Latest Updates
-
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು
ರಂಗೋಲಿ ಹಾಕಲು ಹಿಂದೆ ಈ ಎರಡು ವಸ್ತು ಮಾತ್ರ ಬಳಸಲಾಗುತ್ತಿತ್ತು, ಅವುಗಳಿಂದ ಮನೆಗೆ ಶುಭ
ಹಿಂದೂ ಸಂಪ್ರದಾಯದಲ್ಲಿ ಬೆಳಗ್ಗೆ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ ಮನೆ ಮುಂದೆ ನೀರು ಹಾಕಿ ರಂಗೋಲಿ ಹಾಕುವ ಸಂಪ್ರದಾಯವಿದೆ. ಮನೆ ಮುಂದೆ ರಂಗೋಲಿ ಹಾಕಿದರೆ ಮನೆಗೆ ಶುಭ ಎಂಬುವುದು ನಂಬಿಕೆ. ಈ ಸಂಪ್ರದಾಯವನ್ನು ಬಹುತೇಕ ಕುಟುಂಬಗಳು ಇಂದಿಗೂ ಚಾಚೂ ತಪ್ಪದೆ ಪಾಲಿಸುತ್ತಾರೆ.
ಹಿಂದೆಯೆಲ್ಲಾ ಮನೆ ಮುಂದೆ ಸೆಗಣಿ ಸಾರಿಸಿ ನಂತರ ರಂಗೋಲಿ ಇಡುತ್ತಾರೆ, ಈಗ ಮನೆಯಲ್ಲಿ ಹಸುವಿಲ್ಲದಿದ್ದರೆ ಸೆಗಣಿ ಸಿಗುವುದು ಕಷ್ಟ ಅಲ್ಲದೆ ನೆಲವೂ ಇಂಟರ್‌ಲಾಕ್ ಅಥವಾ ಸಿಮೆಂಟ್ ಹೀಗಾಗಿ ಅದರ ಮೇಲೆ ನೀರು ಹಾಕಿ ರಂಗೋಲಿ ಹಾಕುತ್ತಾರೆ, ಕೆಲವರಂತೂ ದಿನಾ ರಂಗೋಲಿ ಹಾಕುವುದು ಕಷ್ಟ ಎಂದುಮನೆ ಮುಂದೆ ರಂಗೋಲಿ ಡಿಸೈನ್ ಪೇಯಿಂಟ್‌ನಿಂದ ಹಾಕಿರುತ್ತಾರೆ, ಇನ್ನು ಕೆಲವರು ರಂಗೋಲಿ ಅಚ್ಚು ಬಳಸಿ ಬಣ್ಣ-ಬಣ್ಣದ ರಂಗೋಲಿ ಹಾಕುತ್ತಾರೆ. ಆದರೆ ಸ್ನೇಹಿತರೇ ಕಾಲ ಬದಲಾದಂತೆ ರಂಗೋಲಿಗೆ ಬಳಸುವ ವಸ್ತಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ.

ನಮ್ಮ ಹಿರಿಯರು ಯಾವುದೇ ಸಂಪ್ರದಾಯ ಮಾಡಿದ್ದರೂ ಅದನ್ನು ಡಿಕೋಡ್ ಮಾಡಿದಾಗ ಅದರ ಹಿಂದೆ ಹಲವಾರು ವೈಜ್ಞಾನಿಕ ಸತ್ಯಾಂಶಗಳಿರುತ್ತದೆ. ರಂಗೋಲಿ ಮನೆಗೆ ಶುಭ ಎಂಬುವುದು ನಂಬಿಕೆ, ಆದರೆ ರಂಗೋಲಿಯಿಂದ ಅನೇಕ ಪ್ರಯೋಜನಗಳಿವೆ ಎಂಬುವುದು ವೈಜ್ಞಾನಿಕ ಸತ್ಯ.
ಈ ಹಿಂದೆ ರಂಗೋಲಿಗೆ ಈ ಎರಡು ವಸ್ತುಗಳನ್ನು ಮಾತ್ರ ಬಳಸುತ್ತಿದ್ದರು
ಹೌದು ತುಂಬಾ ವರ್ಷಗಳ ಹಿಂದೆ ರಂಗೋಲಿ ಹಾಕಲು ಹೀಗಿನಂತೆ ಕೆಮಿಕಲ್ ಬಣ್ಣಗಳನ್ನು ಬಳಸುತ್ತಿರಲಿಲ್ಲ, ಬದಲಿಗೆ ಅಕ್ಕಿಪುಡಿ ಹಾಗೂ ಜೇಡಿ ಮಣ್ಣು ಮಾತ್ರ ಬಳಸುತ್ತಿದ್ದರು. ಈ ಎರಡು ವಸ್ತುಗಳನ್ನು ರಂಗೋಲಿ ಹಾಕಲು ಬಳಸುವುದರಿಂದ ಅನೇಕ ಪ್ರಯೋಜನಗಳಿವೆ.
ನಾವು ಹಾಕುವ ರಂಗೋಲಿಯಿಂದ ಪರಿಸರಕ್ಕೆ ಒಳ್ಳೆಯದು
ಹೌದು ನಾವು ಅಕ್ಕಿ ಹಿಟ್ಟು ಹಾಗೂ ಜೇಡಿ ಮಣ್ಣು ರಂಗೋಲಿಗೆ ಬಳಸಿದರೆ ಮನೆಗೆ ಹೇಗೆ ಪ್ರಯೋಜನಕಾರಿ ಎಂದು ನೋಡುವುದಾದರೆ ಮೊದಲು ಸೆಗಣಿ ಹಾಕಿ ನೆಲ ಸಾರಿಸಲಾಗುವುದು, ಅದರ ಮೇಲೆ ಅಕ್ಕಿ ಹಿಟ್ಟು ಹಾಕಿ ರಂಗೋಲಿ ಹಾಕಿದಾಗ ಅಲ್ಲಿ ಬರುವ ಕೆಲ ಹುಳ ಉಪ್ಪಟೆಗಳು ಪಕ್ಷಿಗಳಿಗೆ ಆಹಾರವಾಗುತ್ತಿತ್ತು, ಅಲ್ಲದೆ ಕೀಟಗಳು ಅಲ್ಲಿಯೇ ಉಳಿಯುವುದರಿಂದ ಮನೆಯೊಳಗಡೆ ಕೂಡ ಬರುವುದಿಲ್ಲ, ಹೀಗಾಗಿ ಮನೆ ಮುಂದೆ ರಂಗೋಲಿ ಹಾಕಲಾಗುವುದು.
ಮೆದುಳಿಗೆ ಒಳ್ಳೆಯದು
ರಂಗೋಲಿ ಸುಮ್ಮನೆ ಹಾಕಲು ಸಾಧ್ಯವಾಗಿಲ್ಲ, ರಂಗೋಲಿಯನ್ನು ಚುಕ್ಕಿ ಹಾಕಿ ಹಾಕಲಾಗುವುದು. ಯಾವ ರಂಗೋಲಿಗೆ ಎಷ್ಟು ಚುಕ್ಕಿ ಎಂಬುವುದು ಇರುತ್ತದೆ, ಇವುಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು, ರಂಗೋಲಿ ಹಾಕುವಾಗ ಬಳಸುವ ಬುದ್ದಿ ಇವೆಲ್ಲಾ ನಮ್ಮ ನೆನಪಿನ ಶಕ್ತಿ, ಬುದ್ಧಿ ಶಕ್ತಿಯನ್ನು ಚುರುಕುಗೊಳಿಸುವುದು, ಈ ನಿಟ್ಟಿನಲ್ಲಿಯೂ ಒಳ್ಳೆಯದು.
ಕಾಲ ಬದಲಾದಂತೆ ಕೆಮಿಕಲ್ ಬಣ್ಣಗಳು ಬಂದೆವು
ಹೌದು ಈಗ ಬಹುತೇಕರು ಬಳಸುವುದು ಕೆಮಿಕಲ್ ಹಾಕಿದ ರಂಗೋಲಿ ಪುಡಿಯನ್ನು. ಈಗ ನಮ್ಮ ಹಿರಿಯರು ರಂಗೋಲಿ ಏಕೆ ಬಳಸುತ್ತಿದ್ದರು ಎಂಬುವುದು ಎಂದು ನಿಮಗೆ ತಿಳಿದಿರಬಹುದಲ್ವಾ?



Click it and Unblock the Notifications