Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ತನ್ನ ಮರಿ ಕಾಪಾಡಲು ತನ್ನ ಪ್ರಾಣವನ್ನೇ ಮೊಸಳೆಗೆ ನೀಡಿದ ಜಿಂಕೆ: ವೀಡಿಯೋ ವೈರಲ್
ತಾಯಿ ಪ್ರೀತಿಗೆ ಸಮ ಬೇರೇನೂ ಇರಲ್ಲ, ತನ್ನ ಮಗುವಿಗಾಗಿ ತಾಯಿ ತನ್ನ ಪ್ರಾಣವನ್ನು ನೀಡಲು ಹಿಂದೆ ಮುಂದೆ ನೋಡಲಾರಳು. ಈ ತಾಯಿ ಪ್ರೀತಿ ಎಂಬುವುದು ಮನುಷ್ಯನಲ್ಲಿ ಮಾತ್ರ ಕಾಣುವುದಲ್ಲ, ಮನುಷ್ಯರಿಗಿಂತ ಹೆಚ್ಚಾಗಿ ಪ್ರಾಣಿಗಳಲ್ಲಿ ಕಂಡು ಬರುತ್ತದೆ.
ಪ್ರಾಣಿಗಳು ತನ್ನ ಮರಿಗಳನ್ನು ತುಂಬಾನೇ ಜೋಪಾನ ಮಾಡುತ್ತವೆ. ಬೇರೆ ಪ್ರಾಣಿಗಳು ತನ್ನ ಮರಿಗೆ ತೊಂದರೆ ಕೊಡಲು ಬಂದರೆ ತನ್ನ ಪ್ರಾಣ ಲೆಕ್ಕಿಸದೆ ಹೋರಾಡುತ್ತದೆ ಅಥವಾ ತನ್ನ ಮಗುವಿಗಾಗಿ ತನ್ನ ಪ್ರಾಣವನ್ನು ನೀಡುತ್ತದೆ. ಅಂಥದ್ದೇ ವೀಡಿಯೋವೊಂದು ಸಾಮಾಜಿಕ ತಾಣದಲ್ಲಿ ತುಂಬಾನೇ ವೈರಲ್ ಆಗಿದೆ. ತಾಯಿ ಜಿಂಕೆ ತನ್ನ ಮರಿ ಕಾಪಾಡಲು ತನ್ನ ಪ್ರಾಣವನ್ನು ಬಲಿ ನೀಡಿದೆ.

ಜಿಂಕೆ ಮರಿಯೊಂದು ನೀರು ಕುಡಿಯಲು ನದಿ ನೀರಿಗೆ ಇಳಿದಿದೆ, ಅಲ್ಲೇ ಹೊಂಚು ಹಾಕಿ ಕುಳಿತಿದ್ದ ಮೊಸಳೆ ದಾಳಿ ಮಾಡಲು ಮುಂದಾಗಿದೆ, ಜಿಂಕೆ ಮರಿ ಪ್ರಾಣ ಭಯದಿಂದ ಓಡಲಾರಂಭಿಸಿದೆ, ಆದರೆ ಮೊಸಳೆ ವೇಗವಾಗಿ ಅಟ್ಟಿಸಿಕೊಂಡು ಬಂದಿದೆ, ಇನ್ನೇನು ಸ್ವಲ್ಪದರಲ್ಲಿ ಮರಿ ಮೊಸಳೆ ಬಾಯಿಗೆ ಸಿಲುಕುತ್ತಿತ್ತು, ಅದನ್ನು ನೋಡಿದ ತಾಯಿ ಜಿಂಕೆ ಓಡಿ ಬಂದು ಮರಿಗೆ ಅಡ್ಡವಾಗಿದೆ, ಹೀಗೆ ಮಾಡುವುದರಿಂದ ಮರಿ ಕಾಪಾಡಬಹುದು ಎಂದು ಯೋಚಿಸಿ ತನ್ನ ಪ್ರಾಣವನ್ನೇ ಬಲಿ ನೀಡಿದೆ.
ಈ ವೀಡಿಯೋ ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿದ್ದು ಇದನ್ನು ನೋಡಿದವರು ತಾಯಿ ಪ್ರೀತಿ ಅಂತ ಇದಕ್ಕೇ ಹೇಳುವುದು ಎಂದು ಕಮೆಂಟ್ ಮಾಡುತ್ತಿದ್ದಾರೆ. ತನ್ನ ಮಗುವಿಗಾಗಿ ತಾಯಿ ತನ್ನ ಪ್ರಾಣ ಲೆಕ್ಕಿಸಲಾರಳು. ಇತ್ತೀಚಿಗೆ ಕರುವೊಂದನ್ನು ಅಟ್ಟಿಸಿಕೊಂಡು ಬಂದ ಹುಲಿಯನ್ನು ಹಸು ಓಡಿಸುವ ವೀಡಿಯೋ ಕೂಡ ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು.



Click it and Unblock the Notifications
