Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ಈ ಸ್ಪ್ರೇ ಬಳಸಿದರೆ ಪಲ್ಲಿ, ಜಿರಳೆ, ತಿಗಟ, ಸೊಳ್ಳೆ ಕಾಟ ಏನೂ ಇರಲ್ಲ: ರೂಮ್‌ಗಳೂ ಫ್ರೆಷ್ ಗಿರುತ್ತದೆ!
Home Garden
oi-Reena TK
By Reena Tk
ಇನ್ನು ಬೇಸಿಗೆ ಕಾಲ ಶುರುವಾದರೆ ಮನೆಯೊಳಗೆ ನುಸಿ, ಬೆಕ್ಕು, ನಾಯಿ ಅಂತ ಪ್ರಾಣಿಗಳಿದ್ದರೆ ತಿಗಟ ಕಾಟ, ನೊಣ ಕಾಟ ಇಮಥವುಗಳ ಕಾಟ ಹೆಚ್ಚಾಗುವುದು. ತೊಗಟ, ಉಣ್ಣಿ ಇವುಗಳು ಕಚ್ಚಿದರೆ ಮೈಯೆಲ್ಲಾ ಅರ್ಜಿ ರೀತಿಯಾಗುವುದು. ಆದರೆ ವಿನಗೆರ್ ಹಾಗೂ ಚಕ್ಕೆ ಬಳಸಿ ತಯಾರಿಸುವ ಈ ಲಿಕ್ವಿಡ್ ಇದೆಯಲ್ಲಾ ಜಿರಳೆ, ಪಲ್ಲಿಯಿಂದ ಹಿಡಿದು ನೊಣ, ಸೊಳ್ಳೆ, ತಿಗಟ ಈ ಬಗೆಯ ಕ್ರಿಮಿ ಕೀಟಗಳನ್ನೂ ದೂರವಿಡುತ್ತದೆ, ಅಲ್ಲದೆ ಈ ದ್ರಾವಣ ಮಾಡಿಟ್ಟರೆ ಯಾವ ರೂಮ್ ಫ್ರೆಷನರ್ ಕೂಡ ಬೇಕಾಗಿಲ್ಲ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಕೀಟಗಳನ್ನು ದೂರವಿಡುವ ಈ ದ್ರಾವಣ ಮಾಡುವುದು ಹೇಗೆ
- ನೀವು ಒಂದು ಕಪ್ ನೀರು ಅಥವಾ 1/4 ಲೀಟರ್ ನೀರು ಹಾಕಿ ಕುದಿಸಿ, ಅದಕ್ಕೆ 3 ಚಕ್ಕೆ ಹಾಕಿ, ಚಕ್ಕೆ ಪುಡಿ ಆಗಲ್ಲ, ಚಕ್ಕೆಯೇ ಹಾಕಿ, ಬೆರಳಿನಷ್ಟು ಉದ್ದದ 3-4 ತುಂಡು ಚಕ್ಕೆ ಹಾಕಬಹುದು.
- ನಂತರ ಕುದಿಸಿ, ನೀರಿನ ಬಣ್ಣ ಬದಲಾಗುವುದು, ಈಗ ಉರಿಯನ್ನು ಆಫ್ ಮಾಡಿ, ನಂತರ ನೀರನ್ನು ಸೋಸಿ
- ಈಗ ನೀವು ಆ ನೀರನ್ನುಒಂದು ಸ್ಪ್ರೇ ಬಾಟಲಿಗೆ ತುಂಬಿ, ನಂತರ ಒಂದುಕ್ಯಾಪ್ ಫ್ಯಾಬ್ರಿಕ್ ಸಾಫ್ಟ್ನರ್ ಸೇರಿಸಿ, ಯಾವುದೇ ಬ್ರ್ಯಾಂಡ್ ಫ್ಯಾಬ್ರಿಕ್ ಸಾಫ್ಟ್ನರ್ ಬಳಸಬಹುದು.
- ಒಂದು ಕಪ್ ವೈಟ್ ವಿನಗರ್ ಸೇರಿಸಿ (ವೈಟ್ ಆಲ್ಕೋಹಾಲ್ ವಿನೆಗರ್ ಮಾತ್ರ ಬಳಸಿ)
- 2 ಚಮಚ ಪಾತ್ರೆ ತೊಳೆಯುವ ಲಿಕ್ವಿಡ್ ಸೋಪು ಬಳಸಿ (ಇದು ಕೂಡ ಯಾವುದೇ ಬ್ರ್ಯಾಂಡ್ ಆಗಿರಬಹುದು)
- ನಂತರ ಶೇಕ್ ಮಾಡಿ ನಂತರ ಮನೆಯ ಮೂಲೆ-ಮೂಲೆಯಲ್ಲಿ ಸ್ಪ್ರೇ ಮಾಡಿದನ್ನು ಎಲ್ಲಿ ಬೇಕಾದರೂ ಸ್ಪ್ರೇ ಮಾಡಬಹುದು, ನಾಯಿ, ಬೆಕ್ಕುಗಳ ಮೇಲೆ ಕೂಡ ಸ್ವಲ್ಪ ಸ್ಪ್ರೇ ಮಾಡಬಹುದು.ಕರ್ಟನ್, ವಾರ್ಡ್‌ರೋಬ್ ಮೂಲೆಯಲ್ಲಿಯೂ ಸ್ಪ್ರೇ ಮಾಡಬಹುದು.
ಈ ಸ್ಪ್ರೇ ಮಾಡಿದರೆ ಯಾವುದೇ ರೂಮ್ ಫ್ರೆಷನರ್ ಬೇಕಾಗಿಲ್ಲ
- ರೂಮ್ ಫ್ರೆಷನರ್ ಕೆಮಿಕಲ್ ಆಗಿರುವುದರಿಂದ ಆರೋಗ್ಯಕ್ಕೆ ಒಳ್ಳೆಯದಲ್ಲ, ಆದರೆ ಇದನ್ನು ನೀವೇ ಮಾಡುವುದರಿಂದ ಆ ತೊಂದರೆಯೂ ಇಲ್ಲ, ಅಲ್ಲದೆ ನಿಮ್ಮ ಮನೆ ಗಮ್ ಎನ್ನುವ ಸುಾಸನೆಯಿಂದ ಕೂಡಿರುತ್ತದೆ. ನೀವು ಈ ಸ್ಪ್ರೇ ಬಳಸಿದರೆ ಮನೆ 24 ಗಂಟೆಯೂ ಸುವಾಸನೆಯಿಂದ ಕೂಡಿರುತ್ತದೆ. ಈ ಅಸ್ತಮಾ ರೋಗಿಗಳಿದ್ದರೆ ಅವರಿಗೆ ರೂಮ್ ಸ್ಪ್ರೇ ಆಗಲ್ಲ, ಅಂಥ ಮನೆಗಲ್ಲಿಯೂ ಇದನ್ನು ಬಳಸಬಹುದು.
- ಮನೆಯಲ್ಲಿ ಜಿರಳೆ ಇರಲ್ಲ, ಪಲ್ಲಿ, ಜೇಡರ ಬಲೆ ಇವುಗಳ ಕಾಟವೂ ಇರಲ್ಲ, ಇನ್ನು ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಈ ಸ್ಪ್ರೇ ಬಳಸುವುದು ಸುರಕ್ಷಿತ, ಮಕ್ಕಳ
- ಬಟ್ಟೆಗೆ ಸ್ವಲ್ಪ ಹಾಕಿ ಬಿಟ್ಟರೆ ಸೊಳ್ಳೆ ಕೂಡ ಕಚ್ಚುವುದಿಲ್ಲ. ಹೀಗಾಗಿ ಸೊಳ್ಳೆಕಾಟದಿಂದ ಮಕ್ಕಳ ರಕ್ಷಣೆಗೂ ಈ ಸ್ಪ್ರೇ ಸಹಕಾರಿಯಾಗಿದೆ. ಅಲ್ಲದೆ ಈ ಸ್ಪ್ರೇ ಮಾಡಿಟ್ಟರೆ ಮುಗಿಯುವರೆಗೂ ಇಟ್ಟು ಬಳಸಬಹುದು.
- ಈ ಸ್ಪ್ರೇ ಮಾಡುವುದರಿಂದ ಸಾಕಷ್ಟು ಪ್ರಯೋಜನ ದೊರೆಯುವುದು ಮಾತ್ರವಲ್ಲ ಹಣವೂ ಉಳಿತಾಯವಾಗಲಿದೆ. ಇದನ್ನು ಟ್ರೈ ಮಾಡಿ ನಂತರನಿಮ್ಮ ಅಭಿಪ್ರಾಯ ತಿಳಿಸಿ
Comments
Read more about: home improvement
English summary



Click it and Unblock the Notifications