New Year 2026: ಈ ಗಿಡಗಳನ್ನು ಮನೆಗೆ ತಂದರೆ ಸಂಕಷ್ಟ ಖಚಿತ! ಯಾವ ಸಸಿಗಳು ಶುಭಕರ?

ಹುಷಾರ್.. ಹೊಸ ವರ್ಷದಲ್ಲಿ ಈ ಗಿಡಗಳನ್ನು ಮನೆಗೆ ತಂದರೆ ಸಂಕಷ್ಟ ಖಚಿತ! ನಿಮ್ಮ ಮನೆಯ ಸುಖ-ಸಮೃದ್ಧಿ ನಾಶವಾಗಬಹುದು. ಹೌದು, ಹೊಸ ವರ್ಷ (New Year 2026) ಎಂದರೆ ಎಲ್ಲರಿಗೂ ಹೊಸ ಆರಂಭ, ಹೊಸ ಆಶೆಗಳು ಮತ್ತು ಉತ್ತಮ ಭವಿಷ್ಯದ ಕನಸು. ಈ ಸಮಯದಲ್ಲಿ ಅನೇಕರು ತಮ್ಮ ಮನೆಯ ಶುದ್ಧೀಕರಣ, ಅಲಂಕಾರ, ಪೂಜೆ ಹಾಗೂ ಹೊಸ ವಸ್ತುಗಳನ್ನು ತರಲು ಮುಂದಾಗುತ್ತಾರೆ.

ವಿಶೇಷವಾಗಿ ಸಸಿಗಳನ್ನು ತರುವ ಮೂಲಕ ಧನಲಾಭ, ಆರೋಗ್ಯ ಮತ್ತು ಶಾಂತಿ ಬರಲಿ ಎಂದು ಬಯಸುತ್ತಾರೆ. ಆದರೆ, ವಾಸ್ತು ಶಾಸ್ತ್ರದ (New Year Vastu Tips) ಪ್ರಕಾರ ಎಲ್ಲ ಸಸಿಗಳೂ ಶುಭಕರವಲ್ಲ ಎಂಬುದು ಮುಖ್ಯ. ಕೆಲ ಸಸಿಗಳು ಮನೆಯೊಳಗೆ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸಿ, ಬಡತನ, ಕಲಹ ಮತ್ತು ಮಾನಸಿಕ ಅಶಾಂತಿಗೆ ಕಾರಣವಾಗಬಹುದು ಎಂದು ವಾಸ್ತು ತಜ್ಞರು ಎಚ್ಚರಿಸಿದ್ದಾರೆ.

Vastu Plants for Home
Photo Credit: ಸಂಗ್ರಹ ಚಿತ್ರ

ವಾಸ್ತು ಶಾಸ್ತ್ರವು ಪ್ರಕೃತಿ, ದಿಕ್ಕುಗಳು ಮತ್ತು ಶಕ್ತಿಗಳ ಸಮತೋಲನದ ಮೇಲೆ ಆಧಾರಿತವಾಗಿದೆ. ಇದನ್ನು ಸರಿಯಾಗಿ ಪಾಲಿಸಿದರೆ ಜೀವನದಲ್ಲಿ ಸುಖ-ಸಮೃದ್ಧಿ ಹೆಚ್ಚಾಗುತ್ತದೆ. ಆದರೆ, ನಿರ್ಲಕ್ಷ್ಯ ಮಾಡಿದರೆ ಅದರ ಪರಿಣಾಮಗಳು ಗಂಭೀರವಾಗಬಹುದು. ವಿಶೇಷವಾಗಿ ಹೊಸ ವರ್ಷದಂತಹ ಮಹತ್ವದ ಸಮಯದಲ್ಲಿ ತಪ್ಪಾದ ಸಸಿಗಳನ್ನು ಮನೆಗೆ ತರುವುದು ಅನೇಕ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ. ಈ ಶುಭ ಸಂದರ್ಭದಲ್ಲಿ ಯಾವ ಸಸಿಗಳನ್ನು ಮನೆಗೆ ತರಬಾರದು (Vastu Plants for Home) ಎಂದು ತಿಳಿಯಲು ಮುಂದೆ ಓದಿ.

ಹೊಸ ವರ್ಷದಲ್ಲಿ ಮನೆಗೆ ತರಬಾರಾದ ಸಸ್ಯಗಳು

ಗುಲಾಬಿ ಸಸಿ

ಗುಲಾಬಿ ಹೂವುಗಳು ಸುಂದರವಾಗಿದ್ದರೂ, ಹೊಸ ವರ್ಷದಲ್ಲಿ ಇದರ ಸಸಿಯನ್ನು ಮನೆಗೆ ತರುವುದು ಅಶುಭಕಾರಿ. ಸಸಿಯಲ್ಲಿ ಹೆಚ್ಚಾಗಿ ಮುಳ್ಳುಗಳಿರುವುದರಿಂದ, ಇದು ಮನೆಯೊಳಗೆ ಒತ್ತಡ, ಅಶಾಂತಿ ಮತ್ತು ಮನಸ್ತಾಪವನ್ನು ಉಂಟುಮಾಡಬಹುದು.

ಹೊಸ ವರ್ಷದ ದಿನ ಗುಲಾಬಿ ಸಸಿ ತಂದರೆ, ಮನೆಯ ಸುಖ-ಶಾಂತಿಗೆ ಅಡ್ಡಿಯಾಗುತ್ತದೆ. ಅಲ್ಲದೆ, ಇದರಿಂದ ಸಂಬಂಧಗಳಲ್ಲಿ ಕಠಿಣತೆ ಅಥವಾ ಭಿನ್ನಾಭಿಪ್ರಾಯಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವಾಸ್ತು ತಜ್ಞರು ಹೇಳಿದ್ದಾರೆ.

ಬೋನ್ಸಾಯಿ ಸಸಿ

ಇತ್ತೀಚಿನ ದಿನಗಳಲ್ಲಿ ಬೋನ್ಸಾಯಿ ಸಸಿಗಳು ಮನೆ ಅಲಂಕಾರಕ್ಕೆ ಬಹಳ ಜನಪ್ರಿಯವಾಗಿವೆ. ಆದರೆ, ವಾಸ್ತು ದೃಷ್ಟಿಯಿಂದ ಇದು ಅತ್ಯಂತ ಅಶುಭ ಸಸಿಯೆಂದು ಪರಿಗಣಿಸಲಾಗುತ್ತದೆ. ಬೋನ್ಸಾಯಿ ಸಸಿ ಸಹಜವಾಗಿಯೂ ಬೆಳವಣಿಗೆಯನ್ನು ತಡೆಹಿಡಿಯಲಾದ ಸ್ಥಿತಿಯಲ್ಲಿ ಇರುತ್ತದೆ.

ಇದರಿಂದ ಮನೆಯವರ ಪ್ರಗತಿ, ವೃತ್ತಿ ಬೆಳವಣಿಗೆ ಮತ್ತು ಆರ್ಥಿಕ ಸ್ಥಿತಿಗೆ ಅಡ್ಡಿಯಾಗಬಹುದು ಎನ್ನುವ ನಂಬಿಕೆಯಿದೆ. ಹೊಸ ವರ್ಷದಲ್ಲಿ ಈ ಸಸಿಯನ್ನು ಮನೆಗೆ ತಂದರೆ, ಕೆಲಸದಲ್ಲಿ ಸ್ಥಗಿತ, ವ್ಯವಹಾರದಲ್ಲಿ ನಷ್ಟ ಮತ್ತು ಅವಕಾಶಗಳ ಕೊರತೆ ಎದುರಾಗಬಹುದು ಎಂದು ಹೇಳಲಾಗುತ್ತದೆ.

ಮುಳ್ಳುಳ್ಳ ಸಸಿಗಳು (ಕ್ಯಾಕ್ಟಸ್)

ಕ್ಯಾಕ್ಟಸ್ ಹಾಗೂ ಇತರ ಮುಳ್ಳುಳ್ಳ ಸಸ್ಯಗಳು ವಾಸ್ತು ಪ್ರಕಾರ ನಕಾರಾತ್ಮಕ ಶಕ್ತಿಯ ಪ್ರತೀಕ. ಇವು ಮನೆಯೊಳಗೆ ಕಲಹ, ಜಗಳ, ಮಾನಸಿಕ ಒತ್ತಡ, ಹಣಕಾಸಿನ ಸಮಸ್ಯೆಗಳನ್ನು ತರಬಹುದು. ಹೊಸ ವರ್ಷದಲ್ಲಿ ಇಂತಹ ಸಸಿಗಳನ್ನು ತಂದರೆ, ಕುಟುಂಬದ ಸದಸ್ಯರಲ್ಲಿ ಅಸಮಾಧಾನ ಹೆಚ್ಚಾಗಬಹುದು.

ವಿಶೇಷವಾಗಿ, ಕ್ಯಾಕ್ಟಸ್ ಸಸ್ಯವನ್ನು ಮನೆಯ ಹಾಲ್ ಅಥವಾ ಬೆಡ್‌ರೂಮಿನಲ್ಲಿ ಇಡುವುದು ದೊಡ್ಡ ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಇದು ಮನೆಯ ಸಕಾರಾತ್ಮಕ ವಾತಾವರಣವನ್ನು ಕೆಡಿಸಿ, ನಕಾರಾತ್ಮಕ ಭಾವನೆಗಳನ್ನು ಹೆಚ್ಚಿಸುತ್ತದೆ.

ಒಣಗಿದ ಅಥವಾ ಮರುಗುಟ್ಟಿದ ಸಸಿಗಳು

ವಾಸ್ತು ಶಾಸ್ತ್ರದ ಪ್ರಕಾರ, ಒಣಗಿದ ಅಥವಾ ಜೀವವಿಲ್ಲದ ಸಸಿಗಳು ನಿಷ್ಕ್ರಿಯತೆ ಮತ್ತು ದುರ್ಭಾಗ್ಯದ ಸಂಕೇತ. ಇಂತಹ ಸಸಿಗಳು ಮನೆಯಲ್ಲಿದ್ದರೆ, ಹೊಸ ವರ್ಷಕ್ಕೆ ಮುನ್ನವೇ ಅವನ್ನು ಹೊರಗೆ ಹಾಕಬೇಕು.

'ಒಣ ಸಸಿಗಳು ಮನಸ್ಸಿನ ಶಾಂತಿಯನ್ನು ಕಸಿದುಕೊಳ್ಳುತ್ತವೆ ಮತ್ತು ಹಣದ ಹರಿವಿಗೆ ಅಡ್ಡಿ ಉಂಟುಮಾಡುತ್ತವೆ' ಎಂದು ವಾಸ್ತು ತಜ್ಞರು ಹೇಳುತ್ತಾರೆ. ಹೊಸ ವರ್ಷದ ಶುಭಾರಂಭಕ್ಕೆ ಜೀವಂತ, ಹಸಿರು ಸಸಿಗಳೇ ಸೂಕ್ತ. ಅವು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬಲು ಸಹಕಾರಿ.

ಯಾವ ಸಸಿಗಳು ಶುಭಕರ?

- ತುಳಸಿ
- ಮನಿ ಪ್ಲಾಂಟ್
- ಅರಳಿ
- ಬಾಳೆ
- ಲಕ್ಕಿ ಬಾಂಬೂ

ಇದರ ಜೊತೆಗೆ ಕೆಲವು ಸಸಿಗಳು ಶುಭಕರವೆಂದು (Inauspicious plants for home) ನಂಬಲಾಗಿದೆ. ಇವುಗಳನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಧನಲಾಭ, ಆರೋಗ್ಯ ಮತ್ತು ಕುಟುಂಬದಲ್ಲಿ ಶಾಂತಿ ಹೆಚ್ಚಾಗುತ್ತದೆ.

ಹೊಸ ವರ್ಷದಲ್ಲಿ ಮನೆಗೆ ಸಸಿಗಳನ್ನು ತರುವುದು ಒಳ್ಳೆಯ ಪದ್ಧತಿಯಾದರೂ, ವಾಸ್ತು ನಿಯಮಗಳನ್ನು ತಿಳಿದುಕೊಂಡು ಆಯ್ಕೆ ಮಾಡುವುದು ಅತ್ಯಂತ ಅಗತ್ಯ. ತಪ್ಪಾದ ಸಸಿಗಳು ಮನೆಯೊಳಗೆ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿ, ನಿಮ್ಮ ಶ್ರಮದ ಫಲವನ್ನು ಕಳೆದುಕೊಳ್ಳುವಂತೆ ಮಾಡಬಹುದು.

ಹೀಗಾಗಿ, ಹೊಸ ವರ್ಷದ ಶುಭಾರಂಭಕ್ಕೆ ಮುನ್ನ ನಿಮ್ಮ ಮನೆಯಲ್ಲಿರುವ ಸಸಿಗಳನ್ನು ಪರಿಶೀಲಿಸಿ. ಅಶುಭ ಸಸಿಗಳನ್ನು ತೆಗೆದುಹಾಕಿ, ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬುವ ಶುಭ ಸಸಿಗಳನ್ನು ಮಾತ್ರ ಇರಿಸಿಕೊಳ್ಳಿ. ಇದು ನಿಮ್ಮ ಮನೆಗೆ ಸುಖ ಹಾಗೂ ಸಮೃದ್ಧಿ ತರಲು ಸಹಕಾರಿ.

English summary

New Year Vastu Tips: Avoid These Plants at Home to Prevent Bad Luck in 2026

New Year Vastu Tips: Avoid These Plants at Home to Prevent Bad Luck in 2026
Story first published: Tuesday, December 23, 2025, 18:00 [IST]
X
Desktop Bottom Promotion