Latest Updates
-
ಬಿಸಿಗಾಳಿಯ ಅಬ್ಬರ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಉಪಾಯಗಳು -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮ ಪಾಲಿಸಿ -
ಫ್ಯಾಶನ್ ರೆವಲ್ಯೂಷನ್ ಡೇ: ಬಟ್ಟೆಯನ್ನು ಉಲ್ಟಾ ಧರಿಸಿ ಫೋಟೋ ಹಾಕುತ್ತಿರುವುದೇಕೆ? ಈ ಟ್ರೆಂಡ್ ಹಿಂದಿದೆ ದೊಡ್ಡ ಕಥೆ! -
ಬಿಸಿಲ ಅಲೆ: ಸುಡುವ ಬಿಸಿಲಿನಲ್ಲಿ ವ್ಯಾಯಾಮ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಉತ್ತರ ಭಾರತದ ಬಿಸಿಲ ಬೇಗೆ: ಮದುವೆ ಶಾಸ್ತ್ರಗಳೆಲ್ಲಾ ಈಗ ಸೂರ್ಯ ಮುಳುಗಿದ ಮೇಲೆ! -
ಬಿಸಿಗಾಳಿಯ ಆರ್ಭಟ: ನಿಮ್ಮ ಮನೆಯನ್ನು ಫ್ರಿಡ್ಜ್ನಂತೆ ತಂಪಾಗಿಡಲು ಇಲ್ಲಿವೆ ಅದ್ಭುತ ದೇಸಿ ಟಿಪ್ಸ್! -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ಹೊಡೆತದಿಂದ ಪಾರಾಗಲು ಮನೆಯಲ್ಲೇ ತಯಾರಿಸಿ ಈ ಜೀವ ರಕ್ಷಕ ಪಾನೀಯ! -
ಬಿಸಿಗಾಳಿಯ ಆರ್ಭಟ: ಸುಡುವ ಬಿಸಿಲಿನಿಂದ ಪಾರಾಗಲು ನೀವು ಮಾಡಲೇಬೇಕಾದ ಬದಲಾವಣೆಗಳೇನು? -
ಬಿಸಿಗಾಳಿಯ ಆರ್ಭಟ: ನಿಮ್ಮ ಬೆಳಗಿನ ವ್ಯಾಯಾಮದ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ -
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ!
4ನೇ ಮಂಗಳ ಗೌರಿ ವ್ರತದ ಮಹತ್ವವೇನು?
ಶ್ರಾವಣ ಮಾಸದ ಪ್ರತಿ ಮಂಗಳವಾರ ಮಂಗಳ ಗೌರಿ ವ್ರತವನ್ನು ಆಚರಿಸಲಾಗುವುದು. ಈ ತಿಂಗಳಿನಲ್ಲಿ 9 ಮಂಗಳಗೌರಿ ವ್ರತಗಳಿವೆ, ಈಗಾಗಲೇ 3 ಮಂಗಳಗೌರಿ ವ್ರತವನ್ನು ಆಚರಿಸಲಾಗಿದೆ. ಆಗಸ್ಟ್ 8ಕ್ಕೆ ನಾಲ್ಕನೇ ಮಂಗಳಗೌರಿ ವ್ರತವನ್ನು ಆಚರಿಸಲಾಗುವುದು. ನಾಲ್ಕನೇಯ ಮಂಗಳ ಗೌರಿ ವ್ರತದ ಪೂಜಾ ವಿಧಾನ ಮತ್ತು ಮಹತ್ವವನ್ನು ತಿಳಿಯೋಣ.

ಮಂಗಳ ಗೌರಿ ವ್ರತದ ಪೂಜೆ ವಿಧಾನ
* ಮೊದಲನೆಯದಾಗಿ, ಮಂಗಳವಾರದಂದು ಬೆಳಗ್ಗೆ ಬೇಗನೆ ಸಾವನದಲ್ಲಿ ಎದ್ದು ಸ್ನಾನದ ನಂತರ ಶುಭ್ರವಾದ ಬಟ್ಟೆಗಳನ್ನು ಧರಿಸಿ. ನಂತರ ಹಲಗೆ ಹಾಕಿ, ಕೆಂಪು ಬಟ್ಟೆ ಹಾಸಿ ಅದರಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿ.
* ದೇವಿಗೆ ಹಿಟ್ಟಿನಿಂದ ಮಾಡಿದ ಹಣತೆಯಲ್ಲಿ ತುಪ್ಪವನ್ನು ಹಾಕಿ ದೀಪ ಬೆಳಗಬೇಕು.
* ನಂತರ ಧೂಪ, ನೈವೇದ್ಯ, ಹಣ್ಣು ಮತ್ತು ಹೂವು ಇತ್ಯಾದಿಗಳಿಂದ ಪೂಜಿಸಿ. ಪೂಜೆ ಮುಗಿದ ನಂತರ, ಮಾತೆ ಗೌರಿಯ ಆರತಿಯನ್ನು ಮಾಡಿ, ಸಂತೋಷ ಮತ್ತು ಸಮೃದ್ಧಿ ನೀಡು ತಾಯಿ ಎಂದು ಪ್ರಾರ್ಥಿಸಿ.
ಮಂಗಳಗೌರಿ ವ್ರತದ ಮಹತ್ವ
ವಿವಾಹಿತ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಮಂಗಳ ಗೌರಿ ವ್ರತವನ್ನು ಆಚರಿಸುತ್ತಾರೆ. ಮತ್ತೊಂದೆಡೆ, ಅವಿವಾಹಿತ ಹುಡುಗಿಯರು ಶೀರ್ಘ್ರ ಕಂಕಣ ಭಾಗ್ಯ ಕೂಡಿಬರಲು ಮಂಗಳಗೌರಿ ವ್ರತವನ್ನು ಮಾಡುತ್ತಾರೆ. ಅಲ್ಲದೆ ಮಂಗಳಗೌರಿಯ ವ್ರತವನ್ನು ಆಚರಿಸುವುದರಿಂದ ಜಾತಕದಲ್ಲಿ ಮಂಗಳದೋಷ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಅದಲ್ಲದೆ ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿದ್ದರೆ ಮಂಗಳಗೌರಿ ವ್ರತವನ್ನು ಆಚರಿಸಬೇಕು.
ಪೌರಾಣಿಕ ಕತೆ
ಪ್ರಾಚೀನ ಕಾಲದಲ್ಲಿ ಧರ್ಮಪಾಲ ಎಂಬವನು ಇದ್ದನು, ಅವನಿಗೆ ಸಂಪತ್ತಿನ ಕೊರತೆ ಇರಲಿಲ್ಲ. ಆತ ಮಹಾದೇವನ ಭಕ್ತನಾಗಿದ್ದ. ಆತ ಸದ್ಗುಣಶೀಲ ವಧುವನ್ನು ವಿವಾಹವಾಗುತ್ತಾನೆ. ಆದರೆ, ಮದುವೆಯಾಗಿ ಹಲವು ವರ್ಷಗಳಾದರೂ ಮಗುವಾಗಿರಲಿಲ್ಲ. ಇದರಿಂದ ಧರ್ಮಪಾಲ ದಂಪತಿಗೆ ತುಂಬಾನೇ ಚಿಂತೆಯಾಗುವುದು. ಮಗು ಇಲ್ಲದಿದ್ದರೆ ತನ್ನ ವ್ಯಾಪಾರದ ಉತ್ತರಾಧಿಕಾರಿ ಯಾರು ಎಂದು ಯೋಚಿಸತೊಡಗಿದ. ಒಂದು ದಿನ ಧರ್ಮಪಾಲ್ ಅವರ ಪತ್ನಿ ತಮ್ಮ ಸಮಸ್ಯೆಗೆ ವಿದ್ವಾಂಸರ ಬಳಿ ಪರಿಹಾರ ಕೇಳುವಂತೆ ಪತಿಗೆ ಸೂಚಿಸುತ್ತಾಳೆ. ಅದರಂತೆ ಧರ್ಮಪಾಲ ಪ್ರಸಿದ್ಧ ಪಂಡಿತರ ಬಳಿ ಹೋಗಿ ಹೇಳಿದಾಗ ಅವರು ಮಂಗಳ ಗೌರಿ ವ್ರತದ ಬಗ್ಗೆ ತಿಳಿಸುತ್ತಾರೆ. ಅದರಂತೆ ಧರ್ಮಪಾಲನ ಪತ್ನಿ ಪಾರ್ವತಿಯನ್ನು ಆರಾಧಿಸುತ್ತಾಳೆ. ಅವಳ ಭಕ್ತಿಗೆ ಮೆಚ್ಚಿನ ಪಾರ್ವತಿ ಆ ದಂಪತಿಗೆ ಸಂತಾನ ಭಾಗ್ಯ ಕರುಣಿಸುತ್ತಾಳೆ , ಆದರೆ ಆ ಮಗು ಅಲ್ಪಾಯುಷಿ ಆಗಿತ್ತು, ಆವಾಗ ಪಂಡಿತರು ಆ ಮಗ ಪ್ರಾಯಕ್ಕೆ ಬಂದಾಗ ಮಂಗಳ ಗೌರಿ ವ್ರತ ಮಾಡುವ ಹುಡುಗಿ ಜೊತೆ ಮದುವೆ ಮಾಡುವಂತೆ ಸೂಚಿಸುತ್ತಾನೆ. ಇದರಂತೆ ಧರ್ಮಪಾಲ ದಂಪತಿ ಮಗನಿಗೆ ಶಿವ-ಪಾರ್ವತಿ ಭಕ್ತೆಯನ್ನು ತಂದು ಮದುವೆ ಮಾಡುತ್ತಾರೆ. ಆಕೆಯ ವ್ರತ ಫಲದಿಂದ ಪತಿಯನ್ನು ಸಾವಿನಿಂದ ಕಾಪಾಡುತ್ತಾಳೆ ಎಂಬ ದಂತಕತೆಯಿದೆ.



Click it and Unblock the Notifications