Latest Updates
-
ಎನ್ಆರ್ಐಗಳೇ ಎಚ್ಚರ! ವಿದೇಶಿ ವಿಚ್ಛೇದನ ಭಾರತದಲ್ಲಿ ಸಿಂಧುವಲ್ಲ: ದ್ವಿವಿವಾಹದ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ? -
ದೀಪಾವಳಿ ಸಿಹಿ ಕೊಳ್ಳುವ ಮುನ್ನ ಎಚ್ಚರ! ಕಲಬರಕೆ ಪತ್ತೆ ಹಚ್ಚುವುದು ಹೇಗೆ? -
IND vs NZ 1st ODI: ಈಡನ್ ಪಾರ್ಕ್ನಲ್ಲಿ ಸಿಕ್ಸರ್ಗಳ ಸುರಿಮಳೆ, ಫ್ಯಾಂಟಸಿ ಟೀಮ್ಗೆ ಯಾರನ್ನು ಆರಿಸಬೇಕು? -
ದೆಹಲಿ-ಎನ್ಸಿಆರ್ನಲ್ಲಿ ತೀವ್ರ ವಾಯು ಮಾಲಿನ್ಯ: ನಿಮ್ಮ ಶ್ವಾಸಕೋಶವನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ತ್ವರಿತ ಗೈಡ್ -
ದೆಹಲಿ ಮಾಲಿನ್ಯದ ಹೊಡೆತ: ಶ್ವಾಸಕೋಶದ ಆರೋಗ್ಯ ಕಾಪಾಡಲು ಇಂದೇ ನಿಮ್ಮ ಆಹಾರದಲ್ಲಿ ಈ ಬದಲಾವಣೆ ಮಾಡಿ! -
ಧನ್ತೇರಸ್ ಶಾಪಿಂಗ್: ಬಂಗಾರ ಖರೀದಿಸುವ ಮುನ್ನ ಈ 5 ವಿಷಯ ಮರೆಯದಿರಿ, ಇಲ್ಲವಾದರೆ ಮೋಸ ಹೋಗ್ತೀರಾ! -
ಮುರಸು ಚಂಡಮಾರುತದ ಅಬ್ಬರ: ಮಳೆಯಲ್ಲಿ ವರ್ಕೌಟ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ದಂಪತಿಗಳ ಜಗಳ ತಪ್ಪಿಸಲು ಈ 7 ಮೈಕ್ರೋ-ಅಭ್ಯಾಸಗಳು ಮರೆಯದಿರಿ! -
ಮೊಟ್ಟೆ ಬೆಲೆ ಏರಿಕೆ: ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಆಹಾರಗಳೇ ಬೆಸ್ಟ್! -
ಮುರಾಸು ಚಂಡಮಾರುತದ ಎಚ್ಚರಿಕೆ: ಚೆನ್ನೈ, ತಿರುವಳ್ಳೂರಿನಲ್ಲಿ ಶಾಲೆಗಳಿಗೆ ರಜೆ, ಪೋಷಕರು ಮತ್ತು ಪ್ರಯಾಣಿಕರು ತಿಳಿಯಲೇಬೇಕಾದ ವಿಷಯಗಳು
ಅಡುಗೆ ಕೋಣೆಯ ವಾಸ್ತು ಹೀಗಿದ್ದರೆ ಆ ಮನೆಯಲ್ಲಿ ಸಂಪತ್ತು ತುಂಬಿರುತ್ತದೆ
ಮನೆಯ ಮನೆಯ ಬೆಡ್ರೂಂ, ದೇವರ ಕೋಣೆ, ಅಡುಗೆ ಕೋಣೆ ಹೀಗೆ ಪ್ರತಿಯೊಂದು ಕೋಣೆಗೂ ವಾಸ್ತು ಸಲಹೆಗಳಿವೆ. ಅಡುಗೆ ಕೋಣೆ ಮನೆಯ ಪ್ರಮುಖವಾದ ಸ್ಥಳ.
ಜ್ಯೋತಿಷ್ಯ ಮತ್ತು ವಾಸ್ತುಶಾಸ್ತ್ರದ ಪ್ರಕಾರ, ಅಡುಗೆಮನೆಯು ಮಂಗಳ ಮತ್ತು ಶುಕ್ರ ಗ್ರಹಗಳಿಂದ ಹೆಚ್ಚು ಪ್ರಭಾವಿತವಾಗಿರುತ್ತದೆ, ಅಡುಗೆ ಮನೆಯು ಕುಟುಂಬದ ಸಂಪತ್ತಿನ ಸಂಕೇತವಾಗಿದೆ. ಈ ಅಡುಗೆ ಮನೆಗೆ ವಾಸ್ತು ಟಿಪ್ಸ್ ನೀಡಲಾಗಿದೆ ನೋಡಿ:

ಅಡುಗೆ ಮನೆ ಯಾವ ದಿಕ್ಕಿನಲ್ಲಿ ಇರಬೇಕು?
ವಾಸ್ತು ಶಾಸ್ತ್ರದ ಪ್ರಕಾರ ಪೂರ್ವದಿಂದ ದಕ್ಷಿಣಕ್ಕೆ ಮಧ್ಯಮ ಪ್ರದೇಶದಲ್ಲಿ ಅಡುಗೆಮನೆಯಿದ್ದರೆ ಒಳ್ಳೆಯದು ಎಂದು ಹೇಳಲಾಗುವುದು. ಅಡುಗೆ ಮನೆಗೆ ಸೂರ್ಯನ ಬೆಳಕು ಚೆನ್ನಾಗಿ ಬೀಳುವಂತಿರಬೇಕು. ಅಡುಗೆಮನೆಯಲ್ಲಿ ಪೂರ್ವಕ್ಕೆ ಎದುರಾಗಿ ನಿಂತು ಅಡುಗೆ ಮಾಡುವುದು ಒಳ್ಳೆಯದು ಎಂದು ಹೇಳಲಾಗುವುದು.
ಸಿಂಕ್ ವ್ಯವಸ್ಥೆ ಇರಬೇಕು?
- ಉತ್ತರ ಮತ್ತು ಈಶಾನ್ಯವು ನೀರಿನ ಪ್ರಾಬಲ್ಯವಿರುವ ದಿಕ್ಕುಗಳಾಗಿವೆ. ತರಕಾರಿಗಳು ಮತ್ತು ಪಾತ್ರೆಗಳನ್ನು ಸ್ವಚ್ಛಗೊಳಿಸಲು, ಸಿಂಕ್ ಅನ್ನು ಅಡುಗೆಮನೆಯ ಉತ್ತರ ದಿಕ್ಕಿನಲ್ಲಿ ಇಡಬೇಕು ಮತ್ತು ಕುಡಿಯುವ ನೀರನ್ನು ಈಶಾನ್ಯದಲ್ಲಿ ಇಡಬೇಕು.
- ಈಶಾನ್ಯ ದಿಕ್ಕಿನಲ್ಲಿ ಇಟ್ಟಿರುವ ನೀರು ಜೀರ್ಣಕ್ರಿಯೆಗೆ ಉತ್ತಮವೆಂದು ಹೇಳಲಾಗುವುದು.
- ಆದಷ್ಟೂ ಅಡುಗೆ ಮನೆಯ ಈಶಾನ್ಯ ಮೂಲೆಯಲ್ಲಿ ಕುಡಿಯುವ ನೀರಿನ ಪಿಚ್ಚರ್, ಆರ್ಒ ಇತ್ಯಾದಿ ವ್ಯವಸ್ಥೆ ಮಾಡಿ. ಅಡುಗೆಮನೆಯ ಪೂರ್ವ ಗೋಡೆಯ ಉದ್ದಕ್ಕೂ ಒಲೆ, ಓವನ್ ಅಥವಾ ಸ್ಟೌವ್ ಇದ್ದರೆ ಒಳ್ಳೆಯದು.
- ಮನೆಯ ಮುಖ್ಯ ಬಾಗಿಲು ಎದುರಾಗಿ ಅಡುಗೆಮನೆಯ ಪ್ರವೇಶದ್ವಾರ ಇರಬಾರದು. ಕಿಟಕಿ, ಶೌಚಾಲಯದ ಸ್ಥಳ, ಮಲಗುವ ಕೋಣೆಯ ಬಾಗಿಲು, ಹಾಸಿಗೆ ಅಥವಾ ಮೆಟ್ಟಿಲುಗಳು ಇತ್ಯಾದಿಗಳು ಒಲೆಯ ಭಾಗದಲ್ಲಿ ಬರಬಾರದು.
- ಅಡುಗೆಮನೆಯಲ್ಲಿ ಸಾಕಷ್ಟು ಆಹಾರ ಪದಾರ್ಥಗಳು ಇರಬೇಕು. ಇದು ಮನೆಯಲ್ಲಿ ಸಮೃದ್ಧಿ ಮತ್ತು ಸಂತೋಷ ಹೆಚ್ಚಿಸುತ್ತದೆ. ಇನ್ನು ನೀವು ಆಹಾರ ಪದಾರ್ಥಗಳನ್ನು ಇಡಲು ದಕ್ಷಿಣ ಮತ್ತು ಪಶ್ಚಿಮ ಗೋಡೆಯ ಉದ್ದಕ್ಕೂ ಕಬೋರ್ಡ್ ಇಡುವುದು ಒಳ್ಳೆಯದು.
- ಧಾನ್ಯಗಳು, ತುಪ್ಪ, ಎಣ್ಣೆ, ಸಾಂಬಾರ ಪದಾರ್ಥಗಳು, ಸಕ್ಕರೆ, ಬೇಳೆಕಾಳುಗಳು, ಅಕ್ಕಿ ಮುಂತಾದ ದೈನಂದಿನ ಬಳಕೆಯ ವಸ್ತುಗಳನ್ನು ಈ ಕಪಾಟಿನಲ್ಲಿ ಇಡಬೇಕು. ಸಾಧ್ಯವಾದಷ್ಟು ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸಬೇಡಿ. ಲೋಹ ಅಥವಾ ಗಾಜಿನ ಪಾತ್ರೆಗಳನ್ನು ಆಹಾರ ಪದಾರ್ಥಗಳನ್ನು ಸಂಗ್ರಹಿಸಲು ಉತ್ತಮವೆಂದು ಪರಿಗಣಿಸಲಾಗುವುದು.
- ಫ್ರಿಡ್ಜ್ ಅಡುಗೆಮನೆಯ ಉತ್ತರ ಮತ್ತು ಪಶ್ಚಿಮ ಗೋಡೆಯ ಉದ್ದಕ್ಕೂ ಇಡಬೇಕು. ನೀವು ರೆಫ್ರಿಜರೇಟರ್ ಅನ್ನು ಬಳಸದಿದ್ದರೆ ಹಾಲು, ಹಣ್ಣುಗಳು, ತರಕಾರಿಗಳು ಇತ್ಯಾದಿಗಳನ್ನು ಉತ್ತರ ಮತ್ತು ಈಶಾನ್ಯದ ನಡುವೆ ಇರಿಸಿ. ಈ ದಿಕ್ಕಿನಲ್ಲಿ, ಆಹಾರ ಪದಾರ್ಥಗಳನ್ನು ಗರಿಷ್ಠ ಸಮಯದವರೆಗೆ ಸಂರಕ್ಷಿಸುವ ನೈಸರ್ಗಿಕ ಸಾಮರ್ಥ್ಯವಿದೆ.
- ಅಡುಗೆಮನೆಯ ಒಳಾಂಗಣ ಅಲಂಕಾರವು ತೆಳು ಬಣ್ಣದಲ್ಲಿ ಇರಬೇಕು. ಆದಷ್ಟು ಅಡುಗೆ ಮನೆಯಲ್ಲಿ ಕಪ್ಪು ಬಣ್ಣದ ಕಲ್ಲು ಅಥವಾ ಟೈಲ್ಸ್ ಬಳಸಬಾರದು. ಸೌಮ್ಯವಾದ, ಆಹ್ಲಾದಕರ ಮತ್ತು ಪೌಷ್ಟಿಕ ಬಣ್ಣಗಳ ಬಳಕೆ ಯಾವಾಗಲೂ ಅಡುಗೆಮನೆಗೆ ಒಳ್ಳೆಯದು.
ಅಡುಗೆಮನೆ ಯಾವಾಗಲೂ ಸ್ವಚ್ಛ ಮತ್ತು ಶುದ್ಧವಾಗಿ ಇಡಬೇಕು. ಅಡುಗೆ ಮನೆಯನ್ನು ಸ್ವಚ್ಛವಾಗಿ ಇಡುವುದರಿಂದ ಲಕ್ಷ್ಮಿಯನ್ನು ಆಕರ್ಷಿಸುತ್ತದೆ ಎಂಬ ನಂಬಿಕೆ, ಆರೋಗ್ಯದ ದೃಷ್ಟಿಯಿಂದಲೂ ಅಡುಗೆ ಮನೆ ಸ್ವಚ್ಛವಾಗಿದ್ದರೆ ಒಳ್ಳೆಯದು.
ಇನ್ನುಅಡುಗೆ ಮನೆ ನಾವು ಅಡುಗೆ ಮಾಡುವಂಥ ಸ್ಥಳ, ಅದು ಶುದ್ಧವಾಗಿದ್ದರೆ ಮನಸ್ಸು ಖುಷಿಯಾಗಿರುತ್ತದೆ, ಖಲೀಜಾಗಿರುವ ಅಡುಗೆ ಮನೆಯಲ್ಲಿ ಅಡುಗೆ ಮಾಡಿದರೆ ತಿನ್ನಬೇಕೆನಿಸುವುದಿಲ್ಲ ಅಲ್ವಾ? ಇನ್ನು ಅಡುಗೆ ಮನೆಯಲ್ಲಿ ಲೈಟ್ ವ್ಯವಸ್ಥೆ ಚೆನ್ನಾಗಿರಬೇಕು, ಇದು ನಂಬಿಕೆ ಮಾತ್ರವಲ್ಲ ವೈಜ್ಞಾನಿಕ ದೃಷ್ಟಿಯಿಂದಲೂ ಒಳ್ಳೆಯದು, ಲೈಟ್ ಚೆನ್ನಾಗಿದ್ದರೆ ಅಡುಗೆಯಲ್ಲಿ ಏನಾದರೂ ಬಿದ್ದರೂ ಕಾಣುತ್ತೆ.



Click it and Unblock the Notifications
