Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
Baby Names: ನಿಮ್ಮ ಮಗುವಿಗೆ ಈ 'ಸ್ವೀಟ್' ನೇಮ್ ಇಡಿ.. ಪ್ರತಿಯೊಂದರಲ್ಲೂ 'ಬ್ಯುಟಿಪುಲ್' ಮೀನಿಂಗ್!
Baby Names: ಜೀವನದಲ್ಲಿ ದೊಡ್ಡ ಸಂತೋಷ ಯಾವುದು ಎಂದರೆ, ಮನೆಯಲ್ಲಿ ಒಂದು ಮಗು ಜನಿಸಿದಾಗ ಕಾಣುತ್ತದೆ. ಮಗುವಿನ ಜನನವು ಮನೆಯಲ್ಲಿ ಸಂತೋಷ ತರುತ್ತದೆ. ಆದರೆ, ಮಗುವನ್ನು ಬೆಳೆಸುವುದು ಕಷ್ಟಕರವಾದ ಕೆಲಸ. ಹೌದು, ನಿಮ್ಮ ಮನೆಗೆ ಒಬ್ಬ ಪುಟ್ಟ ಅತಿಥಿ ಬಂದಿದ್ದರೆ, ನೀವು ಇದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು. ಮಗುವಿನ ಜನನವು ಉತ್ಸಾಹವನ್ನು ತರುತ್ತದೆ. ಆದರೆ, ಆ ಮಗುವಿಗೆ ಹೆಸರು ಇಡುವುದು ತುಸು ಕಷ್ಟವೇ ಸರಿ. ಮಗುವಿಗೆ ಸುಂದರ ಮತ್ತು ಅರ್ಥಪೂರ್ಣವಾದ ಹೆಸರನ್ನು ಆಯ್ಕೆ ಮಾಡುವುದು ಮುಖ್ಯವಾದ ಕೆಲಸ. ನಿಮ್ಮ ಮಗುವಿಗೆ ಸರಿಹೊಂದುವ ಒಳ್ಳೆಯ ಹೆಸರನ್ನು ಆರಿಸಲು ತಪ್ಪದೇ ಈ ಲೇಖನ ಓದಿ.
ಮಗುವಿನ ಜನನ ಎಲ್ಲಾ ಕುಟುಂಬಕ್ಕೆ ಸಂತೋಷದ ನಿಧಿಯೇ ಸರಿ. ಮಗು ತನ್ನೊಂದಿಗೆ ಹೊಸ ಆರಂಭ ಮತ್ತು ಭರವಸೆಯನ್ನು ತರುತ್ತದೆ. ಮಗು ಜನಿಸಿದ ಬಳಿಕ ಪೋಷಕರ ಜವಾಬ್ದಾರಿಗಳೂ ಹೆಚ್ಚಾಗುತ್ತವೆ. ಈ ಪೈಕಿ ಪೋಷಕರ ಮುಂದಿರುವ ಮೊದಲ ಸವಾಲು ತಮ್ಮ ಮಗುವಿಗೆ ಹೆಸರಿಡುವುದು. ಶಿಶುವಿನ ಜನನದ ಕೆಲವು ದಿನಗಳ ಬಳಿಕ ನಡೆಯುವ ಒಂದು ಪ್ರಮುಖ ಕಾರ್ಯವೇ ನಾಮಕರಣ. ಕುಟುಂಬದ ಎಲ್ಲಾ ಸದಸ್ಯರು ತಮ್ಮ ಸಲಹೆಗಳನ್ನು ನೀಡುತ್ತಾರೆ. ಮಗುವನ್ನು ಪ್ರೀತಿಯ ಹೆಸರುಗಳಿಂದ ಕರೆಯುತ್ತಾರೆ. ನೀವು ಆರಿಸುವ ಹೆಸರು ಮಗುವಿನ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ಎಚ್ಚರಿಕೆಯಿಂದಲೇ ನಿಮ್ಮ ಮಗುವಿಗೆ ಹೆಸರು ಇಡಬೇಕು. ಈ ಪಟ್ಟಿಯಲ್ಲಿರುವ ಹೆಸರು ನಿಮ್ಮ ಮಗುವಿಗೆ ಉತ್ತಮ ಆಯ್ಕೆಯಾಗಬಹುದು.

ಹೆಣ್ಣು ಮಗುವಿನ ಹೆಸರುಗಳು
ಲಲಿತಾ - ಈ ಹೆಸರಿನ ಅರ್ಥ ಸೌಮ್ಯ, ಸುಂದರ ಮತ್ತು ಆಕರ್ಷಕ.
ಲಿಪಿಕಾ - ಈ ಹೆಸರಿನ ಅರ್ಥ ಸಣ್ಣ ಅಕ್ಷರ.
ಕನಕ ಅಥವಾ ಕನಕ್ - ಈ ಹೆಸರಿನ ಅರ್ಥ ಚಿನ್ನ (ಬಂಗಾರ).
ಪದ್ಮಿನಿ - ಈ ಹೆಸರಿನ ಅರ್ಥ ಕಮಲ. ಇದು ಸೌಂದರ್ಯ ಮತ್ತು ಮೃದುತ್ವವನ್ನು ಪ್ರತಿಬಿಂಬಿಸುತ್ತದೆ.
ಗಂಡು ಮಗುವಿನ ಹೆಸರುಗಳು
ಲಕ್ಷ್ಯ - ಈ ಹೆಸರಿನ ಅರ್ಥ ಗುರಿ.
ಮಾಯಾಂಕ್ - ಈ ಹೆಸರಿನ ಅರ್ಥ ಚಂದ್ರ. ಇದು ಶಾಂತಿ ಮತ್ತು ಸೌಂದರ್ಯವನ್ನು ಪ್ರತಿಬಿಂಬಿಸುತ್ತದೆ.
ಶ್ಯಾಮ್ - ಇದು ಭಗವಾನ್ ಶ್ರೀ ಕೃಷ್ಣನ ಒಂದು ಹೆಸರು.
ಸಕ್ಷಮ್ - ಈ ಹೆಸರಿನ ಅರ್ಥ ಸಮರ್ಥ. ಯಾವುದಾದರೂ ಕೆಲಸದಲ್ಲಿ ಕೌಶಲ್ಯ ಹೊಂದಿರುವವನು.
ಮಗುವಿಗೆ ಹೆಸರಿಡುವ ಮೊದಲು, ಬಹುತೇಕ ಪೋಷಕರು ಹೆಸರಿನ ಮೊದಲ ಅಕ್ಷರಕ್ಕೆ ತಕ್ಕಂತೆ ಹೆಸರಿಸುತ್ತಾರೆ. ನಿಮ್ಮ ಮಗುವಿನ ಹೆಸರು 'S' ಅಕ್ಷರದಿಂದ ಪ್ರಾರಂಭವಾಗುತ್ತಿದ್ದರೆ, ನೀವು ಈ ಕೆಳಗಿನ ಹೆಸರನ್ನು ಆಯ್ಕೆ ಮಾಡಬಹುದು.
ಹೆಣ್ಣು ಮಗುವಿನ ಇಡಬಹುದಾದ ಹೆಸರುಗಳು
ಶ್ರೇಯಾ - ಈ ಹೆಸರಿನ ಅರ್ಥ ಶುಭ, ಸುಂದರ ಅಥವಾ ಅದೃಷ್ಟ.
ಶುಭಿ - ಈ ಹೆಸರಿನ ಅರ್ಥ ಶುಭ. ಈ ಹೆಸರು ಶುದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಸುವರ್ಣ - ಈ ಹೆಸರಿನ ಅರ್ಥ ಚಿನ್ನ, ಬಂಗಾರ.
ಸಾಕ್ಷಿತಾ - ಈ ಹೆಸರಿನ ಅರ್ಥ ಸತ್ಯ.
ಸುದೀಕ್ಷಾ - ಈ ಹೆಸರಿನ ಅರ್ಥ ಒಳ್ಳೆಯ ಆರಂಭ, ಸುಂದರ.
ಸೌಮ್ಯ - ಈ ಹೆಸರಿನ ಅರ್ಥ ಶಾಂತ ಸ್ವಭಾವದವಳು. ಈ ಹೆಸರು ಮಗುವಿನ ಮೃದುತ್ವವನ್ನು ಪ್ರತಿಬಿಂಬಿಸುತ್ತದೆ.
ಗಂಡು ಮಗುವಿಗೆ ಇಡಬಹುದಾದ ಹೆಸರುಗಳು
ಸಮರ್ಥ - ಈ ಹೆಸರಿನ ಅರ್ಥ ಶಕ್ತಿಶಾಲಿ. ಯಾವುದೇ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡುವವನು.
ಶೌರ್ಯ - ಈ ಹೆಸರಿನ ಅರ್ಥ ಶೌರ್ಯ.
ಶಾಶ್ವತ್ - ಈ ಹೆಸರಿನ ಅರ್ಥ ಶಾಶ್ವತ, ಅನಂತ.
ಒಟ್ಟಾರೆ, ಮಗುವಿನ ಆಗಮನ ಮನೆಯಲ್ಲಿ ಸಂಭ್ರಮವನ್ನುಂಟು ಮಾಡುತ್ತದೆ. ಮಗು ಹುಟ್ಟುತ್ತಿದ್ದಂತೆ ಯಾವ ಹೆಸರಿಡಬೇಕು ಎಂದು ಎಲ್ಲರೂ ಯೋಚಿಸುತ್ತಾರೆ. ಅಂತಹವರಿಗೆ ಈ ಮೇಲೆ ತಿಳಿಸಿರುವ ಹೆಸರುಗಳನ್ನು ನಿಮ್ಮ ಮಗುವಿಗೆ ಆಯ್ಕೆ ಮಾಡಬಹುದು. ಇವು ಇತರರಿಗಿಂತ ವಿಭಿನ್ನವಾಗಿಸುವ ಹೆಸರುಗಳಾಗಿವೆ.



Click it and Unblock the Notifications
