Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸ್ವಾತಂತ್ರ್ಯ ದಿನಾಚರಣೆ: ರಾಜಾಸ್ಥಾನ ಟರ್ಬನ್, ನೆಹರು ಕೋಟ್ ಲುಕ್‌ನಲ್ಲಿ ಮೋದಿ ಶೈನಿಂಗ್
2023ರ ಸ್ವಾತಂತ್ರ್ಯದ ದಿನಾಚರಣೆಯಲ್ಲಿ ಮೋದಿಯವರ ಪವರ್‌ಫುಲ್ ಭಾಷಣದಷ್ಟೇ ಗಮನ ಸೆಳೆದಿದ್ದು ಅವರ ಡ್ರೆಸ್ಸಿಂಗ್ ಸ್ಟೈಲ್. ಕುರ್ತಾದಲ್ಲೂ ಸಕತ್ ಸ್ಟೈಲಿಷ್ ಆಗಿ ಮಿಂಚಬಹುದು ಎಂಬುವುದನ್ನು ಪ್ರಧಾನಿ ಮೋದಿ ತೋರಿಸಿಕೊಟ್ಟಿದ್ದಾರೆ, ಪ್ರತಿಯೊಂದು ವಿಶೇಷ ಸಂದರ್ಭಗಳಲ್ಲಿ ಅವರ ಧಿರಿಸು ಕೂಡ ತುಂಬಾನೇ ಗಮನ ಸೆಳೆಯುತ್ತಿರುತ್ತದೆ. ಈ ಬಾರಿ ಅವರ ಟರ್ಬನ್ ಲುಕ್ ಸಕತ್ ಕ್ಲಾಸಿ ಆಗಿತ್ತು.

ಎಲ್ಲರೂ ಮೋದಿಯವರ ಟರ್ಬನ್ ಕುರಿತು ಮಾತನಾಡುತ್ತಿದ್ದಾರೆ, ಆ ವೈಬ್ರೆಂಟ್ ಕಲರ್‌ನ ಟರ್ಬನ್ ಪಟ್ ಅಂತ ಗಮನ ಸೆಳೆಯುವಂತಿತ್ತು. 77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಮೋದಿ ಧರಿಸಿರುವ ಟರ್ಬನ್‌ನ ವಿಶೇಷತೆಯೇನು ಎಂದು ನೋಡೋಣ ಬನ್ನಿ:
ರಾಜಾಸ್ಥಾನ್ ಟರ್ಬನ್ ಲುಕ್‌ನಲ್ಲಿ ಮೋದಿ ಶೈನಿಂಗ್
ಹಳದಿ ಹಾಗೂ ಕೆಂಪು ಮಿಶ್ರಿತ ರಾಜಾಸ್ಥಾನ್ ಟರ್ಬನ್ ನೋಡಲು ತುಂಬಾನೇ ಆಕರ್ಷಕವಾಗಿತ್ತು. ಇದು ರಾಜಾಸ್ಥಾನದ ಸಾಂಪ್ರದಾಯಕ ಟರ್ಬನ್ ಆಗಿದೆ. ಇದನ್ನು ಅಲ್ಲಿಯ ಸ್ಥಳಿಯ ಕ್ರಾಫ್ಟ್ಸ್‌ಮೆನ್ ಡಿಸೈನ್ ಮಾಡಿದ್ದಾರೆ. ಇದನ್ನು ಬ್ಲಾಕ್ ಪೇಯಿಂಟಿಂಗ್ ಟೆಕ್ನಿಕ್ ಬಳಸಿ ತಯಾರಿಸಲಾಗಿದೆ.
ವೈಟ್ ಕುರ್ತಾ ಬ್ಲ್ಯಾಕ್ ಬ್ಲೇಝರ್
ಅವರ ಟರ್ಬನ್‌ನ್ನಷ್ಟೇ ಅವರ ಕುರ್ತಾ- ಬ್ಲೇಝರ್ ಕೂಡ ತುಂಬಾನೇ ಆಕರ್ಷಕವಾಗಿತ್ತು. ವೈಟ್ ಕುರ್ತಾಕ್ಕೆ ಬ್ಲ್ಯಾಕ್ ಬ್ಲೇಝರ್ ಕಾಂಬಿನೇಷನ್ ತುಂಬಾನೇ ಆಕರ್ಷಕವಾಗಿತ್ತು. ತಲೆಯಲ್ಲಿ ಕೇಸರಿ ಟರ್ಬನ್, ಆ ಟರ್ಬನ್‌ನಲ್ಲಿ ಗಮನಿಸಿದರೆ ಅಶೋಕಚಿತ್ರ ಕಾಣಬಹುದು. ನಮ್ಮ ದೇಶದ ಸಂಸ್ಕೃತಿಯನ್ನು ಬಿಂಬಿಸುವಂತಿದೆ.
ಮೋದಿಯವರು ಪ್ರತಿ ವರ್ಷದಂತೆ ಈ ವರ್ಷವೂ ತಮ್ಮ ಡ್ರೆಸ್ಸಿಂಗ್‌ನಿಂದ ಗಮನ ಸೆಳೆದಿದ್ದಾರೆ. 2014ರಿಂದಲೂ ಮೋದಿ ಅತ್ಯಾಕರ್ಷಕವಾದ ಟರ್ಬನ್ ಧರಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಈ ಬಾರಿ ಮೋದಿಯವರ ಟರ್ಬನ್ ಆಕರ್ಷಕವಾಗಿತ್ತು ಅಲ್ವಾ?



Click it and Unblock the Notifications
