Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ವರಮಹಾಲಕ್ಷ್ಮಿ ವ್ರತ: ತಾಮ್ರ, ಹಿತ್ತಾಳೆ, ಬೆಳ್ಳಿ ಸಾಮಗ್ರಿ ಈ ವಸ್ತುಗಳನ್ನು ಬಳಸಿದರೆ ಸುಲಭವಾಗಿ ಶುಚಿಗೊಳಿಸಬಹುದು
ಸ್ವಾತಂತ್ರ್ಯ ದಿನಾಚರಣೆಯ ಮಾರನೆಯ ದಿನವೇ ವರಮಹಾಲಕ್ಷ್ಮಿ ವ್ರತ.... ಹೀಗಾಗಿ ಈ ವೀಕೆಂಡ್ ತುಂಬಾನೇ ಸಡಗರ ಸಂಭ್ರಮದಿಂದ ಕೂಡಿದೆ.
ವರಮಹಾಲಕ್ಷ್ಮಿ ಹಬ್ಬ ಬಂತೆಂದರೆ ಮನೆಯಲ್ಲಿ ಸ್ವಚ್ಛತೆ ಕಾರ್ಯ ಭರದಿಂದ ಸಾಗುವುದು. ಇಡೀ ಮನೆಯನ್ನು ಸ್ವಚ್ಛಗೊಳಿಸಲಾಗುವುದು. ಅದರಲ್ಲಿಯೂ ಪುಜಾ ಸಾಮಗ್ರಿ ತೊಳೆಯುವುದು ದೊಡ್ಡ ಕೆಲಸ, ದೇವರ ಕೋಣೆಯಲ್ಲಿರುವ ಕಂಚಿನ ಹಾಗೂ ಬೆಳ್ಳಿಯ ವಸ್ತುಗಳನ್ನು ತೊಳೆದು ಫಳ-ಫಳ ಹೊಳೆಯುವಂತೆ ಮಾಡಬೇಕು ಅಲ್ವಾ?
ಈ ಟಿಪ್ಸ್ ಟ್ರೈ ಮಾಡಿ ನೋಡಿ ನಿಮ್ಮ ಶ್ರಮ ಕಡಿಮೆ ಮಾಡುವುದು ನೋಡಿ:

ಹಿತ್ತಾಳೆ ವಸ್ತುಗಳನ್ನು ಶುಚಿಗೊಳಿಸಲು ಟಿಪ್ಸ್
ಟೂತ್‌ಪೇಸ್ಟ್
ನೀವು ಪಾತ್ರೆ ಉಜ್ಜುವ ಬ್ರೆಷ್‌ಗೆ ಟೂತ್‌ಪೇಸ್ಟ್ ಹಾಕಿ ಅವುಗಳನ್ನು ತಿಕ್ಕಿ 5 ನಿಮಿಷ ಹಾಗೇ ಇಡಿ, ಬಳಿಕೆ ನೀರಿನಲ್ಲಿ ತೊಳೆದು ನೋಡಿ ಪೂಜಾ ವಸ್ತುಗಳು ಫಳ-ಫಳ ಹೊಳೆಯುತ್ತದೆ.
ಹಿಟ್ಟು
ಯಾವುದೇ ಹಿಟ್ಟು ಆದರೂ ಸರಿ, ಅದಕ್ಕೆ ಸ್ವಲ್ಪ ವೈಟ್ ವಿನೆಗರ್, ಉಪ್ಪು, ನಿಂಬೆರಸ ಹಾಕಿ ಮಿಕ್ಸ್ ಮಾಡಿ ನಂತರ ಅದನ್ನು ಹಾಕಿ ಪಾತ್ರೆಗಳನ್ನು ತಿಕ್ಕಿ ತೊಳೆದರೆ ಪಾತ್ರೆಗಳು ಫಳ ಫಳ ತೊಳೆಯುತ್ತದೆ. ಪಾತ್ರೆಗಳಿಗೆ ಡಿಸೈನ್ಸ್ ಇದ್ದರೆ ಬ್ರೆಷ್‌ನಲ್ಲಿ ತಿಕ್ಕಿ ತೊಳೆಯಿರಿ, ಆ ಪಾತ್ರೆಗಳು ಹೊಸದರಂತೆ ಹೊಳೆಯುವುದು.
ಬೇಕಿಂಗ್ ಸೋಡಾ
ಅಡುಗೆ ಸೋಡಾ ಕೂಡ ಕಂಚಿನ ಅಥವಾ ತಾಮ್ರದ ಪಾತ್ರೆಗಳನ್ನು ಫಳ ಫಳ ಹೊಳೆಯುವಂತೆ ಮಾಡುತ್ತದೆ. ಅಡುಗೆ ಸೋಡಾಕ್ಕೆ ಸ್ವಲ್ಪ ನಿಂಬೆರಸ ಹಾಕಿ ದೇವರ ಮೂರ್ತಿಗಳನ್ನು , ಘಂಟೆ ಇತರ ವಸ್ತುಗಳನ್ನು ತಿಕ್ಕಿದರೆ ಸಾಕು ಪೂಜಾ ವಸ್ತುಗಳು ಫಳ ಫಳ ಹೊಳೆಯುತ್ತದೆ.
ಹುಣಸೆಹಣ್ಣು ಮತ್ತು ಉಪ್ಪು
ತಾಮ್ರ ಹಾಗೂ ಕಂಚಿನ ಪಾತ್ರೆಗಳನ್ನು ಉಜ್ಜಲು ಹುಣಸೆಹಣ್ಣಿಗೆ ಸ್ವಲ್ಪ ಕಲ್ಲುಪ್ಪು ಸೇರಿಸಿ ತಿಕ್ಕಿ ತೊಳೆದರೆ ಸಾಕು ಪಾತ್ರೆಗಳು ಫಳ ಫಳ ಹೊಳೆಯುವುದು.
ಪೀತಾಂಬರಿ
ಇದು ಸಾಮಾನ್ಯವಾಗಿ ಎಲ್ಲಾ ದಿನಸಿ ಅಂಗಡಿಗಳಲ್ಲಿ ದೊರೆಯುತ್ದೆ. ಈ ಪುಡಿ ಸ್ವಲ್ಪ ಬ್ರೆಷ್‌ಗೆ ಹಾಕಿ ತಿಕ್ಕಿದರೆ ಸಾಕು ಅದರಲ್ಲಿರುವ ಜಿಡ್ಡಿನಂಶ ದೂರಾಗುವುದು, ಪಾತ್ರೆಗಳು ತುಂಬಾನೇ ಶುಭ್ರವಾಗುವುದು.
ಬೆಳ್ಳಿಯ ವಸ್ತುಗಳನ್ನು ಶುಚಿಗೊಳಿಸಲು ಟಿಪ್ಸ್
ಅಲ್ಯುಮಿನಿಯಂ ಫಾಯಿಲ್
ಇದು ಸುಲಭವಾದ ವಿಧಾನ. ಒಂದು ಬೌಲ್‌ಗೆ 1 ಚಮಚ ಅಡುಗೆ ಸೋಡಾ, 1 ಚಮಚ ಉಪ್ಪು ಹಾಕಿ ಬಿಸಿ ನೀರು ಸುರಿಯಿರಿ ಅದರಲ್ಲಿ ಹಿಡಿಸುವ ಬೆಳ್ಳಿಯ ವಸ್ತುಗಳನ್ನು ಹಾಕಿಡಿ, ನಂತರ ಅಲ್ಯುಮಿನಿಯಂ ಫಾಯಿಲ್‌ನಿಂದ ಮುಚ್ಚಿ
10-15 ನಿಮಿಷ ಬಿಟ್ಟು ನಂತರ ತೊಳೆದು ಒರೆಸಿದರೆ ಬೆಳ್ಳಿ ವಸ್ತುಗಳು ಫಳ-ಫಳ ಹೊಳೆಯುತ್ತದೆ.
ಬೇಕಿಂಗ್ ಸೊಡಾ
ಇನ್ನು ಬೇಕಿಂಗ್ ಸೋಡಾ ಪೇಸ್ಟ್ ಮಾಡಿ ಅದನ್ನು ಬೆಳ್ಳಿಯ ಮೂರ್ತಿ ಅಥವಾ ದೀಪದ ಮೇಲೆ ಹಚ್ಚಿ ನಂತರ ಬ್ರೆಷ್ ಹಾಕಿ ತಿಕ್ಕಿ( ಹಲ್ಲುಜ್ಜುವ ಹೊಸ ಬ್ರೆಷ್) ನಂತರ ಬಟ್ಟೆಯಿಂದ ಒರೆಸಿ.
ತಾಮ್ರದ ವಸ್ತುಗಳನ್ನು ಶುಚಿಗೊಳಿಸಲು
ಹುಣಸೆಹಣ್ಣು
ಹುಣಸೆಹಣ್ಣಿಗೆ ಸ್ವಲ್ಪ ಉಪ್ಪು ಹಾಕಿ ತಿಕ್ಕಿದರೆ ತಾಮ್ರದ ಪಾತ್ರೆಗಳು ಫಳ ಫಳ ಹೊಳೆಯುವುದು. ನಂತರ ನೀರಿನಲ್ಲಿ ತೊಳೆದು ಒರೆಸಿ ಇಡಬೇಕು.
ವಿನೆಗರ್ ಅಥವಾ ನಿಂಬೆಹಣ್ಣು
ತಾಮ್ರದ ವಸ್ತುಗಳ ಮೇಲೆ ಕಪ್ಪು ಕಪ್ಪು ಕಲೆ ಬಿದ್ದಿದ್ದರೆ ನಿಂಬೆರಸ ಅಥವಾ ವಿನೆಗರ್ ಅನ್ನು ಸ್ಕ್ರಬ್ಬರ್‌ಗೆ ಹಾಕಿ ತಿಕ್ಕಿ ತೊಳೆದರೆ ತಾಮ್ರದ ವ್ಸತುಗಳು ಹೊಸದರಂತೆ ಹೊಳೆಯುವುದು.
ನಂತರ ಪೂಜಾ ಕೋಣೆಯ ಶುಚಿತ್ವ
ಸೋಪು ನೀರು ಮಾಡಿ ತಿಕ್ಕಿ ತೊಳೆಯಿರಿ. ನಂತರ ಮೈಕ್ರೋಫೈಬರ್ ಬಟ್ಟೆಯಿಂದ ಒರೆಸಿದರೆ ಪೂಜಾ ಕೋಣೆಯು ಸುಂದರವಾಗುವುದು.



Click it and Unblock the Notifications
