Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ವಾಸ್ತು ಪ್ರಕಾರ ಮನೆ ಮುಂದೆ ಈ ಗಿಡಗಳಿದ್ದರೆ ಸಂಪತ್ತನ್ನು ಆಕರ್ಷಿಸುವುದು
ಮನೆಯಾದರೆ ಮನೆಮುಂದೆ ಹೂವಿನ ಗಿಡಗಳಿರಬೇಕು, ಮನೆ ಮುಂದೆ ಹಸಿರಾಗಿದ್ದರೆ ಮನೆಗೆ ಶುಭ ಎಂದು ಹೇಳಲಾಗುವುದು. ವಾಸ್ತು ಶಾಸ್ತ್ರದಲ್ಲಿ ಮನೆ ಮುಂದೆ ಗಿಡ ನೆಡುವುದಕ್ಕೆ ತುಂಬಾನೇ ಮಹತ್ವ ನೀಡಲಾಗಿದೆ. ಮನೆಯಾದರೆ ಮನೆ ಮುಂದೆ ಮನೆಗೆ ಶುಭ ತರುವ ಗಿಡಗಳಿರಬೇಕು ಎಂದು ಹೇಳಲಾಗುವುದು. ವಾಸ್ತು ಶಾಸ್ತ್ರದಲ್ಲಿ ಮನೆಗೆ ಯಾವ ಗಿಡಗಳು ಶುಭ ಎಂದು ಹೇಳಲಾಗಿದೆ. ಮನೆಯಲ್ಲಿ ಯಾವೆಲ್ಲಾ ಗಿಡಗಳಿದ್ದರೆ ಶುಭವೆಂದು ನೋಡುವುದಾದರೆ...

ತುಳಸಿ
ಮನೆಯಲ್ಲಿ ತುಳಸಿ ಗಿಡವಿರಬೇಕು, ಅದರಲ್ಲೂ ಮನೆ ಮುಂದುಗಡೆ ತುಳಸಿ ಗಿಡವಿದ್ದು ಅದಕ್ಕೆ ಪ್ರತಿನಿತ್ಯ ನೀರು ಹಾಕಿ ಆರೈಕೆ ಮಾಡಿದರೆ ಶುಭವೆಂದು ಪರಿಗಣಿಸಲಾಗಿದೆ. ತುಳಸಿ ಅದ್ಭುತ ಗಿಡಮೂಲಿಕೆಯಾಗಿದ್ದು ಮನೆಯಲ್ಲಿ ಒಂದು ತುಳಸಿ ಗಿಡವಿದ್ದರೆ ಪೂಜೆಗೆ ಮಾತ್ರವಲ್ಲ ಮನೆಮದ್ದಾಗಿ ಹಲವು ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ.
ಜಡೆ ಗಿಡ
ವಾಸ್ತು ಶಾಸ್ತ್ರದಲ್ಲಿ ಜಡೆಗಿಡವಿದ್ದರೆ ಒಳ್ಳೆಯದು ಎಂದು ಹೇಳಲಾಗಿದೆ. ಫೆಂಗ್‌ಶುಯಿ ಶಾಸ್ತ್ರದಲ್ಲೂ ಮನೆಮುಂದೆ ಜಡೆಗಿಡವಿದ್ದರೆ ಒಳ್ಳೆಯದು ಎಂದು ಹೇಳಲಾಗಿದೆ.
ಬಿದಿರು
ಮನೆ ಮುಂದೆ ಬಿದಿರು (Dracaena Sanderiana) ಗಿಡವಿದ್ದರೆ ಕೂಡ ಶುಭವೆಂದು ಪರಿಗಣಿಸಲಾಗಿದೆ. ಇದರ 5 ಕೊಂಬು ಅಥವಾ 6, 7, ಕೊಂಬು (ಕೋಂಬು) ಇದ್ದರೆ ಒಳ್ಳೆಯದು ಎಂದು ಹೇಳಕಾಗುವುದು. ಉತ್ತಮ ಆರೋಗ್ಯಕ್ಕಾಗಿ 21 ಕೊಂಬುಗಳಿರಲಿ. ಇದು ಪರಿಸರದ ಗಾಳಿಯನ್ನು ಶುದ್ಧ ಮಾಡುವ ಕಾರ್ಯ ಮಾಡುವುದರಿಂದ ಮನೆಗೆ ತುಂಬಾನೇ ಒಳ್ಳೆಯದು. ಇದನ್ನು ಪೂರ್ವ ಭಾಗದಲ್ಲಿ ನೆಟ್ಟರೆ ಒಳ್ಳೆಯದು.
ಮನಿ ಪ್ಲ್ಯಾಂಟ್
ಮನಿ ಪ್ಲ್ಯಾಂಟ್ ಕೂಡ ಶುಭ ತರುವ ಗಿಡವಾಗಿದ್ದು ಇದನ್ನು ನೀವು ಮನೆಯ ಮುಂದುಗಡೆ, ಮನೆಯೊಳಗಡೆ, ಟೇಬಲ್ ಮೇಲೆ ಎಲ್ಲಿ ಬೇಕಾದರೂ ಇಡಬಹುದು.
ರಬ್ಬರ್ ಗಿಡ
ರಬ್ಬರ್ ಗಿಡ ಅದೃಷ್ಟವನ್ನು ತರುತ್ತದೆ ಎಂದು ಫೆಂಗ್‌ಶುಯಿ ಶಾಸ್ತ್ರದಲ್ಲಿ ಹೇಳಲಾಗಿದೆ. ಈ ಗಿಡ ಮನೆಯೊಳಗಡೆ ಇಟ್ಟರೆ ಮನೆಯೊಳಗಡೆಯ ಗಾಳಿಯನ್ನು ಶುದ್ಧೀಕರಿಸುವುದು.
ನೀಲಗಿರಿ ಗಿಡ
ನೀಲಗಿರಿ ಗಿಡ ಮನೆ ಮುಂದೆ ಇದ್ದರೆ ಒಳ್ಳೆಯದು ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಇದು ಮನೆ ಮುಂದುಗಡೆ ಇದ್ದರೆ ಧನಾತ್ಮಕ ಶಕ್ತಿಯನ್ನು ಆಕರ್ಷಿಸುವುದು ಎಂದು ಹೇಳಲಾಗುವುದು.
ಸ್ನ್ಯೇಕ್ ಗಿಡ
ಇದು ಕೂಡ ಅದೃಷ್ಟದ ಗಿಡವಾಗಿದೆ. ಈ ಶುಭ ಗಿಡ ಗಾಳಿಯನ್ನು ಶುದ್ಧೀಕರಿಸುತ್ತದೆ. ಈ ಗಿಡ ಯಾವುದೇ ರೀತಿಯ ವಾತಾವರಣದಲ್ಲೂ ಚೆನ್ನಾಗಿ ಬೆಳೆಯುತ್ತದೆ.
ಗೋಲ್ಡನ್ ಪೋಥೋಸ್
ಈ ಗಿಡ ಕೂಡ ಮನೆಯಲ್ಲಿದ್ದರೆ ಮನೆಗೆ ಅದೃಷ್ಟ ಎಂದು ಪರಿಗಣಿಸಲಾಗಿದೆ. ಈ ಗಿಡವನ್ನು ಇನ್‌ಡೋರ್ ಅಥವಾ ಔಟ್‌ಡೋರ್ ಆಗಿ ಬಳಸಬಹುದು. ಇದನ್ನು ಬಾತ್‌ರೂಂನಲ್ಲಿಯೂ ಇಡಬಹುದು. ಈ ಗಿಡ ಗಾಳಿಯನ್ನು ಶುದ್ಧೀಕರಿಸುತ್ತದೆ.
ಬೋನ್ಸಾಯಿ ಅರಳಿ ಮರ
ನೀವು ಬೋನ್ಸಾಯಿ ಅರಳಿ ಮರವನ್ನು ಮನೆ ಮುಂದೆ ಬೆಳೆಸಬಹುದು. ಅರಳಿ ಮರ ಆಮ್ಲಜನಕವನ್ನು ತುಂಬಾ ನೀಡುತ್ತದೆ. ಚಿಕ್ಕ ಗಿಡ ಮನೆ ಮುಂದುಗಡೆ ಇದ್ದರೆ ಗಾಳಿ ಶುದ್ಧವಾಗಿರುತ್ತದೆ.
ನಿಂಬೆಹಣ್ಣಿನ ಗಿಡ
ನಿಂಬೆಹಣ್ಣಿನ ಗಿಡ ಮನೆಮುಂದೆ ಇದ್ದರೆ ಅದೃಷ್ಟ ಎಂದು ಪರಿಗಣಿಸಲಾಗಿದೆ. ಇದನ್ನು ಮನೆಯ ಮುಂದಿಗಡೆ ಅಥವಾ ಗೇಟಿನ ಬಳಿ ಇಡಿ.
ಈ ಹೂವಿನ ಗಿಡಗಳು ಮನೆಯಲ್ಲಿರಲಿ
* ಲಿಲ್ಲಿ
* ಮಲ್ಲಿಗೆ
* ತಾವರೆ
* ಮಲ್ಲಿಗೆ ಹೂ
* ದಾಸವಾಳ
* ಗುಲಾಬಿ
* ನಿತ್ಯ ಪುಷ್ಪ
ಈ ಗಿಡ ಮೂಲಿಕೆಗಳು ಮನೆಯಲ್ಲಿರಲಿ
* ಪುದೀನಾ
* ಸೇಜ್
* ಅಜ್ವೈನ್
* ಶುಂಠಿ
* ಥೈಮ್
* ನಿಂಬೆಹಣ್ಣಿನಗಿಡ
* ಕಹಿಬೇವು
* ಬಾಳೆಗಿಡ
* ತೆಂಗಿನ ಮರ
* ಅಶ್ವಥ ಮರ
* ಹಲಸಿನ ಮರ
* ನೆಲ್ಲಿಕಾಯಿ ಮರ
ಅದೃಷ್ಟದ ಗಿಡಗಳನ್ನು ಮನೆಯಲ್ಲಿ ಇರುವುದರಿಂದ ದೊರೆಯುವ ಪ್ರಯೋಜನಗಳು
* ಋಣಾತ್ಮಕ ಶಕ್ತಿ ಹೋಗಲಾಡಿಸುತ್ತೆ, ಧನಾತ್ಮಕ ಶಕ್ತಿ ಆಕರ್ಷಿಸುತ್ತದೆ
* ದೇಹದಲ್ಲಿ ನವ ಚೈತನ್ಯ ತುಂಬುವುದು, ಆ ಗಿಡಗಳನ್ನು ನೋಡಿದಾಗ ಮಾನಸಿಕ ಒತ್ತಡ ಕಡಿಮೆಯಾಗುವುದು
* ಶುದ್ಧ ಗಾಳಿ ಸಿಗುವುದರಿಂದ ಮನೆಮಂದಿಯ ಆರೋಗ್ಯ ಚೆನ್ನಾಗಿರುತ್ತದೆ.
* ಆರ್ಥಿಕ ಸ್ಥಿತಿ ಉತ್ತಮವಾಗುವುದು.



Click it and Unblock the Notifications
