Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೇವಲ 90 ದಿನದಲ್ಲಿ ₹9,800 ಕೋಟಿಯ ಕಂಪನಿ ಕಟ್ಟಿದ 27ರ ಯುವಕ..!
ಭಾರತ ಸ್ಟಾರ್ಟಪ್‌ಗಳ ನಾಡು. ಅದರಲ್ಲೂ ಬೆಂಗಳೂರು ಹೊಸ ಉದ್ಯಮದ ತವರೂರಾಗಿದೆ. ಭಾರತದಲ್ಲಿ ಪ್ರತಿಭಾವಂತರಿಗೇನು ಕಡಿಮೆಯಿಲ್ಲ. ಹೊಸ ಹೊಸ ಉದ್ಯಮ ಕಟ್ಟಿ ಕೋಟಿ ಕೋಟಿ ಹಣ ಸಂಪಾದನೆ ಮಾಡುವ, ಮಾಡುತ್ತಿರುವ ದೊಡ್ಡ ಯುವ ಉದ್ಯಮಿಗಳ ಗುಂಪು ಈಗ ಭಾರತದಲ್ಲಿದೆ.
ಹಿಂದೆಲ್ಲಾ ವಿದೇಶದಲ್ಲಿ ಮಾತ್ರ ಕಡಿಮೆ ವಯಸ್ಸಿನಲ್ಲಿ ಕೋಟ್ಯಧಿಪತಿಗಳಾಗುತ್ತಿದ್ದ ಯುವಕರ ನೋಡುತ್ತಿದ್ದೆವು ಆದ್ರೆ ಈಗ ಭಾರತದಲ್ಲೂ ಅತೀ ಚಿಕ್ಕ ವಯಸ್ಸಿನಲ್ಲೇ ಕೋಟ್ಯಧಿಪತಿಗಳಾದ ಉದ್ಯಮಿಗಳು ಹೊರಹೊಮ್ಮುತ್ತಿದ್ದಾರೆ. ಇದೀಗ ಮತ್ತೋರ್ವ ಯುವ ಉದ್ಯಮಿ ಅತೀ ಚಿಕ್ಕ ವಯಸ್ಸಿನಲ್ಲೇ ಕೋಟ್ಯಧಿಪತಿಯಾದ ಸಾಧನೆ ಮಾಡಿದ್ದಾನೆ.

ಭಾರತದಲ್ಲಿ ಮಿಲಿಯನೇರ್‌ಗಳು ಅಂದ ತಕ್ಷಣ ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿಯಂತಹ ಉದ್ಯಮಿಗಳು ಜಾಗತಿಕವಾಗಿ ನೆನೆಪಿಗೆ ಬರುತ್ತಾರೆ. ಭಾರತೀಯ ಆರ್ಥಿಕತೆಯು ಅಭಿವೃದ್ಧಿ ಹೊಂದುತ್ತಿರುವಂತೆ, ಹೊಸ ಪ್ರಕಾಶವು ಹೊರಹೊಮ್ಮಿದೆ. ಅದೇ ರೀತಿ ಇಲೊಬ್ಬ ತನ್ನ 27ನೇ ವಯಸ್ಸಿನಲ್ಲಿ ಕೋಟ್ಯಧಿಪತಿಯಾಗಿ ಬಹುದೊಡ್ಡ ಕಂಪನಿ ಹುಟ್ಟುಹಾಕಿದ್ದಾನೆ
ಗುಜರಾತ್ ಮೂಲದ ಪರ್ಲ್ ಕಪೂರ್ ಭಾರತದ ಅತ್ಯಂತ ಕಿರಿಯ ಬಿಲಿಯನೇರ್ ಎಂಬ ಕೀರ್ತಿ ಪಡೆದಿದ್ದಾನೆ. ಆತ Zyber 365 ಎಂಬ ಕಂಪನಿ ಹುಟ್ಟುಹಾಕಿದ್ದು, ಬರೀ 90 ದಿನದಲ್ಲಿ ಆತನ ಕಂಪನಿ ಬರೋಬ್ಬರಿ 9,840 ಕೋಟಿ ಮೌಲ್ಯ ಗಳಿಸಿದೆ. ನಿಮಗೆ ಅಚ್ಚರಿ ಅನಿಸಿದರು ಇದು ಸತ್ಯ. ಆತ ಕೇವಲ 90 ದಿನದಲ್ಲಿ ಕೋಟ್ಯಧಿಪತಿಯಾಗಿದ್ದಾನೆ.
ಮೇ 2023 ರಲ್ಲಿ ಸ್ಥಾಪಿತವಾದ Zyber 365 ಒಂದು Web3 ಮತ್ತು AI-ಆಧಾರಿತ OS ಸ್ಟಾರ್ಟ್-ಅಪ್ ಆಗಿದ್ದು ಅದು ಚಿಲ್ಲರೆ ವಲಯಕ್ಕೆ ಸೇವೆ ಒದಗಿಸಲಿದೆ. ಮೂರು ಮೂರು ತಿಂಗಳಲ್ಲಿ $1 ಶತಕೋಟಿಗೂ ಹೆಚ್ಚು ಮೌಲ್ಯದ ಕಂಪನಿಯಾದರೆ ಅದನ್ನು ಯುನಿಕಾರ್ನ್ ಎಂದು ಕರೆಯಲಾಗುತ್ತದೆ. ಈ ಕಂಪನಿ ಈಗ ಅತೀ ಕಡಿಮೆ ಸಮಯದಲ್ಲಿ ಯುನಿಕಾರ್ನ್ ಆಗಿ ಹೊರಹೊಮ್ಮಿದೆ.
ಗುಜರಾತ್‌ನ ಅಹಮದಾಬಾದ್‌ನಲ್ಲಿ ಕಾರ್ಯಾಚರಣೆಯೊಂದಿಗೆ ಲಂಡನ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕಂಪನಿಯು ಭಾರತ ಮತ್ತು ಏಷ್ಯಾದ ಅತ್ಯಂತ ವೇಗದ ಯುನಿಕಾರ್ನ್ ಎಂದು ಪ್ರಶಂಸಿಸಲ್ಪಟ್ಟಿದೆ, $1.2 ಶತಕೋಟಿ (ಅಂದಾಜು ₹ 9,840 ಕೋಟಿ) ಮೌಲ್ಯವನ್ನು ಗಳಿಸಿದೆ.
Zyber 365 ನ ಸಂಸ್ಥಾಪಕ ಮತ್ತು CEO ಆಗಿರುವ ಪರ್ಲ್ ಕಪೂರ್, ಕಂಪನಿಯಲ್ಲಿ 90% ರಷ್ಟು ಷೇರುಗಳನ್ನು ಹೊಂದಿದ್ದು, ಆತನ ಆಸ್ತಿ ಮೌಲ್ಯ $1.1 ಶತಕೋಟಿ (₹ 9,129 ಕೋಟಿ) ಆಗಿದೆ. ಈ ಮೂಲಕ ಕೇವಲ 27 ವರ್ಷದಲ್ಲಿ ಇಷ್ಟು ಮೌಲ್ಯದ ಆಸ್ತಿ ಹೊಂದಿರುವ ಭಾರತದ ಅತ್ಯಂತ ಕಿರಿಯ ಉದ್ಯಮಿ ಎಂಬ ಕೀರ್ತಿ ಪಡೆದಿದ್ದಾರೆ.
ಈ ಸ್ಟಾರ್ಟ್‌ಅಪ್ ಇತ್ತೀಚೆಗೆ ಸಿರೀಸ್ A ಫಂಡಿಂಗ್‌ನಲ್ಲಿ $100 ಮಿಲಿಯನ್ ಪಡೆದುಕೊಂಡಿದೆ, 8.3% ಹೂಡಿಕೆಯು SRAM ಮತ್ತು MRAM ಗ್ರೂಪ್‌ನಿಂದ ಬಂದಿದೆ. ಲಂಡನ್‌ನ ಕ್ವೀನ್ ಮೇರಿ ವಿಶ್ವವಿದ್ಯಾನಿಲಯದಿಂದ ಎಂಎಸ್‌ಸಿ ಇನ್ವೆಸ್ಟ್‌ಮೆಂಟ್ ಬ್ಯಾಂಕಿಂಗ್ (ಸಿಎಫ್‌ಎ ಪಾಥ್‌ವೇ) ಪದವೀಧರರಾಗಿರುವ ಕಪೂರ್, ವೆಬ್3 ತಂತ್ರಜ್ಞಾನದ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.
Zyber 365 ಕ್ಕಿಂತ ಮೊದಲು, ಪರ್ಲ್ ಕಪೂರ್ ಅವರ ಪ್ರಯಾಣವು AMPM ಸ್ಟೋರ್‌ನಲ್ಲಿ ಹಣಕಾಸು ಸಲಹೆಗಾರರಾಗಿ ಮತ್ತು ಆಂಟಿಯರ್ ಸೊಲ್ಯೂಷನ್ಸ್‌ಗಾಗಿ ವ್ಯಾಪಾರ ಸಲಹೆಗಾರರಾಗಿ ಕೆಲಸಗಳನ್ನು ಮಾಡಿದ್ದರು. ಅವರ ಉದ್ಯಮಶೀಲತೆಯ ಮನೋಭಾವವು ಫೆಬ್ರವರಿ 2022 ರಲ್ಲಿ ಬಿಲಿಯನ್ ಪೇ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಅನ್ನು ಸ್ಥಾಪಿಸಲು ಕಾರಣವಾಯಿತು.
40 ವರ್ಷದೊಳಗೆ ಕೋಟ್ಯಧಿಪತಿಗಳಾದ ಯುವ ಉದ್ಯಮಿಗಳಿವರು
1 ನಿತಿನ್ ಕಾಮತ್-ಜರೋಧ
2 ನಿಖಿಲ್ ಕಾಮತ್-ಜರೋಧ
3 ದಿವ್ಯಾಂಕ್ ತುರಾಖಿಯಾ-ಮೀಡಿಯಾ.ನೆಟ್
4 ಅಂಕಿತ್ ಭಾಟಿ-ಓಲಾ ಕ್ಯಾಬ್
5 ಭವಿಶ್ ಅಗರ್ವಾಲ್-ಓಲಾ ಕ್ಯಾಬ್
6 ವಿಜಯ್ ಶೇಖರ್ ಶರ್ಮಾ-ಪೇಟಿಯಂ
7 ಬಿನ್ನಿ ಬನ್ಸಾಲ್-ಫ್ಲಿಪ್‌ಕಾರ್ಟ್
8 ಸಚಿನ್ ಬನ್ಸಾಲ್-ಫ್ಲಿಪ್‌ಕಾರ್ಟ್
9 ರಿತೇಶ್ ಅಗರ್ವಾಲ್-ಓಯೋ ರೂಮ್ಸ್
10 ದೀಪಿಂದರ್ ಗೋಯಲ್-ಜೊಮ್ಯಾಟೋ



Click it and Unblock the Notifications









