Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಮನೆಯಿಂದ ಇಲಿ ಓಡಿಸಲು ಹಸಿ ಮೆಣಸು-ಪ್ಯಾರಾಸಿಟಮೋಲ್ ಮಾತ್ರೆ ಸಾಕು..! ಹೇಗೆ ಗೊತ್ತಾ?
ಮನೆ ಎಂದ ಮೇಲೆ ಹುಳುಗಳು, ಕೀಟಗಳು ಇರುವುದು ಸಾಮಾನ್ಯ ಅದರಲ್ಲು ಜಿರಳೆ, ಹಲ್ಲಿ, ಇಲಿಗಳಂತು ಅಪಾಯ ತರುವಂತಹ ಜೀವಿಗಳು. ಈ ಎಲ್ಲಾ ಜೀವಿಗಳು ಮನೆಯವರಿಗೆ ಅನಾರೋಗ್ಯ ತರಬಹುದು. ಹಾಗೆ ಇವುಗಳನ್ನು ಓಡಿಸುವುದು ಕೂಡ ಕಷ್ಟವಾಗುತ್ತದೆ. ಅದರಲ್ಲೂ ಮನೆಯಲ್ಲಿ ಇಲಿಗಳು ಸೇರಿಕೊಂಡರಂತು ಏನೇ ಉಪಾಯ ಮಾಡಿದರೂ ಕೂಡ ಅವು ಮನೆಯಿಂದ ಹೊರಹೋಗುವುದಿಲ್ಲ.
ಹಾಗೆ ಮನೆಯಲ್ಲಿ ಸೇರಿದ ಇಲಿಗಳು, ಬಟ್ಟೆ, ತರಕಾರಿ, ತಿಂಡಿ-ತಿನಿಸು, ಹಣ್ಣು, ಎಲೆಕ್ಟ್ರಾನಿಕ್ ವಸ್ತುಗಳು ಹೀಗೆ ಸಿಕ್ಕ ಸಿಕ್ಕ ವಸ್ತುಗಳನ್ನೇಲ್ಲ ಹಾಳು ಮಾಡಿಬಿಡುತ್ತವೆ. ಅಲ್ಲದೆ ದಿನಸಿ, ಹಾಲು ಎಲ್ಲವನ್ನು ಹಾಳು ಮಾಡುವುದು ಈ ಇಲಿಗಳೇ. ಹೀಗಾಗಿ ಅವುಗಳನ್ನು ಮನೆಯಿಂದ ಹೊರಹಾಕುವುದು ಕಷ್ಟದ ಕೆಲಸವಾಗುತ್ತದೆ.

ಇನ್ನು ಇಲಿಗಳ ನಾಶ ಮಾಡಲೆಂದು ಮಾರುಕಟ್ಟೆಯಲ್ಲಿ ಹಲವು ರೀತಿಯ ವಸ್ತುಗಳು ಸಿಗುತ್ತವೆ. ಅವುಗಳು ಕೆಲವೊಮ್ಮೆ ನಮಗೂ ಹಾನಿ ಮಾಡಬಹುದು. ಬೋನ್‌ಗಳು, ವಿಷಕಾರಿ ವಸ್ತು ಹೀಗೆ ಹಲವು ವಸ್ತುಗಳಿವೆ. ಆದ್ರೆ ಇದೆಲ್ಲದಕ್ಕಿಂತ ನಾವಿಂದು ವಿಭಿನ್ನವಾಗಿ ನೈಸರ್ಗಿಕ ರೀತಿಯಲ್ಲಿ ಮನೆಯಲ್ಲಿರುವ ಇಲಿಗಳನ್ನು ಹೊರಹಾಕುವುದು ಹೇಗೆ ಎಂಬುದನ್ನು ನೋಡೋಣ.
ಈ ವಿಧಾನದಲ್ಲಿ ಇಲಿಗಳನ್ನು ಸಾಯಿಸದೆ ಅವುಗಳನ್ನು ಮನೆಯಿಂದ ಆಚೆ ಹಾಕುವ ಕ್ರಮ ಯಾವುದು ಎಂಬುದನ್ನು ನಾವಿಂದು ತಿಳಿಯೋಣ.
ಹಸಿ ಮೆಣಸಿನ ಐಡಿಯಾ
ಖಾರ ಇರುವ ಹಸಿ ಮೆಣಸಿನಕಾಯಿ ತೆಗೆದುಕೊಳ್ಳಿ. ಇನ್ನೊಂದು ಬೌಲ್‌ನಲ್ಲಿ 2 ಚಮಚ ಅಕ್ಕಿ ಹಿಟ್ಟು ಅಥವಾ ಜೋಳದ ಹಿಟ್ಟು ತೆಗೆದುಕೊಳ್ಳಿ. ಇದಕ್ಕೆ 2 ಚಮಚ ಕಡಲೆ ಹಿಟ್ಟು ಬೆರೆಸಿಕೊಳ್ಳಿ. ಇದಕ್ಕೆ ಸ್ವಲ್ಪ ಸ್ವಲ್ಪ ವಿನೆಗರ್ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳ, ವೆನಿಗರ್ ಇಲ್ಲದಿದ್ದರೆ ನಿಂಬೆ ಹಣ್ಣಿನ ರಸ ಹಾಕಿ ಕಲಸಿಕೊಳ್ಳಿ. ಸ್ವಲ್ಪ ನೀರು ಹಾಕಿ ಹಿಟ್ಟು ಕಲಸಿಕೊಳ್ಳಿ. ದಪ್ಪವಾದ ಹಿಟ್ಟು ಮಾಡಿಟ್ಟುಕೊಳ್ಳಿ. ಈ ಪೆಸ್ಟ್ ತಯಾರಿಸಿದ ಬಳಿಕ ಇದಕ್ಕೆ ಯಾವುದಾದರು ಸೋಪಿನ ಪುಡಿ ತೆಗದುಕೊಂಡು ಒಂದು ಚಮಚ ಹಾಕಿ ಮಿಕ್ಸ್ ಮಾಡಿ.
ಈಗ ಮೆಣಸಿನಕಾಯಿಯನ್ನು ಸಣ್ಣದಾಗಿ ಕತ್ತರಿಸಿಕೊಂಡು ಅದನ್ನು ಸಣ್ಣದಾಗಿ ರುಬ್ಬಬೇಕು, ಇಲ್ಲವೆ ಜಜ್ಜಿಕೊಂಡು ತರಿ ತರಿಯಾಗಿ ಮಾಡಿಕೊಳ್ಳಿ. ನಂತರ ಇದನ್ನು ಹಿಟ್ಟಿನೊಳಗೆ ಹಾಕಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈಗ ಈ ಹಿಟ್ಟನ್ನು ಒಂದು ಪೇಪರ್ ಮೇಲೆ ಸವರಿಕೊಳ್ಳಬೇಕು. ಈಗ ಉಳಿದ ಪೇಪರ್ ಅನ್ನು ಸಣ್ಣ ಸಣ್ಣ ಉಂಡೆ ಮಾಡಿಕೊಂಡು ಈ ಹಿಟ್ಟಿನಲ್ಲಿ ಹಾಕಿ ಚೆನ್ನಾಗಿ ಅದ್ದಿ ಮನೆಯಲ್ಲಿ ಇಲಿಗಳು ಓಡಾಡುವ ಜಾಗ ಅಥವಾ ಅಡುಗೆ ಮನೆಯಲ್ಲಿ ಈ ಉಂಡೆಗಳನ್ನು, ಹಿಟ್ಟು ಸವರಿದ ಪೇಪರ್ ಅನ್ನು ಇಡಿ. ಇದನ್ನು ತಿಂದ ಇಲಿಗಳು ಮನೆಯಿಂದ ಹೊರಹೋಗು ಸಾಯುತ್ತವೆ. ಉಳಿದಂತೆ ಮನೆಯೊಳಗೆ ಇನ್ನೆಂದು ಇಲಿಗಳು ಸುಳಿಯುವುದಿಲ್ಲ.
ಪ್ಯಾರಾಸಿಟಮೋಲ್ ಮಾತ್ರೆ
ನಿಮ್ಮ ಮನೆಯಲ್ಲಿ ಇರುವ 10 ಪ್ಯಾರಾಸಿಟಮೋಲ್ ಮಾತ್ರೆ ತೆಗೆದುಕೊಳ್ಳಿ. ಮತ್ತೊಂದು ಕಡೆ ಕಡಲೆ ಬೀಜವನ್ನು ಕಿಮ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಈಗ ಈ ಮಾತ್ರೆಗಳನ್ನು ಜಜ್ಜಿ ಎರಡನ್ನೂ ಒಟ್ಟಿಗೆ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ನಂತರ ಒಂದು ತೆಂಗಿನ ಕಾಯಿಯ ಗರೆಟೆಯಲ್ಲಿ ಹಾಕಿ ಅಡುಗೆ ಮನೆಯಲ್ಲಿ ಇಟ್ಟು ನೋಡಿ. ಇದನ್ನು ತಿಂದ ಇಲಿ ಸಾಯುತ್ತದೆ.
ಎಕ್ಕದ ಎಲೆ
ಎಕ್ಕದ ಎಲೆಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಜಜ್ಜಿಕೊಂಡು ಮನೆಯಲ್ಲಿ ಇಲಿಗಳು ಓಡಾಡುವ ಜಾಗದಲ್ಲಿ ಹಾಕಬೇಕು. ಎಕ್ಕದ ಎಲೆಯಿಂದ ಬರುವ ಗಾಢ ವಾಸನೆಯೂ ಇಲಿಗಳಿಗೆ ಆಗಿಬರುವುದಿಲ್ಲ ಹೀಗಾಗಿ ಅವು ಮನೆಯೊಳಗೆ ಬರುವುದಿಲ್ಲ. ನೀವು ಸಹ ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications
