Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ವಾಸ್ತು ಪ್ರಕಾರ ಆಗ್ನೇಯ ದಿಕ್ಕಿನಲ್ಲಿ ಯಾವ ಬಣ್ಣ ಪೇಯಿಂಟ್ ಬಳಿತಲ್ಲ
ಮನೆಗೆ ಪೇಯಿಂಟ್ ಮಾಡುವಾಗ ನಮಗೆ ಇಷ್ಟವಾದ ಬಣ್ಣದ ಪೇಯಿಂಟ್ ಮಾಡಿಸುತ್ತೇವೆ. ಆದರೆ ಕೆಲವೊಂದು ಬಣ್ಣ ಕೆಲವೊಂದು ದಿಕ್ಕಿಗೆ ಒಳ್ಳೆಯದಲ್ಲ ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಅದರಲ್ಲೂ ಮನೆಯ ಆಗ್ನೇಯ ದಿಕ್ಕಿಗೆ ಬಿಳಿ, ಸಿಲ್ವರ್, ಬೂದು ಬಣ್ಣ ಇವೆಲ್ಲಾ ಒಳ್ಳೆಯದಲ್ಲ.

ಏಕೆ ಆ ಬಣ್ಣಗಳು ಒಳ್ಳೆಯದಲ್ಲ, ಆಗ್ನೇಯ ದಿಕ್ಕಿಗೆ ಯಾವ ಬಣ್ಣವಿದ್ದರೆ ಒಳ್ಳೆಯದು ಎಂದು ನೋಡೋಣ ಬನ್ನಿ:

ಆಗ್ನೇಯ ದಿಕ್ಕಿಗೆ ಬಿಳಿ ಬಣ್ಣದ ಪೇಯಿಂಟ್ ಒಳ್ಳೆಯದಲ್ಲ
ಆಗ್ನೇಯ ದಿಕ್ಕಿಗೆ ಬಿಳಿ ಬಣ್ಣ, ಮೆಟಲ್, ಬೂದು ಬಣ್ಣ ಒಳ್ಳೆಯದಲ್ಲ ಎಂಬುವುದಾಗಿ ವಾಸ್ತು ಶಾಸ್ತ್ರ ಹೇಳುತ್ತದೆ. ಆಗ್ನೇಯ ದಿಕ್ಕಿನಲ್ಲಿ ಈ ಬಣ್ಣಗಳಿದ್ದರೆ ಮನೆಯ ಮುಖ್ಯಸ್ಥನಿಗೆ ಅಪಾಯ ಉಂಟಾಗುತ್ತದೆ ಎಂದು ಹೇಳಲಾಗುವುದು.

ಮನೆ ದೊಡ್ಡ ಮಗಳಿಗೂ ಒಳ್ಳೆಯದಲ್ಲ
ಆಗ್ನೇಯ ದಿಕ್ಕಿನಲ್ಲಿ ಮೇಲೆ ತಿಳಿಸಿದ ಬಣ್ಣವಿದ್ದರ ಮನೆಯ ದೊಡ್ಡ ಮಗಳಿಗೆ ರಕ್ತ ಸಂಬಂಧಿ ಸಮಸ್ಯೆ ಉಂಟಾಗುತ್ತದೆ ಎಂದು ಹೇಳಲಾಗುವುದು. ಅಲ್ಲದೆ ಮನೆಯ ಒಡೆಯನಿಗೆ ಆರೋಗ್ಯ ಸಮಸ್ಯೆ ಉಂಟಾಗುವುದು. ವ್ಯಾಪಾರದಲ್ಲಿ ನಷ್ಟ ಉಂಟಾಗುವುದು.

ಆಗ್ನೇಯ ದಿಕ್ಕಿನಲ್ಲಿ ಹಳದಿ ಬಣ್ಣ ಕೂಡ ಬಳಸಬೇಡಿ
ಆಗ್ನೇಯ ದಿಕ್ಕಿನಲ್ಲಿ ಹಳದಿ ಬಣ್ಣವಿದ್ದರೆ ಮನೆಗೆ ಹಾನಿಯುಂಟಾಗುವುದು ಎಂದು ಹೇಳಲಾಗುವುದು. ಅಗ್ನೇಯ ದಿಕ್ಕಿನಲ್ಲಿ ಹಳದಿ ಬಣ್ಣವಿದ್ದರೆ ಮನೆಯ ಒಡೆಯನಿಗೆ ಆರೋಗ್ಯದ ಸಮಸ್ಯೆ ಉಂಟಾಗುತ್ತದೆ. ಮನೆಯ ಕಿರಿಯ ಮಗನಿಗೆ ಜೀವನದಲ್ಲಿ ತೊಂದರೆ ಉಂಟಾಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಆಗ್ನೇಯ ದಿಕ್ಕಿನಲ್ಲಿ ಕೆಂಪು ಬಣ್ಣ ಬಳಸಬೇಡಿ
ಆಗ್ನೇಯ ದಿಕ್ಕಿಗೆ ಕೆಂಪು ಬಣ್ಣ ಬಳಿದರೆ ಮಧ್ಯದ ಮಗಳಿಗೆ ಒಳ್ಳೆಯದು, ಆದರೆ ದೊಡ್ಡ ಮಗಳಿಗೆ ಒಳ್ಳೆಯದಲ್ಲ. ಆದ್ದರಿಂದ ಮನೆಯ ಆಗ್ನೇಯ ದಿಕ್ಕಿಗೆ ಕೆಂಪು ಪೇಯಿಂಟ್ ಮಾಡಿಸಬೇಡಿ.
ಆಗ್ನೇಯ ದಿಕ್ಕಿಗೆ ಯಾವ ಬಣ್ಣದ ಪೇಯಿಂಟ್ ಮಾಡಿದರೆ ಒಳ್ಳೆಯದು?
ಆಗ್ನೇಯ ದಿಕ್ಕಿನಲ್ಲಿ ಆರೇಂಜ್ ಅಥವಾ ಪಿಂಕ್ ಬಣ್ಣದ ಪೇಯಿಂಟ್ ಒಳ್ಳೆಯದು.



Click it and Unblock the Notifications
