Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ಒಡತಿಯ ಪ್ರಾಣಕ್ಕೆ ಕುತ್ತಾದವೇ ಸಾಕು ನಾಯಿಗಳು?

ಫಿಲಡೆಲ್ಫಿಯಾದ ಮನೆಯೊಂದರಲ್ಲಿ ಐದು ಪಿಟ್ ಬುಲ್ಸ್ ನಾಯಿಗಳು ತನ್ನ ಒಡತಿಯನ್ನು ಬರ್ಬರವಾಗಿ ಕೊಂದು ಹಾಕಿವೆ. 50 ವರ್ಷದ ಕಾರ್ಮೆನ್ ರಾಮೋಸ್ ಎಂಬಾಕೆ ನಾಯಿಗಳ ಆವೇಷಕ್ಕೆ ಬಲಿಯಾದ ಮನೆಯೊಡತಿ.
ಕೆಲಸಕ್ಕೆ ಹೋಗಿದ್ದ ಕಾರ್ಮೆನ್ ಗಂಡ ಮನೆಗೆ ಮರಳಿ ಬಂದಾಗ ಘಟನೆ ಬೆಳಕಿಗೆ ಬಂದಿದ್ದು. ತಲೆ, ಮುಖ ಮತ್ತು ದೇಹಕ್ಕೆ ತೀವ್ರ ಪೆಟ್ಟಾಗಿ ರಕ್ತದ ಮಡುವಿನಲ್ಲಿ ಸತ್ತು ಬಿದ್ದಿದ್ದ ಪತ್ನಿಯನ್ನು ನೋಡಿ ಏನೂ ಮಾಡಲು ತೋಚದೆ ಕೈ ಚೆಲ್ಲಿ ಕುಳಿತುಕೊಳ್ಳುವಂತಾಯಿತು.
ಇತ್ತೀಚೆಗಷ್ಟೆ ಅಲ್ಲಿನ ಇಬ್ಬರು ನಿವಾಸಿಗಳ ಮೇಲೆ ಇದೇ ನಾಯಿಗಳು ಆಕ್ರಮಣ ಮಾಡಿದ್ದರಿಂದ ಪ್ರಾಣಿ ದಯಾ ಸಂಘದ ಅಧಿಕಾರಿಗಳು ಕರೆದುಕೊಂಡು ಹೋಗಿದ್ದರು. ಆದರೆ ನಾಯಿಯ ಮೇಲಿನ ಅತಿಯಾದ ಪ್ರೀತಿಯಿಂದ ದಂಪತಿಗಳು ಮತ್ತೆ ತಮ್ಮ ಮುದ್ದು ಶ್ವಾನಗಳನ್ನು ಕರೆಸಿಕೊಂಡಿದ್ದರು. ಅದೇ ಈಗ ಕಾರ್ಮೆನ್ ಪ್ರಾಣಕ್ಕೆ ಕುತ್ತಾಗಿ ಹೋಯ್ತು. ಕಾರ್ಮನ್ ಸತ್ತ ನಂತರ ಈ ಶ್ವಾನಗಳು ಮತ್ತೆ ಪ್ರಾಣಿದಯಾ ಸಂಘ ಸೇರುವಂತಾಗಿದೆ. ಪ್ರಾಣಿಗಳಲ್ಲಿ ಕ್ರೂರತನ ನಿವಾರಿಸುವ ಪೆನಿಸ್ಲೇವಿಯಾದ ಸಂಸ್ಥೆ ಈ ಕುರಿತು ತನಿಖೆ ನಡೆಸುತ್ತಿದೆ.
ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತ. ದಾರಿಹೋಕರನ್ನು, ಅದರಲ್ಲೂ ರಸ್ತೆಯಲ್ಲಿ ಆಡುವ ಮಕ್ಕಳನ್ನು ಕಚ್ಚುವುದು, ಸಾಯಿಸುವುದು ವಿದ್ಯಮಾನ. ವಿರೋಧಾಭಾಸವೆಂದರೆ ಸಾಕಿದ ನಾಯಿಗಳೇ ಮನೆಯೊಡತಿಯನ್ನು ಕಚ್ಚಿ ಸಾಯಿಸುವ ಈ ಕ್ರೂರ ಉದಾಹರಣೆ ಅಮೆರಿಕ ಪೂರ್ವ ಕರಾವಳಿಯನ್ನು ಬೆಚ್ಚಿಬೀಳಿಸುವಂತಿದೆ.



Click it and Unblock the Notifications
