Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ನಾವು ಮನೆಯಲ್ಲಿ ಕೂರಿಸುವ ಗಣೇಶನ ಮೂರ್ತಿ ಹೇಗಿರಬೇಕು? ಯಾವ ದಿಕ್ಕಿನಲ್ಲಿ ಕೂರಿಸಬೇಕು?
ಹಿಂದೂಗಳು ಯಾವುದೇ ಪೂಜೆ, ಹೋಮ, ಹವನಗಳನ್ನು ಮಾಡಲಿ, ಅವರ ಕುಲ ದೈವ ಯಾವ ದೇವರೇ ಆಗಿರಲಿ ಮೊದಲಿಗೆ ಪೂಜೆ ಸಲ್ಲಿಸುವುದು ಶ್ರೀ ಗಣೇಶನಿಗೆ.
ಗಣೇಶನಿಗೆ ಪೂಜೆ ಮಾಡದೆ ಯಾವುದೇ ಕಾರ್ಯ ಮಾಡುವುದಿಲ್ಲ, ಏಕೆಂದರೆ ವಿಘ್ನ ನಿವಾರಕ ಎಲ್ಲಾ ಅಡೆತಡೆಗಳನ್ನು ಬಗೆಹರಿಸಿ ನಮ್ಮ ಕಾರ್ಯಗಳು ಸುಗಮವಾಗಿ ನಡೆಯಲು ಸಹಾಯ ಮಾಡುತ್ತಾನೆ ಎಂಬ ಬಲವಾದ ನಂಬಿಕೆ. ಪ್ರತಿಯೊಂದು ಹಿಂದೂಗಳ ಮನೆಯಲ್ಲಿ ಗಣೇಶ ಫೋಟೋ ಅಥವಾ ಮೂರ್ತಿ ಇದ್ದೇ ಇರುತ್ತದೆ.

ಆದರೆ ಮನೆಗೆ ಯಾವ ಬಗೆ ಗಣೇಶನ ಮೂರ್ತಿ ಅಥವಾ ಫೋಟೋ ಖರೀದಿಸಬೇಕು? ಗಣೇಶನ ದಂತನ ಯಾವ ಭಾಗದಲ್ಲಿ ಇರಬೇಕು, ಮನೆಯ ಯಾವ ದಿಕ್ಕಿನಲ್ಲಿ ಗಣೇಶನ ಮೂರ್ತಿ ಇರಬೇಕು ಎಂದೆಲ್ಲಾ ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ, ಇದರ ಬಗ್ಗೆ ನೋಡೋಣ ಬನ್ನಿ:
ಮನೆಗೆ ಯಾವ ಬಣ್ಣದ ಗಣೇಶನ ಮೂರ್ತಿ ಒಳ್ಳೆಯದು?
ನೀವು ಶ್ವೇತ ಬಣ್ಣದ ಗಣೇಶನ ಮೂರ್ತಿ ಒಳ್ಳೆಯದು, ಈ ಬಣ್ಣ ಶಾಂತಿ, ಸಮೃದ್ಧಿಯನ್ನು ಸೂಚಿಸುತ್ತದೆ. ವೃತ್ತಿ ಬದುಕಿನಲ್ಲಿ ಪ್ರಗತಿಗೆ ಕುಂಕುಮ ಬಣ್ಣದ ಗಣೇಶನ ಮೂರ್ತಿ ಒಳ್ಳೆಯದು. ಗಣೇಶನ ಮೂರ್ತಿಯ ಹಿಂಭಾಗ ಮನೆಯ ಹೊರಭಾಗಕ್ಕೆ ಕಾಣುವಂತೆ ಇರಬೇಕು, ಗಣೇಶನ ಮುಖ ನಮ್ಮ ಮನೆಯನ್ನು ನೋಡುವಂತಿರಬೇಕು. ಗಣೇಶನಿಗೆ ಕೆಂಪು ಹಾಗೂ ಹಳದಿ ಬಣ್ಣದ ವಸ್ತ್ರಗಳನ್ನು ತೊಡಿಸಿ.
ಗಣೇಶನ ಯಾವ ದಿಕ್ಕಿಗೆ ಕೂರಿಸಬೇಕು?
ವಾಸ್ತು ಶಾಸ್ತ್ರದ ಪ್ರಕಾರ ಪೂರ್ವ, ಉತ್ತರ, ಈಶಾನ್ಯ ದಿಕ್ಕಿಗೆ ಮುಖ ಮಾಡಿದಂತೆ ಮೂರ್ತಿಯನ್ನು ನೋಡಬೇಕು. ಗಣಪತಿ ಫೋಟೋವಾದರೆ ನೀವು ಉತ್ತರದ ಕಡೆ ಮುಖ ಮಾಡಿದಂತೆ ಇರಬೇಕು.
ಗಣಪತಿಯನ್ನು ಮನೆಯಲ್ಲಿ ಹೇಗೆ ಕೂರಿಸಬೇಕು?
ಮನೆಯಲ್ಲಿ ಗಣೇಶ ಮೂರ್ತಿಯನ್ನು ಎಲ್ಲಿ ಕೂರಿಸಬೆಕು?
ಮನೆಯ ಹಾಲ್‌ನಲ್ಲಿ ಕೂರಿಸಬಹದು
ದೇವರ ಕೋಣೆಯಲ್ಲಿ ಕೂರಿಸಬಹುದು
ಗಣೇಶನ ಮೂರ್ತಿ ಖರೀದಿಸುವಾಗ ಈ ಬಗ್ಗೆ ಗಮನಿಸಬೇಕು
ಗಣೇಶ ಮೂರ್ತಿಯನ್ನು ಖರೀದಿಸುವಾಗ ತುಂಬಾ ಡೊಳ್ಳು ಹೊಟ್ಟೆಯ ಹೊಟ್ಟೆಯನ್ನು ಖರೀದಿಸಬೇಕು, ಇದು ನೆಗಟಿವ್ ಶಕ್ತಿ ಆಕರ್ಷಿಸುತ್ತದೆ ಎಂದು ಹೇಳಲಾಗುವುದು.
ದೊಡ್ಡ ತಲೆ ಆಲೋಚನೆ ಶಕ್ತಿಯನ್ನು ಸೂಚಿಸುತ್ತದೆ.
ಚಿಕ್ಕ ಕಣ್ಣುಗಳು ಏಕಾಗ್ರತೆಯನ್ನು ಸೂಚಿಸುತ್ತದೆ.
ಉದ್ದದ ಸೊಂಡಿಲು ಫ್ಲೆಕ್ಸಿಬಿಲಿಟಿ ಸೂಚಿಸುತ್ತದ.
ಗಣೇಶನನ್ನು ಮನೆಯ ಹಾಲ್‌ನಲ್ಲಿ ಇರಿಸಬಹುದಾ?
ನೀವು ಗಣೇಶನನ್ನು ಮನೆಯ ಹಾಲ್‌ನಲ್ಲಿ ಇರಿಸಬಹುದು.
ಗಣೇಶನ ಮೂರ್ತಿಯನ್ನು ಕೆಲಸದ ಟೇಬಲ್ ಮೇಲೆ ಇಡಬಹುದೇ?
ಕೆಲಸದ ಟೇಬಲ್‌ನಲ್ಲಿ ಪುಟ್ಟ ಗಣಪನ ಇಟ್ಟರೆ ಕೆಲಸ ಮಾಡಲು ಶಕ್ತಿ ದೊರೆಯುತ್ತದೆ, ಕೆಲಸ ಮಾಡಲು ಹುಮ್ಮಸ್ಸು ಇರುತ್ತದೆ.
ಗಣೇಶ ಮೂರ್ತಿಯನ್ನು ಎಲ್ಲಿ ಇಡಬಾರದು?
ಗಣೇಶನ ಮೂರ್ತಿಯನ್ನು ಯಾವುದೇ ಕಾರಣಕ್ಕೆ ಬೆಡ್‌ರೂಂನಲ್ಲಿ ಇಡಬಾರದು, ಇಟ್ಟರೆ ಗಂಡ-ಹೆಂಡತಿ ನಡುವೆ ಒಡಕು ಉಂಟಾಗುತ್ತದೆ ಎಂದು ಹೇಳಲಾಗುವುದು. ಆದ್ದರಿಂದ ಬೆಡ್‌ರೂಂನಲ್ಲಿ ಗಣೇಶನ ಮೂರ್ತಿ ಇಡಬೇಡಿ.



Click it and Unblock the Notifications
