Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಕಲಿ ತುಪ್ಪ ಪತ್ತೆ ಮಾಡೋದು ಹೇಗೆ? ಮನೆಯಲ್ಲೇ ಈ ರೀತಿ ಮಾಡಿ ಪರೀಕ್ಷಿಸಿ
ನೀವು ಅಡುಗೆಗೆ ಅಥವಾ ಸಿಹಿ ತಿಂಡಿಗೆ ಇಲ್ಲವೆ ವಿಶೇಷ ಹಬ್ಬದ ಸಮಯದಲ್ಲಿ ತುಪ್ಪವನ್ನು ಬಳುಸುತ್ತೀರಿ. ಹಿಂದೆಲ್ಲಾ ಮನೆಯಲ್ಲೇ ತುಪ್ಪ ಮಾಡಿ ಇಡುತ್ತಿದ್ದರು. ಆದ್ರೆ ಈಗ ಅಂಗಡಿಗಳಿಂದಲೇ ತಂದು ತುಪ್ಪ ಬಳಸುತ್ತೇವೆ. ಸದ್ಯ ಮಾರುಕಟ್ಟೆಯಲ್ಲಿ ಹತ್ತಾರು ಕಂಪನಿಗಳು ದುಬಾರಿ ಬೆಲೆಗೆ ತುಪ್ಪ ಮಾರಾಟ ಮಾಡುವುದು ನೋಡಬಹುದು. ಹಾಗೆ ನಂದಿನಿ ತುಪ್ಪ ಕೂಡ ಮಾರುಕಟ್ಟೆಯಲ್ಲಿ ತನ್ನದೇ ಗ್ರಾಹಕರ ಬಳಗ ಹೊಂದಿದೆ.
ಆದ್ರೆ ಮಾರುಕಟ್ಟೆಯಲ್ಲಿ ಈಗ ನಕಲಿ ತುಪ್ಪದ ಹಾವಳಿ ಹೆಚ್ಚಾಗಿದೆ. ಅಂತಾರಾಜ್ಯ ಮಟ್ಟದ ದೊಡ್ಡ ನಕಲಿ ತುಪ್ಪದ ಜಾಲವನ್ನು ಬೆಂಗಳೂರಿನಲ್ಲಿ ಪತ್ತೆ ಮಾಡಲಾಗಿದೆ. ಬೆಂಗಳೂರು ಕೇಂದ್ರ ಕ್ರೈಮ್ ಬ್ರಾಂಚ್ (CCB) ಅಧಿಕಾರಿಗಳು ನಕಲಿ ಹಾಗೂ ಕಳಪೆ ಗುಣಮಟ್ಟದ ತುಪ್ಪ ತಯಾರಿಸಿ ಮಾರಾಟ ಮಾಡುತ್ತಿದ್ದ ಅಂತರರಾಜ್ಯ ವಂಚನಾ ಜಾಲವನ್ನು ಪತ್ತೆಹಚ್ಚಿ ನಾಲ್ವರನ್ನು ಬಂಧಿಸಿದ್ದಾರೆ.

ಈಗಾಗಲೆ ಈ ನಕಲಿ ತುಪ್ಪಗಳು ಹಲವು ಕಡೆ ಮಾರಾಟವಾಗಿರುವ ಶಂಕೆಯೂ ಇದೆ. ಈ ನಕಲಿ ತುಪ್ಪವನ್ನು ತೆಂಗಿನೆಣ್ಣೆ ಮತ್ತು ಪಾಮ್ ಎಣ್ಣೆಯನ್ನು ಮಿಶ್ರಣ ಮಾಡಿ ಕಳಪೆ ತುಪ್ಪವನ್ನು ತಯಾರಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ತಮಿಳುನಾಡಿನಿಂದ ನಗರಕ್ಕೆ ತಲುಪಿದ ನಂತರ ಸ್ಥಳೀಯ ವಿತರಕರ ಮೂಲಕ ಹೋಲ್‌ಸೆಲ್ ಅಂಗಡಿಗಳು, ರಿಟೇಲ್ ಅಂಗಡಿಗಳು ಹಾಗೂ ನಂದಿನಿ ಪಾರ್ಲರ್‌ಗಳಿಗೂ ಈ ನಕಲಿ ತುಪ್ಪವನ್ನು ಪೂರೈಕೆ ಮಾಡಲಾಗುತ್ತಿತ್ತು.
ನಕಲಿ ತುಪ್ಪವು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳ ತರುವುದು ಖಚಿತ. ಆದ್ರೆ ನಕಲಿ ತುಪ್ಪ ಯಾವುದು ಎಂದು ಪತ್ತೆ ಮಾಡುವುದು ಈಗ ಮುಖ್ಯವಾಗಿದೆ. ಹಾಗೆ ಈ ರೀತಿ ನಕಲಿ ತುಪ್ಪವನ್ನು ನೀವೂ ಕೂಡ ಸುಲಭವಾಗಿ ಪತ್ತೆ ಮಾಡಬಹುದು. ಹೌದು ಮನೆಯಲ್ಲಿರುವ ತುಪ್ಪವು ಅಸಲಿಯೋ ಅಥವಾ ನಕಲಿಯೋ ಎಂದು ತಿಳಿಯಬಹುದು.
ಹಾಗಾದ್ರೆ ಮನೆಯಲ್ಲಿ ತುಪ್ಪದ ಪರೀಕ್ಷೆ ಮಾಡುವುದು ಹೇಗೆ? ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋಣ.
ಮನೆಯಲ್ಲಿರುವ ತುಪ್ಪವನ್ನು ಒಂದು ಸಣ್ಣ ಪಾತ್ರೆಯಲ್ಲಿ ಹಾಕಿ ಅದನ್ನು ಕರಿಗಿಸಬೇಕು. ಅನಂತರ ಈ ತುಪ್ಪವನ್ನು ಗಟ್ಟಿಯಾಗಲು ಬಿಡಬೇಕು. ಸಾಮಾನ್ಯವಾಗಿ ಶುದ್ಧ ತುಪ್ಪವು ಗಟ್ಟಿಯಾಗಲು ಸುಮಾರು 35 ನಿಮಿಷಕ್ಕೂ ಹೆಚ್ಚು ಸಮಯ ತೆಗೆದುಕೊಳ್ಳಲಿದೆ. ಆದ್ರೆ ನಕಲಿ ತುಪ್ಪವಾಗಿದ್ದರೆ ಕೇವಲ 5 ನಿಮಿಷದಲ್ಲಿ ಗಟ್ಟಿಯಾಗಬಹುದು. ಇದು 25 ಡಿಗ್ರಿ ಸೆಲ್ಸಿಯಸ್‌ನಲ್ಲಿ 35 ನಿಮಿಷ ಹಿಡಿಯಲಿದೆ. ಬೇಗ ಗಟ್ಟಿಯಾದರೆ ಅದರಲ್ಲಿ ವನಸ್ಪತಿ, ಕೊಬ್ಬು, ಎಣ್ಣೆ ಮಿಶ್ರಣವಾಗಿದೆ ಎಂದರ್ಥ.
ಬಿಸಿಲಿನಲ್ಲಿ ಅಂಗೈ ಮೇಲೆ ಹಿಡಿದು ನೋಡಿ
ನಿಮ್ಮ ಮನೆಯಲ್ಲಿನ ತುಪ್ಪವನ್ನು ಅಂಗೈ ಮೇಲೆ ಹಾಕಿಕೊಂಡು ಬಿಸಿಲಿನಲ್ಲಿ ಕೈ ಹಿಡಿದು ನೋಡಿ. ಅಸಲಿ ತುಪ್ಪ ಬಿಸಿಲಿಗೆ ಹಿಡಿದ ತಕ್ಷಣ ಕರಗಲು ಆರಂಭಿಸಲಿದೆ. ಆದ್ರೆ ಡಾಲ್ಡಾದಿಂದ ಮಾಡಿದ ಅಥವಾ ಕೊಬ್ಬು ಮಿಶ್ರಿತ ತುಪ್ಪವು ಬಿಸಿಲಿಗೆ ಕರಗುವುದಿಲ್ಲ. ಇದರಿಂದ ಸುಲಭವಾಗಿ ನೀವು ನಕಲಿ ತುಪ್ಪ ಯಾವುದು ಎಂದು ಪತ್ತೆ ಮಾಡಬಹುದು.
ಬಿಸಿ ನೀರಿನ ಪ್ರಯೋಗ
ಒಂದು ಗ್ಲಾಸ್‌ನಲ್ಲಿ ಉಗುರು ಬೆಚ್ಚಗಿನ ಬಿಸಿ ನೀರು ತೆಗೆದುಕೊಳ್ಳಿ. ನಂತರ ಅರ್ಧ ಸ್ಪೂನ್ ತುಪ್ಪವನ್ನು ಆ ನೀರಿನಲ್ಲಿ ಹಾಕಿ ಬಿಡಿ. ಅದು ನಕಲಿ ತುಪ್ಪವಾದರೆ ಬಿಸಿ ನೀರಿನಲ್ಲಿ ತಾನಾಗಿಯೇ ಬೆರೆಯುವುದಿಲ್ಲ. ಆದ್ರೆ ಅಸಲಿ ತುಪ್ಪ ನೀರಿನೊಂದಿಗೆ ಕರಗಲು ಆರಂಭಿಸುತ್ತದೆ. ಇದರಿಂದ ಶುದ್ಧ ತುಪ್ಪವನ್ನು ಪತ್ತೆ ಮಾಡಬಹುದು.
ಇದಿಷ್ಟೇ ಅಲ್ಲ ತುಪ್ಪದಿಂದ ಬರುವಂತ ಪರಿಮಳದಿಂದಲೂ ಅದು ಅಸಲಿ ತುಪ್ಪವೋ ಅಥವಾ ನಕಲಿಯೋ ಎಂಬುದನ್ನು ಪತ್ತೆ ಮಾಡಬಹುದು. ಸಾಮಾನ್ಯವಾಗಿ ಡಾಲ್ಡಾದಿಂದ ಮಾಡಿದ ತುಪ್ಪ ಬಹುದಿನಗಳ ನಂತರ ಜಿಡ್ಡು ಹಿಡಿದ ವಾಸನೆ ಬರಬಹುದು. ಆದ್ರೆ ಶುದ್ಧ ತುಪ್ಪ ಹಲವು ದಿನಗಳ ಕಾಲ ಇಟ್ಟರು ತನ್ನ ಮೂಲ ರೂಪ ಕಳೆದುಕೊಳ್ಳುವುದಿಲ್ಲ.



Click it and Unblock the Notifications