Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ನಿಮಗಿದು ಗೊತ್ತಾ?: ಆಲೂಗಡ್ಡೆ ರಚನೆಗೆ ಕಾರಣವಾಗಿದ್ದು ಟೊಮೆಟೋ ಸಸ್ಯ!
ನೀವು ಊಟದೊಂದಿಗೆ ಹಲವು ರೀತಿಯ ತಕಾರಿಗಳಿಂದ ಮಾಡಿದ ಸಾಂಬಾರ್, ಚಟ್ನಿ, ಗ್ರೇವಿ ಹೀಗೆ ಹತ್ತು ಹಲವು ರೀತಿಯ ಖಾದ್ಯಗಳ ಮಾಡಿ ಸವಿದಿರುತ್ತೀರಿ. ಬಹುತೇ ಅಡುಗೆಗಳಲ್ಲಿ ಟೊಮೆಟೋ ಬಳಸುವುದು ನೋಡಬಹುದು. ಹಾಗೆ ಆಲೂಗಡ್ಡೆ ಕೂಡ ಹಲವರ ಪ್ರಿಯವಾದ ತರಕಾರಿಯಾಗಿದೆ. ಭಾರತದಲ್ಲಿ ಈ ಎರಡೂ ತರಕಾರಿಯನ್ನು ಹೆಚ್ಚಗಿ ಬೆಳೆಯಲಾಗುತ್ತದೆ.
ವಿಶ್ವದಾದ್ಯಂತ ಆಲೂಗಡ್ಡೆ ಆಹಾರ ಪದಾರ್ಥಗಳಲ್ಲಿ ಬಳಸುವುದು ನೋಡಬಹುದು. ಸಾವಿರಾರು ವರ್ಷಗಳ ಹಿಂದಿನಿಂದಲೂ ಆಲೂಗಡ್ಡೆಯನ್ನು ಆಹಾರವಾಗಿ ಬಳಸುವುದು ನೋಡಬಹುದು. ಮೊದಲಿಗೆ ದಕ್ಷಿಣ ಅಮೆರಿಕದ ಆಂಡಿಸ್ ಪ್ರದೇಶದಲ್ಲಿ ಬೆಳೆಸಲಾಯಿತು ಎಂದು ಹೇಳಲಾಗಿದೆ. ನಂತರ 16ನೇ ಶತಮಾನದಲ್ಲಿ ಜಾಗತಿಕವಾಗಿ ಹರಡಿತು ಎಂದು ಹೇಳಲಾಗಿದೆ.

ಆದ್ರೆ ಈ ಆಲೂಗಡ್ಡೆ ಹೇಗೆ ಹುಟ್ಟಿಕೊಂಡಿತು? ಆಲೂಗಡ್ಡೆಯು ಬೀಜಗಳ ಬಿಡುವುದಿಲ್ಲ, ಹಾಗೆ ಅದನ್ನು ಮೊಳಕೆ ಬರಿಸಿಕೊಂಡು ನೆಡುವುದು ನೋಡಬಹುದು. ಆಲೂಗಡ್ಡೆಯು 9 ಮಿಲಿಯನ್ ವರ್ಷಗಳ ಹಿಂದೆ ರಚನೆಗೊಂಡಿತ್ತು ಎಂಬ ವಿಚಾರವೊಂದು ಈಗ ಅಚ್ಚರಿ ಮೂಡಿಸಿದೆ. ಆಲೂಗಡ್ಡೆಯಿಂದ 450 ಜೀನೋಮ್‌ಗಳು ಮತ್ತು ಕಾಡು ಆಲೂಗಡ್ಡೆ ಜಾತಿಗಳ 56 ಜೀನೋಮ್‌ಗಳ ಹೊಸ ವಿಶ್ಲೇಷಣೆಯು ಆಲೂಗಡ್ಡೆ ವಂಶಾವಳಿಯು ಸುಮಾರು 9 ಮಿಲಿಯನ್ ವರ್ಷಗಳ ಹಿಂದೆ ರಚನೆಗೊಂಡಿತ್ತು ಎಂದು ಹೇಳಲಾಗಿದೆ.
ಇನ್ನೂ ಅಚ್ಚರಿಯ ವಿಚಾರ ಏನೆಂದರೆ ಆಲೂಗಡ್ಡೆ ಕೂಡ ಟೊಮೆಟೋದಿಂದ ರಚನೆಯಾದ ತರಕಾರಿಯಂತೆ. ದಕ್ಷಿಣ ಅಮೆರಿಕಾದಲ್ಲಿ ಕಾಡು ಟೊಮೆಟೋ ಸಸ್ಯ ಮತ್ತು ಆಲೂಗಡ್ಡೆ ತರಹದ ಜಾತಿಯ ಸಸ್ಯದ ನಡುವಿನ ನೈಸರ್ಗಿಕ ತರಸಂತಾನೋತ್ಪತ್ತಿಯ ಮೂಲಕ ಆಲೂಗಡ್ಡೆ ಹುಟ್ಟಿಕೊಂಡಿತು ಎಂದು ಬಹಿರಂಗಪಡಿಸಿದೆ.
ಈ ಹೈಬ್ರಿಡೈಸೇಶನ್ ಘಟನೆಯು ಹೊಸ ಆಲೂಗಡ್ಡೆ ಸಸ್ಯದ ಗೆಡ್ಡೆಯ ನೋಟಕ್ಕೆ ಕಾರಣವಾಯಿತು, ಇದು ಭೂಮಿ ಒಳಗೆ ಪೋಷಕಾಂಶಗಳನ್ನು ಹೊಂದಿರುವ ವಿಸ್ತೃತ ರಚನೆಯಾಗಿದೆ ಎಂದು ಸಂಶೋಧಕರು ಕೂಡ ಹೇಳಿದ್ದಾರೆ. ಟೊಮೆಟೋದಿಂದ ಆಲೂಗಡ್ಡೆಯ ರಚನೆಯಲ್ಲಿ ಒಳಗಿರುವ ಎರಡು ನಿರ್ಣಾಯಕ ಜೀನ್‌ಗಳನ್ನು ಕೂಡ ಗುರುತಿಸಲಾಗಿದೆ. ಟೊಮೆಟೋದಲ್ಲಿ ಪ್ರಮುಖ ಜೀನ್ ಹಣ್ಣಾಗಿದ್ದರೆ ಆಲೂವಿನಲ್ಲಿ ಅದು ಗಡ್ಡೆಯಾಗಿದೆ ಎಂದು ಗುರುತಿಸಲಾಗಿದೆ.
ಆಲೂಗೆಡ್ಡೆ ಸಸ್ಯದ ವೈಜ್ಞಾನಿಕ ಹೆಸರು ಸೋಲಾನಮ್ ಟ್ಯೂಬೆರೋಸಮ್. ಆಲೂಗಡ್ಡೆ 9 ಮಿಲಿಯನ್ ವರ್ಷ ಹಿಂದೆ ಎಟುಬೆರೋಸಮ್ ಎಂಬ ಜಾತಿಯ ತರಕಾರಿಯ ಪೂರ್ವಜರಾಗಿದೆ. ಇದು ಪೆರುವಿನಲ್ಲಿ ಈಗಲೂ ಕಂಡುಬರುತ್ತದೆ ಎಂದು ಹೇಳಲಾಗಿದೆ. ಆದರೆ ಎರಡು ಸಸ್ಯಗಳ ನೈಸರ್ಗಿಕ ಅಥವಾ ಅನಿರೀಕ್ಷಿತ ಹೈಬ್ರಿಡೈಸೇಶನ್ ಘಟನೆ ನಡೆದು ಆಲೂಗಡ್ಡೆಯ ರಚನೆಗೆ ಕಾರಣವಾಯಿತು ಎಂದು ಹೇಳಲಾಗಿದೆ. ಈ ನೈಸರ್ಗಿಕ ಹೈಬ್ರಿಡಸೇಶನ್ ಹೊಸ ತಳಿಯ ಹುಟ್ಟುವಿಕೆಗೆ ಕಾರಣವಾಯಿತು. ಇದು ಹೊಸ ವಂಶಾವಳಿಯ ರಚನೆಗೆ ಕಾರಣವಾಯಿತು. ಆಲೂಗಡ್ಡೆಯು ಬದಲಾಗುತ್ತಿರುವ ಪ್ರಾದೇಶಿಕ ಪರಿಸರಕ್ಕೆ ಹೊಂದಿಕೊಳ್ಳಲು ಮತ್ತು ಪರ್ವತಗಳ ಕಠಿಣ ಪರಿಸ್ಥಿತಿಗಳಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಯಿತು ಎಂದು ಈ ಅಧ್ಯಯನದಲ್ಲಿ ತಿಳಿಸಲಾಗಿದೆ.
ಪ್ರಸ್ತುತ ವಿಶ್ವದಾದ್ಯಂತ ಈಗ ಸುಮಾರು 5 ಸಾವಿರ ಆಲೂಗಡ್ಡೆಯ ಪ್ರಭೇದಗಳಿವೆ. ಆಲೂಗಡ್ಡೆ ಮಾನವ ಬಳಕೆಗಾಗಿ ಅಕ್ಕಿ ಮತ್ತು ಗೋಧಿಯ ನಂತರ ವಿಶ್ವದಲ್ಲಿ ಬಳಕೆಯಲ್ಲಿರುವ 3ನೇ ಆಹಾರ ಬೆಳೆಯಾಗಿದೆ. ಚೀನಾದಲ್ಲಿ ಅತೀ ಹೆಚ್ಚು ಆಲೂಗಡ್ಡೆಯನ್ನು ಬೆಳೆಯಾಗುತ್ತದೆ. ಹಾಗೆ ಹೈಬ್ರಿಡೈಸೇಶನ್ ಮೂಲಕ ಒಂದೇ ಸಸ್ಯದಲ್ಲಿ ಆಲೂಗಡ್ಡೆ ಹಾಗೂ ಟೊಮೆಟೋ ಎರಡನ್ನು ಬೆಳೆಯಬಹುದು ಎಂದು ಈ ಮೊದಲೇ ವಿಜ್ಞಾನಿಗಳು ದೃಢಪಡಿಸಿದ್ದಾರೆ.
ಆಲೂಗಡ್ಡೆಯಲ್ಲಿ ವಿಟಮಿನ್ ಸಿ, ಪೊಟ್ಯಾಸಿಯಮ್, ಫೈಬರ್ ಮತ್ತು ನಿರೋಧಕ ಪಿಷ್ಟವನ್ನು ನೀಡುತ್ತದೆ. ಪೋಷಕಾಂಶ ದಟ್ಟವಾದ ಕ್ಯಾಲೋರಿ ಮೂಲವಾಗಿದೆ. ಭಾರತದಲ್ಲೂ ಆಲೂಗಡ್ಡೆ ಬಹಳ ಬಳಕೆಯಾಗುವ ತರಕಾರಿಯಾಗಿದೆ. ಉತ್ತರ ಭಾರತದಲ್ಲಿ ಆಲೂಗಡ್ಡೆಯಿಂದ ವಿವಿಧ ರೀತಿಯ ಖಾದ್ಯಗಳ ಮಾಡಿ ಸವಿಯುವುದು ನೋಡಬಹುದು.



Click it and Unblock the Notifications