Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ಉತ್ತರಕ್ಕೆ ಮಿಸ್ ನಿಕರಾಗುವಾಗೆ ಸಿಕ್ತು 2023 ಭುವನ ಸುಂದರಿ ಪಟ್ಟ! ಅಷ್ಟಕ್ಕೂ ಅವರು ನೀಡಿದ ಆ ಉತ್ತರವೇನು?
ಫ್ಯಾಷನ್ ಲೋಕದಲ್ಲಿ ಪ್ರತಿಷ್ಠೆಯ ಸ್ಪರ್ಧೆಯಾದ ಮಿಸ್ ಯೂನಿವರ್ಸ್ ಅಂದರೆ ಭುವನ ಸುಂದರಿ ಸ್ಪರ್ಧೆಯಲ್ಲಿ ಮಿಸ್ ನಿಕರಾಗುವಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. 72ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ವಿಭಿನ್ನ ಉತ್ತರ ನೀಡುವ ಮೂಲಕ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
2023ರ ಭುವನ ಸುಂದರಿ ಪಟ್ಟಕ್ಕೆ 90 ದೇಶಗಳ ಸ್ಪರ್ಧಿಗಳು ಸ್ಪರ್ಧಿಸಿದ್ದರು, ಭಾರತದಿಂದ ಶ್ವೇತಾ ಶಾರದಾ ಸೆಮಿಫೈನಲ್ ತಲುಪಿದ್ದರು, ಭಾರತಕ್ಕೆ ಈ ಬಾರಿ ಭುವನ ಸುಂದರಿ ಪಟ್ಟ ಒಲಿಯಬಹುದೇ ಎಂಬ ನಿರೀಕ್ಷೆ ಇತ್ತು, ಆದರೆ ಟಾಪ್ 10 ಸ್ಪರ್ಧಿಗಳ ಪಟ್ಟಿಗೆ ಅವರು ಕ್ವಾಲಿಫೈ ಆಗಲಿಲ್ಲ, ಶೆಯ್ನಿಸ್ ಪಲಾಸಿಯೋಸ್ ನಿಕರಾಗುವಾ ತಮ್ಮ ವಿಭಿನ್ನ ಉತ್ತರದ ಮೂಲಕ ಪಟ್ಟ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಭುವನ ಸುಂದರಿ ಪಟ್ಟಕ್ಕೆ ಕೇಳಲಾದ ಪ್ರಶ್ನೆ ಯಾವುದು, ಅದಕ್ಕೆ ಅವರು ನೀಡಿದ ಉತ್ತರವೇನು ಎಂದು ನೋಡೋಣ ಬನ್ನಿ:
ಸಮಾನ ವೇತನ ಮತ್ತು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿ ಗಮನ ಸೆಳೆದ ನಿಕರಾಗುವಾ
ಭುವನ ಸುಂದರಿ ಸ್ಪರ್ಧೆಯಲ್ಲಿ ಪಟ್ಟಕ್ಕಾಗಿ ಪೈಪೋಟಿ ನಡೆಸುವವರೆಗೆ ಕೊನೆಯ ಸುತ್ತಿನಲ್ಲಿ ಒಂದು ಪ್ರಶ್ನೆ ಕೇಳಲಾಯ್ತು, ಅದೇನೆಂದರೆ ನೀವು ಮತ್ತೊಬ್ಬ ಮಹಿಳೆಯಂತೆ ಒಂದು ವರ್ಷ ಬದುಕುವುದಾದರೆ ಯಾರಾಗ ಬಯಸುತ್ತೀರಿ? ಏಕೆ?
ಅದಕ್ಕೆ ಸ್ಪರ್ಧಿಗಳು ಒಬ್ಬೊಬ್ಬರು ಒಂದೊಂದು ಉತ್ತರ ನೀಡಿದರು. ಮಿಸ್ ಆಸ್ಟ್ರೇಲಿಯಾ ನಾನು ನನ್ನ ತಾಯಿಯಂತೆ ಬದುಕಲು ಇಷ್ಟಪಡುತ್ತೇನೆ ಎಂದರೆ ಇನ್ನೊಬ್ಬ ಸ್ಪರ್ಧಿ ಮಲಾಲಾ ಯೂಸಫ್‌ಜಾಯ್ ಎಂದು ಉತ್ತರಿಸಿದರು. ಇದೇ ಪ್ರಶ್ನೆಗೆ ನಿಕರಾಗುವಾ ನಾನು ಮೇರಿ ವೋಲ್‌ಸ್ಟೋನ್‌ಕ್ರಾಫ್ಟ್ ರಂತೆ ಬದುಕಲು ಇಷ್ಟಪಡುತ್ತೇನೆ ಎಂದು ಹೇಳುವ ಮೂಲಕ ಗಮನ ಸೆಳೆದರು.
ಮೇರಿ ವೋಲ್‌ಸ್ಟೋನ್‌ಕ್ರಾಫ್ಟ್ ಮಹಿಳಾ ಹಕ್ಕುಗಳ ಕಾರ್ಯಕರ್ತೆ, ಇವರನ್ನು ಸ್ತ್ರೀವಾದದ ತಾಯಿ ಎಂದು ಕರೆಯುತ್ತಾರೆ. ಇವರು ಮಹಿಳೆಯರಿಗೆ ಸಮಾನ ವೇತನ ದೊರೆಯಬೇಕು ಎಂದು ಹೋರಾಟ ನಡೆಸಿದ್ದಾರೆ, ಮಹಿಳೆಯರ ಸಬಲೀಕರಣಕ್ಕೆ ಪ್ರಯತ್ನಿಸಿದ ದೊಡ್ಡ ಶಕ್ತಿ. ಆದ್ದರಿಂದ ಈ ಉತ್ತರವನ್ನು ನೀಡಿದ ನಿಕರಾಗುವಾ ಈ ವರ್ಷದ ಭುವನ ಸುಂದರಿಯಾಗಿ ಆಯ್ಕೆಯಾಗಿದ್ದಾರೆ.
ಭುವನ ಸುಂದರಿ ಮಿಸ್ ನಿಕರಾಗುವಾ ಕುರಿತ ಕಿರುಪರಿಚಯ
* ಮಾಸ್ ಕಮ್ಯೂನಿಕೇಷನ್‌ನಲ್ಲಿ ಡಿಗ್ರಿ ಪಡೆದಿದ್ದಾರೆ, ಅತ್ಯಂತ ಒಳ್ಳೆಯ ವಾಲಿಬಾಲ್ ಆಟಗಾರ್ತಿ.
* 2016ರಲ್ಲಿ ಮಿಸ್ ಟೀನ್ ನಿಕರಾಗುವಾ , 2020ರಲ್ಲಿ ಮಿಸ್ ವರ್ಲ್ಡ್ ನಿಕರಾಗುವಾ ಆಗಿ ಆಯ್ಕೆ ಆಗಿದ್ದರು
* ತಮ್ಮ ಸೌಂದರ್ಯ ಮಾತ್ರವಲ್ಲ, ಬುದ್ಧಿವಂತಿಕೆಯಿಂದಲೂ ಗಮನ ಸೆಳೆಯುವ ಶೆಯ್ನಿಸ್ ಪಲಾಸಿಯೋಸ್ 84ಕ್ಕೂ ಅಧಿಕ ಸ್ಪರ್ಧೆಗಳಲ್ಲಿ ಜಯಗಳಿಸಿದ್ದಾರೆ.



Click it and Unblock the Notifications
