Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸ್ವಾತಂತ್ರ್ಯ ದಿನಾಚರಣೆ 2023: ಹಬ್ಬದ ಸಡಗರ ಹೆಚ್ಚಿಸುವ ಆಕರ್ಷಕ ರಂಗೋಲಿ ಡಿಸೈನ್‌ಗಳು
ಸ್ವಾತಂತ್ರ್ಯ ದಿನಾಚರಣೆ ಆಚರಣೆಗೆ ದೇಶವೇ ಸಂಭ್ರಮದಿಂದ ಸಜ್ಜಾಗುತ್ತಿದೆ. ಯಾವುದೇ ಒಳ್ಳೆಯ ಕಾರ್ಯವಿದ್ದರೆ ನಮ್ಮಲ್ಲಿ ರಂಗೋಲಿ ಹಾಕುವ ಸಂಪ್ರದಾಯವಿದೆ. ರಂಗೋಲಿ ಶುಭದ ಸಂಕೇತವಾಗಿದೆ, ಅಲ್ಲದೆ ರಂಗೋಲಿ ಹಾಕಿದರೆ ಹಬ್ಬದ ಕಳೆ ಹೆಚ್ಚುವುದು ಹೌದಲ್ವಾ? ಈ ಸ್ವಾತಂತ್ರ್ಯ ದಿನಾಚರಣೆಗೆ ಮನೆ ಮುಂದೆ, ಆಫೀಸ್ ಮುಂದೆ ನಮ್ಮ ತಿರಂಗಾ ಬಣ್ಣಕ್ಕೆ ಹೋಲುವ ರಂಗೋಲಿ ಬಿಡಿಸಲಾಗುವುದು.
ನಾವಿಲ್ಲಿ ಇನ್‌ಸ್ಟಾಗ್ರಾಮ್‌ದಲ್ಲಿ ಗಮನ ಸೆಳೆದ ಕೆಲವೊಂದು ಅದ್ಭುತ ರಂಗೋಲಿ ಡಿಸೈನ್ ನೀಡಿದ್ದೇವೆ... ಈ ರಂಗೋಲಿ ಡಿಸೈನ್‌ಗಳು ತುಂಬಾನೇ ಆಕರ್ಷಕವಾಗಿದ್ದು ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ಹೆಚ್ಚಿನ ಕಳೆ ಹೆಚ್ಚಿಸುವಂತಿದೆ ನೋಡಿ:

ಹೂವಿನಿಂದ ರಂಗೋಲಿ ಡಿಸೈನ್
ಇದು ತುಂಬಾ ಸಿಂಪಲ್ ರಂಗೋಲಿ ಡಿಸೈನ್ ಆದರೂ ತುಂಬಾನೇ ಆಕರ್ಷಕವಾಗಿದೆ. ಚಿಕ್ಕ ರಂಗೋಲಿ ಅಥವಾ ದೊಡ್ಡ ರಂಗೋಲಿಯಾಗಿ ಇದನ್ನು ಬಳಸಬಹುದು. ಚೆಂಡು ಹೂ, ಸೇವಂತಿಗೆ, ಮಲ್ಲಿಗೆ, ಸೊಪ್ಪನ್ನು ಚಿಕ್ಕದಾಗಿ ಕತ್ತರಿಸಿಟ್ಟು ಅವುಗಳನ್ನು ಈ ರಂಗೋಲಿ ಡಿಸೈನ್ ಮಾಡಬಹುದು. ಸ್ವಾತಂತ್ರ್ಯ ದಿನಾಚರಣೆಯಂದು ಮನೆಮುಂದೆ ಈ ರಂಗೋಲಿ ಡಿಸೈನ್ ಹಾಕಿ, ಮಕ್ಕಳಿಗೆ ತುಂಬಾನೇ ಖುಷಿಯಾಗುವುದು.
ಭಾರತದ ಧ್ವಜ
ಸ್ವಾತಂತ್ರ್ಯ ದಿನಾಚರಣೆಯಂದು ರಂಗೋಲಿ ಪುಡಿ ಬಳಸಿ ನೀವು ಬಾವುಟವನ್ನು ಬಿಡಿಸಬಹುದು, ಅದರ ಜೊತೆಗೆ ನಿಮಗೆ ಇಷ್ಟವಾದ ಇತರ ಡಿಸೈನ್‌ಗಳನ್ನು ಮಾಡಬಹುದು, ತ್ರಿವರ್ಣ ಧ್ವಜದ ಬಣ್ಣದ ಈ ರಂಗೋಲಿ ಡಿಸೈನ್ ಹಬ್ಬದ ಸಂಭ್ರಮ ಹೆಚ್ಚಿಸುವುದು.
ಭಾರತದ ಭೂಪಟದ ವಿನ್ಯಾಸ
ನೀವು ಸ್ವಾತಂತ್ರ್ಯ ದಿನಾಚರಣೆಯಂದು ತ್ರಿವಣ ಬಣ್ಣ ಬಳಸಿ ಅದರೊಳಗೆ ಭಾರತದ ಭೂಪಟ ಹಾಕಿದರೆ ತುಂಬಾನೇ ಆಕರ್ಷಕವಾಗಿ ಕಾಣುವುದು.
ಈ ರಂಗೋಲಿ ನೋಡಿ ಎಷ್ಟೊಂದು ಆಕರ್ಷಕವಾಗಿದೆ ಅಲ್ವಾ?
ನೂವು ಈ ದಿನ ಯಾವುದೇ ವಿನ್ಯಾಸದ ರಂಗೋಲಿ ಬಿಡಿಸಬಹುದು, ಆದರೆ ಬಿಡಿಸುವಾಗ ಕೇಸರಿ, ಬಿಳಿ, ಹಸಿರು ಬಣ್ಣ ಬಳಸಿದರೆ ಸ್ವಾತಂತ್ರ್ಯ ದಿನಾಚರಣೆಯ ಥೀಮ್‌ಗೆ ತುಂಬಾನೇ ಸೂಕ್ತವಾಗಿರುತ್ತದೆ.
ರಾಷ್ಟ್ರ ಧ್ವಜ ಬಣ್ಣ ಹಾಗೂ ರಾಷ್ಟ್ರಪಕ್ಷಿ
ನಮ್ಮ ರಾಷ್ಟ್ರ ಧ್ವಜದಲ್ಲಿ ಮೂರು ಬಣ್ಣಗಳಿವೆ, ಕೇಸರಿ ತ್ಯಾಗದ ಸಂಕೇತ, ಬಿಳಿ ಶಾಂತಿಯ ಸಂಕೇತ, ಹಸಿರು ಸಮೃದ್ಧಿಯ ಸಂಕೇತ. ಈ ಮೂರು ಬಣ್ಣವನ್ನು ರಂಗೋಲಿಯಲ್ಲಿ ಮೂಡಿಸಿ ನಂತರ ರಾಷ್ಟ್ರಧ್ವಜದ ಪಕ್ಕ ರಾಷ್ಟ್ರ ಪಕ್ಷಿ ನವಿಲು ಬಿಡಿಸಿ ಅಲಂಕರಿಸಿದರೆ ತುಂಬಾನೇ ಆಕರ್ಷಕವಾಗಿ ಕಾಣಲಿದೆ.



Click it and Unblock the Notifications











