Latest Updates
-
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್!
ಅಸಲಿ ಚಿನ್ನ-ನಕಲಿ ಚಿನ್ನ ಪತ್ತೆ ಮಾಡೋದು ಹೇಗೆ? ಮನೆಯಲ್ಲೇ ಪರೀಕ್ಷೆ ಮಾಡಿ!
ಚಿನ್ನ ಬೆಳ್ಳಿ ಅಂದ್ರೆ ಎಲ್ಲರಿಗೂ ಬಹಳ ಪ್ರತಿಯೊಬ್ಬರು ಚಿನ್ನ ಖರೀದಿಗೆ ಇಷ್ಟಪಡುತ್ತಾರೆ. ಹಾಗೆ ಭಾರತೀಯ ಸಂಸ್ಕೃತಿಯಲ್ಲಿ ಚಿನ್ನ ಬೆಳ್ಳಿಗೆ ಬಹಳ ಪ್ರಾಮುಖ್ಯತೆ ಇದೆ. ಅದರಲ್ಲೂ ಚಿನ್ನವೆಂದರೆ ಸಂಸ್ಕೃತಿಯ ಒಂದು ಭಾಗವಾಗಿದೆ. ಹಾಗೆ ನಾವಿಂದು ಚಿನ್ನ ಧರಿಸುವುದು ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವುದು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದೇವೆ. ಭಾರತದ ಪ್ರತಿಯೊಂದು ಮನೆಯಲ್ಲೂ ಕನಿಷ್ಠ 1 ಗ್ರಾಮ್ ಬಂಗಾರವಾದರೂ ಸಿಕ್ಕೇ ಸಿಗುತ್ತೆ.
ಇನ್ನು ಇತ್ತೀಚಿಗೆ 1 ಗ್ರಾಮ್ ಗೋಲ್ಡ್ ಚಿನ್ನದಂತೆ ಕಾಣಿಸುವ ಆರ್ಟಿಫಿಶಿಯಲ್ ಗೋಲ್ಡ್ ಕೂಡ ನೋಡಲು ಸಿಗುತ್ತದೆ. ಹಲವರು ಕಳ್ಳತನ ಅಥವಾ ಬಹುಬೇಗ ಹಾಳಾಗುವ ಭಯದಲ್ಲಿ ಆರ್ಟಿಫಿಶಿಯಲ್ ಚಿನ್ನವನ್ನು ಧರಿಸುವುದು ನೋಡಬಹುದು. ಹಾಗೆ ಕೆಲವೊಮ್ಮೆ ಮನೆಯಲ್ಲಿಟ್ಟಿದ್ದ ಚಿನ್ನ ಯಾವುದು ನಕಲಿ ಚಿನ್ನ ಯಾವುದು ಎಂಬುದನ್ನು ಕೂಡ ಗುರುತು ಹಿಡಿಯಲು ಸಾಧ್ಯವಾಗುವುದಿಲ್ಲ.

ನೀವು ಆರ್ಟಿಫಿಶಿಯಲ್ ಬಂಗಾರ ಹಾಗೆ ನೈಜ ಚಿನ್ನದ ನಡುವೆ ವ್ಯತ್ಯಾಸ ಗುರುತಿಸಲು ಪರದಾಡಹುದು. ಹಾಗೆ ಕೆಲವೊಮ್ಮೆ ನಿಮ್ಮ ಬಳಿ ಇರುವ ಹಳೆಯ ಆಭರಣ ನಕಲಿಯೋ ಅಥವಾ ಅಸಲಿಯೋ ಎಂಬುದನ್ನು ಪತ್ತೆ ಮಾಡಲು ಕಷ್ಟ ಪಡಬಹುದು. ಚಿನ್ನದ ಅಂಡಿಗೆ ತೆರಳಿದರೆ ಅವರು ನಿಮ್ಮ ಚಿನ್ನ ನೈಜ ಚಿನ್ನವೋ ಅಥವಾ ನಕಲಿಯೋ ಎಂಬದನ್ನು ಹೇಳುತ್ತಾರೆ.
ಆದ್ರೆ ಮನೆಯಲ್ಲೇ ಚಿನ್ನ ಅಸಲಿಯೋ ನಕಲಿಯೋ ಎಂಬ ಪರೀಕ್ಷೆ ನಡೆಸಬಹುದು. ನೀವೇ ನಿಮ್ಮ ಚಿನ್ನ ಎಷ್ಟು ಪರಿಶುದ್ಧವಾಗಿದೆ ಎಂಬುದನ್ನು ಪತ್ತೆ ಮಾಡಬಹುದು. ಹಾಗಾದ್ರೆ ಚಿನ್ನದ ಶುದ್ಧತೆ ತಿಳಿಯಲು ಮನೆಯಲ್ಲಿ ಏನು ಮಾಡಬೇಕು? ಮನೆಯಲ್ಲಿ ಯಾವ ರೀತಿ ಪರೀಕ್ಷೆ ಮಾಡಬಹುದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಅಯಸ್ಕಾಂತದ ಪರೀಕ್ಷೆ
ಸಾಮಾನ್ಯವಾಗಿ ನೈಜ ಚಿನ್ನವನ್ನು ಕಬ್ಬಿಣವನ್ನು ಬಳಸಿ ಮಾಡಲಾಗುವುದಿಲ್ಲ. ತಾಮ್ರದ ಅಂಶವಂತು ಚಿನ್ನದಲ್ಲಿ ಇದ್ದೇ ಇರಲಿದೆ. ಒಂದು ವೇಳೆ ಅಯಸ್ಕಾಂತಕ್ಕೆ ಚಿನ್ನವು ಅಂಟಿಕೊಂಡರೆ ಅದು ನಕಲಿ ಚಿನ್ನವಾಗಿದೆ. ಈ ಚಿನ್ನದ ಆಭರಣ ಮಾಡಲು ಕಬ್ಬಿಣದ ಅಂಶವನ್ನು ಬಳಸಲಾಗಿದೆ ಎಂದರ್ಥ.
ನೀರಿನಲ್ಲಿ ತೇಲುವುದು
ಚಿನ್ನವು ಭಾರವಾದ ಧಾತು. ಹೀಗಾಗಿ ಅದು ಎಂದಿಗೂ ನೀರಿನಲ್ಲಿ ತೇಲುವುದಿಲ್ಲ. ಸಾವಿವೆ ಕಾಳಿನಷ್ಟು ಚಿಕ್ಕ ಗಾತ್ರದ ಚಿನ್ನ ಕೂಡ ನೀರಿನಲ್ಲಿ ಮುಳುಗುತ್ತದೆ. ಆದರೆ ಚಿನ್ನ ಲೇಪಿತ ವಸ್ತು ಅಥವಾ ಕೆಲವು ಆರ್ಟಿಫಿಶಿಯಲ್ ಚಿನ್ನವು ನೀರಿನಲ್ಲಿ ತೇಲಬಹುದು. ಅಥವಾ ಅರ್ಧ ತೇಲುವುದು ಮತ್ತರ್ಧ ನೀರಿನಲ್ಲಿ ಮುಳುಗಿದರೆ ಅದರಲ್ಲಿ ಮಿಶ್ರಣ ಇರಬಹುದು.
ಸೆರಾಮಿಕ್ ಸ್ಕ್ರ್ಯಾಚ್ ಟೆಸ್ಟ್
ಶುದ್ಧ ಚಿನ್ನವನ್ನು ಪರಿಶೀಲಿಸುವ ಉತ್ತಮ ಮಾರ್ಗವೆಂದರೆ ಅದು ಸೆರಾಮಿಕ್ ಸ್ಕ್ರ್ಯಾಚ್ ಟೆಸ್ಟ್. ನೀವು ಅಕ್ಕಸಾಲಿಗರು ಅಥವಾ ಚಿನ್ನದ ಅಂಗಡಿಗೆ ತೆರಳಿ ಪರೀಕ್ಷೆ ನಡೆಸಿದರೆ ಅಲ್ಲಿ ಸ್ಕ್ರ್ಯಾಚ್ ಮಾಡುವ ಮೂಲಕ ಗುಣಮಟ್ಟ ಪರೀಕ್ಷೆ ಮಾಡಲಾಗುತ್ತದೆ. ಅಲ್ಲಿ ಚಿನ್ನದ ಗೆರೆ ಹಳದಿ ಬಣ್ಣದಲ್ಲಿ ಮೂಡಿದರೆ ಅದರ ಗುಣಮಟ್ಟವನ್ನು ಅಂದಾಜಿಸುತ್ತಾರೆ. ಹಾಗೆ ಅದು ಕಂದು ಬಣ್ಣದಲ್ಲಿ ಮೂಡಿದರೆ ಅದು ನೈಜ ಅಥವಾ ಶುದ್ಧ ಚಿನ್ನವಲ್ಲ ಎಂದು ತಿಳಿಯುತ್ತದೆ.
ನೈಟ್ರಿಕ್ ಆಮ್ಲ ಪರೀಕ್ಷೆ
ಇದು ಬಹುತೇಕ ಎಲ್ಲಾ ಕಡೆಯಲ್ಲೂ ಚಾಲನೆಯಲ್ಲಿರುವ ಪರೀಕ್ಷಾ ವಿಧಾನ ಎನ್ನಬಹುದು. ಚಿನ್ನ ಪರೀಕ್ಷೆಯ ಯಂತ್ರಗಳು ಕಂಡುಹಿಡಿಯುವುದಕ್ಕೂ ಮೊದಲು ಈ ವಿಧಾನದ ಮೂಲಕ ಚಿನ್ನ ಪರೀಕ್ಷೆ ನಡೆಯುತ್ತಿತ್ತು. ನೈಜ ಚಿನ್ನವು ನೈಟ್ರಿಕ್ ಆಮ್ಲದೊಂದಿಗೆ ಬೆರೆತಾಗ ಅದು ರಾಸಾಯನಿಕ ಕ್ರಿಯೆಗೆ ಒಳಗಾಗುವುದಿಲ್ಲ. ಆದ್ರೆ ನಕಲಿ ಚಿನ್ನವು ನೈಟ್ರಿಕ್ ಆಮ್ಲದೊಂದಿಗೆ ಬೆರೆತರೆ ಹಸಿರು ಬಣ್ಣದಿಂದ ಕೂಡಿದ ನೀರು ಹೊರಹಾಕುತ್ತದೆ. ಇದರಿಂದ ಇದು ನೈಜ ಚಿನ್ನವೋ ಇಲ್ಲವೋ ಎಂಬುದನ್ನು ಸುಲಭವಾಗಿ ಪತ್ತೆ ಮಾಡಬಹುದು.



Click it and Unblock the Notifications