Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ವಾಸ್ತು ಶಾಸ್ತ್ರ ಪ್ರಕಾರ ದೇವರ ಕೋಣೆ ಯಾವ ದಿಕ್ಕಿನಲ್ಲಿದ್ದರೆ ಗೋಡೆಗೆ ಯಾವ ಬಣ್ಣ ಧನಾತ್ಮಕ ಶಕ್ತಿ ಹೆಚ್ಚಿಸುತ್ತದೆ
ಪ್ರತಿ ಮನೆಯಲ್ಲಿ ಪೂಜೆಗೆ ಒಂದು ಪ್ರತ್ಯೇಕ ಸ್ಥಳವಿರುತ್ತದೆ, ದೇವರ ಕೋಣೆಯಲ್ಲಿ ಕುಳಿತು ದೇವರನ್ನು ಪ್ರಾರ್ಥಿಸಿದಾಗ ಏನೋ ಒಂದು ರೀತಿಯ ಧನಾತ್ಮಕ ಶಕ್ತಿಯ ಅನುಭವ ಉಂಟಾಗುವುದು, ದೇವರನ್ನು ಧ್ಯಾನಿಸಿದಾಗ ಮನಸ್ಸಿನಲ್ಲಿರುವ ಒತ್ತಡ ಕಡಿಮೆಯಾಗುವುದು, ಮನಸ್ಸಿನಲ್ಲಿ ಆತ್ಮವಿಶ್ವಾಸ ಬಲವಾಗುವುದು.
ಮನೆಯಲ್ಲಿ ದೇವರ ಕೋಣೆ ಯಾವ ಭಾಗದಲ್ಲಿ ಇರಬೇಕು, ಯಾವ ಬಣ್ಣದಲ್ಲಿ ಇರಬೇಕು ಎಂದು ವಾಸ್ತು ಸಲಹೆಗಳಿವೆ, ಏಕೆಂದರೆ ಮನೆಯ ಆ ಭಾಗ ಮನೆಗೆ ಧನಾತ್ಮಕ ಶಕ್ತಿಯನ್ನು ತುಂಬುವಂತಿರಬೇಕು. ಅಲ್ಲದೆ ನಾವು ಆ ಪೂಜಾ ಕೋಣೆ ಅಥವಾ ಪೂಜಾ ಸ್ಥಳಕ್ಕೆ ಬಂದಾಗ ನಮ್ಮಲ್ಲಿಯೂ ಭಕ್ತಿಭಾವ ಬರುವಂತೆ ಆ ಜಾಗವನ್ನು ಇಡಬೇಕು. ವಾಸ್ತು ಶಾಸ್ತ್ರ ಪ್ರಕಾರ ದೇವರ ಕೋಣೆಗೆ ನೀವು ಬಣ್ಣ ಬಳಿಯುವಾಗ ಈ ಬಣ್ಣದಲ್ಲಿದ್ದರೆ ಒಳ್ಳೆಯದು ಎಂದು ಹೇಳಲಾಗುವುದು.

ಹಳದಿ
ಹಳದಿ ಎಂಬುವುದು ಶುಭದ ಸಂಕೇತ, ಸಂತೋಷ, ಧನಾತ್ಮಕ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಸೂರ್ಯನ ಬೆಳಕು ಹಳದಿ ಬಣ್ಣದ ಮೇಲೆ ಬಿದ್ದಾಗ ತುಂಬಾನೇ ಆಕರ್ಷಕವಾಗಿ ಕಾಣುವುದು, ದೇವರ ಕೋಣೆ ಈಶಾನ್ಯ ಭಾಗದಲ್ಲಿರಲಿ, ಈ ಬಣ್ಣ ಧನಾತ್ಮಕ ಶಕ್ತಿ ಹೆಚ್ಚಿಸುತ್ತದೆ.
ಕಿತ್ತಳೆ /ಕೇಸರಿ ಬಣ್ಣ
ಹಳದಿಯಂತೆ ಕಿತ್ತಳೆ ಕೂಡ ತುಂಬಾನೇ ಆಕರ್ಷಕವಾದ ಬಣ್ಣ. ಇದು ಧೈರ್ಯ ಹಾಗೂ ಅದೃಷ್ಟದ ಸಂಕೇತ. ಎಲ್ಲಾ ದೇವರುಗಳ ಫೋಟೋದಲ್ಲಿ ಈ ಕೇಸರಿ ಬಣ್ಣ ಕಾಣಬಹುದು, ಪೂಜೆಯ ಕೋಣೆ ಈ ಬಣ್ಣದಲ್ಲಿದ್ದರೆ ಅದು ಅದು ಆಗ್ನೇಯ ಭಾಗದಲ್ಲಿದ್ದರೆ ಒಳ್ಳೆಯದು ಎಂದು ಹೇಳಲಾಗುವುದು.
ಚಿನ್ನದ ಬಣ್ಣ
ಪೂಜಾ ಕೋಣೆಯಲ್ಲಿ ಈ ಬಣ್ಣ ಸಾಮಾನ್ಯ, ಈ ಬಣ್ಣದಲ್ಲಿ ದೇವರ ಮೂರ್ತಿ ಹಾಗೂ ಫೋಟೋಗಳು ತುಂಬಾನೇ ದೈವಿಕ ಕಳೆಯಿಂದ ಕಾಣುವುದು, ಈ ಬಣ್ಣ ಪೂಜಾ ಕೋಣೆಗಿಂತ ನೀವು ಹಾಲ್‌ನಲ್ಲಿ ದೇವರ ಮೂರ್ತಿ ಇಡುವುದಾದರೆ ತುಂಬಾನೇ ಆಕರ್ಷಕವಾಗಿರುತ್ತದೆ. ತುಂಬಾ ಮನೆಗಳಲ್ಲಿ ದೇವರ ಕೋಣೆ ಪ್ರತ್ಯೇಕವಾಗಿರಲ್ಲ, ಅಂಥವರು ಈ ಬಣ್ಣ ಬಳಸಿದರೆ ಆ ಜಾಗ ತಟ್ ಅಂತ ಗಮನ ಸೆಳೆಯುವುದು, ನೋಡುವಾಗ ಮನಸ್ಸಿಗೆ ಧನಾತ್ಮಕ ಭಾವನೆ ಬರುವುದು.
ಬಿಳಿ ಬಣ್ಣ
ಬಿಳಿ ಬಣ್ಣ ಶುದ್ಧತೆಯ, ಶಾಂತಿಯ ಸಂಕೇತ, ಈ ಬಣ್ಣವನ್ನು ಪೂಜಾ ಕೋಣೆಗೆ ಬಳಸಬಹುದು, ಈ ಬಣ್ಣ ತುಂಬಾ ಪ್ರಶಾಂತತೆಯ ಅನುಭವ ನೀಡುವುದು. ಈ ಬಣ್ಣ ತುಂಬಾ ಶುಭ, ಅಲ್ಲದೆ ಗೋಡೆಗೆ ಈ ಬಣ್ಣವಿದ್ದರೆ ಆ ಕೋಣೆಯಲ್ಲಿ ದೇವರ ಫೋಟೋಗಳು ಹೈಲೈಟ್ಸ್ ಆಗಿ ಕಾಣುವುದು.
ಹಸಿರು ಬಣ್ಣ
ತೆಳು ಹಸಿರು ಬಣ್ಣ ಕೂಡ ದೇವರ ಕೋಣೆಯ ಗೋಡೆಗೆ ಬಳಸಬಹುದು. ನಿಮ್ಮ ಮನೆಯಲ್ಲಿ ದೇವರ ಕೋಣೆ ಪೂರ್ವದಲ್ಲಿದ್ದರೆ ಈ ಬಣ್ಣ ಬಳಸುವುದು ಒಳ್ಳೆಯದು.
ತುಂಬಾ ಗಾಢವಾದ ಬಣ್ಣ ಬಳಸಬೇಡಿ.
ಇತರ ಟಿಪ್ಸ್
ದೇವರ ಕೋಣೆ ಸ್ಟೇರ್‌ಕೇಸ್ ಕೆಳಗಡೆ ಇರಬಾರದು, ಸ್ಟೇರ್‌ಕೇಸ್ ಕೆಳಗಡೆ ಇದ್ದರೆ ಅದನ್ನು ಮೆಟ್ಟಿ ಹೋಗುವಂತಾಗುವುದು.
ಮನೆಯ ಹಾಲ್‌ನ ಬಲಭಾಗದಲ್ಲಿ ಇರಬಾರದು
ಟಾಯ್ಲೆಟ್ ಪಕ್ಕ ಇರಬಾರದು, ಫ್ಲ್ಯಾಟ್‌ನಲ್ಲಿ ಇರುವವರು ಇದನ್ನು ಗಮನಿಸಬೇಕು.
ದೇವರ ಕೋಣೆಯ ಗೋಡೆ, ಟಾಯ್ಲೆಟ್ ಗೋಡೆ ಒಂದೇ ಆಗರಿಬಾರದು.
ಪೂಜೆ ಕೋಣೆ ಎಷ್ಟು ಎತ್ತರದಲ್ಲಿರಬೇಕು?
ಪೂಜೆ ಕೋಣೆಯ ಎತ್ತರ 9 ಇಂಚಿಗಿಂತ ಹೆಚ್ಚು, ಎರಡು ಇಂಚಿಗಿಂತ ಕಡಿಮೆ ಇರಬಾರದು. ದೇವರ ಫೋಟೋಗಳ ನಡುವೆ ಸ್ವಲ್ಪ ಅಂತರವಿರಬೇಕು. ಅಲ್ಲದೆ ಮೂರ್ತಿಗಳನ್ನು ಗೋಡೆಯಿಂದ ಸ್ವಲ್ಪ ದೂರ ಇಡಬೇಕು.
ದೀಪ ಶುದ್ಧವಾಗಿರಬೇಕು
ಬತ್ತಿ ಸರಿಯಾಗಿರುವಂತೆ ನೋಡಿಕೊಳ್ಳಿ.
ದೇವರ ಕೋಣೆಗೆ ಸರಿಯಾಗಿ ಗಾಳಿಯಾಡುವಂತಿರಬೇಕು. ದೇವರ ಕೋಣೆಗೆ ಹೂವುಗಳನ್ನು ಇಡಿ.
ದೇವರ ಕೋಣೆ ಬಾಗಿಲು ಇರುವುದು ಒಳ್ಳೆಯದು.



Click it and Unblock the Notifications
