Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಈ 6 ವಾಸ್ತು ತಪ್ಪನ್ನು ಮನೆಯಲ್ಲಿ ಮಾಡಲೇಬೇಡಿ..! ಯಾವೆಲ್ಲಾ ಗೊತ್ತಾ?
ಇಂದಿನ ದಿನಗಳಲ್ಲಿ ವಾಸ್ತು ಬಗ್ಗೆ ಜನರಲ್ಲಿ ಹೆಚ್ಚಿನ ನಂಬಿಕೆ ಮೂಡುತ್ತಿರುವುದನ್ನು ನಾವು ಗಮನಿಸಿದ್ದೇವೆ. ಹೀಗಾಗಿ ಪ್ರತಿಯೊಂದು ವಿಚಾರದಲ್ಲೂ ವಾಸ್ತುವನ್ನು ಪರಿಗಣಿಸಲಾಗುತ್ತದೆ. ಮನೆಯ ಪ್ರತಿಯೊಂದು ಮೂಲೆ, ದಿಕ್ಕು ಸಹ ವಾಸ್ತು ಪ್ರಕಾರವಾಗಿ ಕಟ್ಟಬೇಕು, ನಿರ್ಮಾಣ ಮಾಡಬೇಕು ಎಂದು ನಂಬಲಾಗುತ್ತದೆ. ಜೊತೆಗೆ ವಾಸ್ತು ಪ್ರಕಾರವಾಗಿ ಯಾವ ವಸ್ತು ಯಾವ ಮೂಲೆಯಲ್ಲಿ ಇಡಬೇಕು ಎಂಬುದು ಸಹ ತಿಳಿಸಲಾಗಿದೆ.
ಹೀಗೆ ಮನೆಯ ಪ್ರತಿಯೊಂದು ಆಗು ಹೋಗುಗಳಿಗೂ ವಾಸ್ತುವಿಗೂ ಸಂಬಂಧವಿದೆ. ಹೀಗಾಗಿಯೇ ಮನೆ, ಕಟ್ಟಡ, ವಾಹನ ಖರೀದಿ, ಉದ್ಯಮ ಆರಂಭ ಹೀಗೆ ಪ್ರತಿಯೊಂದಕ್ಕೂ ವಾಸ್ತುವನ್ನು ನೋಡುತ್ತಾರೆ. ಇಷ್ಟಾದರು ಕೆಲವೊಮ್ಮೆ ವಾಸ್ತ ದೋಷ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ನಾವು ಮನೆಯಲ್ಲಿ ಹೇಗೆಲ್ಲ ವಸ್ತುಗಳ ಬಳಸುತ್ತೇವೆ, ಅದನ್ನು ಎಲ್ಲಿಡುತ್ತೇವೆ ಎಂಬುದರ ಮೇಲೆಯೂ ಈ ವಾಸ್ತು ನಿರ್ಧಾರವಾಗುತ್ತದೆ.

ಸಾಮಾನ್ಯವಾಗಿ ಮನೆಯಲ್ಲಿ ನಾವು ಮಾಡುವ ಕೆಲವು ವಾಸ್ತು ತಪ್ಪುಗಳನ್ನು ಇಲ್ಲಿ ಹೇಳಲಾಗಿದೆ. ನಿಮ್ಮ ಮನೆಯಲ್ಲಿಯೂ ಈ ರೀತಿ ತಪ್ಪು ನೀವು ಮಾಡಿರಬಹುದು. ಏಕೆಂದರೆ ನಮಗೆ ವಾಸ್ತು ನಿಯಮಗಳು ತಿಳಿಯದೆ ಸಮಜವಾಗಿ ತಪ್ಪುಗಳ ಮಾಡಿರುತ್ತೇವೆ. ಮನೆಯಲ್ಲಿ ನಾವು ತಪ್ಪಿಸಬೇಕಾದ ಪ್ರಮುಖ ವಾಸ್ತು ತಪ್ಪುಗಳೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಲಗುವ ಕೋಣೆ
ನಿಮ್ಮ ಮನೆಯ ಮಲಗುವ ಕೋಣೆಯ ವಾಸ್ತು ಬಗ್ಗೆ ನೀವು ತಿಳಿದುಕೊಳ್ಳುವುದು ಮುಖ್ಯ. ಏಕೆಂದರೆ ಮಲಗುವ ಕೋಣೆಯ ವಾಸ್ತು ಸರಿಯಾಗಿದ್ದರೆ ಇಡೀ ಮನೆಯ ವಾಸ್ತು ಸರಿ ಇದ್ದಂತೆ. ಏಕೆಂದರೆ ನೀವು ಜೊತೆಗೆ ನಿಮ್ಮ ಸಂಗಾತಿ ಹಾಗೂ ಕೌಟುಂಬಿಕ ಕಲಹಕ್ಕೂ ಇದು ಕಾರಣವಾಗಬಹುದು. ಹೀಗಾಗಿ ನಿಮ್ಮ ಮಲಗುವ ಕೋಣೆಯಲ್ಲಿ ತಿಳಿ ಬಣ್ಣಗಳನ್ನು ಬಳಸಬೇಕಂತೆ, ಅದು ಕಿಟಕಿಯ ಬಟ್ಟೆ ಅಥವಾ ಬೆಡ್ ಶೀಟ್ ಸೇರಿ ಅಲ್ಲಿರುವ ಗೋಡೆಯ ಬಣ್ಣವು ಗಾಢವಾಗಿರಬಾರದು, ಅತ್ಯಂತ ಸೌಮ್ಯವಾದ ತಿಳಿ ಬಣ್ಣ ಹೊಂದಿರಬೇಕಂತೆ. ಪೀಚ್ ಬಣ್ಣ, ಪಿಂಕ್, ತಿಳಿ ನೀಲಿ. ಬಿಳಿ ಬಣ್ಣದಿಂದ ಕೂಡಿರಬೇಕು ಎನ್ನುವುದು ವಾಸ್ತು ನಿಯಮ.
ಡ್ರೈನೇಜ್
ಮನೆಯಲ್ಲಿ ಛಾವಣಿ ಅಥವಾ ಸ್ನಾನದ ಕೋಣೆಯಲ್ಲಿ ಅಥವಾ ಅಡುಗೆ ಕೋಣೆಯಲ್ಲಿ ಯಾವುದಾದರು ಪೈಪ್ ಒಡೆದಿದ್ದರೆ ಅಥವಾ ಸುರಸ್ಥಿಗೆ ಬಂದಿದ್ದರೆ ಅದನ್ನು ಹಾಗೆಯೇ ಬಿಡಬಾರದಂತೆ. ಸಾಮಾನ್ಯ ಈ ರೀತಿಯ ತಪ್ಪನ್ನು ನಾವು ಮಾಡಿರುತ್ತೇವೆ. ಒಂದಿಷ್ಟು ನೀರು ಸೋರುವುದರಿಂದ ಸಮಸ್ಯೆಯಾಗುವುದಿಲ್ಲ ಎಂದುಕೊಂಡಿದ್ದರೆ ಅದು ದೊಡ್ಡ ತಪ್ಪಾಗುತ್ತದೆ. ಕೂಡಲೆ ಅದನ್ನು ದುರಸ್ಥಿ ಮಾಡಿಸಬೇಕಂತೆ.
ಸ್ವಚ್ಛತೆ
ಋಣಾತ್ಮಕ ಶಕ್ತಿಗಳನ್ನು ಸುಲಭವಾಗಿ ಆಕರ್ಷಿಸುವುದೆಂದರೆ ಅದು ಸ್ವಚ್ಛತೆ ಇಲ್ಲದಿರುವುದು. ಸ್ವಚ್ಛತೆ ಎಂದರೆ ನೀವು ನಿಮ್ಮ ಮನೆಯನ್ನು ಹೇಗೆ ಇಟ್ಟುಕೊಂಡಿದ್ದೀರಿ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಎಲ್ಲವೂ ವ್ಯವಸ್ಥಿತವಾಗಿ ಇಡದಿದ್ದರೆ ಎಲ್ಲಾ ಕಡೆಗಳಲ್ಲೂ ಕಸಗಳು ತುಂಬಿದ್ದರೆ ಅದು ಅನಿಷ್ಟವಂತೆ. ಅದಕ್ಕಾಗಿಯೇ ಹಿರಿಯರು ಹಬ್ಬ ಹರಿದಿನದಲ್ಲಿ ಮನೆಯನ್ನು ಸಂಪೂರ್ಣ ಸ್ವಚ್ಛ ಮಾಡುತ್ತಾರೆ.
ವಸ್ತು ಗಿಡಗಳು
ಎಲ್ಲರ ಮನೆಯಲ್ಲೂ ಈ ವಾಸ್ತು ಗಿಡಗಳಿರುವುದು ಸರ್ವೆ ಸಾಮಾನ್ಯ. ಆದರೆ ಈ ವಾಸ್ತು ಗಿಡಗಳು ಸಾಯುತ್ತಿದ್ದರೆ ಅದು ಮನೆಗೆ ಅನಿಷ್ಟವಂತೆ. ಹೀಗಾಗಿ ಈ ಸಸ್ಯಗಳು ಮನೆಯೊಳಗಿದ್ದರೆ ಅದಕ್ಕೆ ನೀರು, ಬೆಳಕು ಬರುವಂತೆ ನೋಡಿಕೊಳ್ಳಿ. ಒಂದು ವೇಳೆ ಅದು ಸಾಯುತ್ತಿದ್ದರೆ ಮನೆಯಿಂದ ಹೊರಗೆ ಹಾಕಿ.
ನಿಂತಿರುವ ಗಡಿಯಾರ
ಮನೆಯಲ್ಲಿರುವ ಗಡಿಯಾರ ಅಥವಾ ವಾಚ್‌ಗಳು ನಿಂತಿದ್ದರೆ ಅದನ್ನು ಸರಿ ಮಾಡಬೇಕು ಇಲ್ಲವೆ ಅದನ್ನು ಮನೆಯಿಂದ ಹೊರಹಾಕಿ. ಮನೆಯಲ್ಲಿ ನಿಂತಿರುವ ಗಡಿಯಾರಗಳು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ.
ಒಡೆದ ಕನ್ನಡಿಗಳು
ಮನೆಯಲ್ಲಿ ಒಡೆದ ಕನ್ನಡಿ ಇದ್ದರೆ ಅದನ್ನು ತೆಗೆದು ಬಿಡಿ. ಏಕೆಂದರೆ ಒಡೆದ ಕನ್ನಡಿಯಲ್ಲಿ ಮುಖ ನೋಡಿಕೊಳ್ಳುವುದು ಅನಿಷ್ಟವಂತೆ. ವಾಸ್ತು ಪ್ರಕಾರವಾಗಿ ಒಡೆದ ಕನ್ನಡಿಗಳು ಮನೆಯಲ್ಲಿದ್ದರೆ ವಾಸ್ತು ದೋಷವಂತೆ.



Click it and Unblock the Notifications