Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಫ್ಲ್ಯಾಟ್‌ನಲ್ಲಿ ವಾಸಿಸಲು ಹೋಗುವಾಗ ಸಮೃದ್ಧಿ, ಆರೋಗ್ಯಕ್ಕಾಗಿ ವಾಸ್ತು ಹೀಗಿದೆಯೇ ಎಂದು ನೋಡಬೇಕು
ಮನೆ ಕಟ್ಟುವಾಗ ಹೆಚ್ಚಿನವರು ವಾಸ್ತು ಪ್ರಕಾರ ಕಟ್ಟುತ್ತಾರೆ, ಆದರೆ ಎಲ್ಲಾ ಫ್ಲ್ಯಾಟ್‌ಗಳನ್ನು ವಾಸ್ತ ಪ್ರಕಾರ ಕಟ್ಟಿರುವುದಿಲ್ಲ, ಕೆಲವೊಂದು ಪ್ಲ್ಯಾಟ್‌ಗಳು ವಾಸ್ತು ಪ್ರಕಾರ ಇರುತ್ತದೆ, ಇನ್ನು ಕೆಲವು ಫ್ಲ್ಯಾಟ್ ವಾಸ್ತು ಪ್ರಕಾರ ಇರಲ್ಲ.
ವಾಸ್ತು ಶಾಸ್ತ್ರವು ವಾಸ್ತು ಪ್ರಕಾರ ನಾವು ವಾಸಿಸುವ ಸ್ಥಳ ಇಲ್ಲದಿದ್ದರೆ ನಮ್ಮ ಪ್ರಗತಿಗೆ ಹಾಗೂ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಲಾಗುವುದು. ನಾವು ಸ್ವಂತಕ್ಕೆ ಖರೀದಿಸುವುದಾಗಲಿ, ಬಾಡಿಗೆಗೆ ವಾಸಿಸುವುದಾಗಲಿ ವಾಸ್ತು ಪ್ರಕಾರ ಇರುವ ಮನೆಯಾದರೆ ಒಳ್ಳೆಯದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ವಾಸ್ತು ಪ್ರಕಾರ ಫ್ಲ್ಯಾಟ್ ಹೇಗಿರಬೇಕು?
ಪ್ರವೇಶ ದ್ವಾರ
ಫ್ಲಾಟ್‌ನ ಪ್ರವೇಶ ದ್ವಾರ ಪೂರ್ವ ಮತ್ತು ಈಶಾನ್ಯ ದಿಕ್ಕಿನಲ್ಲಿರಬೇಕು, ಪ್ರವೇಶ ದ್ವಾರ ಈ ಭಾಗದಲ್ಲಿ ಇರುವುದರಿಂದ ಧನಾತ್ಮಕ ಶಕ್ತಿ, ಶಾಂತಿ, ಅದೃಷ್ಟ ಹೆಚ್ಚಿಸುವುದು. ಹೀಗಾಗಿ ಎಲ್ಲರೂ ಮನೆಯ ಪ್ರವೇಶ ದ್ವಾರ ಈ ದಿಕ್ಕಿನಲ್ಲಿ ಇರಬೇಕೆಂದು ಬಯಸುತ್ತಾರೆ.
ಸೂರ್ಯನ ಬೆಳಕು
ಫ್ಲ್ಯಾಟ್ ಕತ್ತಲು ಕತ್ತಲಾಗಿರಬಹುದು, ಸೂರ್ಯನ ಬೆಳಕು ಸಕಾರಾತ್ಮಕತೆಯ ಮೂಲವೆಂದು ಪರಿಗಣಿಸಲಾಗಿರುವುದರಿಂದ ಸೂರ್ಯ ಕಿರಣಗಳು ಫ್ಲ್ಯಾಟ್‌ನೊಳಗೆ ಸೂರ್ಯನ ಬೆಳಕು ಚೆನ್ನಾಗಿ ಬಿದ್ದರೆ ಆರೋಗ್ಯ ಮತ್ತು ಮಾನಸಿಕ ಶಾಂತಿಗೆ ಸಹ ಪ್ರಯೋಜನಕಾರಿಯಾಗಿದೆ. ಫ್ಲ್ಯಾಟ್‌ನೊಳಗಡೆ ಸೂರ್ಯನ ಬೆಳಕು ಸರಿಯಾಗಿ ಬೀಳದೆ ಕತ್ತಲು ತುಂಬಿದರೆ ಅದು ಧನಾತ್ಮಕ ಶಕ್ತಿ ಬೀರುವುದಿಲ್ಲ, ಆದ್ದರಿಂದ ಈ ಬಗ್ಗೆ ಜಾಗ್ರತೆವಹಿಸಿ.
ಅಡುಗೆ ಕೋಣೆ
ಯಾವುದೇ ಮನೆಯಾಗಿರಲಿದೆ ಅಡುಗೆ ಕೋಣೆ ಯಾವಾಗಲೂ ಅವಿಭಾಜ್ಯ ಅಂಗವಾಗಿದೆ. ಫ್ಲಾಟ್‌ಗಳಿಗೆ ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಫ್ಲಾಟ್‌ನ ಆಗ್ನೇಯ ಮೂಲೆಯು ಸಾಮಾನ್ಯವಾಗಿ ಅಡುಗೆಮನೆಗೆ ಉತ್ತಮವಾಗಿದೆ. ಗ್ಯಾಸ್ ಅಥವಾ ಒಲೆ ಇಡಲು ಆಗ್ನೇಯ ದಿಕ್ಕನ್ನು ಆಯ್ಕೆ ಮಾಡಿಕೊಳ್ಳಿ. ಇತರ ಯಾವಯದೇ ಭಾಗದಲ್ಲಿ ಇಡಬೇಡಿ.
ಮಲಗುವ ಕೋಣೆ
ಫ್ಲಾಟ್‌ಗಳಿಗೆ ವಾಸ್ತು ಪ್ರಕಾರ, ಪೂರ್ವ ಮತ್ತು ಆಗ್ನೇಯ ದಿಕ್ಕಿನಲ್ಲಿ ಮಲಗುವ ಕೋಣೆಗಳ ಉಪಸ್ಥಿತಿಯು ಆತಂಕ ಮತ್ತು ಸಂಘರ್ಷಗಳಿಗೆ ಕಾರಣವಾಗಬಹುದು. ಆದ್ದರಿಂದ ಮಲಗುವ ಕೋಣೆ ಆ ದಿಕ್ಕಿನಲ್ಲಿ ಇರಬಾರದು. ಒಂದು ವೇಳೆ ಇದ್ದರೆ ಅಲ್ಲಿ ದಂಪತಿ ಮಲಗಬಾರದು, ಅವರ ನಡುವೆ ಕಲಹ ಹೆಚ್ಚಿಸುತ್ತದೆ.
ಶೌಚಾಲಯ
ವಾಸ್ತು ಶಾಸ್ತ್ರದ ಪ್ರಕಾರ, ಉತ್ತರ ಮತ್ತು ಈಶಾನ್ಯ ದಿಕ್ಕುಗಳ ನಡುವೆ ಸ್ನಾನಗೃಹದ ಉಪಸ್ಥಿತಿಯು ಒಳ್ಳೆಯದಲ್ಲ ಅಲ್ಲದೆ ವಾಸ್ತು ಶಾಸ್ತ್ರದ ಪ್ರಕಾರ, ಪ್ರತಿ ಮಹಡಿಗೆ ಸಮಾನ ಸಂಖ್ಯೆಯ ಬಾಗಿಲು ಮತ್ತು ಕಿಟಕಿಗಳನ್ನು ಹೊಂದಿರಬೇಕು.
ದೇವರ ಕೋಣೆ
ಟಾಯ್ಲೆಟ್, ಬಾತ್‌ತೂಂಗೆ ಅಟ್ಯಾಚ್ ಆಗಿರುವಂತೆ ದೇವರ ಫೋಟೋಗಳನ್ನು ಇಡಬಾರದು, ಫ್ಲ್ಯಾಟ್‌ನಲ್ಲಿ ಈ ಬಗ್ಗೆ ಕೂಡ ಜಾಗ್ರತೆವಹಿಸಬೇಕು.
ಸಾಮಾನ್ಯ ಗೋಡೆಗಳೊಂದಿಗೆ ಅಪಾರ್ಟ್ಮೆಂಟ್
ಸಾಮಾನ್ಯವಾಗಿ ಅಪಾರ್ಟ್ಮೆಂಟ್ ನಡುವೆ ಸಾಮಾನ್ಯ ಗೋಡೆ ಇರುತ್ತದೆ, ಆದರೆ ವಾಸ್ತು ಪ್ರಕಾರ ಅದು ಒಳ್ಳೆಯದಲ್ಲ,ಆ ಮನೆಯ ವಾಸ್ತು ಸರಿಯಿಲ್ಲದಿದ್ದರೆ ಅದರ ಪ್ರಭಾವ ನಿಮ್ಮ ಮನೆಯ ಮೇಲೂ ಇರಲಿದೆ, ಆದ್ದರಿಂದ ಗೋಡೆ ಅಟ್ಯಾಚ್ ಆದಾಗ ಅದರ ವಾಸ್ತು ಹೇಗಿದೆ ಅಂತ ತಿಳಿಯಿರಿ.
ಈ ಬಗೆಯೂ ಗಮನಹರಿಸಬೇಕು
- ಅಪಾರ್ಟ್‌ರ್ಮೆಂಟ್ ಖರೀದಿಸುವಾಗ ಅದು ಯಾವುದೋ ಶೇಪ್‌ನಲ್ಲಿ ಇರಬಾರದು, ಚೌಕಾಕಾರ ಅಥವಾ ಆಯಾತಾಕಾರದ ಶೇಪ್‌ನಲ್ಲಿರಬೇಕು. ತ್ರಿಭುಜಾಕಾರ ಒಳ್ಳೆಯದಲ್ಲ.
- ಅಪಾರ್ಟ್‌ಮೆಂಟ್‌ನ ದಕ್ಷಿಣ ಅಥವಾ ಪೂರ್ವದಲ್ಲಿ ನೀರಿನಂಶ ಅಂದರೆ ಸ್ವಿಮ್ಮಿಂಗ್ ಪೂಲ್ ವಾಟರ್ ಟ್ಯಾಂಕ್ ಇರುವುದು ಒಳ್ಳೆಯದಲ್ಲ,
- ಮನೆಯ ಕಿಚನ್ ಪ್ರಮುಖ ದ್ವಾರಕ್ಕೆ ಮುಖ ಮಾಡಿದಂತೆ ಇರಬಾರದು
- ಪೂರ್ವ ಹಾಗೂ ಈಶಾನ್ಯ ಭಾಗದಲ್ಲಿ ಓಪನ್ ಸ್ಪೇಸ್ ಇರಬೇಕು. ಅದರೊಳಗಡೆ ಗಾಳಿ ಬೆಲಕು ಚೆನ್ನಾಗಿ ಬರುವಂತೆ ಇರಬೇಕು.
- ಈ ರೀತಿ ವಾಸ್ತು ಪ್ರಕಾರ ಫ್ಲ್ಯಾಟ್ ನೋಡಿದರೆ ಆ ಮನೆಯಲ್ಲಿ ವಾಸಿಸಿದರೆ ಮನೆಯವರ ಆರೋಗ್ಯ ಚೆನ್ನಾಗಿರುತ್ತದೆ, ಸಮೃದ್ಧಿ ಹೆಚ್ಚಾಗುವುದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.



Click it and Unblock the Notifications
