Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಬಾತ್‌ರೂಂನಲ್ಲಿರುವ ಈ ವಸ್ತುಗಳೇ ನಿಮ್ಮ ಬಡತನಕ್ಕೆ ಕಾರಣ! ಹಣ ಹೋಗುತ್ತೆ, ದರಿದ್ರ ಬರುತ್ತೆ
ಅಪ್ಪಿತಪ್ಪಿಯೂ ಇವುಗಳನ್ನು ಸ್ನಾನಗೃಹದಲ್ಲಿ ಇಡಬೇಡಿ! ಬಾತ್‌ರೂಂನಲ್ಲಿ ಇಡುವ ಈ ವಸ್ತುಗಳೇ ನಿಮ್ಮ ಬಡತನ ಮತ್ತು ದಾರಿದ್ರ್ಯಕ್ಕೆ ಕಾರಣ. ಹೌದು, ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಮನೆಯ ಬಾತ್‌ರೂಂನಲ್ಲಿ (bathroom) ಕೆಲವು ವಸ್ತುಗಳನ್ನು ಇಡುವುದರಿಂದ ಆರ್ಥಿಕ ಸಮಸ್ಯೆಗಳು ಉಂಟಾಗಬಹುದು. ವಾಸ್ತು ತಜ್ಞರ ಪ್ರಕಾರ, ಈ ವಸ್ತುಗಳು ನಿಮ್ಮ ಮನೆಯಲ್ಲಿ ಇರುವುದರಿಂದ ಹಣದ ಹರಿವು ಕಡಿಮೆಯಾಗಿ ಬಡತನಕ್ಕೆ (Poverty) ಕಾರಣವಾಗಬಹುದು. ಆದಷ್ಟು ಬೇಗ ಅವುಗಳನ್ನು ಬಾತ್‌ರೂಂನಿಂದ ಹೊರಹಾಕುವಂತೆ ಸಲಹೆ (vastu tips for bathroom) ನೀಡಿದ್ದಾರೆ.
ಪ್ರತಿಯೊಬ್ಬರ ಜೀವನದಲ್ಲಿ ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ. ಯಾವುದೇ ಕೆಲಸವನ್ನು ಮಾಡುವ ಮೊದಲು ಅಥವಾ ಮಾಡುವಾಗ ವಾಸ್ತು ನಿಯಮಗಳನ್ನು ಪಾಲಿಸಬೇಕು ಎಂದು ಹಿರಿಯರು ಹೇಳಲಾಗುತ್ತದೆ. ಈ ನಿಯಮಗಳನ್ನು ಸರಿಯಾಗಿ ಅನುಸರಿಸಿದರೆ, ಸಕಾರಾತ್ಮಕ ಫಲಿತಾಂಶಗಳು ದೊರೆಯುತ್ತವೆ. ಇನ್ನು, ಈ ನಿಯಮಗಳನ್ನು ನಿರ್ಲಕ್ಷಿಸಿದರೆ ಸಮಸ್ಯೆಗಳು ಎದುರಾಗುವುದು ಖಚಿತ.

ವಾಸ್ತು ಶಾಸ್ತ್ರದಲ್ಲಿ ಬಾತ್‌ರೂಂನಲ್ಲಿ ಎಂದಿಗೂ ಇಡಬಾರದ ಕೆಲವು ವಸ್ತುಗಳ ಬಗ್ಗೆ ಉಲ್ಲೇಖಿಸಲಾಗಿದೆ. ಈ ವಸ್ತುಗಳು ಬಾತ್‌ರೂಂನಲ್ಲಿ ಇರುವುದರಿಂದ ಮನೆಯಲ್ಲಿ ಹಣ ನಿಲ್ಲುವುದಿಲ್ಲ ಮತ್ತು ಕ್ರಮೇಣ ನೀವು ಬಡವರಾಗುತ್ತೀರಿ ಎಂದು ಹೇಳಲಾಗಿದೆ. ನಿಮ್ಮ ಬಾತ್‌ರೂಂನಲ್ಲಿ ಇಂತಹ ಯಾವುದೇ ವಸ್ತುಗಳು ಇದ್ದರೆ, ಕೂಡಲೇ ಅವುಗಳನ್ನು ತೆಗೆದುಹಾಕಬೇಕು ಎಂದು ವಾಸ್ತು ತಜ್ಞರು ಸಲಹೆ ನೀಡಿದ್ದಾರೆ.
ಬಾತ್‌ರೂಂನಲ್ಲಿ ಇಡಬಾರದ ವಸ್ತುಗಳಿವು
ಖಾಲಿ ಬಕೆಟ್ ಇಡಬೇಡಿ
ವಾಸ್ತು ತಜ್ಞರ ಪ್ರಕಾರ, ಬಾತ್‌ರೂಂನಲ್ಲಿ ಎಂದಿಗೂ ಖಾಲಿ ಬಕೆಟ್ (Empty Bucket) ಇಡಬಾರದು. ಹಗಲಿನಲ್ಲಿ ಖಾಲಿಯಾದರೂ, ರಾತ್ರಿಯ ಸಮಯದಲ್ಲಿ ಬಕೆಟ್ ಅನ್ನು ಖಾಲಿಯಾಗಿ ಇಡಬೇಡಿ. ಬಾತ್‌ರೂಂನಲ್ಲಿ ಇರಿಸಿದ ಖಾಲಿ ಬಕೆಟ್‌ನಿಂದಾಗಿ ಮನೆಯಲ್ಲಿ ಹಣ ನಿಲ್ಲುವುದಿಲ್ಲ. ಜೊತೆಗೆ ಕ್ರಮೇಣ ಆರ್ಥಿಕ ಸಮಸ್ಯೆಗಳು ಎದುರಾಗಬಹುದು. ಬಡತನಕ್ಕೆ ದಾರಿ ಮಾಡಿಕೊಡಬಹುದು ಎಂದು ಹೇಳಲಾಗುತ್ತದೆ.
ಒಡೆದ ಕನ್ನಡಿ ಇಡಬೇಡಿ
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಬಾತ್‌ರೂಂನಲ್ಲಿ ಎಂದಿಗೂ ಒಡೆದ ಕನ್ನಡಿ ಅಥವಾ ಗಾಜು (Broken Mirror) ಇಡಬಾರದು. ಬಾತ್‌ರೂಂನಲ್ಲಿರುವ ಕನ್ನಡಿ ಒಡೆದಿದ್ದರೆ, ಅದನ್ನು ತಕ್ಷಣ ಬದಲಾಯಿಸಬೇಕು ಮತ್ತು ಒಡೆದ ಗಾಜಿನ ಚೂರುಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಹೊರಹಾಕಬೇಕು. ಒಡೆದ ಕನ್ನಡಿ ಮನೆಯಲ್ಲಿ ಮತ್ತು ಜೀವನದಲ್ಲಿ ನಕಾರಾತ್ಮಕತೆಯನ್ನು (Negativity) ತರುತ್ತದೆ. ಜೊತೆಗೆ ನಿಮ್ಮ ಹಣಕಾಸಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಒದ್ದೆ ಬಟ್ಟೆಗಳನ್ನು ಬಿಡಬೇಡಿ
ಸ್ನಾನ ಮಾಡುವಾಗ ಬಟ್ಟೆಗಳನ್ನು ಒದ್ದೆ (ತೇವದ ಬಟ್ಟೆಗಳು) ಮಾಡಿ ಬಾತ್‌ರೂಂನಲ್ಲಿಯೇ ಬಿಡುವುದು ಸಾಮಾನ್ಯ ತಪ್ಪು. ವಾಸ್ತು ತಜ್ಞರ ಪ್ರಕಾರ, ಅಪ್ಪಿತಪ್ಪಿಯೂ ಹೀಗೆ ಮಾಡಬಾರದು. ನೀವು ದೀರ್ಘಕಾಲದವರೆಗೆ ಒದ್ದೆ ಬಟ್ಟೆಗಳನ್ನು (Wet Clothes) ಬಾತ್‌ರೂಂನಲ್ಲಿ ಬಿಟ್ಟರೆ, ಅದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಅನೇಕ ಬಾರಿ ಈ ವಾಸ್ತು ದೋಷಗಳು ಆರ್ಥಿಕ ನಷ್ಟ ಅಥವಾ ಸಮಸ್ಯೆಗಳಿಗೂ ಕಾರಣವಾಗುತ್ತವೆ.
ಈ ಚಪ್ಪಲಿಗಳು ಆರ್ಥಿಕ ಸಮಸ್ಯೆಗೆ ಕಾರಣ
ನಾವು ಹೆಚ್ಚಾಗಿ ಒಡೆದ, ಹರಿದ ಅಥವಾ ಹಳೆಯ ಚಪ್ಪಲಿಗಳನ್ನು (Broken Slippers) ಬಾತ್‌ರೂಂನಲ್ಲಿ ಇಡುತ್ತೇವೆ. ಬಾತ್‌ರೂಂಗೆ ಹೋಗುವಾಗ ಅವುಗಳನ್ನು ಬಳಸಬಹುದು ಎಂದು ಭಾವಿಸುತ್ತೇವೆ. ವಾಸ್ತು ಶಾಸ್ತ್ರದ ಪ್ರಕಾರ, ನೀವು ಎಂದಿಗೂ ಹೀಗೆ ಮಾಡಬಾರದು. ಬಾತ್‌ರೂಂನಲ್ಲಿ ಇರಿಸಿದ ಒಡೆದ ಚಪ್ಪಲಿಗಳು ಸಹ ವಾಸ್ತು ದೋಷಗಳಿಗೆ ಕಾರಣವಾಗುತ್ತವೆ. ನಿಮ್ಮನ್ನು ಆರ್ಥಿಕವಾಗಿ ದುರ್ಬಲಗೊಳಿಸಬಹುದು.
ಒಟ್ಟಾರೆಯಾಗಿ, ನಿಮ್ಮ ಸ್ನಾನದ ಕೋಣೆಯಲ್ಲಿ ಕೆಲವು ವಸ್ತುಗಳನ್ನು ಇಡುವುದರಿಂದ ಆರ್ಥಿಕ ಸಮಸ್ಯೆಗಳು ಹೆಚ್ಚಾಗುತ್ತವೆ. ನಕಾರಾತ್ಮಕ ಶಕ್ತಿ ಹರಡುತ್ತದೆ ಎನ್ನುತ್ತದೆ ವಾಸ್ತುಶಾಸ್ತ್ರ. ಈ ವಸ್ತುಗಳನ್ನು ತಕ್ಷಣವೇ ತೆಗೆದುಹಾಕುವುದರಿಂದ ಲಕ್ಷ್ಮಿಯ ಕೃಪೆಗೆ ಪಾತ್ರರಾಗಬಹುದು. ಮನೆಯಲ್ಲಿ ಧನಾತ್ಮಕ ವಾತಾವರಣ ಸೃಷ್ಟಿಸಬಹುದು.



Click it and Unblock the Notifications