Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ವಾಸ್ತು: ಮನೆಯಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚಾಗಬೇಕು, ಸಂಪತ್ತು ವೃದ್ಧಿಸಬೇಕು ಎಂದು ಕನ್ನಡಿ ಯಾವ ದಿಕ್ಕಿನಲ್ಲಿಡವೇಕು?
ಮನೆಯೆಂದರೆ ಕನ್ನಡಿ ಇರಲೇಬೇಕು, ಎಷ್ಟೇ ಚಿಕ್ಕ ಮನೆಯಾಗಿರಲಿ, ಅರಮನೆಯಾಗಿರಲಿ, ಕನ್ನಡಿ ಬೇಕೇಬೇಕು. ನಮ್ಮ ಮುಖವನ್ನು, ಅಂದ ಚೆಂದವನ್ನು ಕನ್ನಡಿಯಲ್ಲಿ ನೋಡಿ ಖುಷಿ ಪಡುತ್ತೇವೆ.
ಇನ್ನು ದೊಡ್ಡ ಮನೆಗಳಲ್ಲಿ ಬೆಡ್‌ರೂಂ, ಲಿವಿಂಗ್ ರೂಂ, ಡೈನಿಂಗ್ ರೂಂ ಅಂತ ಎಲ್ಲಾ ಕಡೆ ಕನ್ನಡಿ ಇರುತ್ತದೆ. ವಾಸ್ತು ಶಾಸ್ತ್ರವು ಕನ್ನಡಿಯನ್ನು ಯಾವ ದಿಕ್ಕಿನಲ್ಲಿ ಇಡಬೇಕು, ಯಾವ ದಿಕ್ಕಿನಲ್ಲಿ ಇಡಲೇಬಾರದು ಎಂದು ಹೇಳಿದೆ ನೋಡಿ:

ಬೆಡ್‌ರೂಂನಲ್ಲಿ ಕನ್ನಡಿ ಇದ್ದರೆ
ನಿಮ್ಮ ಬೆಡ್‌ರೂಂನಲ್ಲಿ ಕನ್ನಡಿ ಇದೆಯೇ? ಹೆಚ್ಚಿನ ಮನೆಗಳಲ್ಲಿ ಬೆಡ್‌ರೂಂನಲ್ಲಿ ಡ್ರೆಸ್ಸಿಂಗ್ ಮಿರರ್ ಇರುತ್ತದೆ. ಆದರೆ ವಾಸ್ತು ಶಾಸ್ತ್ರ ನಿಮ್ಮ ಮನೆಯ ಬೆಡ್‌ರೂಂಂನಲ್ಲಿ ಕನ್ನಡಿ ಇರಲೇಬಾರದು ಎಂದು ಹೇಳುತ್ತದೆ.
ಒಂದು ವೇಳೆ ಇದ್ದರೆ ರಾತ್ರಿ ಮಲಗುವ ಮುನ್ನ ಅದನ್ನು ಬಟ್ಟೆ ಹಾಕಿ ಕವರ್ ಮಾಡಿ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಇದು ನಿಮ್ಮ ನಿದ್ದೆಗೆ ಭಂಗ ತರುತ್ತದೆಯಂತೆ, ಅಲ್ಲದೆ ಗಂಡ-ಹೆಂಡತಿಯ ಸಂಬಂಧ ಚೆನ್ನಾಗಿಡಲ್ಲ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಹಾಗಾಗಿ ಬೆಡ್‌ರೂಂನಲ್ಲಿ ಕನ್ನಡಿ ಇಡದಿರುವುದೇ ಒಳ್ಳೆಯದು.
ಲಿವಿಂಗ್ ರೂಂನಲ್ಲಿ ಕನ್ನಡಿ ಇದೆಯೇ?
ವಾಸ್ತುವು ಲಿವಿಂಗ್ ರೂಂನಲ್ಲಿ ಕನ್ನಡಿ ಇದ್ದರೆ ಒಳ್ಳೆಯದು ಎಂದು ಹೇಳಲಾಗುವುದು. ಇದು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹರಡುತ್ತದೆ ಎಂದು ಹೇಳಲಾಗುವುದು. ಹಾಗಂತ ಮುಂಬಾಗಿಲಿನ ಎದುರುಗಡೆ ಕನ್ನಡಿಯನ್ನು ಇಡಬೇಡಿ. ಅದು ಕೂಡ ಮನೆಗೆ ಒಳ್ಳೆಯದಲ್ಲ. ನೀವು ಕನ್ನಡಿಯನ್ನು ಹಾಲ್‌ನ ಪೂರ್ವ ಅಥವಾ ಉತ್ತರ ಭಾಗದಲ್ಲಿಡಿ.
ಯಾವ ದಿಕ್ಕಿನಲ್ಲಿ ಕನ್ನಡಿ ಇಟ್ಟರೆ ಒಳ್ಳೆಯದು?
- ಕನ್ನಡಿಯನ್ನು ಉತ್ತರ ಅಥವಾ ಪೂರ್ವ ಭಾಗದಲ್ಲಿ ಇಟ್ಟರೆ ಒಳ್ಳೆಯದು
- ಮನೆಯ ಮುಂಬಾಗಿಲಿನ ಎದುರುಗಡೆ ಕನ್ನಡಿ ಇಡಲು ಹೋಗಬೇಡಿ, ಇದು ಮನೆಯ ಧನಾತ್ಮಕ ಶಕ್ತಿ ಕಡಿಮೆ ಮಾಡುತ್ತದೆ.
- ಇನ್ನು ಆಫೀಸ್‌ನಲ್ಲಿಯೂ ಅಷ್ಟೇ ರಿಸೆಪ್ಷನ್ ಎದುರುಗಡೆ ಕನ್ನಡ ಹಿಡಿಯಬೇಡಿ.
- ಮನೆಯಲ್ಲಿ ಉತ್ತರದಲ್ಲಿ ಕನ್ನಡಿ ಇಟ್ಟರೆ ಸಂಪತ್ತು ಆಕರ್ಷಿಸುತ್ತದೆ ಎಂದು ಹೇಳಲಾಗುವುದು
- ಮನೆಯಲ್ಲಿ ಕನ್ನಡಿ ಸ್ವಚ್ಛವಾಗಿರಬೇಕು, ಅದರ ಮೇಲೆ ಸ್ಟಿಕ್ಕರ್ ಅಂಟಿಸುವುದು ಮಾಡಬೇಡಿ. ಅದು ಶುಭ್ರವಾಗಿರಬಕು.
- ಒಡೆದ ಕನ್ನಡಿ ಇಡಬೇಡಿ, ಸ್ವಲ್ಪ ಗೆರೆ ಬಂದರೂ ಆ ಕನ್ನಡಿ ತೆಗೆಯಿರಿ.
ಆಫೀಸ್‌ನಲ್ಲಿ ಕನ್ನಡಿ ಎಲ್ಲಿರಬೇಕು?
ಆಫೀಸ್‌ನಲ್ಲಿ ಉತ್ತರ ಮತ್ತು ಪೂರ್ವದ ಕಡೆಗೆ ಕನ್ನಡಿ ಇಡಬೇಕು, ಕೆಲಸದ ಟೇಬಲ್ ಎದುರುಗಡೆ ಕನ್ನಡಿ ಇರಬಾರದು. ರಿಸೆಪ್ಷನ್‌ನಲ್ಲಿ ಕನ್ನಡಿ ಇಡಬೇಡಿ.
ಮನೆಯಲ್ಲಿ ಕನ್ನಡಿ ಇಡುವಾಗ ಈ ಅಂಶಗಳ ಕಡೆ ಗಮನಿಸಿ
- ಕನ್ನಡಿ ಒಳ್ಳೆಯ ಗುಣಮಟ್ಟದಲ್ಲಿರಬೇಕು, ಒಡೆದಿರಬಹುದು, ಕನ್ನಡಿ ಮೇಲೆ ಯಾವುದೇ ಕನ್ನಡಿ ಇರಬಾರದು. ಆದ್ದರಿಂದ ಮನೆಯಲ್ಲಿರುವ ಕನ್ನಡಿಯನ್ನು ಒರೆಸಿ ಚೆನ್ನಾಗಿಡಬೇಕು.
- ಕನ್ನಡಿಯನ್ನು ಗೋಡೆಯಲ್ಲಿ ಸರಿಯಾದ ರೀತಿಯಲ್ಲಿ ಫಿಕ್ಸ್ ಮಾಡಿರಬೇಕು. ಕನ್ನಡಿ ಸುಲಭದಲ್ಲಿ ಬಿದ್ದು ಒಡೆದು ಹೋಗುವಂತೆ ಇಡಬಾರದು, ಕನ್ನಡಿ ಬಿದ್ದು ಒಡೆದು ಹೋದರೆ ಮನೆಗೆ ಶುಭವಲ್ಲ.
ಏನು ಮಾಡಬಾರದು?
ಬೆಡ್‌ರೂಂನಲ್ಲಿ ಇಡಬೇಡಿ, ಇಟ್ಟರೂ ನೀವು ಮಲಗಿದಾಗ ನಿಮ್ಮ ಪ್ರತಿಬಿಂಬ ಬೀಳುವಂತೆ ಇಡಬಾರದು.
ಮನೆಯ ಕಿಚನ್‌ನಲ್ಲಿಯೂ ಕನ್ನಡಿ ಇಡಬೇಡಿ
ಒಂದೇ ಕೋಣೆಯಲ್ಲಿ ಹಲವು ಕನ್ನಡಿ ಇಡಬೇಡಿ, ಒಂದೇ ಕನ್ನಡಿ ಇರಲಿ. ಅದು ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ, ಒಂದೇ ಕನ್ನಡಿ ಇರಲಿ.
ಕನ್ನಡಿಯನ್ನು ಸ್ವಚ್ಛಗೊಳಿಸುವುದು ಹೇಗೆ?
ಒಂದು ಸ್ಪ್ರೇ ಬಾಟಲ್‌ಗೆ ವಿನೆಗರ್ ಮತ್ತು ನೀರನ್ನು ಸಮಪ್ರಮಾಣದಲ್ಲಿ ಹಾಕಿ, ನಂತರ ಕನ್ನಡಿಗೆ ಸ್ಪ್ರೇ ಮಾಡಿ ನಂತರ ಮೈಕ್ರೋಫೈಬರ್ ಬಟ್ಟೆಯಿಂದ ಒರೆಸಿ, ಆವಾಗ ಕನ್ನಡಿ ತುಂಬಾ ಶುಭ್ರವಾಗಿ ಕಾಣಬಹುದು.
ಸ್ವಲ್ಪ ಮದ್ಯವನ್ನು ಕಾಟನ್‌ಗೆ ಹಾಕಿ ಅದರಿಂದ ಉಜ್ಜಿ, ನಂತರ ಪೇಪರ್‌ನಿಂದ ಒರೆಸಿ.



Click it and Unblock the Notifications
