Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮನೆಯಲ್ಲಿ ಕೋವಿದಾರ ಮರವನ್ನು ಎಲ್ಲಿ ನೆಡಬೇಕು? ಈ ದಿಕ್ಕಿನಲ್ಲಿ ನೆಟ್ಟರೆ ಸಂಪತ್ತು ವೃದ್ಧಿ! ದೈವಾನುಗ್ರಹ ಪ್ರಾಪ್ತಿ
ಮನೆಯ ಈ ದಿಕ್ಕಿನಲ್ಲಿ ಕೋವಿದಾರ ಗಿಡ ನೆಡಿ. ಇದು ಸಾಮಾನ್ಯ ಮರವಲ್ಲ.. ಮನೆಯ ಸುತ್ತ ನೆಟ್ಟರೆ, ಸಂಪೂರ್ಣ ಸಕಾರಾತ್ಮಕ ಶಕ್ತಿ ತುಂಬುತ್ತೆ. ಹೌದು, ಕೋವಿದಾರ ವೃಕ್ಷ (Kovidara Tree) ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ಋಷಿ ಕಶ್ಯಪರು ಮಂದಾರ ಮತ್ತು ಪಾರಿಜಾತ ವೃಕ್ಷಗಳ ಸಂಯೋಜನೆಯಿಂದ ಇದನ್ನು ಸೃಷ್ಟಿಸಿದರು ಎಂದು ನಂಬಲಾಗಿದೆ. ಋಷಿ ಕಶ್ಯಪರನ್ನು ಎಲ್ಲಾ ದೇವತೆಗಳ ಪಿತಾಮಹ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಕೋವಿದಾರವನ್ನು ದೇವವೃಕ್ಷ ಎಂದೂ ಕರೆಯಲಾಗುತ್ತದೆ.
ಪುರಾಣಗಳಲ್ಲೂ ಇದರ ಮಹತ್ವವನ್ನು ಉಲ್ಲೇಖಿಸಲಾಗಿದೆ. ಅಯೋಧ್ಯೆಯ ರಾಮಮಂದಿರದಲ್ಲಿ (Ram Mandir) ಹಾರಾಡುತ್ತಿರುವ ಧ್ವಜದ (Dharma Dhwaj) ಮೇಲೆ ಓಂ, ಸೂರ್ಯನ ಚಿಹ್ನೆಗಳ ಜೊತೆಗೆ ಕೋವಿದಾರ ವೃಕ್ಷದ ಚಿತ್ರವನ್ನೂ ಅಳವಡಿಸಲಾಗಿದೆ. ಈ ದೇವವೃಕ್ಷವನ್ನು ಮನೆಯಲ್ಲಿ ನೆಡುವುದು ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಮನೆಯ ಅನೇಕ ಸಮಸ್ಯೆಗಳು ನಿವಾರಣೆಯಾಗಿ, ದೈವಾನುಗ್ರಹ ಲಭಿಸುತ್ತದೆ. ಹಾಗಿದ್ರೆ ವಾಸ್ತು ಪ್ರಕಾರ, ಕೋವಿದಾರ ವೃಕ್ಷವನ್ನು ಎಲ್ಲಿ ನೆಡಬೇಕು? (Kovidara Tree Direction) ಮತ್ತು ಅದರ ನಿಯಮಗಳೇನು? (Kovidara Tree Direction As Per Vastu) ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಕೋವಿದಾರ ವೃಕ್ಷ ನೆಡಲು ಸೂಕ್ತ ದಿಕ್ಕು
ಕೋವಿದಾರ ಮರ ಅಥವಾ ವೃಕ್ಷವನ್ನು ಮನೆಯಲ್ಲಿ ನೆಡುವುದು ಮಂಗಳಕರ. ಇದನ್ನು ಸಕಾರಾತ್ಮಕತೆ, ಸುಖ-ಸಮೃದ್ಧಿ ಮತ್ತು ಅದೃಷ್ಟದ ಸಂಕೇತ ಎಂದು ಹೇಳಲಾಗಿದೆ. ಸರಿಯಾದ ದಿಕ್ಕಿನಲ್ಲಿ ನೆಡುವುದರಿಂದ ಉತ್ತಮ ಫಲಿತಾಂಶಗಳು ಸಿಗುತ್ತವೆ. ಶಾಸ್ತ್ರಗಳು ಮತ್ತು ವಾಸ್ತು ಪ್ರಕಾರ, ಇದನ್ನು ಪೂರ್ವ ದಿಕ್ಕಿನಲ್ಲಿ ನೆಡುವುದು ಅತ್ಯುತ್ತಮ. ಇದು ಸೂರ್ಯ ದೇವರಿಗೆ ಮೀಸಲಾದ ದಿಕ್ಕು. ಈ ದಿಕ್ಕಿನಲ್ಲಿ ಮರ ನೆಡುವುದರಿಂದ ಸಕಾರಾತ್ಮಕ ಶಕ್ತಿ ಮನೆಯಲ್ಲಿ ನೆಲೆಸುತ್ತದೆ. ಹಾಗೆಯೇ ಕುಟುಂಬದ ಸದಸ್ಯರ ಆರೋಗ್ಯದ ಮೇಲೂ ಉತ್ತಮ ಪರಿಣಾಮ ಬೀರುತ್ತದೆ.
ಉತ್ತರ ದಿಕ್ಕಿನಲ್ಲಿಯೂ ನೆಡಬಹುದೇ?
ಒಂದು ವೇಳೆ ಪೂರ್ವ ದಿಕ್ಕಿನಲ್ಲಿ ಕೋವಿದಾರ ವೃಕ್ಷವನ್ನು ನೆಡಲು ಸಾಧ್ಯವಾಗದಿದ್ದರೆ, ಅದನ್ನು ಮನೆಯ ಉತ್ತರ ದಿಕ್ಕಿನಲ್ಲಿಯೂ ನೆಡಬಹುದು. ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲಿ ಈ ದಿಕ್ಕು ಮಹತ್ವಪೂರ್ಣವಾಗಿದೆ. ಇದನ್ನು ಕುಬೇರನ ದಿಕ್ಕು ಎಂತಲೂ ಕರೆಯುತ್ತಾರೆ. ಸಕಾರಾತ್ಮಕ ಶಕ್ತಿ ಈ ದಿಕ್ಕಿನಿಂದ ಪ್ರವೇಶಿಸುತ್ತದೆ. ಆದ್ದರಿಂದ, ಉತ್ತರ ದಿಕ್ಕಿನಲ್ಲಿ ಕೋವಿದಾರ ವೃಕ್ಷವನ್ನು ನೆಡಬಹುದು. ಇದರಿಂದ ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ. ಈ ಮೂಲಕ ಸಂಪತ್ತು ವೃದ್ಧಿಸುತ್ತದೆ. ಈ ಪವಿತ್ರ ಕೋವಿದಾರ ಸಸ್ಯವನ್ನು ಸರಿಯಾದ ದಿಕ್ಕಿನಲ್ಲಿ ನೆಡುವುದರಿಂದ ಕುಟುಂಬದ ಸದಸ್ಯರ ಮೇಲೆ ದೇವರ ವಿಶೇಷ ಅನುಗ್ರಹ ಸದಾ ಇರುತ್ತದೆ.
ಕೋವಿದಾರ ವೃಕ್ಷ ನೆಡುವಾಗ ಈ ನಿಯಮಗಳನ್ನು ಪಾಲಿಸಿ
- ಕೋವಿದಾರ ವೃಕ್ಷವು ಬೆಳೆದಂತೆ ದೊಡ್ಡದಾಗುವುದರಿಂದ, ಅದನ್ನು ಮನೆಯ ಗೋಡೆಗಳಿಂದ ಸ್ವಲ್ಪ ದೂರದಲ್ಲಿ ನೆಡಬೇಕು.
- ಹೀಗೆ ಮಾಡುವುದರಿಂದ ಹೊರಗಿನಿಂದ ಬರುವ ಬೆಳಕು ನೇರವಾಗಿ ಮನೆಯೊಳಗೆ ಪ್ರವೇಶಿಸುತ್ತದೆ.
- ಕೋವಿದಾರ ವೃಕ್ಷವನ್ನು ಶುಭ್ರವಾದ ಸ್ಥಳದಲ್ಲಿ ನೆಡಬೇಕು.
- ಕೋವಿದಾರ ಮರದ ಅದರ ಸುತ್ತಮುತ್ತ ಶುಚಿತ್ವ ಕಾಪಾಡುವುದು ಮುಖ್ಯ.
- ಹಸಿರು ಗಿಡಗಳು ಅದೃಷ್ಟವನ್ನು ತರುತ್ತವೆ. ಆದ್ದರಿಂದ, ನಿಯಮಿತವಾಗಿ ನೀರನ್ನು ಹಾಕಬೇಕು.
- ಕೋವಿದಾರ ಸಸ್ಯ ಸಂಪೂರ್ಣವಾಗಿ ಒಣಗಿದರೆ ಅಥವಾ ಅದರ ಎಲೆಗಳು ಹಾಳಾದರೆ, ಅದನ್ನು ತಕ್ಷಣ ಮನೆಯಿಂದ ತೆಗೆದುಹಾಕಬೇಕು.
- ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಒಣಗಿದ ಸಸ್ಯಗಳು ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತವೆ.
- ಕೋವಿದಾರ ವೃಕ್ಷವನ್ನು ಮನೆಯ ಮುಖ್ಯ ದ್ವಾರದ ಎದುರು ನೆಡುವುದನ್ನು ತಪ್ಪಿಸಬೇಕು.
ವಾಸ್ತು ಶಾಸ್ತ್ರದಲ್ಲಿ ಮುಖ್ಯ ದ್ವಾರದ ಎದುರು ಕಂಬ ಅಥವಾ ಮರದಂತಹ ಅಡೆತಡೆಗಳು ಇರುವುದು ಶುಭ ಎಂದು ಪರಿಗಣಿಸಲ್ಪಡುವುದಿಲ್ಲ. ಇದು ಮನೆಯಲ್ಲಿ ವಾಸ್ತು ದೋಷಕ್ಕೆ ಕಾರಣವಾಗಬಹುದು. ವಾಸ್ತು ಪ್ರಕಾರ ಕೋವಿದಾರ ಮರವನ್ನು ಸೂಕ್ತ ದಿಕ್ಕಿನಲ್ಲಿ ನೆಟ್ಟರೆ, ಮನೆಯಲ್ಲೇ ಧನ-ಸಂಪತ್ತು ಆಕರ್ಷಿತವಾಗುತ್ತದೆ.



Click it and Unblock the Notifications
