Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಮನೆಯ ಸ್ವಚ್ಛತೆಗೆ ಸರಳ ಟ್ರಿಕ್ಸ್-ಪಕ್ಕಾ ಸಮಯ ಉಳಿತಾಯ!
ಮನೆಯನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಒಂದು ಕಲೆ. ಮನೆ ಸ್ವಚ್ಛವಾಗಿದೆ ಎಂದಾದರೆ ಮನಸ್ಸಿಗೂ ಒಂದು ರೀತಿಯ ನೆಮ್ಮದಿ ಹಾಗೂ ನಿರಾಳವಾದ ಭಾವನೆ ಇರುತ್ತದೆ. ವೃತ್ತಿ ಜೀವನಮದಲ್ಲಿ ಕೆಲಸದ ಒತ್ತಡ ಇದ್ದಾಗ ಮನೆಯ ಸ್ವಚ್ಛತೆ ಹಾಗೂ ಶುಚಿತ್ವದ ಬಗ್ಗೆ ಅನೇಕರು ಗಮನ ನೀಡುವುದಿಲ್ಲ. ಇದರ ಪರಿಣಾಮವಾಗಿ ಧೂಳು ಮನೆಯ ಒಳಗೆ ಹಾಗೇ ಕುಳಿತಿರುತ್ತದೆ. ಜೊತೆಗೆ ಕೆಲವು ರೋಗಾಣುಗಳನ್ನು ಸೃಷ್ಟಿಸುವುದಲ್ಲದೆ ಅನಾರೋಗ್ಯಕ್ಕೂ ಕಾರಣವಾಗುವ ಸಧ್ಯತೆಗಳಿರುತ್ತವೆ.

ಎಷ್ಟೋ ಮನೆಗಳಲ್ಲಿ ಪಾದರಕ್ಷೆಯನ್ನು ಮನೆಯ ಒಳಗೆ ಬಿಡುವ ಪದ್ಧತಿಯನ್ನು ಹೊಂದಿರುತ್ತಾರೆ. ಪಾದರಕ್ಷೆಗೆ ಅಂಟಿರುವ ಕೊಳಕು ಮನೆಯೊಳಗೆ ಪ್ರವೇಶ ಪಡೆಯುತ್ತದೆ. ಬೀದಿಯಲ್ಲಿರುವ ಕೊಳಕು ರೋಗಾಣುಗಳೆಲ್ಲವೂ ಮನೆಯೊಳಗೆ ಓಡಾಡುತ್ತಿರುತ್ತವೆ. ಕೆಲವರಿಗೆ ಕೆಲಸದ ಒತ್ತಡದಿಂದ ನಿತ್ಯವೂ ಮನೆಯನ್ನು ಶುಚಿಗೊಳಿಸಲು ಸಾಧ್ಯವಾಗದೆ ಇರಬಹುದು. ಅಂತಹ ಸಮಯದಲ್ಲಿ ಕೆಲವು ಮುನ್ನೆಚ್ಚರಿಕೆಗಳಿಂದ ಮನೆಯನ್ನು ಶುಚಿಯಾಗಿಟ್ಟುಕೊಳ್ಳಬಹುದು.
ಹಾಗಾದರೆ ಆ ವಿಧಾನಗಳು ಯಾವವು? ಎನ್ನುವ ಪ್ರಶ್ನೆ ನಿಮ್ಮನ್ನು ಕಾಡುತ್ತಿದೆ ಎಂದಾದರೆ ಈ ಮುಂದೆ ನೀಡಿರುವ ವಿವರಣೆಯನ್ನು ಪರಿಶೀಲಿಸಿ. ಕಡಿಮೆ ಸಮಯದಲ್ಲಿ ಮನೆಯನ್ನು ಹೇಗೆ ಶುಚಿಗೊಳಿಸುವುದು? ನಮ್ಮ ಕೊಠಡಿಯ ಸ್ವಚ್ಛತೆಯನ್ನು ಹೇಗೆ ಕಾಪಾಡಿಕೊಳ್ಳುವುದು? ಎನ್ನುವುದನ್ನು ತಿಳಿಯಿರಿ. ಜೊತೆಗೆ ಮನೆಯನ್ನು ಸ್ವಚ್ಛವಾಗಿಸಿ, ನೀವು ಆರೋಗ್ಯದಿಂದ ಇರಿ...

ಹಾಸಿಗೆಯನ್ನು ಸೂಕ್ತ ರೀತಿಯಲ್ಲಿಡಿ
ಕೊಠಡಿಯನ್ನು ಶುಚಿಯಾಗಿಡುವಂತೆ ಮಾಡುವುದರಲ್ಲಿ ಬೆಡ್/ಹಾಸಿಗೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮುಂಜಾನೆ ಎದ್ದ ತಕ್ಷಣ ಅಂದರೆ ಬ್ರೆಶ್ ಮಾಡುವ ಮೊದಲೇ ಹಾಸಿಗೆ ವಸ್ತ್ರಗಳನ್ನು ಮಡಚಿಡಿ. ನಂತರ ಬೆಡ್‍ಗಳನ್ನು ಶುಚಿಯಾಗಿಡಿಸಿ. ಇದನ್ನು ನಿತ್ಯವೂ ಅನುಸರಿಸಿದರೆ ಬೆಡ್ ಶುಚಿಗೊಳಿಸುವುದು ಒಂದು ದೊಡ್ಡ ಕೆಲಸ ಎನಿಸದು. ನಿತ್ಯ ಎದ್ದ ತಕ್ಷಣ ಶುಚಿ ಮಾಡಿದರೆ ಅಷ್ಟು ಸಮಯವೂ ಬೇಕಾಗದು. ಹಾಸಿಗೆಯೂ ಹಾಗಾಗೆ ಬಿದ್ದಿದ್ದರೆ ಕೊಠಡಿಯು ಅಸಹ್ಯದಿಂದ ಕೂಡಿರುವುದು. ಜೊತೆಗೆ ಮಲಗುವ ಹಾಸಿಗೆಯಲ್ಲಿ ಒಂದಿಷ್ಟು ಧೂಳು ಮನೆಮಾಡುವುದು.

ಸೂಕ್ತ ಜಾಗದಲ್ಲಿಡಿ
ಪ್ರತಿಯೊಂದು ವಸ್ತುವಿಗೂ ಒಂದು ನಿರ್ದಿಷ್ಟ ಜಾಗವನ್ನು ನಿರ್ಧರಿಸಿ. ನಿಮಗೆ ಅಗತ್ಯವಿದ್ದಾಗ ತೆಗೆದುಕೊಂಡು, ಕೆಲಸ ಮುಗಿದ ನಂತರ ಪುನಃ ಅದೇ ಸ್ಥಳದಲ್ಲಿ ಇಡಿ. ಬೇಕೆನಿಸಿದಾಗ ತೆಗೆದುಕೊಂಡು, ಹಾಗೆ ಬಿಸಾಡಿ ಹೋದರೆ ಅದನ್ನು ಸ್ವಚ್ಛಗೊಳಿಸಲು ಬೇರೆ ಸಮಯವನ್ನು ಮೀಸಲಿಡಬೇಕಾಗುತ್ತದೆ. ಜೊತೆಗೆ ಆ ವಸ್ತು ಹಾಳಾಗಬಹುದು. ಕೊಠಡಿಯನ್ನು ಅಸಹ್ಯ ವಾಗಿರುವಂತೆ ಮಾಡುವುದು. ದಣಿದು ರೂಮಿಗೆ ಬಂದಾಗ ಮನಸ್ಸಿಗೆ ಇನ್ನಷ್ಟು ಕಿರಿಕಿರಿ ಉಂಟಾಗುವುದು. ಪ್ರತಿಯೊಂದನ್ನೂ ನೀಟಾಗಿ ಎತ್ತಿ ಪುನಃ ಅಲ್ಲಿಯೇ ಇಟ್ಟರೆ ಅದೊಂದು ಶಿಸ್ತಿನ ಜೀವನ ನಿಮ್ಮದಾಗುತ್ತದೆ.

ಸೂಕ್ತ ವಸ್ತುಗಳನ್ನು ಖರೀದಿಸಿ
ಕೋಣೆ ಎಂದಮೇಲೆ ನಮ್ಮ ವೈಯಕ್ತಿಕ ಉಪಯೋಗಕ್ಕೆ ಬಳಸಿದ ವಸ್ತುಗಳು ಇರುತ್ತವೆ. ಅವುಗಳ ಬಳಕೆಯ ನಂತರ ಬೇಕೆಂದ ಹಾಗೆ ಬಿಸಾಡಬಾರದು. ಧರಿಸಿರುವ ಬಟ್ಟೆಯನ್ನು ತೆಗೆದು ಶುಚಿಗೊಳಿಸಲು ಸಮಯ ಬೇಕಾಗುವುದು. ಅಲ್ಲಿಯ ತನಕ ಎಲ್ಲೆಂದರಲ್ಲಿ ಎಸೆದಿಡಬಾರದು. ಬದಲಿಗೆ ಬಟ್ಟೆಯನ್ನು ಹಾಕಿಡಲು ಬೇಕಾದ ಟಬ್, ಬಾಸ್ಕೆಟ್ ಅಥವಾ ಸ್ಟ್ಯಾಂಡ್‍ಗಳನ್ನು ಖರೀದಿಸಿ. ಅದರಲ್ಲಿಯೇ ಇಡುವ ಪದ್ಧತಿಯನ್ನು ರೂಢಿಸಿಕೊಳ್ಳಿ. ಕಸವನ್ನು ಎಸೆಯಲು ಒಂದು ಡಸ್ಟ್‌ಬಿನ್ ಇಟ್ಟುಕೊಳ್ಳಲು ಮರೆಯದಿರಿ.

ಬೆಡ್ ಕೆಳಗೆ ಸ್ವಚ್ಛಗೊಳಿಸಿ
ಹಾಸಿಗೆಯ ಮೇಲೆ ಸ್ವಚ್ಛಗೊಳಿಸಿದ ಮಾತ್ರಕ್ಕೆ ಅಡಿಯಲ್ಲಿ ಧೂಳು ಇರುವುದಿಲ್ಲ ಎಂದು ಭಾವಿಸದಿರಿ. ಹಾಸಿಗೆಯ ಅಡಿಯಲ್ಲಿ ಜಿರಲೆ, ಇರುವೆ, ಜೇಡ ಸೇರಿದಂತೆ ಇನ್ನಿತರ ಕೀಟಗಳು ಮನೆ ಮಾಡುವ ಸಾಧ್ಯತೆಗಳಿರುತ್ತವೆ. ವಾರದಲ್ಲಿ ಒಮ್ಮೆ ಅಥವಾ ಸಾಧ್ಯವಾದರೆ ಮೂರು ದಿನಕ್ಕೊಮ್ಮೆ ಬೆಡ್ ಕೆಳಭಾಗದಲ್ಲೂ ಸ್ವಚ್ಛಗೊಳಿಸುವುದು ಮತ್ತು ಧೂಳು ತೆಗೆಯುವುದನ್ನು ಮರೆಯದಿರಿ.

ಪೊರಕೆಯನ್ನು ದೂರವಿಡಿ
ಕೊಠಡಿಯನ್ನು ಸ್ವಚ್ಛಗೊಳಿಸಿದ ನಂತರ, ಸ್ವಚ್ಛತೆಗೆ ಬಳಸಿದ ಪೊರಕೆ, ಬಟ್ಟೆ ಹಾಗೂ ಇನ್ನಿತರ ಸಾಮಾಗ್ರಿಗಳನ್ನು ಕೊಠಡಿಯ ಒಳಗೆ ಇಡದಿರಿ. ಅವುಗಳನ್ನು ಇಡಲು ಮನೆಯಿಂದ ಆಚೆ ಒಂದು ಸೂಕ್ತ ಸ್ಥಳವನ್ನು ನಿಗದಿ ಪಡಿಸಿಕೊಳ್ಳಿ.

ಆಹಾರ ವಸ್ತುಗಳನ್ನು ಇಡದಿರಿ
ಕೋಣೆಯೊಳಗೆ ಕುಳಿತು ಆಹಾರ ಸೇವಿಸುವುದು, ಅಗತ್ಯವಿದ್ದಾಗ ತಿನ್ನಲು ಎಂದು ಹಣ್ಣುಗಳನ್ನು ಇರಿಸಿಕೊಳ್ಳುವ ಕಾರಣದಿಂದ ಕೋಣೆಯ ಸ್ವಚ್ಛತೆ ಹಾಳಾಗುವುದು. ತಿಂದ ಆಹಾರದ ಚೂರು ಅಲ್ಲಿಯೇ ಬೀಳಬಹುದು. ಬಿದ್ದ ಆಹಾರವನ್ನು ತಿನ್ನಲು ಇರುವೆ, ಜಿರಲೆ, ಹಲ್ಲಿಗಳು ಬರಬಹುದು. ಇಟ್ಟ ಹಣ್ಣುಗಳ ನೆನಪಿಲ್ಲದೆ ಕೊಳೆತು ವಾಸನೆ ಸೂಸುವುದು, ಕ್ರಿಮಿಗಳಾಗುವುದು. ಇವೆಲ್ಲವೂ ಕೊಠಡಿಯ ಸ್ವಚ್ಛತೆಯನ್ನು ಹಾಳುಮಾಡುತ್ತವೆ. ಹಾಗಾಗಿ ಈ ಕುರಿತು ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಂಡರೆ ಅವುಗಳ ಸ್ವಚ್ಛತೆಗಾಗಿ ಸಮಯವನ್ನು ವ್ಯಯಿಸುವ ಅಗತ್ಯವಿರುವುದಿಲ್ಲ.

ಮ್ಯಾಟ್‍ಗಳನ್ನು ಬಳಸಿ
ಹಾಸಿಗೆಗೆ ಹೋಗುವ ಮುನ್ನ ಕಾಲನ್ನು ಒರೆಸಲು ಒಂದು ಮ್ಯಾಟ್ ಇಟ್ಟುಕೊಳ್ಳಿ. ಕಾಲನ್ನು ಶುಷ್ಕ ಗೊಳಿಸಿ ಮತ್ತು ಅದರಲ್ಲಿರುವ ಧೂಳನ್ನು ಮ್ಯಾಟ್‍ಗೆ ಒರೆಸುವುದರಿಂದ ಮಣ್ಣು ಮತ್ತು ಧೂಳು ಹಾಸಿಗೆಯನ್ನು ತಲುಪದು. ಜೊತೆಗೆ ಆ ಮ್ಯಾಟ್‍ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದನ್ನು ಮರೆಯಬಾರದು.

ಕಿಟಕಿಯನ್ನು ತೆರೆಯಿರಿ
ಉದ್ಯೋಗಕ್ಕೆ ಹೋಗುವವರಿಗೆ ಮನೆಯ ಕಿಟಕಿಯನ್ನು ತೆರೆದಿಟ್ಟು ಹೋಗಲು ಸಾಧ್ಯವಾಗದು. ಆಕಾರಣಕ್ಕೆ ಹಾಗೇ ಮುಚ್ಚಿರುವುದು ಸಹಜ. ಮನೆಗೆ ಬಂದ ಮೇಲೆ, ಸ್ವಲ್ಪ ಸಮಯದ ಮಟ್ಟಿಗಾದರೂ ಕಿಟಕಿಯನ್ನು ತೆರೆಯಿರಿ. ಮನೆಯಲ್ಲಿ ಇರುವಷ್ಟು ಸಮಯ ಕಿಟಕಿಯನ್ನು ತೆರೆದಿಡಿ. ಶುದ್ಧವಾದ ಗಾಳಿ ಮನೆಯ ಒಳಗೆ ಪ್ರವೇಶ ಪಡೆಯುತ್ತದೆ. ರೋಗಾಣುಗಳ ಉತ್ಪತ್ತಿಯು ಕಡಿಮೆಯಾಗುವುದು.

ಹಾಸಿಗೆಯನ್ನು ಮಡಿಚಿ
ಎಲ್ಲಾ ಸಮಯದಲ್ಲೂ ಹಾಸಿಗೆ ತೆರೆದೆ ಇಡುವುದರಿಂದ ಧೂಳು ಕುಳಿತುಕೊಳ್ಳುತ್ತದೆ. ನಿದ್ರೆಯ ನಂತರ ಹಾಸಿಗೆಯನ್ನು ಮಡಿಚಿಡುವ ಪದ್ಧತಿಯನ್ನು ಅನುಸರಿಸಿ. ಇದರಿಂದ ಹಾಸಿಗೆಯೂ ಸ್ವಚ್ಛವಾಗಿ ಇರುತ್ತದೆ. ಆರೋಗ್ಯಕರ ನಿದ್ರೆಯನ್ನೂ ಪಡೆಯಬಹುದು.

ನೆಲವನ್ನು ಸ್ವಚ್ಛವಾಗಿರಿಸಿ
ವಾರಕ್ಕೊಮ್ಮೆಯಾದರೂ ಕೋಣೆಯೊಳಗಿರುವ ಪೀಠೋಪಕರಣಗಳನ್ನು ಶುಚಿಗೊಳಿಸಲು ಮರೆಯದಿರಿ. ನಿತ್ಯ ನಿಮಗೆ ಬಿಡುವಾದ ಸಮಯದಲ್ಲಿ ಒಮ್ಮೆ ನೆಲವನ್ನು ಒರೆಸಲು ಮರೆಯದಿರಿ. ಇದರಿಂದ ಮನೆ ಹಾಗೂ ಕೊಠಡಿಯು ಶುಚಿಯಾಗಿ ಇರುವುದು.



Click it and Unblock the Notifications
