Latest Updates
-
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು!
ಬೆಂಗಳೂರಿನಲ್ಲಿರುವ ಈ ಶ್ವಾನದ ಬೆಲೆ 20 ಕೋಟಿ! ಇದರ ವಿಶೇಷತೆಯೇನು?
ಕಕೇಷ್ಯಿಯನ್ ಶೆಪರ್ಡ್ ಎಂಬ ಈ ಶ್ವಾನ ಬೆಂಗಳೂರಿನಲ್ಲಿರುವ ಅತ್ಯಂತ ದುಬಾರಿ ಶ್ವಾನ. ಬೆಂಗಳೂರಿನ ಸತೀಶ್ ಎಂಬ ವ್ಯಕ್ತಿ ಬಳಿ ಇರುವ ಶ್ವಾನದ ಬೆಲೆ ಕೇಳಿದರೆ ಸಾಮಾನ್ಯ ಜನರಿಗೆ ತಲೆಸುತ್ತು ಬರುವಂತಿದೆ.
ಹೌದು ಈ ಶ್ವಾನವನ್ನು ಸತೀಶ್ ಬರೋಬರಿ 20 ಕೋಟಿ ಕೊಟ್ಟು ಖರೀದಿಸಿದ್ದಾರೆ. ಹಾಗಾಗಿ ಸದ್ಯಕ್ಕೆ ಈ ಶ್ವಾನ ಅತ್ಯಂತ ದುಬಾರಿ ಶ್ವಾನಗಳಲ್ಲಿ ಟಾಪ್ ಸ್ಥಾನದಲ್ಲಿದೆ.

ಅಷ್ಟೊಂದು ದುಬಾರಿಯಾಗಿರುವ ಈ ಶ್ವಾನದ ವಿಶೇಷತೆಗಳೇನು ಎಂದು ನೋಡೋಣವೇ?
ಶ್ವಾನಗಳ ಪ್ರೇಮಿಯಾಗಿರುವ ಸತೀಶ್ ಬಳಿ ಅನೇಕ ದುಬಾರಿ ಬೆಲೆಯ ಶ್ವಾನಗಳಿವೆ, ಅದರೆ ಈ ಶ್ವಾನ ಅತ್ಯಂತ ದುಬಾರಿ ಬೆಲೆಯದ್ದಾಗಿದೆ.
ಕ್ಯಾಡಾಬೊಮ್ ಹೇಡರ್ಸ್
ತಮ್ಮ ಮುದ್ದಿನ ರಾಯಲ್ ಶ್ವಾನಕ್ಕೆ ಕ್ಯಾಡಾಬೊಮ್ ಹೇಡರ್ಸ್ ಎಂದು ಹೆಸರಿಡಲಾಗಿದೆ. ಈ ಕ್ಯಾಡಾಬೋಮ್‌ಗೆ ಈಗ ಒಂದೂವರೆ ವರ್ಷ, ಇದರ ತುಕ ಬರೋಬರಿ 100 ಕೆಜಿ ಇದೆ. ನೋಡಲು ಸಿಂಹದ ರೋಮದಂತೆ ಇದು ಕೂಡ ಕುತ್ತಿಗೆ ಬಳಿ ಉದ್ದುದ್ದದ ರೋಮ ಹೊಂದಿದೆ. ಇದರ ತಲೆ ಬುರುಡೆ ಗಾತ್ರ 38 ಇಂಚು, ಭುಜದ ಗಾತ್ರದ 34 ಇಂಚು ಹೊಂದಿದೆ, ಇದರ ಕಾಲುಗಳು ಕೂಡ ಉದ್ದವಾಗಿದೆ.
ಈ ಬಗೆಯ ಶ್ವಾನಗಳ ಆಯುಸ್ಸು ಎಷ್ಟಿರುತ್ತದೆ?
ಇವುಗಳು 10-12 ವರ್ಷ ಬದುಕಿರುತ್ತವೆ. ಈ ಜಾತಿಯ ನಾಯಿಗಳಿಗೆ ತುಂಬಾ ಧೈರ್ಯ, ತುಂಬಾ ಬುದ್ಧಿವಂತಿಕೆ ಇರುತ್ತದೆ, ಇವುಗಳ ಗಾತ್ರ ದೊಡ್ಡದಾಗಿದ್ದು ಗಮನ ಸೆಳೆಯುತ್ತದೆ. ಇವುಗಳು ರಕ್ಷಣೆ ಕಾರ್ಯ ಮಾಡುವುದರಲ್ಲಿ ಎತ್ತಿದ ಕೈ. ಆದ್ದರಿಂದ ಕಕೇಷ್ಯಾದ ಪ್ರಾಂತ್ಯದ ಬುಡಕಟ್ಟು ಜನಾಂಗದವರು ಇದನ್ನು ತಮ್ಮ ಜಾನುವಾರುಗಳ ರಕ್ಷಣೆ ಬಳಸುತ್ತಾರೆ. ಈ ತಳಿಯ ಶ್ವಾನಗಳು ಒಸ್ಸೆಟಿಯಾ, ಸರ್ಕಾಸಿಯಾ, ಟರ್ಕಿ, ರಷ್ಯಾ ಜಾರ್ಜಿಯಾ, ಅರ್ಮೇನಿಯಾ, ಅಜೆರ್ಬೈಜಾನ್, ಮತ್ತು ಡಾಗೆಸ್ತಾನ್ ದೇಶಗಳಲ್ಲಿ ಕಂಡು ಬರುತ್ತದೆ. ಇವುಗಳು ತುಂಬಾ ಫ್ರೆಂಡ್ಲಿ ಡಾಗ್‌ಗಳು, ಬೇಗನೆ ಹೊಂದಿಕೊಳ್ಳುತ್ತವೆ, ಹೇಳುವುದನ್ನು ಅನುಸರಿಸುತ್ತದೆ.
ಭಾರತದ ವಾತಾವರಣ ಈ ತಳಿಯ ಶ್ವಾನಕ್ಕೆ ಆಗಿ ಬರುವುದೇ?
ಇಲ್ಲ, ಈ ಶ್ವಾನವನ್ನು ಏರ್ ಕಂಡೀಷನರ್ ವಾತಾವರಣದಲ್ಲಿ ಇಡಲಾಗಿದೆ. ಇದನ್ನು ತಂದು 6 ತಿಂಗಳಾದರೂ ಹೆಚ್ಚಿನವರಿಗೆ ಇದರ ಬಗ್ಗೆ ತಿಳಿದಿರಲಿಲ್ಲ, ಇದನ್ನು ಹೈದರಾಬಾದ್‌ನ ಡಾಗ್ ಬ್ರೀಡರ್ ಬಳಿಯಿಂದ 20 ಕೋಟಿ ಕೊಟ್ಟು ತರಲಾಗಿತ್ತು. ಇದನ್ನು ಮೊದಲು ತಂದಾಗ ಇದರ ರೋಮಗಳು ಉದುರುತ್ತಿರುವುದರಿಂದ ಹೊರಗಡೆ ಕರೆದುಕೊಂಡು ಬರುತ್ತಿರಲಿಲ್ಲ, ಆದ್ದರಿಂದ ಹೆಚ್ಚಿನವರಿಗೆ ತಿಳಿದಿರಲಿಲ್ಲ.
ತಿರುವಂತನಪುರದ ಕೇನೆಲ್ ಕ್ಲಬ್ ಈವೆಂಟ್‌ನಲ್ಲಿ ಹೇಡರ್‌ದ್ದೇ ಸದ್ದು
ಈ ಶ್ವಾನ ಕೇರಳದಲ್ಲಿ ನಡೆದ ಈವೆಂಟ್‌ನಲ್ಲಿ 32 ಬಹುಮಾನಗಳನ್ನು ಗೆಲ್ಲುವ ಮೂಲಕ ತುಂಬಾನೇ ಗಮನ ಸೆಳೆದಿತ್ತು. 7 ದಿನಗಳಲ್ಲಿ ಹೇಡರ್ ಅಷ್ಟೊಂದು ಚೆನ್ನಾಗಿ ಪ್ರದರ್ಶನ ಮಾಡುತ್ತಾನೆ ಎಂದು ನನಗೇ ಗೊತ್ತಿರಲಿಲ್ಲ ಎಂದು ಸತೀಶ್ ಹೇಳುತ್ತಾರೆ.
ಸತೀಶ್ ಬಳಿ ಸೇರಿದೆ ಮತ್ತೆರಡು ಕಕೇಷ್ಯಿಯನ್ ಮರಿಗಳು
ಸತೀಶ್ ಅವರು ಒಂದು ಮರಿಗೆ 5 ಕೋಟಿಯಂತೆ ಎರಡು ಕಕೇಷ್ಯಿಯನ್ ಮರಿಗಳನ್ನು ತಂದಿದದ್ದು, ಹೇಡರ್ ಸೇರಿ ಮೂರು ಶ್ವಾನಗಳನ್ನು ತನ್ನ ಬಳಿಯೇ ಇಟ್ಟುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಹೇಡರ್ ಆರೈಕೆ ಮಾಡುವುದು ಸುಲಭವಲ್ಲ
ಆರೋಗ್ಯ: ಇತರ ಶ್ವಾನಗಳಂತೆ ಇವುಗಳಿಗೂ ಆರೋಗ್ಯ ಸಮಸ್ಯೆ ಕಾಡುವುದು. ಇವುಗಳ ಲಿವರ್‌ನಲ್ಲಿ ಸಮಸ್ಯೆ ಕಾಡಬಹುದು. ಸಾಮಾನ್ಯವಾಗಿ ಈ ಬಗೆಯ ತಳಿಗಳು ತುಂಬಾ ಆರೋಗ್ಯದಿಂದ ಕೂಡಿರುತ್ತದೆ. ಈ ತಳಿಯನ್ನು ಸಾಕುವ ಮುನ್ನ ಇವುಗಳ ಬಗ್ಗೆ ಸಂಪೂರ್ಣ ತಿಳಿದುಕೊಳ್ಳುವುದು ಇದರ ಮಾಲೀಕರ ಜವಾಬ್ದಾರಿಯಾಗಿರುತ್ತದೆ.
ದಿನಾ ಬಾಚಬೇಕು: ಈ ಶ್ವಾನದ ರೋಮಗಳು ಉದ್ದವಾಗಿದ್ದು ಆಗಾಗ ಬ್ರೆಷ್ ಮಾಡಬೇಕು, ಇಲ್ಲದಿದ್ದರೆ ಉದುರಲು ಪ್ರಾರಂಭಿಸುವುದು. ಪ್ರತಿದಿನ ಸ್ವಚ್ಛ ಮಾಡಬೇಕು, ಕೂದಲು ಹಾಗೂ ಉಗುರುಗಳನ್ನು ಪ್ರತಿದಿನ ಸ್ವಚ್ಛ ಮಾಡಬೇಕು.
ಇವುಗಳಿಗೆ ವ್ಯಾಯಾಮ ಮಾಡಿಸಬೇಕು
ಇವುಗಳನ್ನು ಪ್ರತಿದಿನ ವಾಕ್ ಮಾಡಿಸಬೇಕು. ಇವುಗಳಿಗೆ ವಾಕಿಂಗ್, ಹೈಕಿಂಗ್ ಮಾಡಲು ಸೂಕ್ತವಾಗಿ ಸೆಟ್ ಮಾಡಿರಬೇಕು.
ಪೋಷಕಾಂಶಗಳು: ಈ ತಳಿಗೆ ತುಂಬಾ ಪೋಷಕಾಂಶವಿರುವ ಆಹಾರಗಳನ್ನು ನೀಡಬೇಕು. ಆದ್ದರಿಂದ 20 ಕೋಟಿ ಕೊಟ್ಟು ತಂದ ಈ ಶ್ವಾನದ ಆರೈಕೆ ಕೂಡ ಅಷ್ಟೇ ದುಬಾರಿಯಾಗಿದೆ.



Click it and Unblock the Notifications


