Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮುದ್ದು ಬೆಕ್ಕಿನ ರಹಸ್ಯ ಬಯಲಿಗೆ ಬಂದಿದೆ

ಬೆಕ್ಕಿನ ಬಗ್ಗೆ ಇರುವ ಐದು ಮಿಥ್ಯೆಗಳನ್ನು ಇಲ್ಲಿ ನೀಡಲಾಗಿದೆ:
1. ಬೆಕ್ಕು ಹಸುವಿನ ಹಾಲನ್ನು ಕುಡಿಯಬೇಕು: ಬೆಕ್ಕು ಹಾಲನ್ನಷ್ಟೇ ಕುಡಿಯಬೇಕು ಎಂಬುದು ಮೊದಲ ಮಿಥ್ಯೆ. ಆದರೆ ಅಂತಹ ನಿಯಮವೇನೂ ಬೆಕ್ಕಿಗೆ ಇಲ್ಲ. ಸ್ತನ್ಯ ಪಾನ ಬಿಟ್ಟ ನಂತರ ಬೆಕ್ಕುಗಳು ಹಾಲು ಕುಡಿಯುವುದನ್ನು ಸ್ವಲ್ಪ ಕಡಿಮೆ ಮಾಡಿರುತ್ತದೆ. ಬೆಕ್ಕು ಹಾಲು ಕುಡಿಯಬೇಕೆಂದು ಹೆಚ್ಚು ಹಾಲು ಸುರಿದರೆ ಅದರ ಆರೋಗ್ಯಕ್ಕೆ ತೊಂದರೆ ಉಂಟಾಗಬಹುದು.
2. ಬೆಕ್ಕು ಮೀನು ತಿನ್ನಬೇಕು: ಬೆಕ್ಕಿಗೆ ಮೀನು ಅತಿ ಒಳ್ಳೆಯ ಆಹಾರವೆನ್ನುವುದು ಎರಡನೇ ಮಿಥ್ಯ. ಆಗಾಗ್ಗೆ ಬೆಕ್ಕಿಗೆ ಮೀನನ್ನು ತಿನ್ನಲು ನೀಡುವುದು ಒಳ್ಳೆಯದು. ಆದರೆ ಬೆಕ್ಕಿಗೆಂದು ದಿನ ನಿತ್ಯ ಮೀನನ್ನೇ ನೀಡಬೇಕೆಂದಿಲ್ಲ. ಬೆಕ್ಕಿಗೆ ಅವಶ್ಯಕವಾಗಿ ಟೌರೀನ್ ಎಂಬ ಅಮಿನೊ ಆಸಿಡ್ ಅಗತ್ಯವಿದೆ. ಆದರೆ ಮೀನು ಆ ಅಂಶವನ್ನು ಒದಗಿಸುವುದಿಲ್ಲ. ಮೀನನ್ನೇ ದಿನ ನಿತ್ಯ ತಿನ್ನುತ್ತಿದ್ದರೆ ಬೆಕ್ಕು ಬೇಗ ಅನಾರೋಗ್ಯಕ್ಕೀಡಾಗುತ್ತದೆ.
3. ಬೆಕ್ಕಿಗೆ ದುರ್ವಾಸನೆ ನೈಸರ್ಗಿಕ: ಬೆಕ್ಕಿನ ಬಾಯಿಯ ದುರ್ವಾಸನೆ ಸಹಜ ಎನ್ನುವುದು ಮೂರನೇ ತಪ್ಪು ನಂಬಿಕೆ. ನಿಮ್ಮ ಬೆಕ್ಕಿನ ಉಸಿರಾಟ ದುರ್ವಾಸನೆಯಿಂದ ಕೂಡಿದ್ದರೆ ಅದು ಬೆಕ್ಕಿನ ವಂಶವಾಹಿಗೆ ಸಾಮಾನ್ಯ ಎಂದು ಅಲ್ಲಗಳೆಯಬೇಕಿಲ್ಲ. ಇದು ಬೆಕ್ಕಿನ ಹಲ್ಲುಗಳ ಅನಾರೋಗ್ಯದ ಸೂಚನೆ. ಇದಕ್ಕೆ ಪರಿಹಾರವಾಗಿ ಬೆಕ್ಕಿನ ಬಾಯನ್ನು ಬ್ರಷ್ ನಿಂದ ತಿಕ್ಕಬಹುದು. ಅದು ಸರಿಯಾಗಿ ಸಹಕರಿಸಲಿಲ್ಲ ಎಂದಾದರೆ ನಾಯಿ ಬೆಕ್ಕುಗಳ ಬಾಯಿಯ ಆರೋಗ್ಯಕ್ಕೆಂದೇ ಲಭ್ಯವಿರುವ ಪ್ರೊಬಯೋಟಿಕ್ಸ್ ಖರೀದಿಸಿ ಬಾಯಿಯ ಕೆಟ್ಟ ಬ್ಯಾಕ್ಟೀರಿಯಾಗಳು ತೊಲಗಿಸುವಂತೆ ಮಾಡಬಹುದು.
4. ಬೆಕ್ಕು ಪಾದಗಳನ್ನು ಪೂರ್ತಿ ನೆಲಕ್ಕೆ ಊರುತ್ತವೆ: ಬೆಕ್ಕುಗಳು ಯಾವಾಗಲೂ ತಮ್ಮ ಪಾದಗಳ ಮೇಲೆ ಸಂಪೂರ್ಣ ಭಾರ ಬಿಟ್ಟು ದೇಹದ ಸಮತೋಲನ ಕಾಪಾಡಿಕೊಳ್ಳುತ್ತದೆ ಎನ್ನುವುದು ನಾಲ್ಕನೇ ತಪ್ಪು ತಿಳುವಳಿಕೆ. ಆದರೆ ಎತ್ತರದಿಂದ ಜಿಗಿದರೆ ತಮ್ಮ ಪಾದಗಳ ಮೇಲೆ ನಿಯಂತ್ರಣ ಸಾಧಿಸಲು ಅವುಗಳ ಕೈಲೂ ಸಾಧ್ಯವಿಲ್ಲ. ಅತಿ ಎತ್ತರದಿಂದ ಜಿಗಿದರೆ ಅವೂ ಕೂಡ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗದೆ ಗಾಯಗೊಳ್ಳುತ್ತದೆ.
5. ಸಂತಾನಹರಣದಿಂದ ತೂಕ ಹೆಚ್ಚುತ್ತದೆ: ಬೆಕ್ಕಿನ ತೂಕ ಹೆಚ್ಚುವುದು ಮತ್ತು ಕಡಿಮೆಗೊಳ್ಳುವುದು ಅದರ ಆಹಾರದ ಮೇಲೆ ಅವಲಂಬಿತವಾಗಿರುತ್ತದೆ. ಬೆಕ್ಕಿನ ತೂಕ ಹೆಚ್ಚಾದರೆ ಅದಕ್ಕೆ ನೀಡುವ ಆಹಾರದ ಮಟ್ಟ ಕಡಿಮೆ ಮಾಡಿದರೆ ಕ್ರಮೇಣ ತೂಕ ಕಡಿಮೆಗೊಳ್ಳುತ್ತದೆ. ನಿಮ್ಮ ಬೆಕ್ಕನ್ನು ವೈದ್ಯರಿಂದ ಸಂತಾನ ಹರಣ ಚಿಕಿತ್ಸೆ ಮಾಡಿಸಿದರೆ ನಿಮ್ಮ ಮುದ್ದು ಬೆಕ್ಕನ್ನು ಕ್ಯಾನ್ಸರ್ ತಗುಲುವ ಸಾಧ್ಯತೆಗಳಿಂದ ತಪ್ಪಿಸಬಹುದು.



Click it and Unblock the Notifications
