Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
'ಯಾವ ಬ್ರೀಡ್ ನಾಯಿ?' ನಿಮ್ಮ ಅಂತಸ್ತು ಅಳೆಯಲು ಹೊಸ ಮಾನದಂಡ
ಮಾನವನ ಸುದೀರ್ಘ ಇತಿಹಾಸದಲ್ಲಿ ಅಂದಿಗೂ ಇಂದಿಗೂ ಸಾಕು ಪ್ರಾಣಿಗಳಾಗಿ ಇರುವುದರಲ್ಲಿ ನಾಯಿಗೆ ಮೊದಲ ಸ್ಥಾನ. ನಾಯಿಗಳು. ಮಾನವನ ಅನೇಕ ಕೆಲಸ ಕಾರ್ಯಗಳಲ್ಲಿ ಸಹಾಯ ಮಾಡುತ್ತವೆ. ನೀವು ಅವುಗಳನ್ನು ಬೆಳೆಸಿದಂತೆ ಅವು ನಿಮ್ಮ ಜೊತೆ ವ್ಯವಹರಿಸುತ್ತವೆ. ಮನೆ ಕಾಯುವುದರಿಂದ ಹಿಡಿದು, ಭೇಟೆ, ತರಬೇತಿ ಪಡೆದು ಭದ್ರತೆ, ಆಕ್ಟಿಂಗ್, ಜೊತೆಗೆ ಮಾನವನ ನಿತ್ಯ ಕೆಲಸಗಳಲ್ಲೂ ಸಹಾಯ ಮಾಡುತ್ತವೆ. ಹಾಗಾಗಿಯೇ ಮಾನವನಿಗೆ ನಾಯಿಗಳು ಅಂದರೆ ಅಚ್ಚುಮೆಚ್ಚು.

ನಾಯಿ ಸಾಕುವುದು ಪ್ಯಾಷನ್
ಇತ್ತೀಚೆಗೆ ನಾಯಿಗಳನ್ನು ಸಾಕುವುದು ಒಂದು ರೀತಿ ಫ್ಯಾಷನ್ ಆಗಿಬಿಟ್ಟಿದೆ. ವಿವಿಧ ತಳಿಯ ನಾಯಿಗಳನ್ನು ನಮ್ಮ ಸುತ್ತ-ಮುತ್ತ ನಿತ್ಯ ಕಾಣುತ್ತೇವೆ. 5ಸಾವಿರದಿಂದ ಹಿಡಿದು ಲಕ್ಷಗಟ್ಟಲೆ ಹಣ ಕೊಟ್ಟು ನಾಯಿ ಕೊಂಡು ತರುವ ಜನರಿದ್ದಾರೆ. ಆಮೇಲೆ ಅವುಗಳನ್ನು ಕಾಪಾಡುವುದು, ಆರೈಕೆ ಮಾಡುವುದು ಕೂಡಾ ದುಬಾರಿಯೇ. ಹಾಗಾಗಿಯೇ ನಾಯಿಗಳ ಸಾಕುವಿಕೆಯ ಹಿಂದೆ ಕೋಟ್ಯಾಂತರ ರೂಪಾಯಿ ಉದ್ಯಮ ನಡೆಯುತ್ತಿದೆ. ನಾಯಿಗಳನ್ನು ಸಾಕಿ ಮಾರಾಟ ಮಾಡುವುದು, ಅವುಗಳಿಗೆ ಆಹಾರ, ಮಲಗಲು ಬೆಡ್, ಸೋಪ್, ಶ್ಯಾಂಪು, ಪೌಡರ್, ಡ್ರಿಂಕ್ಸ್, ನಿಯಮಿತ ಚುಚ್ಚುಮದ್ದುಗಳು, ಹೈಟೆಕ್ ಆಸ್ಪತ್ರೆ, ಪಾರ್ಲರ್ ಗಳು ಇದಕ್ಕಾಗಿಯೇ ತಲೆ ಎತ್ತಿವೆ.

ನಮಗೆ ನಾವೇ ಹಾಕಿಕೊಂಡ ಮಾನದಂಡ
ಯಾವ ಜಾತಿಯ ನಾಯಿಗಳು ಮನೆಯಲ್ಲಿವೆ ಎನ್ನುವುದು ಒಂದು ರೀತಿಯ ಪ್ರೆಸ್ಟೀಜ್ ಪ್ರಶ್ನೆಯಾಗಿದೆ. ಮನುಷ್ಯನ ಸಂಪತ್ತನ್ನು ಅಳೆಯಲು ಮನುಷ್ಯನೇ ತನ್ನ ಸುತ್ತ ಒಂದು ಮಿಥ್ಯದ ಮಾನದಂಡ ಅಳವಡಿಸಿಕೊಂಡಿದ್ದಾನೆ. ಯಾವ ಬ್ರಾಂಡ್ ಬಟ್ಟೆ, ಮನೆ ಹೇಗಿದೆ, ಯಾವ ಮಾಡೆಲ್ ಕಾರು, ಯಾವ ಬ್ರಾಂಡ್ ವಾಚ್ ಕಟ್ಟಿದ್ದಾರೆ, ಇದರ ಜೊತೆ ಈಗ ಸೇರ್ಪಡೆಯಾಗಿರುವುದು ಯಾವ ತಳಿಯ ನಾಯಿ ಸಾಕಿದ್ದೀರಾ ಎನ್ನುವುದು. ಹೆಚ್ಚಿನ ಬೆಲೆಯ ವಿದೇಶೀ ನಾಯಿ ಸಾಕಿದ್ದರೆ ಸಮಾಜದಲ್ಲಿ ನಿಮಗೇನೋ ಗೌರವ. ಅವುಗಳನ್ನು ನೋಡಿಕೊಳ್ಳುವ ಶ್ರಮವೂ ಏನು ಕಡಿಮೆ ಇಲ್ಲ. ಮಗುವೊಂದನ್ನು ಸಾಕಲು ತೆಗೆದುಕೊಳ್ಳುವುದಕ್ಕಿಂತ ಹೆಚ್ಚು ಜವಬ್ದಾರಿ ನಾಯಿ ಸಾಕುವಾಗ ಬೇಕಾಗುತ್ತದೆ.

ತಿಂಗಳಿಗೆ ಲಕ್ಷಾಂತರ ಖರ್ಚು
ನಾಯಿಗಳ ಸಾಕುವಿಕೆಗಾಗಿಯೇ ತಿಂಗಳೊಂದಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಮಂದಿಯಿದ್ದಾರೆ. ಅವುಗಳನ್ನು ನೋಡಿಕೊಳ್ಳಲೆಂದೇ ಸಹಾಯಕರನ್ನು ಸಹ ನೇಮಕ ಮಾಡಿರುತ್ತಾರೆ. ಬಾಲಿವುಡ್, ಹಾಲಿವುಡ್, ಕ್ರಿಕೆಟರ್ಸ್ ಇತರ ವಿಐಪಿಗಳು ಹಲವರು ಒಂದಲ್ಲ ಒಂದು ಬೆಲೆಬಾಳುವ ನಾಯಿಯ ಒಡೆಯರಾಗಿದ್ದಾರೆ. ಒಮ್ಮೊಮ್ಮೆ ತಮ್ಮ ಪ್ರೀತಿಯ ನಾಯಿಯ ಜೊತೆ ಒಂದು ಫೋಟ್ ಅಪ್ಲೋಡ್ ಮಾಡ್ತಿರ್ತಾರೆ ಕೂಡ.

ನಾಯಿಗೂ ಇದೆ ಅದೃಷ್ಟ
ಈ ಸಮಾಜದಲ್ಲಿ ಒಂದು ವರ್ಗದ ಮನುಷ್ಯ ಮಾತ್ರ ಐಷಾರಾಮಿ ಜೀವ ನಡೆಸುತ್ತಿಲ್ಲ. ಹಲವು ನಾಯಿಗಳು ಸಹ ಐಷಾರಾಮಿ ಜೀವನ ನಡೆಸುತ್ತಿವೆ. ಅದೂ ಕೂಡ ಆ ಮನುಷ್ಯನ ಐಷಾರಾಮಿ ಜೀವನದ ಒಂದು ಭಾಗವೇ ಆಗಿದೆ. ಮನುಷ್ಯ ಕೇವಲ ತನ್ನ ಜೊತೆಗಾಗಿ, ತನ್ನ ಅಗತ್ಯಕ್ಕಾಗಿ ನಾಯಿ ಸಾಕುವ ಕ್ರಮ ಬದಲಾಗುತ್ತಿದೆ. ತನ್ನ ಅಂತಸ್ತಿನ ಪ್ರದರ್ಶನಕ್ಕಾಗಿಯೂ ಮೂಕ ಪ್ರಾಣಿಗಳು ಬಳಕೆಯಾಗುತ್ತಿವೆ. ಆ ನೆಪದಲ್ಲಾದರೂ ನಾಯಿಯೊಂದಕ್ಕೆ ಉತ್ತಮ ಜೀವನ ಸಿಗುವಂತಾಗಿದೆ ಎಂಬುವುದು ಬೇರೆ ಮಾತು.



Click it and Unblock the Notifications
