Latest Updates
-
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು?
ಮುದ್ದು ನಾಯಿಗೆ ನೀಮ್ ಆಯಿಲ್ ಸೇಫ್

ಇಂತಹ ಸಮಸ್ಯೆಗೆ ಬೇವಿನ ಎಣ್ಣೆ ತುಂಬಾ ಪರಿಣಾಮಕಾರಿ. ಬೇವಿನಲ್ಲಿರುವ ಔಷಧೀಯ ಗುಣ ನಾಯಿಗಳ ಆರೋಗ್ಯಕ್ಕೆ ತುಂಬಾ ಸಹಕಾರಿ. ನಾಯಿಗಳಿಗೆ ಬೇವಿನ ಎಣ್ಣೆ ಹೇಗೆ ಸಹಕಾರಿ ಎಂದು ನೋಡೋಣ:
1. ಕೀಟಾಣುಗಳಿಂದ ದೂರವಿರಿಸುತ್ತೆ: ನಾಯಿಯ ಚರ್ಮವನ್ನು ಕೀಟಾಣುಗಳು ಬಹು ಬೇಗ ಸೇರುತ್ತವೆ. ಬೇವಿನ ಎಣ್ಣೆಯನ್ನು ನಾಯಿಗೆ ಸ್ನಾನ ಮಾಡಿಸುವ ನೀರಿನಲ್ಲಿ ಬೆರೆಸಿದರೆ ಕೀಟಾಣುಗಳು ನಾಯಿಯ ಹತ್ತಿರ ಸುಳಿಯದಂತೆ ತಡೆಯುತ್ತದೆ ಮತ್ತು ಚರ್ಮದ ಸ್ವಾಸ್ಥ್ಯವೂ ಹದಗೆಡುವುದಿಲ್ಲ.
2. ಬೇವಿನ ಶಾಂಪೂ: ಬೇವು ಮಿಶ್ರಿತ ಶಾಂಪೂ ನಾಯಿಗಳಿಗೆ ತುಂಬಾ ಸೇಫ್. 100 ಮಿಲಿ ಶಾಂಪೂವಿಗೆ 5 ಮಿಲಿ ಬೇವಿನ ಎಣ್ಣೆ ಬೆರೆಸಿ ಹಚ್ಚಿದರೆ ತುರಿಕೆಯನ್ನು ಕಡಿಮೆ ಮಾಡಿ ನಾಯಿಯ ಕೂದಲು ಮತ್ತು ಚರ್ಮಕ್ಕೆ ರಕ್ಷಾಕವಚದಂತಿರುತ್ತದೆ ಹಾಗೂ ಅನೇಕ ಚರ್ಮ ಸಂಬಂಧಿ ರೋಗವನ್ನು ತಡೆಯುತ್ತದೆ.
3. ನೀಮ್ ಸೋಪು: ನಾಯಿಗಳಿಗೆಂದು ಇರುವ ಸೋಪ್ ಗಳಲ್ಲಿ ಲಭ್ಯವಿರುವ ನೀಮ್ ಸೋಪ್, ಬೇವು ಮಿಶ್ರಿತ ಸೋಪನ್ನು ನಾಯಿಗಳಿಗೆ ಬಳಸಿ. ಇದು ಚರ್ಮದ ಸೋಂಕಿನಿಂದ ನಾಯಿ ದೂರವುಳಿಯುವಂತೆ ಕಾಪಾಡುತ್ತದೆ.
4. ಆಹಾರದೊಂದಿಗಿರಲಿ: ನಾಯಿಗೆ ನೀಡುವ ಆಹಾರದೊಂದಿಗೆ ಬೇವಿನ ಎಲೆ ಚೂರುಗಳನ್ನೂ ಸೇರಿಸಿದರೆ ನಾಯಿಯ ರಕ್ತ ಶುದ್ಧಗೊಂಡು, ಲಿವರ್ ಚೆನ್ನಾಗಿ ಕೆಲಸ ನಿರ್ವಹಿಸುವಂತೆ ನೋಡಿಕೊಳ್ಳುತ್ತದೆ. ನಾಯಿಯ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.
5. ಬೇವಿನ ಔಷಧ: ನಾಯಿಗಳಿಗೆ ಗಾಯವಾದರೆ ತಕ್ಷಣವೇ ಅರಿಶಿನದೊಂದಿಗೆ ಬೇವಿನ ಎಲೆ ಬೆರೆಸಿ ಹಚ್ಚಿದರೆ ಕೀಟಾಣುಗಳು ತಗುಲಿ ಅದು ಹರಡುವುದನ್ನು ತಡೆಯುತ್ತದೆ.
6. ಬೇವಿನ ಎಣ್ಣೆ ದೇಹ ಸೇರದಿರಲಿ: ಬೇವಿನ ಎಣ್ಣೆಯನ್ನು ನಾಯಿಗಳಿಗೆ ಬಳಸುವಾಗ ಎಚ್ಚರದಿಂದಿರಿ. ಅದನ್ನು ನಾಯಿಗಳು ನೆಕ್ಕದಂತೆ ನೋಡಿಕೊಳ್ಳಿ.
ನಾಯಿಯ ವಯಸ್ಸು ಮತ್ತು ತೂಕಕ್ಕೆ ಅನುಗುಣವಾಗಿ ಬೇವಿನ ಎಣ್ಣೆ, ಬೇವಿನ ಸೋಪ್ ಕೂಡ ಲಭ್ಯವಿದೆ. ಅದನ್ನು ಬಳಸಿ ನಿಮ್ಮ ಮುದ್ದು ನಾಯಿ ಅನಾರೋಗ್ಯಕ್ಕೀಡಾಗದಂತೆ ನೋಡಿಕೊಳ್ಳಬಹುದು.



Click it and Unblock the Notifications
