಾರೆ. ಅಷ್ಟಕ್ಕು ಅಮ್ಮಂದಿರ ದಿನಕ್ಕಾಗಿ ಅಮ್ಮನಿಗಾಗಿ ಯಾವ ರೀತಿ ಪತ್ರ ಬರೆಯಬೇಕು ಅನ್ನೋದನ್ನು ತಿಳಿಯೋಣ.

1. ಮೊದಲ ಪತ್ರ
ಅಮ್ಮ ನೀನು ನನಗೆ ಆದರ್ಶ. ನನ್ನ ಸಂಕಷ್ಟದ ಸಮಯದಲ್ಲಿ ನನ್ನ ಜೊತೆಯಾಗಿ ನಿಂತವಳು ನೀನು. ನಾನು ನನ್ನ ಜೀವನವಿಡೀ ಆದರ್ಶ ವ್ಯಕ್ತಿಗಾಗಿ ಹುಡುಕಾಡುತ್ತಿದ್ದೆ ಆದರೆ ಕೊನೆಗೆ ಅದು ನೀನು ಎಂದು ಗೊತ್ತಾಯಿತು. ನನಗೆ ಹುಷಾರಿಲ್ಲದ ಸಂದರ್ಭದಲ್ಲಿ ನೀನು ಅದೆಷ್ಟು ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೀಯಾ ಅನ್ನೋದು ನನಗೆ ಚೆನ್ನಾಗಿ ಗೊತ್ತಿದೆ. ನಾನು ಉತ್ತಮ ಅಂಕಗಳನ್ನು ತೆಗೆದುಕೊಂಡಾಗ ನೀವು ಎಷ್ಟು ಹೆಮ್ಮೆ ಪಟ್ಟಿದ್ದೀಯಾ ಎಂದು ನನಗೆ ಚೆನ್ನಾಗಿ ಗೊತ್ತಿದೆ. ನಾನು ಇವತ್ತು ಜೀವನದಲ್ಲಿ ಏನಾದರೂ ಸಾಧನೆ ಮಾಡಿದ್ದೇನೆ ಎಂದರೆ ಅದಕ್ಕೆಲ್ಲಾ ನೀನು ಕಾರಣ. ನೀನು ಮಾಡಿದ ತ್ಯಾಗಕ್ಕಾಗಿ ಧನ್ಯವಾದಗಳು.
2. ಎರಡನೇ ಪತ್ರ
ನನಗೊತ್ತಮ್ಮ ನಾನು ನಿನ್ನ ಬಳಿ ನನ್ನ ಪ್ರೀತಿಯಯನ್ನು ಹೇಳಿಕೊಳ್ಳೋದಕ್ಕೆ ಹಿಂಜರಿಯುತ್ತೇವೆ. ಆದರೆ ನಾನು ನಿನ್ನನ್ನು ತುಂಬಾನೇ ಪ್ರೀತಿಸುತ್ತೇನೆ. " ಐ ಲವ್ ಯೂ" ಅಮ್ಮಾ. ಹಾಗೆಯೇ ನೀನು ನನ್ನನ್ನು ಎಷ್ಟು ಪ್ರೀತಿ ಮಾಡುತ್ತೀಯಾ ಅನ್ನೋದು ಕೂಡ ನನಗೆ ಚೆನ್ನಾಗಿ ಗೊತ್ತಿದೆ. ನೀನು ಪ್ರತಿನಿತ್ಯ ನಮಗಾಗಿ ಬಹು ಬೇಗನೇ ಏಳುತ್ತೀಯಾ. ನೀನು ಕುಟುಂಬ ಎಂದು ಬಂದಾಗ ಬೇರ್ಯಾವುದನ್ನು ಪರಿಗಣನೆಗೆ ತೆಗೆದುಕೊಳ್ಳೋದಿಲ್ಲ. ನಿನ್ನ ಸಂತೋಷವನ್ನೆಲ್ಲಾ ನೀನು ನಮಗಾಗಿ ತ್ಯಾಗ ಮಾಡಿದ್ದೀಯಾ.
ನಾನು ತಪ್ಪುಗಳನ್ನು ಮಾಡಿದಾಗ ನೀನ ತಿದ್ದಿ ಬುದ್ಧಿ ಹೇಳಿದ್ದೀಯಾ. ಹೊರತು ನೀನು ಎಂದಿಗೂ ನನಗೆ ಹೊಡೆದಿಲ್ಲ, ಬೈದಿಲ್ಲ. ನಿನ್ನ ತ್ಯಾಗ ಹಾಗೂ ಪ್ರೀತಿಗೆ ನಾನು ಯಾವತ್ತಿಗೂ ಚಿರರುಣಿ. ಪ್ರತಿ ನಿತ್ಯ ನೀನು ನಮಗಾಗಿ ರುಚಿ ರುಚಿಯಾದ ಖಾದ್ಯಗಳನ್ನು ತಯಾರಿಸಿ ಉಣಬಡಿಸಿದ್ದೀಯಾ. ನಮ್ಮೆಲ್ಲರ ಕಾಳಜಿ ಮಾಡಿದ್ದೀಯಾ. ಕುಟುಂಬದ ಸಂತೋಷಕ್ಕಾಗಿ ದುಡಿಯುತ್ತಿರುವ ನಿನಗೆ ಧನ್ಯವಾದಗಳು ಅಮ್ಮಾ.
3. ಮೂರನೇ ಪತ್ರ
ಹೌದಮ್ಮಾ ನೀನು ಹೇಳಿದ ಎಲ್ಲಾ ಮಾತುಗಳು ನಿಜ. ಆವತ್ತು ನಾನು ನಿನ್ನ ಮಾತುಗಳನ್ನು ಕೇಳದೆ ನಿನ್ನ ಬಳಿ ಎಷ್ಟೋ ಸಾರಿ ಜಗಳ, ವಾದ ಮಾಡಿರಬಹುದು. ನನಗೀಗ ನನ್ನ ತಪ್ಪಿನ ಅರಿವಾಗುತ್ತಿದೆ. ಅದಕ್ಕಾಗಿ ಸಾರಿ ಅಮ್ಮಾ. ಈಗ ನಾನೊಬ್ಬ ತಾಯಿಯಾದ ಮೇಲೆ ನನಗೆ ಚೆನ್ನಾಗಿ ಅರ್ಥವಾಗುತ್ತಿದೆ. ನನ್ನ ಮಕ್ಕಳು ನನ್ನ ಜೊತೆಗೆ ಜಗಳ, ವಾದವನ್ನು ಮಾಡುತ್ತಿದ್ದಾಗ ನಾನು ಆವತ್ತು ನಿನ್ನ ಮನಸ್ಸಿಗೆ ನೋವು ಮಾಡಿದ್ದನ್ನು ನೆನಪಿಸಿಕೊಳ್ಳುತ್ತೇನೆ. ನಾನು ಎಷ್ಟೇ ದೊಡ್ಡವಳಾಗಿದ್ದರು ಕೂಡ ನಿನ್ನ ಮೇಲಿರುವ ನನ್ನ ಪ್ರೀತಿ ಎಂದಿಗೂ ಕಡಿಮೆಯಾಗೋದಿಲ್ಲ. ನನ್ನ ಜೊತೆಗೆ ಸುಂದರವಾದ ಕ್ಷಣಗಳನ್ನು ಕಳೆದಿರೋದಕ್ಕೆ ಥ್ಯಾಂಕ್ಯು ಅಮ್ಮಾ.
4. ನಾಲ್ಕನೇ ಪತ್ರ
ನನ್ನ ಜೀವನದಲ್ಲಿ ಬಂದ ಮೊದಲ ಮಹಿಳೆ ನೀನು. ನಾನು ನಿನ್ನ ಮಗನಾಗಿ ಹುಟ್ಟಿದ್ದು ನನ್ನ ಪುಣ್ಯ. ಒಂಟಿ ಮಹಿಳೆ ಏನನ್ನೂ ಸಾಧಿಸಲು ಸಾಧ್ಯ ಇಲ್ಲ ಎಂದು ಬೆರಳು ತೋರಿಸಿ ಮಾತನಾಡಿದವರಿಗೆ ಉತ್ತರ ಕೊಟ್ಟವಳು ನೀನು. ಒಬ್ಬಳೇ ನಿಂತು ಇಡೀ ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸಿ ಮಕ್ಕಳ ಕನಸನ್ನು ಪೂರೈಸಿದ ಮಹಾ ತಾಯಿ ನೀನು. ಮಹಿಳೆಯರಿಗೆ ಯಾವ ರೀತಿ ಗೌರವವನ್ನು ನೀಡಬೇಕು ಅನ್ನೋದನ್ನು ನಾನು ನಿನ್ನಿಂದ ಕಲಿತಿದ್ದೀನಿ. ಮೌಲ್ಯಯುತ ಜೀವನ ಪಾಠಗಳನ್ನು ಕಲಿಸಿಕೊಟ್ಟ ನಿನ್ನ ಪ್ರೀತಿಗೆ ಚಿರರುಣಿ ಅಮ್ಮಾ.
ಅಮ್ಮನ ಪ್ರೀತಿಯನ್ನು ಪದಗಳಲ್ಲಿ ಬಣ್ಣಿಸೋದಕ್ಕೆ ಸಾಧ್ಯವಿಲ್ಲ. ಆದರೆ ಆಕೆಯ ಸ್ಪೆಷಲ್ ದಿನದಂದು ನಿಮ್ಮ ಮನದ ಮಾತನ್ನು ಆಕೆಗೆ ತಿಳಿಸಿ.



Click it and Unblock the Notifications

