Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಪಿಟ್ ಬುಲ್ ನಾಯಿ ನಿಮಗೂ ಬೇಕಾ?

ಪ್ರಪಂಚದ ವಿಶೇಷ ಶ್ವಾನಗಳ ಪಟ್ಟಿಗೆ ಸೇರುವ ಈ ಪಿಟ್ ಬುಲ್ ನಾಯಿಯನ್ನು ನೀವೂ ಕೊಂಡುಕೊಳ್ಳಲು ಬಯಸಿದರೆ ಅದರ ಗುಣಾವಗುಣಗಳನ್ನು ಅಳೆದು ನಿಮಗೆ ಸರಿಹೊಂದುತ್ತೋ ಇಲ್ಲವೋ ನಿರ್ಧರಿಸಿ ಕರೆದುಕೊಂಡುಹೋಗಬಹುದು.
ಪಿಟ್ ಬುಲ್ ವಿಶೇಷತೆ ಏನು?
1. ಪಿಟ್ ಬುಲ್ ತುಂಬಾ ಶಕ್ತಿ ಶಾಲಿ: ಪಿಟ್ ಬುಲ್ ತುಂಬಾ ಬಲಿಷ್ಟವಾದ ನಾಯಿ ಮತ್ತು ಅಷ್ಟೇ ಶಕ್ತಿಯುತ ಕೂಡ ಹೌದು. ತುಂಬಾ ಬೇಗನೆ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ಇದು ಯಾವಾಗಲೂ ನಿಮ್ಮ ಗಮನವನ್ನು ಬಯಸುತ್ತದೆ. ನೀವು ತುಂಬಾ ಬ್ಯುಸಿ ಇದ್ದು, ಇದನ್ನು ಹೊರಗೆ ಕರೆದುಕೊಂಡು ಹೋಗುವಷ್ಟು ಸಮಯವಿಲ್ಲವೆಂದಾದರೆ ಪಿಟ್ ಬುಲ್ ನಿಮ್ಮ ಆಯ್ಕೆಯಾಗದಿರಲಿ, ಹೀಗಾದ ಪಕ್ಷದಲ್ಲಿ ಅದು ನಿಮಗೆ ಹೊಂದಿಕೊಳ್ಳುವುದಿಲ್ಲ.
2. ಅತಿ ಬುದ್ಧಿಶಾಲಿ ಮತ್ತು ಆತ್ಮವಿಶ್ವಾಸದ ನಾಯಿ: ನೀವು ಈ ನಾಯಿಗೆ ನಿಮ್ಮ ಬುದ್ಧಿ ಉಪಯೋಗಿಸಿ ಒಳ್ಳೆಯ ಅಭ್ಯಾಸ ನೀಡಿದರೆಂದರೆ ಅದರ ಬುದ್ಧಿವಂತಿಕೆ ನಿಮಗೆ ತುಂಬಾ ಉಪಯೋಗಕ್ಕೆ ಬರುತ್ತದೆ. ಬುದ್ಧಿವಂತಿಕೆ ಪ್ರದರ್ಶಿಸುವುದರಲ್ಲಿ ಈ ನಾಯಿಯದು ಮೊದಲ ಸ್ಥಾನ. ಒಮ್ಮೆ ಅಭ್ಯಾಸವನ್ನು ಚೆನ್ನಾಗಿ ಮಾಡಿಸಿದರೆ ಚಾಕಚಕ್ಯತೆಯಿಂದ ಎಲ್ಲವನ್ನೂ ಕಲಿತುಕೊಳ್ಳುತ್ತೆ. ಆದರೆ ನೀವು ಆದೇಶಿಸಿದಂತೇ ನಡೆಯಬೇಕು ಎಂದರೆ ಪಿಟ್ ಬುಲ್ ಒಂದೊಂದು ಬಾರಿ ತಿರುಗಿ ಬೀಳಲೂಬಹುದು.
3. ಪ್ರಾಮಾಣಿಕ ಶ್ವಾನ: ನೀವೂ ಎಷ್ಟು ಇದಕ್ಕೆ ಪ್ರೀತಿ ತೋರುತ್ತೀರೋ ಅಷ್ಟೇ ಪ್ರೀತಿಯನ್ನು ಪಿಟ್ ಬುಲ್ ಕೂಡ ನಿಮಗೆ ತೋರಿಸುತ್ತದೆ. ಅದನ್ನು ನಿಮ್ಮ ಕುಟುಂಬದ ಖಾಯಂ ವ್ಯಕ್ತಿಯಂತೆ ಪರಿಗಣಿಸಬೇಕು. ನೀವು ಕುಟುಂಬ ಸಮೇತ ಪ್ರವಾಸಕ್ಕೆ ಹೊರಟರೆ ಅದೂ ನಿಮ್ಮ ಜೊತೆಗಿರಬೇಕೆಂದು ಬಯಸುತ್ತದೆ. ಆದರೆ ಇದನ್ನು ತಾತ್ಕಾಲಿಕವಾಗಿ ಸಾಕಲು ಇಚ್ಛಿಸಿದರೆ ಅಥವಾ ಒಂಟಿಯಾಗಿ ಮನೆಯಲ್ಲೇ ಕೂಡಿ ಹಾಕುವುದಾದರೆ ಈ ನಾಯಿ ಅದನ್ನು ಸಹಿಸುವುದಿಲ್ಲ. ಆಗ ಪಿಟ್ ಬುಲ್ ಕ್ರೂರವಾಗಿ ವರ್ತಿಸಲು ಪ್ರಾರಂಭಿಸುವ ಸಾಧ್ಯತೆ ಇದೆ.
4. ಧೈರ್ಯವಂತ ಪಿಟ್ ಬುಲ್: ನಾಯಿಯಿಂದ ಹೆಚ್ಚಿನ ರಕ್ಷಣೆಯನ್ನು ನೀವು ನಿರೀಕ್ಷಿಸಿದರೆ ಪಿಟ್ ಬುಲ್ ನಿಮಗೆ ಒಳ್ಳೆಯ ಸಂಗಾತಿ. ಅದು ನಿಮ್ಮೊಂದಿಗೆ ಮಾತ್ರ ಹೆಚ್ಚು ಆಪ್ತವಾಗಿರುತ್ತದೆ ಮತ್ತು ಅಷ್ಟೇ ರಕ್ಷಣೆಯನ್ನು ನೀಡುತ್ತದೆ. ಆದರೆ ಎಲ್ಲದಕ್ಕೂ ಒಪ್ಪಿಕೊಳ್ಳುತ್ತದೆ ಎನ್ನುವಂತೆಯೂ ಇಲ್ಲ. ಸ್ವಲ್ಪ ಹಠಮಾರಿಯಾದ ಈ ಶ್ವಾನ ಹೊರಗಿನವರೊಂದಿಗೆ ಸ್ವಲ್ಪ ಕ್ರೂರವಾಗಿ ವರ್ತಿಸುತ್ತದೆ. ಎಲ್ಲರೊಂದಿಗೂ ಅತಿ ಸುಲಭವಾಗಿ ಬೆರೆಯುವ ನಾಯಿ ಇದಲ್ಲ.
ಪಿಟ್ ಬುಲ್ ನಲ್ಲೇ ಇನ್ನೂ ಅನೇಕ ಜಾತಿಯ ಶ್ವಾನಗಳಿವೆ. ವಿಶೇಷ ಗುಣವಿರುವ ಪಿಟ್ ಬುಲ್ ಅನ್ನು ನಿಮ್ಮ ಮನೆಗೆ ಕರೆದುಕೊಂಡು ಹೋದರೆ ನಿಮ್ಮ ರಕ್ಷಣೆಗೆ ನಾಯಿ ಸದಾ ಸಿದ್ಧ. ನೀವೂ ಅದರ ಮಾತನ್ನು ಸ್ವಲ್ಪ ಕೇಳಬೇಕಷ್ಟೆ.



Click it and Unblock the Notifications
