Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ರಕ್ಷಾ ಬಂಧನಕ್ಕೆ ಶುಭ ಕೋರಲು ಇಲ್ಲಿದೆ ವಿಶೇಷ ಸಂದೇಶಗಳು!
ಪ್ರತಿ ವರ್ಷದಂತೆ ಈ ವರ್ಷವೂ ಅಣ್ಣ-ತಂಗಿಯರ ಪವಿತ್ರ ಹಬ್ಬ ರಕ್ಷಾ ಬಂಧನವನ್ನು ಆಚರಣೆ ಮಾಡಲಾಗುತ್ತಿದೆ. ಭದ್ರ ಕಾಲ ಇರೋದ್ರಿಂದ ಈ ವರ್ಷ ಆಗಸ್ಟ್ 09 ರಂದು ರಾಕಿ ಹಬ್ಬವನ್ನು ಆಚರಣೆ ಮಾಡಲಾಗ್ತಿದೆ. ಈ ವಿಶೇಷ ದಿನಕ್ಕೆ ನಿಮ್ಮ ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರಿಗೆ ಸ್ಪೆಷಲ್ ಆಗಿ ಶುಭ ಕೋರಬಹುದು.

ನಿಮ್ಮ ಒಂದು ಶುಭ ಹಾರೈಕೆ ಅವರ ಮುಖದಲ್ಲಿ ಸಂತೋಷವನ್ನು ಉಂಟು ಮಾಡಬಹುದು. ಇಲ್ಲಿದೆ ನಿಮ್ಮ ಸಹೋದರ-ಸಹೋದರಿಯರಿಗಾಗಿ ಶುಭ ಕೋರಲು ಸ್ಪೆಷಲ್ ಸಂದೇಶಗಳು.
ಅಣ್ಣನಿಗೆ ಈ ರೀತಿ ಶುಭಾಷಯ ತಿಳಿಸಿ!
1. ಯಾವಾಗಲೂ ನನಗೆ ಆಧಾರಸ್ತಂಭವಾಗಿದ್ದಕ್ಕಾಗಿ ನಿಂತಿದ್ದಕ್ಕಾಗಿ ಧನ್ಯವಾದಗಳು. ನಿನ್ನಂತಹ ಸಹೋದರನನ್ನು ಪಡೆದ ನಾನು ತುಂಬಾ ಧನ್ಯ. ರಕ್ಷಾ ಬಂಧನದ ಶುಭಾಶಯಗಳು!
2. ನನ್ನ ಒಡನಾಡಿ, ನನ್ನ ರಕ್ಷಕ ಮತ್ತು ನನ್ನೊಂದಿಗೆ ಸಮಾನವಾಗಿ ಕಷ್ಟ-ಸುಖಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಅಣ್ಣಾ. ನೀನು ಅತ್ಯುತ್ತಮ ಸಹೋದರ. ರಕ್ಷಾ ಬಂಧನದ ಶುಭಾಶಯಗಳು!
3. ನನ್ನ ಕಾಳೆಯುವ, ನನ್ನ ಪ್ರೀತಿಯ ಸಹೋದರ, ನನ್ನ ರಕ್ಷಕ ಮತ್ತು ನನ್ನನ್ನು ಚೆನ್ನಾಗಿ ತಿಳಿದಿರುವ ಏಕೈಕ ವ್ಯಕ್ತಿಗೆ ರಕ್ಷಾ ಬಂಧನದ ಶುಭಾಶಯಗಳು. ಯಾವಾಗಲೂ ನನ್ನೊಂದಿಗೆ ಇರುವುದಕ್ಕೆ ಧನ್ಯವಾದಗಳು. ರಕ್ಷಾ ಬಂಧನದ ಶುಭಾಶಯಗಳು ಸಹೋದರ!
4. ನಿಮ್ಮ ಸಂತೋಷ, ಸಮೃದ್ಧಿ ಮತ್ತು ದೀರ್ಘಾಯುಷ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. ರಕ್ಷಾ ಬಂಧನದ ಶುಭಾಶಯಗಳು ಅಣ್ಣಾ.
5. ನೀವು ಯಾವಾಗಲೂ ನನ್ನ ಆತ್ಮೀಯ ಸ್ನೇಹಿತರಾಗಿದ್ದೀರಿ. ನನ್ನ ಕೈ ಹಿಡಿದು ನಡೆಸಿದ್ದೀರಿ. ಈ ಇಡೀ ಜಗತ್ತಿನಲ್ಲಿ ನಿನಗಿಂತ ಉತ್ತಮ ಸಹೋದರ ಇರಲಾರರು. ನೀವು ಯಾವಾಗಲೂ ಜೀವನದಲ್ಲಿ ಚೆನ್ನಾಗಿರಬೇಕೆಂದು ಹಾರೈಸುತ್ತೇನೆ. ರಕ್ಷಾ ಬಂಧನದ ಶುಭಾಶಯಗಳು ಅಣ್ಣಾ!
ತಂಗಿಗೆ ಈ ರೀತಿ ಶುಭಾಷಯ ತಿಳಿಸಿ!
1. ಆತ್ಮೀಯ ಸಹೋದರಿ, ನಾನು ಯಾವಾಗಲೂ ನಿನ್ನ ರಕ್ಷಕನಾಗಿರುತ್ತೇನೆ. ಮತ್ತು ಏನೇ ಆಗಲಿ ಯಾವಾಗಲೂ ನಿನ್ನ ಜೊತೆಯಲ್ಲಿರುತ್ತೇನೆ ಎಂದು ಭರವಸೆ ನೀಡುತ್ತೇನೆ. ನಿನಗೆ ನನ್ನ ಆಶೀರ್ವಾದಗಳು.
2. ನೀನು ನನ್ನ ಮಣಿಕಟ್ಟಿನ ಮೇಲೆ ಕಟ್ಟುವ ಈ ಪವಿತ್ರ ದಾರವು ನಮ್ಮ ಬಂಧವನ್ನು ಹೆಚ್ಚು ಬಲಪಡಿಸುತ್ತದೆ. ಮತ್ತು ನನ್ನ ಹೃದಯದಲ್ಲಿ ನಿನ್ನ ಮೇಲಿನ ಪ್ರೀತಿ ಸದಾ ಇರುತ್ತದೆ. ನೀನು ವಿಶ್ವದ ಅತ್ಯುತ್ತಮ ಸಹೋದರಿ.
ರಕ್ಷಾ ಬಂಧನದ ಶುಭಾಶಯಗಳು ತಂಗಿ
3. ದೇವರು ನನ್ನ ಸಹೋದರಿಗೆ ಸಂತೋಷ, ಆರೋಗ್ಯ ಮತ್ತು ಯಶಸ್ಸನ್ನು ನೀಡಲಿ. ರಕ್ಷಾ ಬಂಧನದ ಶುಭಾಶಯಗಳು ತಂಗಿ.
4. ನಾವಿಬ್ಬರೂ ಒಟ್ಟಿಗೆ ಹಂಚಿಕೊಂಡ ಸಂತೋಷ ಮತ್ತು ದುಃಖದ ಕ್ಷಣಗಳು ನಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸಿದೆ. ನಿನಗೆ ರಕ್ಷಾ ಬಂಧನದ ಶುಭಾಶಯಗಳು ತಂಗಿ.
5. ನೀನು ನನಗೆ ರಾಖಿಯನ್ನು ಕಟ್ಟುವುದನ್ನು ನೋಡಲು ಮತ್ತು ನನ್ನ ಯೋಗಕ್ಷೇಮಕ್ಕಾಗಿ ದೇವರನ್ನು ಪ್ರಾರ್ಥಿಸುವುದನ್ನು ನೋಡಲು ನಾನು ವರ್ಷವಿಡೀ ಕಾಯುತ್ತೇನೆ. ನಮ್ಮ ಬಾಂಧವ್ಯ ದಿನದಿಂದ ದಿನಕ್ಕೆ ಗಟ್ಟಿಯಾಗಲಿ ಎಂದು ಹಾರೈಸುತ್ತೇನೆ. ನನ್ನ ಪ್ರೀತಿಯ ತಂಗಿಗೆ ರಕ್ಷಾ ಬಂಧನದ ಶುಭಾಷಯಗಳು.
ಈ ರೀತಿ ಸ್ಪೆಷಲ್ ಸಂದೇಶಗಳನ್ನು ನಿಮ್ಮ ಸಹೋದರ ಹಾಗೂ ಸಹೋದರಿಗೆ ಕಳುಹಿಸಬಹುದು.



Click it and Unblock the Notifications