Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಹೊರಗಡೆಯಿಂದ ಮನೆಗೆ ಕೊರೊನಾ ಸೋಂಕು ಬಾರದಿರಲು ಟಿಪ್ಸ್
ಕೊರೊನಾವೈರಸ್ ಬಗ್ಗೆ ಜನರಲ್ಲಿ ಆತಂಕ, ನಾನಾ ಸಂಶಯಗಳಿವೆ. ಕೆಲವರು ನಾನು ಮನೆಯಿಂದ ಹೊರಗೆಯೇ ಕಾಲಿಟ್ಟಿರಲಿಲ್ಲ, ಆದರೂ ಕೊರೊನಾ ಹೇಗೆ ಬಂತು ಎಂದು ಕೇಳುತ್ತಾರೆ. ಕೊರೊನಾ ಸೋಂಕು ಆಹಾರದಿಂದ ಹರಡುತ್ತಿದೆಯೇ? ಬಟ್ಟೆಗಳನ್ನು ಲಾಂಡ್ರಿಗೆ ಕೊಡಬಹುದೇ ಈ ರೀತಿಯ ಹಲವು ಸಂಶಯಗಳಿವೆ. ಇನ್ನು ಕೊರೊನಾ ಬಗ್ಗೆ ಹರಡುತ್ತಿರುವ ಅನೇಕ ತಪ್ಪು ಸುದ್ದಿಗಳು ಕೂಡ ಜನರಲ್ಲಿ ಆತಂಕ ಹೆಚ್ಚಿಸಲು ಒಮದು ಕಾರಣವಾಗಿದೆ.
ಕೋವಿಡ್ 19 ಸೋಂಕಿತ ವ್ಯಕ್ತಿಯ ನೇರ ಸಂಪರ್ಕ ಅಥವಾ ಅವರ ಎಂಜಲು ಬಿದ್ದ ಕಡೆ ಮುಟ್ಟಿದಾಗ ಅಥವಾ ಅವರು ಕೆಮ್ಮಿದಾಗ ಕೈಯನ್ನು ಅಡ್ಡ ಹಿಡಿದು ಆ ಕೈಯಿಂದ ಮುಟ್ಟಿದ ವಸ್ತುಗಳನ್ನು ಇತರರು ಮುಟ್ಟಿದಾಗ ಸೋಂಕು ಹರಡುವುದು. ಇದರ ಕುರಿತು ಹಲವಾರು ಸಂಶೋಧನೆಗಳನ್ನು ನಡೆಸುತ್ತಿದ್ದಾರೆ.
ವೈರಸ್ ನೆಲೆದ ಮೇಲೆ ಅಥವಾ ವಸ್ತುಗಳ ಮೇಲೆ ಕೆಲವು ಗಂಟೆಗಳವರೆಗೆ ಇರುತ್ತದೆ, ಆದರೆ ಒಂದು ಒಳ್ಳೆಯದ ಸುದ್ದಿ ಎಂದರೆ ಇದನ್ನು ಸಾಮಾನ್ಯ ಸೋಪು ಅಥವಾ ಸೋಂಕಾಣುಗಳನ್ನು ಕೊಲ್ಲುವ ಲಿಕ್ವಿಡ್ ಹಾಕಿ ಒರೆಸುವುದರಿಂದ ಅದನ್ನು ಕೊಲ್ಲಬಹುದು.
ಈಗ ಮನೆಯವರನ್ನು ಈ ಸೋಂಕಿನಿಂದ ರಕ್ಷಣೆ ಮಾಡುವುದು ಹೇಗೆ ಎಂದು ರಕ್ಷಣೆ ಮಾಡುವುದು ಹೇಗೆ ಎಂದು ನೋಡೋಣ:

ವೈಯಕ್ತಿಕ ಸ್ವಚ್ಛತೆ
ಮೊದಲಿಯದಾಗಿ ನಾವು ನಮ್ಮ ಸ್ವಚ್ಛತೆ ಕಡೆ ಹೆಚ್ಚು ಗಮನ ಹರಿಸಬೇಕು. ಅಂದ್ರೆ ಆಗಾಗ ಕೈಗಳಿಗೆ ಸೋಪು ಹಚ್ಚಿ ತೊಳೆಯುತ್ತಿರಬೇಕು. ಅಲ್ಲದೆ ಆಗಾಗ ಮುಖ ಮುಟ್ಟಬಾರದು. ಮಾಸ್ಕ್ ಹಾಕುವ ಮುನ್ನ ಹಾಗೂ ಮಾಸ್ಕ್ ತೆಗೆದ ಬಳಿಕ ಸೋಪು ಹಚ್ಚಿ ಮುಖ ತೊಳೆಯಿರಿ.

ಕೆಮ್ಮುವಾಗ, ಸೀನುವಾಗ ಕೈಗಳನ್ನು ಅಡ್ಡ ಹಿಡಿಯಬೇಡಿ
ಕೆಮ್ಮುವಾಗ, ಸೀನುವಾಗ ಕೈಗಳನ್ನು ಅಡ್ಡ ಹಿಡಿಯುವ ಅಭ್ಯಾಸ ನಮಗಿರುತ್ತದೆ. ಆದರೆ ಅದು ಬದಲಾಗಬೇಕಾಗಿದೆ. ಕೈಗಳ ಬದಲಿಗೆ ಮೊಣಕೈ ಅಡ್ಡ ಹಿಡಿದು ಕೆಮ್ಮುವುದು, ಸೀನುವುದು ಮಾಡಿ. ಕೆಮ್ಮುವಾದ, ಸೀನುವಾಗ ಬಾಯಿಗೆ ಅಡ್ಡವಾಗಿ ಹಿಡಿದ ಟಿಶ್ಯೂವನ್ನು ಒಂದು ಪೇಪರ್‌ನಲ್ಲಿ ಸುತ್ತಿ ಕಸದ ಬುಟ್ಟಿಗೆ ಹಾಕಿ.

ಅಂತರ ಕಾಯ್ದುಕೊಳ್ಳಿ
ಅವರು ನಿಮ್ಮ ಹತ್ತಿರದ ಸ್ನೇಹಿತರೇ ಆಗಲಿ ಕಂಡ ತಕ್ಷಣ ಕೈಕುಲುಕುವುದು, ತಬ್ಬಿಕೊಳ್ಳುವುದು ಮಾಡಬೇಡಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಹೊರಗಡೆ ಹೋಗುವಾಗ ಕನಿಷ್ಠ 3 ಅಡಿ ಅಂತರ ಕಾಯ್ದುಕೊಳ್ಳಿ.

ಕೈಗಳನ್ನು ಆಗಾಗ ತೊಳೆಯುತ್ತಲೇ ಇರಿ
ಕೈ ತೊಳೆಯಲು ಬಿಸಿ ನೀರೇ ಬೇಕು ಅಂತಿಲ್ಲ, ತಣ್ಣೀರಿನಲ್ಲಿ ತೊಳೆಯಬಹುದು. ಸೋಫು ಹಚ್ಚಿ 30 ಸೆಕೆಂಡ್ ಚೆನ್ನಾಗಿ ತಿಕ್ಕಿ ತೊಳೆಯಿರಿ. ಅಡುಗೆ ಮಾಡುವ ಮುನ್ನ, ಮೇಕಪ್ ಹಾಕಿ ಕೊಳ್ಳುವ ಮುನ್ನ, ಹೊರಗಡೆ ಹೋಗಿ ಮನೆಗೆ ಹಿಂತಿರುಗಿದಾಗ ಕೈಗಳನ್ನು ಸೋಪು ಹಚ್ಚಿ ತೊಳೆಯಿರಿ.

ಮನೆಯ ಸ್ವಚ್ಛತೆ
ಮನೆಯನ್ನು ದಿನಾ ಸೋಂಕಾಣು ಕೊಲ್ಲುವ ಲಿಕ್ವಿಡ್ ಹಾಕಿ ಸ್ವಚ್ಛ ಮಾಡಿ. ಹೆಚ್ಚು ಮುಟ್ಟುವ ವಸ್ತುಗಳು ಟಿವಿ ರಿಮೂಟ್, ಕಿಟಕಿ, ಅಡುಗೆ ಮನೆ, ಡೋರ್ , ಕಂಪ್ಯೂಟರ್, ಕೀಬೋರ್ಡ್, ಕಾಲಿಂಗ್ ಬೆಲ್ ಇಂಥ ವಸ್ತುಗಳನ್ನು ಸ್ವಚ್ಛ ಮಾಡಿ.

ಯಾವ ವಸ್ತುವನ್ನು ಸ್ವಚ್ಛತೆಗೆ ಬಳಸಬೇಕು
ಸೋಪ್, ಸೋಪ್ ಪೌಡರ್,ಸ್ಪ್ರೇ, ನೀರು ಇಂಥ ವಸ್ತುಗಳನ್ನು ಬಳಸಿ ಸ್ವಚ್ಛ ಮಾಡಬಹುದು. ಇನ್ನು ಶೇ.70ರಷ್ಟು ಆಲ್ಕೋಹಾಲ್ ಇರುವ ಬ್ಲೀಚ್ ಅಥವಾ ಸೋಂಕಾಣುಗಳನ್ನು ಕೊಲ್ಲುವ ಫೀನೈಲ್ ಮುಂತಾದ ಸೋಂಕಾಣು ಕೊಲ್ಲುವ ಲಿಕ್ವಿಡ್ ಬಳಸಬಹುದು. ಮೊಬೈಲ್ ಕೂಡ ಸ್ವಚ್ಛ ಮಾಡಿ.

ಬಟ್ಟೆಯ ಸ್ವಚ್ಛತೆ
ಹೊರಗಡೆ ಹೋಗಿ ಬಂದ ಮೇಲೆ ಆ ಬಟ್ಟೆ ಬಿಚ್ಚಿ ತೊಳೆಯಲು ಹಾಕಿ, ಸೋಪು ನೀರಿನಲ್ಲಿ ನೆನೆಹಾಕಬೇಕು, ನಂತರ ಅದನ್ನು ತೊಳೆದು ಹಾಕಿ ಕೈಗಳನ್ನು ಸೋಪು ಹಚ್ಚಿ ತೊಳೆಯಿರಿ.
ಬಟ್ಟೆ ತೊಳೆಯುವಾಗ ಗಮನಿಸಬೇಕಾದ ಅಂಶಗಳು
ಕೊಳಕು ಬಟ್ಟೆ ಕೊಡವಿ ಒಗೆಯಕ್ಕೆ ಹಾಕಬೇಕಿ, ಈ ರೀತಿ ಮಾಡಿದರೆ ವೈರಸ್ ಇದ್ದರೆ ಅದು ಗಾಳಿಗೆ ಹಾರುವುದು. ಅದನ್ನು ಹಾಗೇ ಸೋಪು ನೀರಿನಲ್ಲಿ ನೆನೆ ಹಾಕಿ. ಇನ್ನು ವಾಶಿಂಗ್ ಮೆಷಿನ್‌ನಲ್ಲಿ ಹಾಕುವುದಾದರೆ ಹಾಟ್ ವಾಟರ್‌ನಲ್ಲಿ ತೊಳೆಯುವುದು ಸೂಕ್ತ.

ಆಹಾರದ ಸುರಕ್ಷತೆ ಹೇಗೆ?
* ಆಹಾರವನ್ನು ಹೊರಗಿನಿಂದ ತಂದರೆ ಅದು ತಂದ ಕವರ್ ಅನ್ನು ತೆಗೆದು ಕಸದ ಬುಟ್ಟಿಗೆ ಹಾಕಿ, ನಂತರ ಕೈ ತೊಳೆದು ಶುದ್ಧವಾದ ತಟ್ಟೆಗೆ ಆಹಾರ ಸುರಿಯಿರಿ.
* ಹಣ್ಣು , ತರಕಾರಿಗಳನ್ನು ತೊಳೆದು ಒಳಗಿಡಿ.
* ನಂತರ ಕೈಗಳನ್ನು ಸೋಪು ಹಾಕಿ ತೊಳೆಯಿರಿ.
* ಬೇಯಿಸಿದ ಆಹಾರದ ವೈರಸ್ ಇರಲ್ಲ.
* ಸ್ವಚ್ಛವಾದ ತಟ್ಟೆ, ಲೋಟ, ಇತರ ಪಾತ್ರೆ ಬಳಸಿ.



Click it and Unblock the Notifications
