Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಬೆವರಿನ ಕಲೆ ಇರುವ ಬಟ್ಟೆ ಡ್ರೈಯರ್‌ನಲ್ಲಿ ಹಾಕಲೇಬೇಡಿ, ಹೀಗೆ ಮಾಡಿ
ತುಂಬಾ ಬೆವರುವವರು ಒಂದು ಗಮನಿಸಿರಬಹುದು, ನಿಮ್ಮ ಬಟ್ಟೆ ಒದ್ದೆಯಾಗುವುದು ಮಾತ್ರವಲ್ಲ, ಕುತ್ತಿಗೆ ಹತ್ತಿರ, ಕಂಕುಳ ಹತ್ತಿರ ಕಲೆ ರೀತಿಯಾಗಿರುತ್ತದೆ. ಈ ಕಲೆ ಸುಲಭವಾಗಿ ಹೋಗುವುದಿಲ್ಲ. ಇನ್ನು ಕೈಯಲ್ಲಿ ಒಗೆಯುವುದಾದರೆ ಸರಿ, ಇಲ್ಲಾ ನೀವು ಬಟ್ಟೆ ಒಗೆಯಲು ವಾಶಿಂಗ್ ಮೆಷಿನ್ ಬಳಸುವುದಾದರೆ ಬೆವರಿನ ಕಲೆ ಇರುವ ಬಟ್ಟೆಯನ್ನು ವಾಶಿಂಗ್ ಮೆಷಿನ್‌ನಲ್ಲಿ ಹಾಕಲೇಬಾರದು.
ಇಂಥ ಬಟ್ಟೆ ವಾಶಿಂಗ್ ಮೆಷಿನ್‌ನಲ್ಲಿ ಏಕೆ ಹಾಕಬಾರದು, ಇದರ ಕಲೆ ಹೋಗಲಾಡಿಸುವುದು ಹೇಗೆ ಎಂದು ನೋಡೋಣ:

ಬೆವರಿನ ಕಲೆ ಹೋಗಲಾಡಿಸುವುದು ಹೇಗೆ?
* 250 ಮಿ.ಲೀ ವೈಟ್ ವಿನೆಗರ್
* 500 ಮಿ. ಲೀ ಬಿಸಿ ನೀರು
* 120 ಗ್ರಾಂ ಅಡುಗೆ ಸೋಡಾ
* 1 ಚಮಚ ಉಪ್ಪು
* 1 ಚಮಚ ಹೈಡ್ರೋಜನ್ ಪರಾಕ್ಸೈಡ್
ಒಂದು ಬಕೆಟ್ ಬಿಸಿ ನೀರಿನಲ್ಲಿ ವೈಟ್ ವಿನೆಗರ್ ಹಾಕಿ, ಅದರಲ್ಲಿ ಬೆವರಿನ ಕೊಳೆ ಅಧಿಕವಿರುವ ಬಟ್ಟೆಯನ್ನು ನೆನೆ 20 ನಿಮಿಷ ಹಾಕಿ. ಮತ್ತೊಂದು ಪ್ರತ್ಯೇಕ ಬೌಲ್‌ನಲ್ಲಿ ಬೇಕಿಂಗ್ ಸೋಡಾ, ಉಪ್ಪು, ಹೈಡ್ರೋಜನ್ ಪರಾಕ್ಸೈಡ್ ಹಾಕಿ ಗಟ್ಟಿಯಾದ ಪೇಸ್ಟ್ ರೀತಿ ಮಾಡಿ. ಈಗ ನೀರಿನಲ್ಲಿ ನೆನೆ ಹಾಕಿ ಬಟ್ಟೆ ತೆಗೆದು ಮಿಕ್ಸ್ ಮಾಡಿಟ್ಟ ಪೇಸ್ಟ್ ಅನ್ನು ಕಲೆ ಇರುವ ಕಡೆ ಹಾಕಿ ತಿಕ್ಕಿ, ಇದರಿಂದ ಬೆವರಿನ ಕಲೆ ಹೋಗಿ ಬಟ್ಟೆ ಶುಭ್ರವಾಗಿ ಕಾಣುವುದು.

ಡ್ರೈಯರ್‌ನಲ್ಲಿ ಏಕೆ ಹಾಕಬಾರದು
ನೀವು ಬೆವರಿನ ಕಲೆ ಇರುವ ಬಟ್ಟೆಯನ್ನು ಡ್ರೈಯರ್‌ನಲ್ಲಿ ಹಾಕಿದರೆ ಕಲೆ ಫ್ಯಾಬ್ರಿಕ್ ಬಟ್ಟೆಯಲ್ಲಿ ಮತ್ತಷ್ಟು ಕಲೆ ಅಂಟಿಕೊಮಡು ಬಟ್ಟೆಯೇ ಹಾಳಾಗಬಹುದು. ಅಲ್ಲದೆ ಆ ಕಲೆ ಮತ್ತೆ ಹೋಗಿಸುವುದು ಕೂಡ ಕಷ್ಟವಾಗುವುದು. ಆದ್ದರಿಂದ ಬೆವರಿನ ಕಲೆ ಇರುವ ಬಟ್ಟೆಯನ್ನು ಡ್ರೈಯರ್‌ನಲ್ಲಿ ಹಾಕಬೇಡಿ.

ಇತರ ವಿಧಾನ:
ನೀವು ಆಸ್ಪಿರಿನ್‌ಯನ್ನು ಪುಡಿ ಮಾಡಿ ಅದಕ್ಕೆ ಸ್ವಲ್ಪ ನೀರು ಹಾಕಿ ಪೇಸ್ಟ್ ರೀತಿ ಮಾಡಿ, ಅದನ್ನು ಕಲೆ ಇರುವ ಕಡೆ ಹಳೆಯ ಟೂತ್ ಬ್ರೆಷ್‌ನಲ್ಲಿ ಹಾಕಿ ತಿಕ್ಕಿದರೆ ಕಲೆ ಇಲ್ಲವಾಗುವುದು.
ಮತ್ತೊಂದು ವಿಧಾನ
1 ಚಮಚ ನಿಂಬೆರಸಕ್ಕೆ 1 ಚಮಚ ನೀರು ಹಾಕಿ ಮಿಕ್ಸ್ ಮಾಡಿ ಅದನ್ನು ಕಲೆ ಇರುವ ಕಡೆ ಹಚ್ಚಿ ಅರ್ಧ ಗಂಟೆ ಬಿಟ್ಟು ಬಟ್ಟೆ ತೊಳೆಇರಿ, ಇದರಿಂದ ಕಲೆ ಹೋಗಲಾಡಿಸಬಹುದು.

ಬಟ್ಟೆಯಿಂದ ಬೆವರಿನ ದುರ್ಗಂಧ ಹೋಗಲಾಡಿಸುವುದು ಹೇಗೆ?
ತುಂಬಾ ಸೆಕೆ ಇರುವ ಕಡೆ ಬಟ್ಟೆ ಬೇಗನೆ ಬೆವರು ವಾಸನೆ ಬೀರುತ್ತದೆ. ಎಷ್ಟೇ ಸೋಪ್ ಹಚ್ಚಿ ತೊಳೆದರೂ ಆ ವಾಸನೆ ಸ್ವಲ್ಪ ಉಳಿಯುವುದು. ಆದ್ದರಿಂದ ಒಂದು ಬಕೆಟ್ ಬಿಸಿ ನೀರಿಗೆ 1 ಚಿಕ್ಕ ಕಪ್ ವೈಟ್ ವಿನೆಗರ್ ಹಾಕಿ ಅದರಲ್ಲಿ ಬಟ್ಟೆಯನ್ನು ನೆನೆ ಹಾಕಿ ಒಗೆದರೆ ಬೆವರಿನ ವಾಸನೆ ದೂರವಾಗುವುದು.



Click it and Unblock the Notifications
