Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಫೆಂಗ್‌ಶುಯಿ ಪ್ರಕಾರ ಗೂಬೆ ಮೂರ್ತಿ ಮನೆಯ ಈ ಭಾಗದಲ್ಲಿ ಇಟ್ಟರೆ ಅದೃಷ್ಟ ತರುತ್ತೆ
ಗೂಬೆ ಶನಿ ಎಂದು ಕೆಲವರು ನಂಬುತ್ತಾರೆ, ಆದರೆ ಫೆಂಗ್‌ಶುಯಿ ಶಾಸ್ತ್ರ ಗೂಬೆ ಅದೃಷ್ಟವನ್ನು ತರುತ್ತದೆ ಎಂದು ಹೇಳುತ್ತದೆ. ಆದ್ದರಿಂದ ಗೂಬೆಯ ಮೂರ್ತಿ ಮನೆಯಲ್ಲಿದ್ದರೆ ಒಳ್ಳೆಯದು, ಇದು ಮನೆಗೆ ಅದೃಷ್ಟವನ್ನು ತರುತ್ತದೆ ಎಂದು ಹೇಳಲಾಗುವುದು. ಗೂಬೆಯ ಮೂರ್ತಿಗಳನ್ನು ಮನೆಗೆ ತಂದಿಟ್ಟರೆ ಇದರಿಂದ ಮನೆಗೆ ಒಳಿತಾಗುವುದು ಎಂದು ಹೇಳಲಾಗುವುದು.
ಗೂಬೆ ಮೂರ್ತಿಯನ್ನು ಮನೆಯಲ್ಲಿ ಯಾವ ಭಾಗದಲ್ಲಿ ಇಡಬೇಕು? ಫೆಂಗ್‌ಶುಯಿ ಪ್ರಕಾರ ಗೂಬೆ ಮೂರ್ತಿಗಳನ್ನು ಮನೆಯಲ್ಲಿ ಇಡುವುದರಿಂದ ಏನೆಲ್ಲಾ ಪ್ರಯೋಜನಗಳು ಉಂಟಾಗುತ್ತದೆ ಎಂದು ನೋಡೋಣ ಬನ್ನಿ:

ಗೂಬೆ ಮೂರ್ತಿಯನ್ನು ಎಲ್ಲಿಡಬೇಕು?
ಗೂಬೆಯ ಮೂರ್ತಿಯನ್ನು ನೀವು ಮನೆಯಲ್ಲಿ ಇಡುವುದಾದರೆ ಸರಿಯಾದ ಕಡೆ, ಸರಿಯಾದ ದಿಕ್ಕಿನಲ್ಲಿಯೇ ಇಡಬೇಕು. ಅಂದರೆ ಮಾತ್ರ ಮನೆಗೆ ಒಳಿತಾಗುವುದು. ನೀವು ಗೂಬೆಯ ಮೂರ್ತಿಯನ್ನು ಮನೆಗೆ ತರುವಾಗ ಚಿನ್ನದ ಗೂಬೆ ಅಥವಾ ಚಿನ್ನ ಲೇಪಿತ ಗೂಬೆಯನ್ನು ಮನೆಗೆ ತರುವುದು ಒಳ್ಳೆಯದು, ಅದರಲ್ಲೂ ಮನೆಯ ಹಾಲ್‌ನಲ್ಲಿ ಬೀದಿಗೆ ಮುಖ ಮಾಡಿದಂತೆ ನೀವು ಗೂಬೆಯ ಅಥವಾ 3 ಗೂಬೆಗಳ ಮೂರ್ತಿಯನ್ನು ಇಡಬೇಕು.
ಹಣದ ಹರಿವು ಹೆಚ್ಚಾಗಲು
ಫೆಂಗಿಶುಯಿ ಪ್ರಕಾರ ಆಕರ್ಷಕವಾಗಿರುವ ಗೂಬೆಯನ್ನು ದಕ್ಷಿಣ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಟ್ಟರೆ ಒಳ್ಳೆಯದು ಎಂದು ಹೇಳಲಾಗುತ್ತದೆ.
ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಹೆಚ್ಚಾಗಲು
ವೈವಾಹಿಕ ಜೀವನ ಚೆನ್ನಾಗಿರಬೇಕೆಂದರೆ ಹೊಂದಾಣಿಕೆ ಚೆನ್ನಾಗಿ ಇರಬೇಕು. ಉತ್ತರ ಅಥವಾ ಆಗ್ನೇಯ ಭಾಗದಲ್ಲಿ ಗೂಬೆಯ ಮೂರ್ತಿಯನ್ನು ಇಡುವುದರಿಂದ ಗಂಡ-ಹೆಂಡತಿ ನಡುವೆ ಹೊಂದಾಣಿಕೆ ಚೆನ್ನಾಗಿರಲಿದೆ ಎಂದು ಹೇಳಲಾಗುವುದು.
ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುವುದು
ಗೂಬೆಯ ಮೂರ್ತಿ ಮನೆಯಲ್ಲಿದ್ದರೆ ಧನಾತ್ಮಕ ಶಕ್ತಿ ಹೆಚ್ಚಾಗುವುದು ಎಂದು ಹೇಳಲಾಗುವುದು. ಮನೆಯಲ್ಲಿ ಗೂಬೆಯ ಚಿತ್ರ ಅಥವಾ ಗೂಬೆಯನ್ನು ನೇತು ಹಾಕುವುದರಿಂದ ಮನೆಯವರಿಗೆ ಒಳಿತಾಗುವುದು, ಸಂಪತ್ತು, ಜ್ಞಾನ ಹೆಚ್ಚುವುದು ಎಂದು ಹೇಳಲಾಗುವುದು.
ಮನೆಯ ಎದುರುಗಡೆ ಗೂಬೆಯ ಮೂರ್ತಿಯಿದ್ದರೆ
ಮನೆಯ ಬಾಗಿಲಿನ ಬಳಿಯೇ ಗೂಬೆಯ ಮೂರ್ತಿಯಿದ್ದರೆ ಮನೆಯೊಳಗಡೆ ಋಣಾತ್ಮಕ ಶಕ್ತಿ ಪ್ರವೇಶ ಮಾಡಲು ಬಿಡುವುದಿಲ್ಲ. ಮನೆಯನ್ನು ಋಣಾತ್ಮಕ ಶಕ್ತಿಯಿಂದ ರಕ್ಷಣೆ ಮಾಡುವುದು ಎಂದು ನಂಬಲಾಗಿದೆ.
ಕೆಲಸಕ್ಕೆ ಕೂರುವ ಟೇಬಲ್‌ನಲ್ಲಿ ಗೂಬೆಯ ಮೂರ್ತಿಯಿಟ್ಟರೆ'
ಕೆಲಸಕ್ಕೆ ಕೂರುವ ಟೇಬಲ್ ಬಳಿ ಗೂಬೆಯ ಮೂರ್ತಿ ಇಟ್ಟರೆ ಇದರಿಂದ ವೃತ್ತಿ ಬದುಕಿನಲ್ಲಿ ಯಶಸ್ಸು ಉಂಟಾಗುವುದು ಎಂದು ಹೇಳಲಾಗುವುದು, ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಅಲ್ಲದೆ ಹಣದ ಪರಿಸ್ಥಿತಿ ತೂಗಿಸಿಕೊಂಡು ಹೋಗಲು ನಿಮ್ಮಿಂದ ಸಾಧ್ಯವಾಗುವುದು.
ವಿದ್ಯಾರ್ಥಿಗಳು ಓದು ಮೇಜಿನ ಮೇಲಿಟ್ಟರೆ
ಮನೆಯಲ್ಲಿ ಮಕ್ಕಳು ಓದುವ ಮೇಜಿನ ಮೇಲಿಟ್ಟರೆ ಇದರಿಂದ ಅವರು ಓದಿನಲ್ಲಿ ಸಾಧನೆ ಮಾಡುತ್ತಾರೆ.
ಯಾವ ಬಣ್ಣದ ಗೂಬೆಯ ಮೂರ್ತಿ ಬಳಸಲಾಗುವುದು
ಹೆಚ್ಚಾಗಿ ತಾಮ್ರ ಬಣ್ಣದ್ದು, ಬಿಳಿ ಬಣ್ಣದ್ದು ಹಾಗೂ ಮರದ ಗೂಬೆ ಮೂರ್ತಿಯನ್ನು ಬಳಸಲಾಗುವುದು.
ಗೂಬೆ ಕುರಿತು ಇರುವ ಮೂಢನಂಬಿಕೆಗಳೇನು?
ಗೂಬೆ ಕೂಗುವ ಶಬ್ದ ಮೂರು ಬಾರಿ ಕೇಳಿದರೆ ಸಾವಿನ ಸುದ್ದಿ ಕೇಳುತ್ತದೆ ಎಂಬ ಮೂಢನಂಬಿಕೆ ಜನರಲ್ಲಿದೆ.



Click it and Unblock the Notifications
