Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
3ನೇ ಮಂಗಳಗೌರಿ ವ್ರತ: ಈ ವ್ರತದ ಪೂಜಾ ವಿಧಿಗಳೇನು?
ಶ್ರಾವಣ ಮಾಸದ ಎಲ್ಲಾ ಸೋಮವಾರಗಳು ಶಿವನ ಆರಾಧನೆಗೆ ಮೀಸಲಾಗಿರುವಂತೆಯೇ, ಈ ತಿಂಗಳ ಪ್ರತಿ ಮಂಗಳವಾರವೂ ಪಾರ್ವತಿ ದೇವಿಯ ಆರಾಧನೆಗೆ ಮೀಸಲಾಗಿದೆ. ಸಾವನ ಪ್ರತಿ ಮಂಗಳವಾರದಂದು ಉಪವಾಸವಿದ್ದು ಮಂಗಳ ಗೌರ ವ್ರತವನ್ನು ಆಚರಿಸಲಾಗುವುದು. ಮುತ್ತೈದೆಯರು ಸೌಭಾಗ್ಯಕ್ಕಾಗಿ ಮಂಗಳಗೌರಿ ವ್ರತವನ್ನು ಆಚರಿಸುತ್ತಾರೆ. ಅವಾಹಿತ ಹೆಣ್ಮಕ್ಕಳು ಸದ್ಗುಣ ಸಂಪನ್ನವಾಗಿರುವ ವ್ಯಕ್ತಿ ಪತಿಯಾಗಿ ಬರಲೆಂದು ಬಯಸಿ ಈ ವ್ರತವನ್ನು ಆಚರಿಸುತ್ತಾರೆ.
2023 ಮಂಗಳಗೌರಿ ವ್ರತವನ್ನು 9 ವಾರಗಳು ಆಚರಿಸಬಹುದು. ಆಗಸ್ಟ್ 1ಕ್ಕೆ 3ನೇ ಮಂಗಳಗೌರಿ ವ್ರತವನ್ನು ಆಚರಿಸಲಾಗುವುದು. ಈಗಾಗಲೇ ಎರಡು ಮಂಗಳಗೌರಿ ವ್ರತ ಮಾಡಿದವರು ಈ ವಾರ 3ನೇ ವ್ರತವನ್ನು ಮಾಡುತ್ತಾರೆ. ಈ ವಾರ ಆಗದೇ ಇರುವವರು ಮುಂದಿನ ವಾರ ವ್ರತ ನಿಯಮವನ್ನು ಪಾಲಿಸಬಹುದು.

ಇನ್ನು ಯಾವೆಲ್ಲಾ ದಿನಾಂಕಗಳಲ್ಲಿ ಮಂಗಳಗೌರಿ ವ್ರತಗಳಿವೆ
ಆಗಸ್ಟ್ 1
ಆಗಸ್ಟ್ 8
ಆಗಸ್ಟ್ 15
ಆಗಸ್ಟ್ 22
ಆಗಸ್ಟ್ 29
ಸೆಪ್ಟೆಂಬರ್ 5
ಸೆಪ್ಟೆಂಬರ್ 12ಕ್ಕೆ ಮಂಗಳ ಗೌರಿ ವ್ರತ ಮುಕ್ತಾಯ.
ಮಂಗಳ ಗೌರಿ ವ್ರತದ ಪೂಜಾ ವಿಧಿಗಳೇನು?
* ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಸಾಂಪ್ರದಾಯಕ ಉಡುಪು ಧರಿಸಿ ಲಕ್ಷಣವಾಗಿ ಅಲಂಕಾರ ಮಾಡಿಕೊಳ್ಳಬೇಕು. ಮನೆಯ ಮುತ್ತೈದೆಯರನ್ನು ನೋಡುವಾಗಲೇ ಲಕ್ಷ್ಮಿ ಕಳೆಯಿರಬೇಕು, ಆ ರೀತಿ ಸುಂದರವಾಗಿ ಅಲಂಕರಿಸಬೇಕು.
* ನಂತರ ಮರದ ಮೇಲೆ ಹಲಗೆಯನ್ನು ಹಾಕಿ ಅದರ ಮೇಲೆ ಕೆಂಪು ಬಟ್ಟೆಯನ್ನು ಹರಡಿ, ನಂತರ ಚಿನ್ನ, ಬೆಳ್ಳಿ ಅಥವಾ ಅರಿಶಿನದಿಂದ ಮಾಡಿದ ಗೌರಿಯ ಮೂರ್ತಿಯನ್ನು ಇಡುತ್ತಾರೆ.
* ನಂತರ ತಟ್ಟೆಗೆ ಅಕ್ಕಿ ಹಾಕಿ ಅದರಲ್ಲಿ ಮಾವಿನ ಎಲೆ, ವೀಳ್ಯೆದೆಲೆಯಿಂದ ಅಲಂಕರಿಸಿದ ಕಳಸ ಇಡಬೇಕು.
* ಮಮಗಳ ಗೌರಿ ವ್ರತಕ್ಕೆ ಹಿಟ್ಟಿನಿಂದ ಮಾಡಿದ ದೀಪವನ್ನು ಬಳಸಬೇಕು. ನಂತರ ತುಪ್ಪ ಹಾಕಿ ಲಕ್ಷ್ಮಿಗೆ ದೀಪ ಹಚ್ಚಬೇಕು.
* ಪೂಜೆಗೆ ಹಣ್ಣುಗಳು, ಹೂಗಳು, ನೈವೇದ್ಯ ಬಳಸಿ.
* ಪೂಜೆಯ ನಂತರ ಆರತಿ ಬೆಳಗಿಶಿವ ಮತ್ತು ಪಾರ್ವತಿಯ ಅಷ್ಠೋತ್ತರ ಪಠಿಸಿ. ನಂತರ ಪೂಜೆಗೆ ಆಗಮಿಸಿದ ಮುತ್ತೈದೆಯರಿಗೆ ತಾಂಬೂಲ ನೀಡಿ.
ಮಂಗಳ ಗೌರಿ ವ್ರತವನ್ನು ಯಾವಾಗ ಆಚರಿಸಲಾಗುವುದು?
ಶ್ರಾವಣ ಮಾಸದ ಮಂಗಳವಾರ ತಪ್ಪಿದರೆ ಶುಕ್ರವಾರ ಈ ಮಂಗಳ ಗೌರಿ ವ್ರತವನ್ನು ಆಚರಿಸುತ್ತಾರೆ.
ಮಂಗಳಗೌರಿ ವ್ರತವನ್ನು ಯಾರು ಆಚರಿಸಬಹುದು?
ಮದುವೆಯಾಗಿ ಇನ್ನೂ 5 ವರ್ಷ ಪೂರ್ಣವಾಗಿರದಿದ್ದರೆ ಮಂಗಳಗೌರಿ ವ್ರತ ಆಚರಿಸಬಹುದು.
ಮಂಗಳ ಗೌರಿ ವ್ರತವನ್ನು ಎಲ್ಲಿ ಮಾಡಲಾಗುವುದು?
ಮೊದಲ ಮಂಗಳ ಗೌರಿ ವ್ರತವನ್ನು ಮೊದಲು ತವರು ಮನೆಯಲ್ಲಿ ನಂತರ ನಾಲ್ಕು ವರ್ಷ ಗಂಡನ ಮನೆಯಲ್ಲಿ ಆಚರಿಸಲಾಗುವುದು.
ಮಂಗಳ ಗೌರಿ ವ್ರತದ ಮಹತ್ವ
ಧಾರ್ಮಿಕ ನಂಬಿಕೆಗಳ ಪ್ರಕಾರ, ಮಂಗಳ ಗೌರಿ ವ್ರತದ ದಿನದಂದು ಗೌರಿಯನ್ನು ಕ್ರಮಬದ್ಧವಾಗಿ ಪೂಜಿಸುವುದರಿಂದ ಆ ಮಹಿಳೆಗೆ ಸೌಭಾಗ್ಯ ದೊರೆಯಲಿದೆ. ಮಂಗಳಗೌರಿ ವ್ರತ ಮಾಡುವುದರಿಮದ ಸಂತಾನ ಭಾಗ್ಯ ದೊರೆಯಲಿದೆ. ಅಲ್ಲದೆ ವೈವಾಹಿಕ ಜೀವನದ ಸಮಸ್ಯೆಗಳು ಶಿವ-ಪಾರ್ವತಿ ಕೃಪೆಯಿಂದ ದೂರಾಗುವುದು.



Click it and Unblock the Notifications
