Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
ಅಮ್ಮಂದಿರ ದಿನ 2023 :ಅಮ್ಮನಿಂದ ದೂರ ಇದ್ದರೆ ಈ ರೀತಿ ಸೆಲೆಬ್ರೇಟ್ ಮಾಡಿ!
ಅಮ್ಮಾ ಹಾಗೂ ಅಪ್ಪ ಮಕ್ಕಳ ಜೀವದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಾರೆ. ಅದ್ರಲ್ಲೂ ತಾಯಿ ಎಂದರೆ ಮಕ್ಕಳಿಗೆ ಒಂದು ಕೈ ಹೆಚ್ಚು ಪ್ರೀತಿ. ಒಂಬತ್ತು ತಿಂಗಳು ಹೊತ್ತು ಹೆತ್ತ ತಾಯಿಗೆ ತನ್ನ ಮಕ್ಕಳ ಮೇಲೆ ಎಷ್ಟು ಪ್ರೀತಿ ಇರುತ್ತದೆಯೋ ಅಷ್ಟೇ ಪ್ರೀತಿ ಮಕ್ಕಳು ತಾಯಿಯ ಮೇಲೆ ಇಟ್ಟುಕೊಂಡಿರುತ್ತಾರೆ. ಆದರೆ ಕೆಲವೊಂದು ಸಲ ಓದಿನ ಕಾರಣ, ಕೆಲಸದ ಕಾರಣ ಅಥವಾ ಮದುವೆಯಾದ ನಂತರ ಅಮ್ಮನಿಂದ ಮಕ್ಕಳು ದೂರವಿರಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಇಂತಹ ಪರಿಸ್ಥಿತಿಯಲ್ಲಿ ಅಮ್ಮಂದಿರ ಜೊತೆಗೆ ಆಕೆಯ ಸ್ಪೆಷಲ್ ದಿನವನ್ನು ಸೆಲೆಬ್ರೇಟ್ ಮಾಡೋದು ಕಷ್ಟ. ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರದಂದು ಅಮ್ಮಂದಿರ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ಬಾರಿ ಮೇ 14 ರಂದು ಆಚರಣೆ ಮಾಡಲಾಗುತ್ತದೆ. ಅಮ್ಮನಿಂದ ದೂರ ಇರುವವರು ಕೂಡ ನೀವು ನಿಮ್ಮ ಅಮ್ಮನ ಜೊತೆಗೆ ಸ್ಪೆಷಲ್ ದಿನವನ್ನು ಆಚರಣೆ ಮಾಡಬಹುದು. ಅಷ್ಟಕ್ಕು ದೂರ ಇದ್ದರೆ ಅಮ್ಮನ ದಿನವನ್ನು ಸ್ಪೆಷಲ್ ಆಗಿಸೋದು ಹೇಗೆ? ಇಲ್ಲಿದೆ ಟಿಪ್ಸ್

ಅಮ್ಮನಿಗಾಗಿ ಪತ್ರ ಬರೆಯಿರಿ
ಅಮ್ಮಂದಿರ ದಿನವನ್ನು ನಾವು ತುಂಬಾನೇ ಸ್ಪೆಷಲ್ ಆಗಿ ಆಚರಣೆ ಮಾಡಬಹುದು. ಆದರೆ ನಾವು ಇದೇ ರೀತಿ ಆಚರಣೆ ಮಾಡಬೇಕು ಎಂದೇನಿಲ್ಲ. ನಮ್ಮ ಅಮ್ಮನ ಮೇಲಿನ ಪ್ರೀತಿಯನ್ನು ನಾವು ಯಾವ ರೀತಿ ಕೂಡ ವ್ಯಕ್ತ ಪಡಿಸಬಹುದು. ಅದ್ರಲ್ಲೂ ಮುಖ್ಯವಾಗಿ ಅಮ್ಮನಿಗಾಗಿ ಪ್ರೀತಿಯ ಪತ್ರವನ್ನು ಬರೆಯಬಹುದು. ಈ ಪತ್ರದಲ್ಲಿ ಅಮ್ಮನಿಗೆ ಏನು ಹೇಳಬೇಕು ಎಂದು ಇಚ್ಛಿಸಿದ್ದೀರೋ ಆ ವಿಚಾರವನ್ನು ಮನಬಿಚ್ಚಿ ಹೇಳಿ. ಈ ಮೂಲಕ ಅಮ್ಮನ ಮೇಲೆ ಪ್ರೀತಿಯನ್ನು ವ್ಯಕ್ತ ಪಡಿಸಬಹುದು.
ಇನ್ನೂ ಅನೇಕ ಜನ ಕಾರಣಾಂತರಗಳಿಂದ ಅಮ್ಮನ ಜೊತೆಗೆ ಮಾತು ಬಿಟ್ಟಿರಬಹುದು. ಆದರೆ ನಿಮಗೆ ಅಮ್ಮನ ಜೊತೆ ಮಾತನಾಡಬೇಕು ಅನ್ನೋ ಆಸೆ ಇರುತ್ತದೆ. ಇಂತಹ ಸಂದರ್ಭದಲ್ಲಿ ನಿಮ್ಮ ಅಮ್ಮನಿಗಾಗಿ ಪ್ರೀತಿಯಿಂದ ಕ್ಷಮಾಪಣಾ ಪತ್ರ ಬರೆಯಿರಿ. ಖಂಡಿತ ಅಮ್ಮಾ ನಿಮ್ಮನ್ನು ಕ್ಷಮಿಸುತ್ತಾರೆ. ಹಾಗೂ ಮನೆಗೆ ಆಹ್ವಾನ ನೀಡುತ್ತಾರೆ.
ವಿಡಿಯೋ ಕಾಲ್ ಮಾಡಿ
ಅಮ್ಮಂದಿರಿಂದ ದೂರ ಇರುವವರು ಖಂಡಿತ ಯಾವಾಗಲೂ ಅಮ್ಮನ್ನನು ನೆನೆಯುತ್ತಿರುತ್ತಾರೆ. ಅವಳ ಜೊತೆಗೆ ಮಾತನಾಡಬೇಕು. ಅವಳ ಮಡಿಲಿನಲ್ಲಿ ಮಲಗಬೇಕು ಎನ್ನುವ ಆಸೆ ಖಂಡಿತ ಇದ್ದೇ ಇರುತ್ತದೆ. ಆದರೆ ಅದು ಸಾಧ್ಯವಾಗೋದಿಲ್ಲ. ಅಂತಹ ಸಂದರ್ಭದಲ್ಲಿ ನಿಮ್ಮ ಅಮ್ಮನಿಗೆ ಒಂದು ಸಾರಿ ವಿಡಿಯೋ ಕಾಲ್ ಮಾಡಿ ಅಮ್ಮಂದಿರ ದಿನದ ಸ್ಪೆಷಲ್ ವಿಷ್ ತಿಳಿಸಿ. ಹಾಗೂ ನಿಮ್ಮ ಮನದ ಮಾತನ್ನು ಹೇಳಿ ಖಂಡಿತ ಆಕೆಗೆ ಇಷ್ಟ ಆಗುತ್ತದೆ.
ನೆಚ್ಚಿನ ಉಡುಗೊರೆಯನ್ನು ಕಳುಹಿಸಿ
ನಮ್ಮ ಪ್ರೀತಿ ಪಾತ್ರರಿಗಾಗಿ ಸ್ಪೆಷಲ್ ಸಮಯದಲ್ಲಿ ಅವರಿಗಾಗಿ ನಾವು ಸ್ಪೆಷಲ್ ಉಡುಗೊರೆಗಳನ್ನು ಖಂಡಿತವಾಗಿ ನೀಡುತ್ತೇವೆ. ಅದೇ ರೀತಿ ಅಮ್ಮಂದಿರ ದಿನಕ್ಕಾಗಿ ನಿಮ್ಮ ಅಮ್ಮಂದಿರಿಗಾಗಿ ಸ್ಪೆಷಲ್ ಗಿಫ್ಟ್ ನೀಡಿ ಆಕೆ ಖುಷಿ ಪಡುತ್ತಾಳೆ. ಅಮ್ಮನಿಂದ ದೂರ ಇದ್ದಾಗ ನಾವು ಅಮ್ಮನ ದಿನವನ್ನು ಸ್ಪೆಷಲ್ ಆಗಿ ಸೆಲೆಬ್ರೇಟ್ ಮಾಡುವುದು ಕಷ್ಟ. ಆದರೆ ಆಕೆಗೆ ಏನು ಇಷ್ಟ ಅದನ್ನು ಖಂಡಿತ ಗಿಫ್ಟ್ ಆಗಿ ಕಳುಹಿಸಬಹುದು. ಆನ್‌ಲೈನ್ ಡೆಲಿವರಿ ಅಥವಾ ಕೊರಿಯಲ್ ಮೂಲಕವೂ ಕಳುಹಿಸಬಹುದು.
ಪ್ರವಾಸದ ಪ್ಯಾಕೇಜ್ ಬುಕ್ ಮಾಡಿ
ಅಮ್ಮಂದಿರ ದಿನವನ್ನು ನೀವು ಸ್ಪೆಷಲ್ ಆಗಿ ಆಚರಿಸಲು ಅನೇಕ ಪ್ಲಾನ್‌ಗಳನ್ನು ಮಾಡಬಹುದು. ಅದ್ರಲ್ಲಿ ಮುಖ್ಯವಾಗಿ ಆಕೆಗೆ ಇಷ್ಟವಾಗೋ ಸ್ಥಳಗಳಿಗೆ ಆಕೆಯನ್ನು ಪ್ರವಾಸಕ್ಕೆ ಕಳುಹಿಸಿ. ತೀರ್ಥ ಯಾತ್ರೆಗೋ ಅಥವಾ ಬೇರ್ಯಾವುದೋ ಆಕೆಗೆ ಇಷ್ಟವಿರೋ ಜಾಗಗಳಿಗೆ ಆಕೆಯನ್ನು ಪ್ರವಾಸಕ್ಕೆ ಕಳುಹಿಸಿದರೆ ಖಂಡಿತ ಇಷ್ಟ ಪಡುತ್ತಾಳೆ. ಇದನ್ನು ಸಪ್ರೈಸ್ ಪ್ಲಾನ್ ಮಾಡಿ. ಅದಕ್ಕಾಗಿ ನಿಮ್ಮ ಒಡಹುಟ್ಟಿದವರ ಅಥವಾ ಸಂಬಂಧಿಕರ ಸಹಾಯ ಪಡೆಯಿರಿ.
ಮನೆಗೆ ಸಪ್ರೈಸ್ ಭೇಟಿ ನೀಡಿ
ನೀವು ಅಮ್ಮನಿಂದ ದೂರ ಇದ್ದಾಗ ಖಂಡಿತ ನಿಮ್ಮ ಅಮ್ಮ ನಿಮ್ಮನ್ನು ಮಿಸ್ ಮಾಡಿಕೊಂಡಿರುತ್ತಾರೆ. ಹಾಗೂ ಅಮ್ಮನನ್ನೂ ನೀವು ಮಿಸ್ ಮಾಡಿಕೊಂಡಿರುತ್ತೀರಿ.
ಇಂತಹ ಸಂದರ್ಭದಲ್ಲಿ ನೀವು ಮನೆಗೆ ಸಪ್ರೈಸ್ ಆಗಿ ಭೇಟಿ ನೀಡಿ. ನಿಮ್ಮ ಅಮ್ಮ ತುಂಬಾನೇ ಖುಷಿ ಪಡುತ್ತಾರೆ. ನಿಮ್ಮ ಮನಸ್ಸಿಗೂ ನೆಮ್ಮದಿ ಸಿಗುತ್ತದೆ.
ಮನೆಯಿಂದ ದೂರ ಇರುವವರು ಈ ರೀತಿ ಸ್ಪೆಷಲ್ ಆಗಿ ಅಮ್ಮಂದಿರ ದಿನವನ್ನು ಸೆಲೆಬ್ರೇಟ್ ಮಾಡಬಹುದು.



Click it and Unblock the Notifications
