Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಹಾಲು, ಮೊಸರು, ಚೀಸ್ ಇವುಗಳನ್ನು ಫ್ರಿಡ್ಜ್‌ನಲ್ಲಿ ಹೇಗೆ ಸ್ಟೋರ್ ಮಾಡಿದರೆ ಹೆಚ್ಚು ಬಾಳಿಕೆ ಬರುತ್ತದೆಯೇ ಗೊತ್ತೇ?
ನಾವು ಹಾಲಿನ ಉತ್ಪನ್ನಗಳನ್ನು ಫ್ರಿಡ್ಜ್‌ನಲ್ಲಿ ಸಾಕಷ್ಟು ಬಾರಿ ಸರಿಯಾಗಿ ಇಡದೆ ಅವುಗಳು ಬೇಗನೆ ಹಾಳಾಗುತ್ತದೆ, ಉದಾಹರಣೆ ಗೆ ಹಾಲು, ನಾವು ಹಾಲನ್ನು ಡೋರ್ ತೆಗೆಯುವಾಗ ಸಿಗುವ ಕಂಪಾರ್ಟ್‌ನಲ್ಲಿ ಇಡುತ್ತೇವೆ, ಕೆಲವರು ಫ್ರೀಝರ್‌ನಲ್ಲಿ ಕೂಡ ಇಡುತ್ತಾರೆ, ಆದರೆ ಹಾಲನ್ನು ನಾವು ಸರಿಯಾಗಿ ಇಡದಿದ್ದರೆ ಹಾಲು ಹಾಳಾಗುತ್ತದೆ, ಹಾಗೆ ಇತರ ವಸ್ತುಗಳು ಕೂಡ ಅಷ್ಟೇ....

ಬನ್ನಿ ಹಾಲಿನ ಉತ್ಪನ್ನಗಳನ್ನು ಹೇಗೆ ಇಡಬೇಕು ಎಂದು ನೋಡೋಣ ಬನ್ನಿ:
ಫ್ರಿಡ್ಜ್‌ನಲ್ಲಿ ಹಾಲನ್ನು ಎಲ್ಲಿಡಬೇಕು?
ಯಾವುದೇ ಹಾಳಾದರೂ ಸರಿ ನೀವು ಅದನ್ನು ಒಳಗಡೆಯ ಶೆಲ್ಫ್‌ನಲ್ಲಿ ಇಡಬೇಕು, ಡೋರ್‌ನಲ್ಲಿ ಇಡಬೇಡಿ. ಏಕೆಂದರೆ ನಾವು ಡೋರ್ ಆಗಾಗ ತೆಗೆಯುತ್ತೇವೆ ಅಲ್ವಾ, ಇದರಿಂದಾಗಿ ಹಾಲು ಬೇಗ ಹಾಳಾಗುವುದು. ಇದರಲ್ಲಿ ಸ್ಕಿಮ್ ಹಾಲಾದರೂ ಸರಿ ಪೂರ್ಣ ಹಾಲಾದರೂ ಸರಿ(ಕೆನೆಯಂಶವಿರುವ ಹಾಲು) ನೀವು ಹಾಲನ್ನು ಈ ರೀತಿ ಇಟ್ಟರೆ ಹಾಲು ಬೇಗನೆ ಹಾಳಾಗಲ್ಲ
ಹಾಲನ್ನು ಫ್ರೀಝರ್‌ನಲ್ಲಿ ಇಡಬಹುದೇ?
ನೀವು ಹಾಲನ್ನು ಹೆಚ್ಚು ದಿನ ಇಟ್ಟು ಬಳಸಲು ಬಯಸಿದರೆ ನೀವು ಒಂದು ಪ್ಲಾಸ್ಟಿಕ್ ಡಬ್ಬದಲ್ಲಿ ಹಾಕಿ ನೀವು ಫ್ರೀಝರ್‌ನಲ್ಲಿ ಇಡಬೇಕು. ಗ್ಲಾಸ್ ಅಥವಾ ಸ್ಟೀಲ್ ಡಬ್ಬದಲ್ಲಿ ಇಡಬೇಡಿ. ನೀವು ಹಾಲನ್ನು ಫ್ರೀಝರ್‌ನಲ್ಲಿ ಮೂರು ತಿಂಗಳವರೆಗೆ ಇಡಬಹುದು. ಳಸುವ ಮುನ್ನ ಫ್ರೀಝರ್‌ನಿಂದ ತೆಗೆದು ಹೊರಗಡೆ ಇಡಿ. ಅದು ದ್ರವ ರೂಪಕ್ಕೆ ಬಂದಾಗ ಹಾಲನ್ನು ಬಳಸಬಹುದು.
ಕೆನೆಯನ್ನು ಹೇಗೆ ಸಂಗ್ರಹಿಸಿಡುವುದು
ಇದನ್ನು ನೀವು ಪ್ಲಾಸ್ಟಿಕ್ ಡಬ್ಬದಲ್ಲಿ ಅಥವಾ ಐಸ್‌ಕ್ಯೂಬ್ ಟ್ರೇನಲ್ಲಿ ಇಡಬಹುದು, ನೀವು ಇದನ್ನು ಫ್ರೀಝರ್‌ನಲ್ಲಿ ಬ್ಯಾಗ್‌ನಲ್ಲಿ ಕೂಡ ಇಡಬಹುದು. ಈ ರೀತಿ ಇಟ್ಟರೆ ಕೆನೆಯನ್ನು ನೀವು ತುಂಬಾ ದಿನಗಳವರೆಗೆ ಬಳಸಬಹುದು.
ಮೊಸರು ಹೇಗೆ ಸ್ಟೋರ್ ಮಾಡಬೇಕು?
ಮಜ್ಜಿಗೆಯನ್ನು ನೀವು ಫ್ರಿಡ್ಜ್‌ನಲ್ಲಿ ಇಡಬೇಕಾಗಿಲ್ಲ, ಆದರೆ ಹೆಚ್ಚು ದಿನಕ್ಕೆ ಬಳಸಲು ಬಯಸುವುದಾದರೆ ನೀವು ಫ್ರಿಡ್ಜ್‌ನಲ್ಲಿ ಇಡಬಹುದು. ನೀವು ಮಜ್ಜಿಗೆಯನ್ನು ಇಡುವಾಗ ಪಾತ್ರೆಯ ಬಾಯಿ ಮುಚ್ಚಿ ಇಡಿ, ಅಲ್ಲದೆ ಮಜ್ಜಿಗೆಗೆ ಸ್ವಲ್ಪ ಉಪ್ಪು ಹಾಕಿ ಇಟ್ಟರೆ ಒಳ್ಳೆಯದು. ಈ ರೀತಿ ನೀವು ಫ್ರೀಝರ್‌ನಲ್ಲಿ ಇಟ್ಟರೆ ಮೂರು ತಿಂಗಳವರೆಗೆ ಬಳಸಬಹುದು.
ಮಜ್ಜಿಗೆಯನ್ನು ಫ್ರಿಡ್ಜ್‌ನಲ್ಲಿ ಇಡುವುದು ಹೇಗೆ?
ಮೊಸರನ್ನು ಕೂಡ ನೀವುಡ ಡಬ್ಬದಲ್ಲಿ ಹಾಕಿ ಪಾತ್ರೆಯ ಬಾಯಿ ಮುಚ್ಚಿ ಇಡಬೇಕು. ಫ್ರಿಡ್ಜ್‌ನಲ್ಲಿ ಮಜ್ಜಿಗೆ ತುಂಬಾ ಸಮಯ ಬಾಳಿಕೆ ಬರುತ್ತದೆ. ಮಜ್ಜಿಗೆಯನ್ನು ಕೂಡ ಸ್ವಲ್ಪ ಉಪ್ಪು ಹಾಕಿ ಇಡಿ.
ಯೋಗರ್ಟ್ ಹೇಗೆ ಬಳಸಬೇಕು?
ನೀವು ಯೋಗರ್ಟ್ ಅನ್ನು ಓಪನ್ ಮಾಡಿದ್ದರೆ ವಾರದವರೆಗೆ ಇಟ್ಟು ಬಳಸಬಹುದು. ಇಲ್ಲದಿದ್ದರೆ ಎರಡು ವಾರದವರೆಗೆ ಇಟ್ಟು ಬಳಸಬಹುದು. ಇನ್ನು ಹೆಚ್ಚು ಯೋಗರ್ಟ್ ಇದ್ದರೆ ಅದನ್ನು ಫ್ರೀಝರ್‌ನಲ್ಲಿ ಇಟ್ಟರೆ ಒಳ್ಳೆಯದು. ಆದರೆ ಯೋಗರ್ಟ್ ಅನ್ನು ಫ್ರೀಝ್ ಮಾಡಿದಾಗ ಅದರ ರುಚಿ ಸ್ವಲ್ಪ ಕಡಿಮೆಯಾಗುವುದು. ಇದನ್ನು ಸ್ಮೂತಿ ಮಾಡಲು ಬಳಸಬಹುದು.
ಕಾಟೇಜ್ ಚೀಸ್ ಸ್ಟೋರ್ ಮಾಡುವುದು ಹೇಗೆ?
ನೀವು ಚೀಸ್ ಓಪನ್ ಮಾಡಿದ್ದರೆ 7 ದಿನಗಳ ಒಳಗೆ ಮುಗಿಸುವುದು ಒಳ್ಳೆಯದು, ಇನ್ನು ಹೆಚ್ಚು ಸಮಯ ಬಳಸುವುದಾದರೆ ಫ್ರೀಝ್ ಮಾಡಿದರೆ ರುಚಿ ಕಡಿಮೆಯಾಗುತ್ತೆ, ಆದರೆ ಇದನ್ನು ನೀವು 7-10 ದಿನಗಳವರೆಗೆ ಮುಗಿಸುವುದು ಒಳ್ಳೆಯದು.
ಈ ವಿಧಾನದಲ್ಲಿ ನೀವು ಹಾಲಿನ ಉತ್ಪನ್ನ ಸಂಗ್ರಹಿಸಿ ಇಟ್ಟರೆ ಅವುಗಳನ್ನು ಹೆಚ್ಚು ಸಮಯ ಇಟ್ಟು ಬಳಸಬಹುದು. ಇನ್ನು ನೀವು ಹಾಲಿನ ಉತ್ಪನ್ನ ಈ ರೀತಿ ಸಂಗ್ರಹಿಸಿ ಇಟ್ಟರೆ ಹಣ ಉಳಿತಾಯ, ಆರೋಗ್ಯ ಕೂಡ ಹಾಳಾಗುವುದಿಲ್ಲ.



Click it and Unblock the Notifications
