Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಸಿಲಿಂಡರ್ ಪೈಪ್ ಯಾವಾಗ ಬದಲಿಸಬೇಕು..? ಹಾಳಾಗಿರುವುದು ತಿಳಿಯೋದು ಹೇಗೆ?
ಪ್ರತಿಯೊಬ್ಬರ ಮನೆಯಲ್ಲೂ ಈಗ ಎಲ್‌ಪಿಜಿ ಸಿಲಿಂಡರ್ ಬಳಸಿ ಅಡುಗೆ ಮಾಡುತ್ತಾರೆ. ಭಾರತತದ ಬಹುತೇಕ ಮನೆಗಳಲ್ಲಿ ಗ್ಯಾಸ್ ಸಿಲಿಂಡರ್ ಬಂದಿವೆ. ಎಲ್ಲರ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಸಿಲಿಂಡರ್ ಇಟ್ಟುಕೊಳ್ಳುವ ಕಾಲವಿದು. ಅದರಲ್ಲು ಗೃಹಿಣಿಯರಿಗೆ ಈ ಸಿಲಿಂಡರ್‌ಗಳು ಒಂದಿಷ್ಟು ಕೆಲಸ ಕಡಿಮೆ ಮಾಡಿವೆ.
ದೇಶದಲ್ಲಿ ಕೋಟಿ ಕೋಟಿ ಕುಟುಂಬಗಳು ಈಗ ಗ್ಯಾಸ್ ಸೌಕರ್ಯ ಹೊಂದಿರುವ ಮನೆಗಳಾಗಿ ಬದಲಾಗಿವೆ. ಅದರಲ್ಲೂ ಹಳ್ಳಿಗಳಲ್ಲಿ ಎಲ್ಲರ ಮನೆಗೂ ಎಲ್‌ಪಿಜಿ ಗ್ಯಾಸ್ ಬಂದು ತಲುಪಿದೆ. ಆದ್ರೆ ಈ ಎಲ್‌ಸಿಪಿ ಸಿಲಿಂಡರ್‌ಗಳಿಂದಾಗುವ ಅಪಾಯಗಳ ಸಂಖ್ಯೆಯು ಸಹ ವರ್ಷದಿಂದ ವರ್ಷ ಏರಿಕೆಯಾಗುತ್ತಿದೆ.

ಸಿಲಿಂಡರ್‌ಗಳ ಬಳಕೆ ಹಾಗೂ ಅವುಗಳ ನಿರ್ವಹಣೆಯಲ್ಲಿ ಸ್ವಲ್ಪ ಹೆಚ್ಚು ಕಮ್ಮಿ ಆದರು ಅಪಾಯ ಎದುರಾಗುತ್ತದೆ. ಆದರೆ ನಗರಗಳು ಸೇರಿ ಹಳ್ಳಿಗಳಲ್ಲಿ ಈ ಸಿಲಿಂಡರ್ ನಿರ್ವಹಣೆಯ ಸರಿಯಾದ ಕ್ರಮ ಹಲವರಿಗೆ ತಿಳಿದಿರುವುದಿಲ್ಲ. ಅವರು ಯಾರಾದರು ಮೊದಲು ಬಳಸಿದ್ದನ್ನು ನೋಡಿ ಅಥವಾ ಹೇಳಿ ಕೊಟ್ಟಿದ್ದನ್ನು ನೋಡಿ ಬಳಸಲು ಆರಂಭಿಸುತ್ತಾರೆ.
ಆದರೆ ಈ ಸಿಲಿಂಡರ್, ರೆಗ್ಯೂಲೇಟರ್, ಗ್ಯಾಸ್ ಪೈಪ್‌ಗಳ ನಿರ್ವಹಣೆ ಕುರಿತು ಕಡಿಮೆ ಜ್ಞಾನ ಹೊಂದಿರುತ್ತಾರೆ. ಇದು ಮುಂದೊಂದು ದಿನ ಅಪಾಯ ತಂದೊಡ್ಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಸಿಲಿಂಡರ್ ಸಂಬಂಧಿ ಅವಘಡಗಳಲ್ಲಿ ಅದರ ನಿರ್ವಹಣೆಯ ಕುರಿತ ಮಾಹಿತಿ ಕೊರತೆಯೇ ಪ್ರಮುಖ ಕಾರಣವಾಗಿರುತ್ತದೆ.
ಗ್ಯಾಸ್ ಸಿಲಿಂಡರ್ ಬಳಕೆ ವೇಳೆ ಪ್ರಮುಖವಾಗಿ ನಾವು ಗುರುತಿಸಬೇಕಾಗಿರುವುದು ರೆಗ್ಯೂಲೇಟರ್ ಹಾಗೂ ಅದರ ಪೈಪ್. ಏಕೆಂದರೆ ಈ ಎರಡು ಅಂಶಗಳು ಸರಿಯಾಗಿದ್ದರೆ ಯಾವ ಅಪಾಯವೂ ಸಂಭವಿಸುವುದಿಲ್ಲ. ಆದರೆ ಇದನ್ನು ಯಾವಾಗ ಬದಲಿಸಬೇಕು? ಈ ಎರಡೂ ವಸ್ತುಗಳು ಹಳೆಯದಾಗಿ ಕೆಲಸ ಮಾಡಲು ಶಕ್ತವಾಗಿಲ್ಲ ಎಂದು ತಿಳಿದುಕೊಳ್ಳುವುದಾದರೂ ಹೇಗೆ ಎಂಬುದೇ ಎಲ್ಲರ ಪ್ರಶ್ನೆಯಾಗಿರುತ್ತದೆ.
ಈ ಗ್ಯಾಸ್ ಪೈಪ್ ಹಾಗೂ ರೆಗ್ಯೂಲೇಟರ್ ಸೇರಿ ಸೌವ್‌ಗೆ ಸುಮಾರು 5 ವರ್ಷಗಳ ಕಾಲ ಗ್ಯಾರಂಟಿ ನೀಡಲಾಗಿರುತ್ತದೆ. ಆದ್ರೆ ಈ ಅವಧಿಗೂ ಮುನ್ನವೇ ಅವು ಹಾಳಾಗುವ ಸಂಭವವನ್ನೂ ನಾವು ತಳ್ಳಿಹಾಕಬಾರದು. ಹಾಗಾದ್ರೆ ಈ ಪೈಪ್ ಯಾವಾಗ ಬದಲಿಸುವ ಪ್ರಮೇಯ ಬರುತ್ತೆ ಎಂಬುದನ್ನು ನಾವು ನೋಡೋಣ.
ಗ್ಯಾಸ್ ಲೀಕ್ ಆಗುತ್ತಿದ್ದರೆ
ನೀವು ಮನೆಯಲ್ಲಿ ಬಳಸುತ್ತಿರುವ ಸಿಲಿಂಡರ್‌ಗೆ ಸಂಪರ್ಕ ನೀಡಿರುವ ಪೈಪ್‌ನ ಎರಡು ಬದಿಯಲ್ಲಿ ಯಾವುದಾದರು ಒಂದು ಬದಿ ಗ್ಯಾಸ್ ಸೋರಿಕೆಯಾಗುತ್ತಿರುವು ಕಂಡುಬಂದರೆ ತಕ್ಷಣ ಆ ಪೈಪ್ ಬದಲಾಯಿಸಿ. ಅದರ ಎರಡೂ ಬದಿಯಲ್ಲಿ ವಾಷರ್ ಇರುತ್ತದೆ. ಇವು ಸಡಿಲಗೊಂಡಿದೆಯೇ ಪರೀಕ್ಷಿಸಿ. ಯಾವುದೇ ಕಾರಣಕ್ಕೂ ನೀವೆ ಅದನ್ನು ಸರಿಪಡಿಸಿ ಅದನ್ನೇ ಬಳಸುವ ಕೆಲಸಕ್ಕೆ ಮುಂದಾಗಬೇಡಿ.
ಗ್ಯಾಸ್ ಪೈಪ್ ತುದಿ ಸೀಳು ಬಿಟ್ಟಿದ್ದರೆ
ನೀವು ಸಿಲಿಂಡರ್‌ಗೆ ಸಂಪರ್ಕಿಸುವ ಪೈಪ್‌ನ ಒಂದು ಬದಿ ರೆಗ್ಯೂಲೇಟರ್‌ಗೆ ಸಂಪರ್ಕಿಸಲಾಗಿರುತ್ತದೆ. ಈ ಎರಡು ಬದಿಯಲ್ಲಿ ಪೈಪ್ ತುದಿ ಸೀಳು ಬಿಟ್ಟಿದಿಯೇ ಎಂಬುದನ್ನು ಪರೀಕ್ಷಿಸಿ ಏಕೆಂದರೆ ಈ ಪೈಪ್ ಸೀಳು ಬಿಟ್ಟಿದ್ದರೆ ಅದರ ಟೆಂಪರ್ ಕೊನೆಗೊಂಡಿದೆ ಎಂದರ್ಥ.
ಪೈಪ್ ವ್ಯಾಲಿಡಿಟಿ ಚೆಕ್ ಮಾಡಿ
ಹೌದು ನೀವು ಸಿಲಿಂಡರ್‌ಗೆ ಬಳಸಿರುವ ಪೈಪ್‌ಗೆ ವ್ಯಾಲಿಡಿಟಿ ಇರುತ್ತದೆ. ಇದನ್ನು ನೀವೆ ಪರೀಕ್ಷಿಸಬಹುದು. ಮೊದಲು ನೀವು ಸರ್ಕಾರದ ಬಿಐಎಸ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. ಈ ಆ್ಯಪ್ ತೆರೆದು ಅದರಲ್ಲಿ ಐಎಸ್‌ಐ ಲೈಸೆನ್ಸ್ ವೆರಿಫೈ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಬಳಿಕ ಪೈಪ್ ಮೇಲೆ ಬರೆದಿರುವ CM/L ಕೋಡ್ ಅನ್ನು ನಮೂದಿಸಿ ಬಳಿಕ GO ಬಟನ್ ಮೇಲೆ ಕ್ಲಿಕ್ ಮಾಡಿ. ಈಗ ನಿಮ್ಮ ಮುಂದೆ ಆ ಪೈಪ್‌ನ ಎಲ್ಲಾ ಮಾಹಿತಿ ಲಭ್ಯವಾಗುತ್ತದೆ. ವ್ಯಾಲಿಡಿಟಿ ಸಹ ನಿಮಗೆ ತಿಳಿಯುತ್ತದೆ.
ಇದೆಲ್ಲಕ್ಕಿಂತ ಸುರಕ್ಷಿತ ವಿಧಾನ ಎಂದರೆ ನೀವೆ ಕಾಲ ಕಾಲಕ್ಕೆ ಈ ಪೈಪ್ ಹಾಗೂ ರೆಗ್ಯೂಲೇಟರ್ ಪರೀಕ್ಷಿಸುತ್ತಿರಿ. ಒಂದು ವೇಳೆ ಈ ಎರಡನ್ನೂ ಬದಲಿಸದೆ ಬಹಳ ಕಾಲ ಆಗಿದ್ದರೆ ತಕ್ಷಣವೇ ಬದಲಿಸಿದರೆ ಅಪಾಯದಿಂದ ಪಾರಾಗಬಹುದು.



Click it and Unblock the Notifications
