Latest Updates
-
ಭಾಯಿ ದೂಜ್ 2026: ಹಬ್ಬದ ಸಂಭ್ರಮಕ್ಕೆ ಪ್ಲಾನಿಂಗ್, ಬಜೆಟ್ ಮತ್ತು ಸಮಯ ನಿರ್ವಹಣೆಯ ಸರಳ ಟಿಪ್ಸ್ -
ಹಬ್ಬದ ಸಂಭ್ರಮದಲ್ಲಿ ಬೀದಿಬದಿ ಆಹಾರ ಸೇವಿಸುವ ಮುನ್ನ ಎಚ್ಚರ: ಆರೋಗ್ಯ ಸುರಕ್ಷತೆಗೆ ಇಲ್ಲಿದೆ 5 ಸರಳ ಸೂತ್ರಗಳು -
ಬಿಗ್ ಬಾಸ್ ಕನ್ನಡ 13: ಈ ವಾರ ಯಾರೂ ಎಲಿಮಿನೇಟ್ ಇಲ್ಲ! ಕಿಚ್ಚ ಸುದೀಪ್ ನೀಡಿದ ಅಚ್ಚರಿಯ ಟ್ವಿಸ್ಟ್ ಏನು? -
ದೀಪಾವಳಿ ನಂತರ ದೆಹಲಿಯಲ್ಲಿ ದಟ್ಟ ಹೊಗೆ: ಮಕ್ಕಳ ಆರೋಗ್ಯ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ -
ಲಕ್ಷ್ಮಿ ಪೂಜೆಯ ಮುಹೂರ್ತದ ಗೊಂದಲ: ಕುಟುಂಬದ ಶಾಂತಿಗಾಗಿ ಇಲ್ಲಿದೆ ಸರಳ ಪರಿಹಾರಗಳು -
ದೀಪಾವಳಿ ಹಬ್ಬದ ಸಂಭ್ರಮ: ಡಯಾಬಿಟಿಸ್ ಇದ್ದರೂ ಸಿಹಿ ಸವಿಯಲು ಈ ಟಿಪ್ಸ್ ಫಾಲೋ ಮಾಡಿ -
ಅಯೋಧ್ಯೆ ದೀಪೋತ್ಸವ 2026: 36 ಲಕ್ಷ ದೀಪಗಳ ಬೆಳಕಿನ ವೈಭವ, ಸಂಚಾರ ಮಾರ್ಗ ಮತ್ತು ವೀಕ್ಷಣೆಯ ಟಿಪ್ಸ್ -
ದೀಪಾವಳಿ ಸಂಭ್ರಮದಲ್ಲಿ ಬೆನ್ನು ನೋವಾ? ಲಕ್ಷ್ಮಿ ಪೂಜೆಗೂ ಮುನ್ನ ಈ 7 ನಿಮಿಷದ ಸ್ಟ್ರೆಚಿಂಗ್ ಟ್ರೈ ಮಾಡಿ! -
ದೀಪಾವಳಿ ಸಂಭ್ರಮಕ್ಕೆ ಮೆಗಾ ಬ್ಲಾಕ್ ಅಡ್ಡಿ: ಮುಂಬೈ ರೈಲು ಪ್ರಯಾಣಿಕರೇ ಎಚ್ಚರ, ಪ್ಲಾನ್ ಬದಲಾಯಿಸಿ! -
ದೀಪಾವಳಿ ಸಿಹಿ ತಿಂಡಿಗಳಲ್ಲಿ ಕಲಬೆರಕೆ? 30 ಸೆಕೆಂಡ್ಗಳಲ್ಲಿ ಪರೀಕ್ಷಿಸಿ ನಿಮ್ಮ ಕುಟುಂಬದ ಆರೋಗ್ಯ ಕಾಪಾಡಿ!
ಅಕ್ವೇರಿಯಂ ಬಗ್ಗೆ ಜನರಲ್ಲಿರುವ ಹುಸಿ ನಂಬಿಕೆಗಳು
ಅಕ್ವೇರಿಯಂನಲ್ಲಿ ಮೀನು ಸಾಕುವುದು ಉತ್ತಮವಾದ ಅಭ್ಯಾಸ. ಇದರಿಂದ ಮನಸ್ಸಿಗೆ ಸಂತೋಷ ಸಿಗುತ್ತದೆ. ಆದರೆ ಅಕ್ವೇರಿಯಂನಲ್ಲಿ ಮೀನು ಸಾಕಲು ಹೆಚ್ಚಿನವರು ಭಯಪಡುತ್ತಾರೆ. ಮೀನು ಸಾಹುವುದು ದುಬಾರಿಯಾದದು, ಟ್ಯಾಂಕ್ ನಿರ್ವಹಣೆ ಸುಲಭದ ಕೆಲಸವಲ್ಲ ಹೀಗೆ ನಾನಾ ಕಲ್ಪಿತ ಕಾರಣಗಳಿಂದ ಮೀನು ಸಾಕಲು ಇಷ್ಟಪಡುವುದಿಲ್ಲ. ಆದರೆ ವಾಸ್ತವದಲ್ಲಿ ಹಾಗೆ ಇರುವುದಿಲ್ಲ. ಅಕ್ವೇರಿಯಂ ಮೀನು ಸಾಕುವುದರ ಬಗ್ಗೆ ಇರುವ ಮಿಥ್ಯಗಳ ಬಗ್ಗೆ ತಿಳಿಯಲು ಮುಂದೆ ಓದಿ:

ಮೀನಿನ ಟ್ಯಾಂಕ್ ತಂದು ಅದರ ನಿರ್ವಹಣೆ ಮಾಡಲು ಅಧಿಕ ವೆಚ್ಚ ತಗುಲುವುದು:
ಈ ರೀತಿ ಅಂದುಕೊಳ್ಳುವುದು ತಪ್ಪು. ಇದನ್ನು ನಿರ್ವಹಣೆ ಮಾಡುವುದು ಸುಲಭದ ಕೆಲಸ. ಬೆಲೆ ಕೂಡ ಕೈಗೆಟುಕುವ ದರದಲ್ಲಿ ಇರುತ್ತದೆ. ಇದಕ್ಕೆ ಉತ್ತಮ ಫಿಲ್ಟರ್ ಮತ್ತು ಬೆಳಕಿನ ಸೌಲಭ್ಯವಿದ್ದರೆ ಸಾಕು.
ಟ್ಯಾಂಕ್ನಲ್ಲಿರುವ ನೀರು ಪ್ರತಿದಿನ ಬದಲಾಯಿಸಬೇಕು:
ದಿನಾ ನೀರು ಬದಲಾಯಿಸುತ್ತಿದ್ದರೆ ಮೀನು ಬೇಗನೆ ಸತ್ತು ಹೋಗುತ್ತದೆ! ನೀರು ಬದಲಾಯಿಸುವಾಗ ಮುಖ್ಯವಾದ ವಿಷಯವೆಂದರೆ ನೀರನ್ನು ಸಂಪೂರ್ಣವಾಗಿ ಬದಲಾಯಿಸಬಾರದು. ಸ್ವಲ್ಪ ನೀರನ್ನು ಉಳಿಸಿಕೊಂಡು ಹೊಸ ನೀರನ್ನು ಸೇರಿಸಬೇಕು.
ಮೊದಲ ಬಾರಿಗೆ ಮೀನು ಸಾಕುವುದಾದರೆ ಸಣ್ಣ ಟ್ಯಾಂಕ್ ಒಳ್ಳೆಯದು:
ಮೊದಲ ಬಾರಿಗೆ ಮೀನು ಸಾಕಲು ಬಯಸುವವರಿಗೆ ದೊಡ್ಡ ಟ್ಯಾಂಕ್ ಕಷ್ಟವಾಗುವುದು ಆದ್ದರಿಂದ ಸಣ್ಣ ಟ್ಯಾಂಕ್ನಲ್ಲಿ ಮೀನು ಸಾಕಲು ಹೇಳತ್ತಾರೆ. ಆದರೆ ದೊಡ್ಡ ಟ್ಯಾಂಕ್ನಲ್ಲಿ ಕೂಡ ಮೀನನ್ನು ಸಾಕುವುದು ಸಣ್ಣ ಟ್ಯಾಂಕ್ಗಿಂತ ಸುಲಭ. ಏಕೆಂದರೆ ದೊಡ್ಡ ಟ್ಯಾಂಕ್ ಶುಚಿ ಮಾಡುವುದು ಸುಲಭ, ಅಲ್ಲದೆ ಮೀನಿಗೆ ಓಡಾಡಲು ಸಾಕಷ್ಟು ಸ್ಥಳಾವಕಾಶವಿರುತ್ತದೆ.
ಅಕ್ವೇರಿಯಂ ಮೀನನ್ನು ಬಾವಿಗೆ ಅಥವಾ ಕೊಳಕ್ಕೆ ಬಿಟ್ಟರೆ ಆ ನೀರು ಮಲೀನವಾಗುತ್ತದೆ:
ಆದರೆ ವಾಸ್ತವಾಗಿ ಇದು ನಿಜವಲ್ಲ, ಅಕ್ವೇರಿಯಂ ಮೀನುಗಳಿಗೆ ತಮ್ಮದೆ ಆದ ಆಹಾರ ಪದ್ಧತಿ ಇರುತ್ತದೆ. ಆದ್ದರಿಂದ ಇವುಗಳನ್ನು ಕೊಳದಲ್ಲಿ ಬಿಟ್ಟರೆ ಬದುಕಿ ಉಳಿಯುವುದಿಲ್ಲ. ಆದ್ದರಿಂದ ಇವುಗಳನ್ನು ಕೊಳಕ್ಕೆ ಅಥವಾ ಬಾವಿಗೆ ಬಿಡಬಾರದು. ಅಲ್ಲದೆ ಇವುಗಳಿಂದ ಯಾವುದೇ ಪರಿಸರ ಮಾಲಿನ್ಯ ಉಂಟಾಗುವುದಿಲ್ಲ.



Click it and Unblock the Notifications
