Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸುಸ್ತು ಮಾಡುವ ಮನೆ ಕೆಲಸಕ್ಕೆ ಇನ್ನು ವಿದಾಯ ಹೇಳಿ
ಮನೆ ಎಂಬ ದೇವಾಲಯವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಕ್ರಿಯಾತ್ಮಕ ಕೆಲಸವಾಗಿದ್ದು ಇದರಿಂದ ನಿಮಗೆ ವ್ಯಾಯಾಮವೂ ದೊರಕಿದಂತಾಗಿ ನಿಮಗೂ ಹಾಯೆನಿಸುತ್ತದೆ. ಆದರೆ ಕೊಳಕಾದ ಮನೆಯು ನಿಮ್ಮ ಮನಸ್ಸನ್ನು ಕೂಡ ಹಾಳು ಮಾಡಿ ನೆಮ್ಮದಿಯನ್ನು ಕೆಡಿಸಬಲ್ಲುದು. ಮನೆಯಲ್ಲಿರುವ ಗೃಹಿಣಿಯರಿಗೆ ಮನೆಯ ಸ್ವಚ್ಛತೆ ಅಷ್ಟೊಂದು ಹೊರೆ ಎಂದೆನಿಸದಿದ್ದರೂ ಉದ್ಯೋಗಕ್ಕೆ ಹೋಗುವ ಮಹಿಳೆಯರಿಗೆ ಮನೆ ಸ್ವಚ್ಛತೆ ಕಷ್ಟಕರವಾದ ಕೆಲಸ ಎಂದೆನಿಸುತ್ತದೆ.
ಮನೆಯ ಸ್ವಚ್ಛತೆಗಾಗಿಯೇ ವಾರಕ್ಕೊಂದು ರಜಾದಿನವನ್ನು ಇವರು ಮೀಸಲಾಗಿರಿಸಿ ತುಂಬಾ ಕಷ್ಟಕರವೆಂದು ಹಾಗಯೇ ಬಿಟ್ಟಿರುವ ಮನೆಗೆಲಸಗಳನ್ನು ಸ್ವತಃ ಅವರೇ ಕೈಗೆತ್ತಿಕೊಳ್ಳುತ್ತಾರೆ ಇಲ್ಲವೇ ಮನೆಗೆಲಸದವರಿಗೆ ಹೇಳಿ ಮಾಡಿಸುತ್ತಾರೆ. ಮನೆಯ ಮೂಲೆ ಮೂಲೆಯ ಸ್ವಚ್ಛತೆಯನ್ನು ಕರಾರುವಕ್ಕಾಗಿ ಮಾಡಬೇಕಾಗಿರುವ ಒತ್ತಡದೊಂದಿಗೆ ಧೂಳು, ಕೊಳೆ ಸೇರದಂತೆ ಕಿಟಕಿ ಬಾಗಿಲುಗಳ ಕರ್ಟನ್ಗಳು, ಟಿವಿ ಷೋಕೇಸ್, ಹೀಗೆ ಪ್ರತಿಯೊಂದು ವಸ್ತುಗಳ ಮೇಲೆ ನಿಗಾ ಇರಿಸಿ ಧೂಳು ಕೆಡವಬೇಕಾಗುತ್ತದೆ.

ಜೊತೆಗೆ ಇತರೆ ಕೆಲಸಗಳನ್ನು ನಿರ್ವಹಿಸಬೇಕಾದ ಜವಬ್ದಾರಿ ಇವರ ಮೇಲಿರುತ್ತದೆ. ಈ ಸಮಸ್ಯೆಯನ್ನು ನಿವಾರಿಸಲೆಂದೇ ಇಂದಿನ ಲೇಖನದಲ್ಲಿ ಮನೆಯ ಸ್ವಚ್ಛತೆಗೆ ಸಹಕಾರಿ ಎಂದೆನಿಸಿರುವ ಸರಳ ಸಲಹೆಗಳನ್ನು ನಾವು ನೀಡುತ್ತಿದ್ದೇವೆ.
ಕಿಟಕಿಗಳಿಗೆ ಸೊಳ್ಳೆ ಪರದೆ
ಕಿಟಕಿಯೊಂದಿಗೆ ಅಂಟಿಕೊಂಡಿರುವ ಸೊಳ್ಳೆ ಪರದೆಗೆ ಮಹತ್ವ ನೀಡಿ. ವಲ್ಕ್ರೊ ಅಥವಾ ಮೇಲೆತ್ತುವ ಪರದೆಗಳನ್ನು ಆರಿಸಿ. ಈ ನೆಟ್ಗಳು ಸೊಳ್ಳೆಗಳನ್ನು ನಿವಾರಿಸುವುದರ ಜೊತೆಗೆ ಧೂಳನ್ನು ನಿವಾರಿಸುತ್ತವೆ. ಗಾಳಿಯನ್ನು ಫಿಲ್ಟರ್ ಮಾಡುವ ಸಾಮರ್ಥ್ಯವನ್ನು ಈ ಕಿಟಕಿಗಳು ಹೊಂದಿದ್ದು ನಿಮ್ಮ ಮನೆಗೆ ತಾಜಾ ಗಾಳಿಯನ್ನು ನೀಡುತ್ತದೆ. ಅಂತೆಯೇ ಸಣ್ಣ ಗಾಳಿಯೊಂದಿಗೆ ಒಳಬರುವ ಕೀಟಗಳನ್ನು ತಡೆಯುತ್ತದೆ. ಇದರಿಂದ ಮನೆಯನ್ನು ಹೆಚ್ಚು ಶ್ರಮವಿಲ್ಲದೆ ಸ್ವಚ್ಛವಾಗಿಟ್ಟುಕೊಳ್ಳಬಹುದು.
ತುಂಬಾ ಸಣ್ಣದು ಅಥವಾ ಕಷ್ಟಕರ ವಿನ್ಯಾಸಗಳನ್ನು ಆಯ್ಕೆಮಾಡಬೇಡಿ
ಪೀಠೋಪಕರಣಗಳನ್ನು ಆರಿಸುವಾಗ ಆದಷ್ಟು ಅದರ ವಿನ್ಯಾಸದತ್ತ ಗಮನ ಹರಿಸಿ. ತೀರಾ ಚಿಕ್ಕದು ಅಂತೆಯೇ ಕಷ್ಟಕರ ವಿನ್ಯಾಸಗಳುಳ್ಳ ಪೀಠೋಪಕರಣಗಳ ಆಯ್ಕೆಯನ್ನು ಮಾಡಬೇಡಿ. ಇಂತಹ ಸ್ಥಳಗಳಲ್ಲಿ ಧೂಳು ಬೇಗನೇ ಸೇರಿಕೊಳ್ಳುತ್ತದೆ ಮತ್ತು ಅದನ್ನು ಸ್ವಚ್ಛಮಾಡುವುದೂ ತುಂಬಾ ಕಷ್ಟಕರ. ಇವುಗಳನ್ನು ನಿತ್ಯವೂ ನೀವು ಸ್ವಚ್ಛಮಾಡಿಟ್ಟುಕೊಳ್ಳಬೇಕಾಗುತ್ತದೆ ಇಲ್ಲದಿದ್ದರೆ ಮನೆಯ ಅಂದವನ್ನು ಕೆಡಿಸಲು ಇವುಗಳು ಸಾಕು.
ಕರ್ಟನ್ಗಳ ಬಳಕೆ



Click it and Unblock the Notifications


