Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಅಡುಗೆ ಮನೆಯ ಶೆಲ್ಫ್ ಸ್ವಚ್ಛತೆಗೆ ಇಲ್ಲಿದೆ ಸರಳ ಟಿಪ್ಸ್
ಮನೆಯ ಅಲಂಕಾರದಲ್ಲಿ ಪ್ರಮುಖವಾಗಿ ಇರುವುದು ಅಡುಗೆ ಮನೆಯ ಅಲಂಕಾರ. ಪ್ರತಿಯೊಬ್ಬರು ಬಂದು ವೀಕ್ಷಿಸಿ ಎರಡು ಮಾತು ಹೇಳುವುದು ಮನೆಯ ಅಡುಗೆ ಮನೆಯನ್ನು ನೋಡಿಯೇ... ಹಾಗಾಗಿ ಅಡುಗೆ ಮನೆಯು ಪವಿತ್ರ ಸ್ಥಳವೆಂದೇ ಪರಿಗಣಿತವಾಗಿದ್ದು ನಿತ್ಯವೂ ಈ ಭಾಗಗಳ ಸ್ವಚ್ಛತೆಯನ್ನು ನೀವು ತಪ್ಪದೇ ಮಾಡಬೇಕು. ಅಡುಗೆ ಮನೆಯೇ ಸ್ವಚ್ಛವಾಗಿಲ್ಲ ಎಂದಾದಲ್ಲಿ ಮನೆಯೂ ಕೊಳಕಾಗಿರುತ್ತದೆ ಎಂಬುದಾಗಿಯೇ ಎಲ್ಲರೂ ಭಾವಿಸುತ್ತಾರೆ. ನಿಮ್ಮ ಮನೆಯ ಸದಸ್ಯರುಗಳಿಗೆ ನೀವು ಆಹಾರವನ್ನು ಸಿದ್ಧಪಡಿಸುವ ಸ್ಥಳ ಇದಾಗಿರುವುದರಿಂದ ಇಲ್ಲಿ ನೀವು ಹೆಚ್ಚಿನ ಕಾಳಜಿಯನ್ನು ವಹಿಸಬೇಕು ಅಂತೆಯೇ ಮನೆಯ ಸದಸ್ಯರುಗಳ ಆರೋಗ್ಯ ದೃಷ್ಟಿಯಿಂದ ಕೂಡ ಇದು ಅತಿಮುಖ್ಯವಾದುದು. ಅಡುಗೆಯ ಬಳಿಕ, ಮನೆ ಸಾಮಗ್ರಿಗಳ ಸ್ವಚ್ಛತೆ ಹೀಗಿರಲಿ
ಅಡುಗೆ ಮನೆಯ ಶೆಲ್ಫಗಳಲ್ಲಿ ಧೂಳು, ಕೊಳಕು, ಜಿಡ್ಡು, ಎಣ್ಣೆ ಕಲೆಗಳು ಸಾಮಾನ್ಯವಾಗಿರುವುದರಿಂದ ನಿತ್ಯವೂ ಅದನ್ನು ಸ್ವಚ್ಛಮಾಡುವುದು ಅಂದಂದಿನ ಕೆಲಸಗಳನ್ನು ನಿಮಗೆ ಸುಲಭಗೊಳಿಸುತ್ತದೆ. ಇಲ್ಲಿರುವ ಕೊಳಕನ್ನು ನೀವು ಹಾಗೆಯೇ ಬಿಟ್ಟಲ್ಲಿ ನಂತರ ಇದು ರೋಗಕ್ಕೆ ಮೂಲವಾಗಿರುತ್ತದೆ. ಅಡುಗೆ ಮನೆಯ ನೆಲ, ಪ್ಲಾಟ್‌ಫಾರ್ಮ್ ಅಂತೆಯೇ ಶೆಲ್ಫ್‌ಗಳ ಸ್ವಚ್ಛತೆಯನ್ನು ನೀವು ಪರಿಣಾಮಕಾರಿಯಾಗಿ ಮಾಡಬೇಕು.
ನೀವು ಆಹಾರ ಪದಾರ್ಥಗಳನ್ನು ಶೆಲ್ಫ್‌ಗಳಲ್ಲಿ ಇಟ್ಟು ಅದು ಅಲ್ಲಿ ಸೋರಿ ಕಲೆಯು ಹಾಗೆಯೇ ಉಳಿದಿರುತ್ತದೆ. ನಂತರ ಇದರ ಮೇಲೆ ಧೂಳು ನಿಂತು ಆ ಕಲೆಯನ್ನು ನಿವಾರಣೆಯಾಗದಂತೆ ಮಾಡುತ್ತದೆ. ಆದ್ದರಿಂದ ಶೆಲ್ಫ್‌ಗಳನ್ನು ನೀವು ನಿಯಮಿತವಾಗಿ ಸ್ವಚ್ಛ ಮಾಡುತ್ತಿರಬೇಕು. ಹಾಗಿದ್ದರೆ ಈ ಕಲೆಗಳನ್ನು ಸ್ವಚ್ಛಗೊಳಿಸುವುದು ಹೇಗೆ ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ. ಕೆಲವು ನೈಸರ್ಗಿಕ ವಿಧಾನಗಳ ಮೂಲಕ ಈ ಭಾಗವನ್ನು ನೀವು ಥಳಥಳ ಮಿನುಗುವಂತೆ ಮಾಡಬಹುದು...

ಆಗಾಗ್ಗೆ ಪಾಲಿಶ್ ಮಾಡುವುದು
ನೀವು ಮರದ ಶೆಲ್ಫ್‌ಗಳನ್ನು ಬಳಸುತ್ತಿದ್ದೀರಿ ಎಂದಾದಲ್ಲಿ ಆಗಾಗ್ಗೆ ಪಾಲಿಶ್ ಮಾಡಿಸಬೇಕಾಗುತ್ತದೆ. ಅಡುಗೆ ಮನೆಯಲ್ಲಿ ಶೆಲ್ಫ್‌ಗಳು ಮುಖ್ಯ ಮಾತ್ರವನ್ನು ವಹಿಸುವುದರಿಂದ ನೀವು ಇವುಗಳ ಸ್ವಚ್ಛತೆಗೆ ಗಮನ ನೀಡಬೇಕು. ಮರದ ಶೆಲ್ಫ್‌ಗಳನ್ನು ನೀವು ಹೊಂದಿದ್ದೀರಿ ಎಂದಾದಲ್ಲಿ ಪಾಲಿಶಿಂಗ್ ಮತ್ತು ವ್ಯಾಕ್ಸ್ ಮಾಡಿಸಬೇಕಾಗುತ್ತದೆ. ಬ್ಲೀಚ್ ಇಲ್ಲದ ಆಂಟಿ ಬ್ಯಾಕ್ಟೀರಿಯಲ್ ಕ್ಲೀನರ್ ಅನ್ನು ನೀವು ಬಳಸಬೇಕು, ಇದನ್ನು ಹೆಚ್ಚು ಒದ್ದೆ ಮಾಡದೇ ಕೊನೆಯದಾಗಿ ಬಟ್ಟೆಯ ಒಣಗಿದ ಭಾಗದಿಂದ ಇದನ್ನು ಒರೆಸಿರಿ.

ಬಿಳಿ ವಿನೇಗರ್
ನೀವು ಶೆಲ್ಫ್‌ಗಳಿಗೆ ಪೇಂಟ್ ಮಾಡಿದ್ದೀರಿ ಎಂದಾದಲ್ಲಿ ಬಿಳಿ ವಿನೇಗರ್ ಅನ್ನು ಬಳಸಿ ಧೂಳು ಮತ್ತು ಗ್ರೀಸ್ ಅನ್ನು ತೆಗೆಯಿರಿ. ಆದಷ್ಟು ಹೆಚ್ಚು ರಾಸಾಯನಿಕವಿರುವ ಕ್ಲೀನರ್‌ಗಳನ್ನು ಬಳಸಬೇಡಿ.

ಬ್ಲೀಚ್
ಶೆಲ್ಫ್‌ಗಳ ಮೇಲ್ಮೈಯನ್ನು ಕ್ಲೀನರ್ ಸಹಾಯದಿಂದ ಸ್ವಚ್ಛಗೊಳಿಸಿ. 1 ಚಮಚ ಬ್ಲೀಚ್‌ಗೆ 1/4 ಭಾಗದಷ್ಟು ನೀರು ಹಾಕಿ ದ್ರಾವಣವನ್ನು ಸಿದ್ಧಪಡಿಸಿ.

ಸಣ್ಣ ಬ್ರಶ್ ಬಳಸಿ
ಯಾವತ್ತೂ ಶೆಲ್ಫಗಳ ತುದಿ, ಅಂಚುಗಳಿಗೆ ಗಮನ ಕೊಡಲು ಮರೆಯದಿರಿ. ಈ ಸ್ಥಳಗಳಲ್ಲಿ ಅಡಗಿರುವ ಕೊಳೆಯನ್ನು ತೆಗೆಯಲು ಸಣ್ಣ ಬ್ರಶ್ ಅನ್ನು ಬಳಸಿ.

ಬೇಕಿಂಗ್ ಸೋಡಾ ಮತ್ತು ನೀರು
ಶೆಲ್ಫ್‌ಗಳಲ್ಲಿರುವ ಕೊಳೆ ತುಂಬಾ ದಪ್ಪನಾಗಿದೆ ಎಂದಾದಲ್ಲಿ ಅದನ್ನು ತೆಗೆಯಲು ಬೇಕಿಂಗ್ ಸೋಡಾ ಮತ್ತು ನೀರಿನ ಮಿಶ್ರಣವನ್ನು ಬಳಸಿ. ಈ ಎರಡೂ ಸಾಮಾಗ್ರಿಗಳ ಪೇಸ್ಟ್ ಧೂಳು ಮತ್ತು ಕೊಳೆಯನ್ನು ನಿವಾರಿಸುವಲ್ಲಿ ಸಹಕಾರಿ. ಕೊಳೆಯನ್ನು ನಿವಾರಿಸಿ ಥಳ ಥಳ ಹೊಳಪನ್ನು ಶೆಲ್ಫ್‌ಗೆ ಇದು ನೀಡುತ್ತದೆ.

ಲಿಂಬೆ ರಸ
ಶೆಲ್ಫ್‌ಗಳ ಕೊಳೆಯನ್ನು ನಿವಾರಿಸಲು ಲಿಂಬೆ ರಸವನ್ನು ಪರಿಣಾಮಕಾರಿಯಾಗಿ ಬಳಸಬಹುದಾಗಿದೆ. ಒದ್ದೆ ಬಟ್ಟೆಯನ್ನು ತೆಗೆದುಕೊಂಡು ಅದನ್ನು ಕೊಳೆಯ ಮೇಲಿರಿಸಿ. ನಂತರ ಲಿಂಬೆಯನ್ನು ಬಳಸಿ ಕೊಳೆಯ ಮೇಲೆ ಉಜ್ಜಿ.



Click it and Unblock the Notifications
